Aadhar Document update: ಆಧಾರ್ ಕಾರ್ಡ ಇರುವವರು ತಪ್ಪದೇ ಈ ಕೆಲಸ ಮಾಡಿ! ದಾಖಲಾತಿ ಅಪ್ಲೋಡ್ ಮಾಡಲು ವೆಬ್ಸೈಟ್ ಲಿಂಕ್.

Facebook
Twitter
Telegram
WhatsApp

ಆಧಾರ್ ಕಾರ್ಡ ಹೊಂದಿರುವ ಸಾರ್ವಜನಿಕರು ಸರಕಾರದ ವಿವಿಧ ಯೋಜನೆಯಡಿ ಸವಲತ್ತು ಪಡೆಯಲು 10 ವರ್ಷಕ್ಕೆ ಒಮ್ಮೆ ತಮ್ಮ ಆಧಾರ್ ಕಾರ್ಡ ನಲ್ಲಿ ದಾಖಲಾಗಿರುವ ಗುರುತಿನ ವಿವರ  ಮತ್ತು ವಿಳಾಸದ ಮಾಹಿತಿಯನ್ನು ನವೀಕರಿಸುವುದು ಅತ್ಯವಶಕವಾಗಿದೆ ಈ ಕುರಿತು ಆಧಾರ್ ಹೊಂದಿರುವ ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ ಅನ್ನು 14 ಸೆಪ್ಟಂಬರ್ 2023 ಒಳಗೆ ಉಚಿತವಾಗಿ ಆಧಾರ್ ವೆಬ್ಸೈಟ್ uidai.gov.in ಗೆ ಭೇಟಿ ಮಾಡಿ ನವೀಕರಿಸಬವುದು ಎಂದು ಆಧಾರ್ ಪ್ರಾಧಿಕಾರ ಜಾಲತಾಣದಲ್ಲಿ(uidai) ತಿಳಿಸಿದೆ.

ಒಂದೊಮ್ಮೆ 14 ಸೆಪ್ಟಂಬರ್ 2023ರ ನಂತರ ನೀವು ಆಧಾರ್ ಕಾರ್ಡ ನವೀಕರಿಸಲು ಇಚ್ಚಿಸಿದಲ್ಲಿ ಹಣ ಪಾವತಿ ಮಾಡಿ ನವೀಕರಿಸಬೇಕಾಗುತ್ತದೆ ಆದರಿಂದ ತಪ್ಪದೇ ಆಧಾರ್ ಹೊಂದಿರುವವರು ಈ https://myaadhaar.uidai.gov.in/ ಆಧಾರ್ ಜಾಲತಾಣ ಭೇಟಿ ಮಾಡಿ ಇತ್ತೀಚಿನ ಗುರುತಿನ ಪುರಾವೆ(ಉದಾ: ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲಾತಿ) ಮತ್ತು ವಿಳಾಸದ ಪುರಾವೆ( ವೋಟರ್ ಐಡಿ ,ಪಾನ್ ಕಾರ್ಡ ಅಥವಾ ಪಾಸ್ ಪೋರ್ಟ್ ಇತ್ಯಾದಿ) ಈ ಎರಡು ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ ಅನ್ನು ನವೀಕರಿಸಬವುದಾಗಿದೆ.

ಈ ರೀತಿ ದಾಖಲೆಗಳನ್ನು ಸಲ್ಲಿಸುವ ಮೂಲಕ ನಿಮ್ಮ ಆಧಾರ್ ಡೇಟಾಬೇಸ್‌ನಲ್ಲಿ ದಾಖಲೆಗಳನ್ನು ನವೀಕರಿಸುವುದರಿಂದ ನಿಮ್ಮ ಆಧಾರ್ ಅನ್ನು ಬಲಪಡಿಸಲು ಆಧಾರ್ ಪ್ರಾಧಿಕಾರದಿಂದ(UIDAI) ಸಲಹೆ ನೀಡಲಾಗಿದೆ. ನೀವು ಸಲ್ಲಿಸಿದ ದಾಖಲೆಗಳಲ್ಲಿನ ವಿವರಗಳು ನಿಮ್ಮ ಆಧಾರ್‌ನಲ್ಲಿ ನಮೂದಿಸಲಾದ ನಿಮ್ಮ ವಿವರಗಳೊಂದಿಗೆ ಹೊಂದಿಕೆಯಾಗಬೇಕು. ಆಧಾರ್ ಡೇಟಾಬೇಸ್‌ನಲ್ಲಿ ನಿಮ್ಮ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ನಿಮಗೇ ತಿಳಿದಂತೆ ಪಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಿಸಲು ಮೊದಲು ಉಚಿತವಾಗಿಯೇ ಇತ್ತು, ಆದರೆ ಜನರು ಕಿವಿ ಕೊಡದೆ ಇದ್ದಾಗ ಸರ್ಕಾರ 1000/- ರೂಪಾಯಿ ದಂಡ ವಿದಿಸಿದೆ, ಹೀಗೆಯೆ ಆಧಾರ್ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ಮುಂದೊಂದು ದಿನ ದಂಡ ಕಟ್ಟ ಬೇಕಾಗಬವುದು, ಅದರಿಂದ ಈಗ ಉಚಿತ ಇದ್ದಾಗಲೇ ಮಾಡಿಸಿ ಇಲ್ಲದಿದ್ದರೆ ಶುಲ್ಕ ಕಟ್ಟಿ ಮಾಡಿಕೊಳ್ಳಬೇಕಾಗುವುದು ಖಚಿತ.

