Pm kisan: ಪಿ ಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಕೇಂದ್ರ ಸರಕಾರ!

ಕೇಂದ್ರ ಕೃಷಿ ಸಚಿವಾಲಯದಿಂದ(Departmet of agriculture)ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-kisan Scheme)ಯೋಜನೆಯ 14 ನೇ ಕಂತನ್ನು ರೈತರ ಖಾತೆಗೆ ಯಾವ ದಿನಾಂಕ ವರ್ಗಾವಣೆ ಮಾಡಲಿದೆ ಎಂದು ಯೋಜನೆಯ ಜಾಲತಾಣದಲ್ಲಿ ಪ್ರಕಟಿಸಿದೆ.

ಕೇಂದ್ರ ಕೃಷಿ ಸಚಿವಾಲಯದಿಂದ(Departmet of agriculture)ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-kisan Scheme)ಯೋಜನೆಯ 14 ನೇ ಕಂತನ್ನು ರೈತರ ಖಾತೆಗೆ ಯಾವ ದಿನಾಂಕ ವರ್ಗಾವಣೆ ಮಾಡಲಿದೆ ಎಂದು ಹಣ ಬಿಡುಗಡೆ ದಿನಾಂಕದ ವಿವರವನ್ನು ಪಿ. ಎಂ ಕಿಸಾನ್(Pmkisan) ಯೋಜನೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿದೆ. 

ಕೇಂದ್ರ ಸರಕಾರದಿಂದ ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಗೆ ತಗಲು ವೆಚ್ಚವನ್ನು ನಿಭಾಯಿಸಲು ಅರ್ಥಿಕವಾಗಿ ನೆರವಗುವ ದೇಸೆಯಲ್ಲಿ 2019ರಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-kisan Scheme)ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ನಾಲ್ಕು ತಿಂಗಳಿಗೊಮ್ಮೆ ರೂ 2,000 ದಂತೆ ಒಟ್ಟು ಒಂದು ವರ್ಷಕ್ಕೆ 6,000 ರೂ ಗಳನ್ನು ರೈತರ ಖಾತೆಗೆ ನೇರ ನಗದು ಮೂಲಕ(DBT) ವರ್ಗಾವಣೆ ಮಾಡಲಾಗುತ್ತದೆ. 

pm kisan 14th Instalment date- ಪಿ ಎಂ ಕಿಸಾನ್ ಯೋಜನೆಯ 14 ನೇ ಕಂತು ಯಾವಾಗ ಜಮಾ ಅಗಲಿದೆ?

ಪ್ರತಿ ವರ್ಷ ಡಿಸೆಂಬರ್-ಮಾರ್ಚ್ ತಿಂಗಳ ಅವಧಿಯ ಕಂತನ್ನು ಮಾರ್ಚ ತಿಂಗಳ ಕೊನೆಯಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಜಮಾ ಮಾಡಲಾಗುತ್ತದೆ ಅದೇ ರೀತಿ ಏಪ್ರಿಲ್-ಜುಲೈ ಅವದಿಯ ಕಂತನ್ನು ಅಂದರೆ 14 ನೇ ಕಂತನ್ನು ದಿನಾಂಕ 27 ಜುಲೈ 2023ರಂದು ರೈತ ಖಾತೆ ವರ್ಗಾವಣೆ ಮಾಡಲಾಗುವುದು ಎಂದು ಕೇಂದ್ರ ಸರಕಾರದ ಪಿ ಎಂ ಕಿಸಾನ್ pmkisan.gov.in ಫೋರ್ಟಲ್ ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ! ಯಾವ ರೀತಿ ಇರಲಿದೆ ಅರ್ಜಿ ಸಲ್ಲಿಕೆಗೆ ರೂಪುರೇಷೆಗಳು?

Pm kisan farmer list- ಪಿ ಎಂ ಕಿಸಾನ್ ಯೋಜನೆ ಫಲಾನುಭವಿ ರೈತರ ಪಟ್ಟಿ:

ರೈತರು ಈ https://pmkisan.gov.in/Rpt_BeneficiaryStatus_pub.aspx ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಾಜ್ಯ , ಜಿಲ್ಲೆ, ತಾಲ್ಲೂಕು, ಗ್ರಾಮವನ್ನು ಆಯ್ಕೆ ಮಾಡಿಕೊಂಡು "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದ ಪಿ ಎಂ ಕಿಸಾನ್ ಯೋಜನೆ ಫಲಾನುಭವಿ ರೈತರ ಪಟ್ಟಿ ಗೋಚರಿಸುತ್ತದೆ.

ಈ ಪಟ್ಟಿಯಲ್ಲಿ ಹೆಸರಿದ್ದು ನಿಮಗೆ ಹಣ ಬರದಿದಲ್ಲಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ನಿಮ್ಮ ಅರ್ಜಿಯ ಲೋಪವನ್ನು ಸರಿಪಡಿಸಿಕೊಳ್ಳಬೇಕು.

Pm kisan mobile app- ಇ-ಕೆವೈಸಿ ಮಾಡಲು ಪಿ ಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ:

ಇ-ಕೆವೈಸಿ ಮಾಡಲು ಪಿ ಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ ತೋಮರ್.

ಸರಕಾರದಿಂದ ಪಿ ಎಂ ಕಿಸಾನ್ ಯೋಜನೆಯ ಫಲಾನುಭವಿಗಳ ನೈಜನೆಯನ್ನು ಪರಿಶೀಲಿಸಲು ಹಾಗೂ ಈ ಯೋಜನೆಯ ಹಣ ಸರಿಯಾದ ವ್ಯಕ್ತಿಗೆ ತಲುಪುತ್ತಿದೆಯೇ ಎಂದು ಖಾತರಿಪಡಿಸಿಕೊಳ್ಳಲು ರೈತರಿಗೆ ಇ-ಕೆವೈಸಿ ಮಾಡಲು ಹೇಳಿತ್ತು.

ಅದರೆ ಆಧಾರ‍ ಕಾರ್ಡನಲ್ಲಿ ಮೊಬೈಲ್ ನಂಬರ್ ಇಲ್ಲದವರು ಇ-ಕೆವೈಸಿ ಮಾಡಲು ಸಾಧ್ಯವಗಿರಲಿಲ್ಲ ಈ ಕಾರಣದಿಂದ ಅರ್ಜಿದಾರರ ಮುಖದ ಪೋಟೊ ತೆಗೆಯುವ ಮೂಲಕ ಇ-ಕೆವೈಸಿ ಮಾಡಲು ಪಿ ಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಇ-ಕೆವೈಸಿ ಅಗದವರು ಈ ಅಪ್ಲಿಕೇಶನ್ ಮೂಲಕ ಮಾಡಿಕೊಳ್ಳಬವುದು.

ಮೊಬೈಲ್ ಅಪ್ಲಿಕೇಶನ್ ಲಿಂಕ್: https://play.google.com/store/apps

ಇದನ್ನೂ ಓದಿ: Aadhar Document update: ಆಧಾರ್ ಕಾರ್ಡ ಇರುವವರು ತಪ್ಪದೇ ಈ ಕೆಲಸ ಮಾಡಿ! ದಾಖಲಾತಿ ಅಪ್ಲೋಡ್ ಮಾಡಲು ವೆಬ್ಸೈಟ್ ಲಿಂಕ್.