ಉಚಿತವಾಗಿ ಆಧಾರ್(Aadhar card) ನವೀಕರಣ(Verify) ಮಾಡಲು 14-09-2023 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ! ಯಾವ ರೀತಿ ಇರಲಿದೆ ಅರ್ಜಿ ಸಲ್ಲಿಕೆಗೆ ರೂಪುರೇಷೆಗಳು?

ಆಧಾರ್(Aadhar) ನವೀಕರಣ(Verify) ಯಾಕೆ ಮಾಡಬೇಕು?
 
ಸಾರ್ವಜನಿಕರು ಸರಕಾರದ ಯೋಜನೆಗಳ ಸೌಲಭ್ಯ ಪಡೆಯಲು ಮತ್ತು ತಮ್ಮ ಗುರತಿನ ಮತ್ತು ವಿಳಾಸದ ನಿಖರತೆಯನ್ನು ಆಧಾರ್ ಪ್ರಾದಿಕಾರಕ್ಕೆ ಖಚಿತಪಡಿಸಿಕೊಳ್ಳಲು ಆಧಾರ್ ಕಾರ್ಡ ನವೀಕರಣ ಮಾಡಬೇಕಾಗುತ್ತದೆ.

Aadhaar Document Update link- ನಿಮ್ಮ ಮೊಬೈಲ್ ನಲ್ಲೇ ಮಾಡಬವುದು ಈ ಕೆಲಸವನ್ನು:

Step-1: https://myaadhaar.uidai.gov.in/verifyAadhaar ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ‍ ಪ್ರಾಧಿಕಾರದ ವೆಬ್ಸೈಟ್ ಭೇಟಿ ಮಾಡಬೇಕು. ನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ ನಂಬರ್ ಮತ್ತು ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚರ್ ಹಾಕಿ “Send OTP” ಮೇಲೆ ಕ್ಲಿಕ್ ಮಾಡಿ.

Step-2: ಆಧಾರ್ ಕಾರ್ಡನಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಬರುತ್ತದೆ ಅದನ್ನು ಇಲ್ಲಿ ನಮೂದಿಸಿ “Login” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ನಂತರ ಈ ಪುಟದಲ್ಲಿ “Document Update” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ಇದಾದ ಬಳಿಕ “Next” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಈ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡನಲ್ಲಿ ಇರುವಂತೆ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದ ವಿವರ ಗೋಚರಿಸುತ್ತದೆ ಎಲ್ಲಾ ಮಾಹಿತಿ ಸರಿ ಇದಿಯೇ ಎಂದು ನೋಡಿ ಸರಿ ಇದಲ್ಲಿ “I verify that above details are correct” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Next” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

Step-5:  ಈ ಪುಟದಲ್ಲಿ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ ದಾಖಲಾತಿಗಳನ್ನು ಅಪ್ಲೋಡ ಮಾಡಬೇಕು(Document size should be less than 2 MB, Supported file Formats are: JPEG, PNG and PDF ) ಕೊನೆಯಲ್ಲಿ “Next” ಆಯ್ಕೆಯ ಮೇಲೆ ಒತ್ತಿ “Submit” ಮೇಲೆ ಕ್ಲಿಕ್ ಮಾಡಬೇಕು.

ಹೆಚ್ಚಿನ ಮಾಹಿತಿ ಪಡೆಯಲು ಆಧಾರ್ ಸಹಾಯವಾಣಿಗೆ ಕರೆ ಮಾಡಿ- Adhar helpline numbers: 1947

Facebook
Twitter
Telegram
WhatsApp
Picture of siddesh

siddesh

Leave a Comment

Top Stories

swavalambi sarati yojana

Car loan Subsidy-ಸರಕು ಅಥವಾ ಯೆಲ್ಲೋ ಬೋರ್ಡ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ ಮತ್ತು ಸರಕು ವಾಹನ ಖರೀದಿ ಮಾಡಿ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಅರ್ಥಿಕವಾಗಿ(Car loan Subsidy application) ನೆರವಾಗಲು ಸ್ವಾವಲಂಭಿ ಸಾರಥಿ ಯೋಜನೆಯಡಿ ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ

Ganga Kalyana aplication

Ganga Kalyana- ಕೊಳವೆ ಬಾವಿ ಕೊರೆಸಲು 4.25 ಲಕ್ಷ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ರೈತರು ತಮ್ಮ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ(Ganga Kalyana)ಕೊಳವೆ ಬಾವಿಯನ್ನು ಕೊರೆಸಲು 3.75 ಲಕ್ಷ ಸಹಾಯಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸುವ ವಿಧಾನ ಯಾವುದು? ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?(Ganga