Gruhalakshmi website link: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮೇಸೆಜ್ ಬಂದಿಲ್ಲವೇ? ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ.

ಸರಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ(Gruhalakshmi yojana website link) ಅರ್ಜಿ ಹಾಕಲು ಸಮಯ ಮತ್ತು ಸ್ಥಳ ಯಾವುದು ಎಂದು ಸಾರ್ವಜನಿಕರು ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಿದೆ

ಸರಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ(Gruhalakshmi yojana website link) ಅರ್ಜಿ ಹಾಕಲು ಸಮಯ ಮತ್ತು ಸ್ಥಳ ಯಾವುದು ಎಂದು ಸಾರ್ವಜನಿಕರು ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಿದೆ, ಅರ್ಜಿ ಹಾಕಲು ಬಯಸುವವರು ನೇರವಾಗಿ ಈ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಯಾವ ದಿನ ಮತ್ತು ಸಮಯ, ಅರ್ಜಿ ಸಲ್ಲಿಸಲು ಯಾವ ಕೇಂದಕ್ಕೆ ಭೇಟಿ ಮಾಡಬೇಕು ಎಂದು ಮಾಹಿತಿ ತಿಳಿಯಬವುದು.

ರಾಜ್ಯಾದ್ಯಂತ ನಿನ್ನೆಯಿಂದ(19-07-2023) ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಆದರೆ ಬೇರೆಲ್ಲ ಯೋಜನೆಗಳಿಗೆ ಅರ್ಜಿದಾರರು ನೇರವಾಗಿ ಹೋಗಿ ಅರ್ಜಿ ಸಲ್ಲಿಸಬವುದಿತ್ತು, ಆದರೆ ಈ ಯೋಜನೆ ಅರ್ಜಿ ಸಲ್ಲಿಸಲು ದಿನಾಂಕ ಮತ್ತು ಸಮಯ, ಸ್ಥಳ ವಿವರ ಪಡೆದು ನಂತರ ಅರ್ಜಿ ಹಾಕಲು ಹೋಗಬೇಕು.

ನಿನ್ನೆ(19-07-2023) ಅನೇಕ ಜನರು ಸಹಾಯವಾಣಿ ಸಂಖ್ಯೆಗೆ ರೇಶನ್ ಕಾರ್ಡ ನಂಬರ್ ಮೇಸೆಜ್ ಕಳುಹಿಸಿದರು ಅರ್ಜಿ ಸಲ್ಲಿಸಲು ದಿನಾಂಕ ಮತ್ತು ಸ್ಥಳ ವಿವರ ಮರುಬಂದಿರುವುದಿಲ್ಲ ಸಹಾಯವಾಣಿಗೆ ಕರೆ ಮಾಡಿದರೆ ತುಂಬ ಸಮಯದ ನಂತರ ಕರೆ ಸ್ವಿಕಾರವಾಗುತ್ತಿತ್ತು. ಇದರಿಂದ ಅರ್ಜಿ ಹಾಕಲು ಅರ್ಜಿದಾರರಿಗೆ ದಿನಾಂಕ ಮತ್ತು ಸಮಯ, ಸ್ಥಳ ವಿವರ ತಿಳಿಯಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ಪರ್ಯಾಯವಾಗಿ ಹೇಗೆ ಮೇಸೆಜ್ ವಿವರ ಪಡೆಯಬವುದು ಎಂದು ಈ ಕೆಳಗೆ ತಿಳಿಸಲಾಗಿದೆ.

Gruhalakshmi application link: ಅರ್ಜಿ ಸಲ್ಲಿಸುವ ದಿನಾಂಕ, ಸ್ಥಳ, ಸಮಯದ ವಿವರ ಪಡೆಯಲು ವೆಬ್ಸೈಟ್ ಲಿಂಕ್:

Step-1: ಅರ್ಜಿದಾರರು ತಮ್ಮ ಮೊಬೈಲ್ ನಲ್ಲಿ ನೇರವಾಗಿ ಈ https://sevasindhugs1.karnataka.gov.in/gl-stat-sp/Slot_Track
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ 12 ಅಂಕಿಯ ರೇಷನ್ ಕಾರ್ಡ ನಂಬರ್ ಹಾಕಿ ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚಾ ನಮೂದಿಸಿ "ಸ್ಥಿತಿಯನ್ನು ಪರಿಶೀಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು.

Step-2: ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಇಲ್ಲಿ ಅರ್ಜಿ ಸಲ್ಲಿಸುವ ದಿನಾಂಕ ಮತ್ತು ಸಮಯ, ಅರ್ಜಿ ಸಲ್ಲಿಸಲು ಯಾವ ಕೇಂದಕ್ಕೆ ಭೇಟಿ ಮಾಡಬೇಕು ಎಂದು ತೋರಿಸುತ್ತದೆ.

ಒಂದೊಮ್ಮೆ ಈ ರೀತಿ ಕ್ರಮ ಅನುಸರಿಸಿದ ನಂತರ ಮಾಹಿತಿ ಲಭ್ಯವಾಗದೇ "ಡೇಟಾ ಕಂಡುಬಂದಿಲ್ಲ" ಎಂದು ತೋರಿಸಿದರೆ ನೀವು ಇನ್ನೂ ಒಂದು ಅಥವಾ ಎರಡು ವಾರದ ನಂತರ ಮತ್ತೊಮ್ಮೆ ಪರೀಶಿಲಿಸಿ ಅಥವಾ 2-3 ವಾರದ ನಂತರ ಅರ್ಜಿ ಸಲ್ಲಿಸಲು ಕೇಂದ್ರಗಳಲ್ಲಿ ಜನ ದಟ್ಟನೆ ಕಡಿಮೆಯಾಗುತ್ತದೆ ಆ ಸಮಯದಲ್ಲಿ ಹೋಗಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ! ಯಾವ ರೀತಿ ಇರಲಿದೆ ಅರ್ಜಿ ಸಲ್ಲಿಕೆಗೆ ರೂಪುರೇಷೆಗಳು?

Ration card number website link- ರೇಷನ್ ಕಾರ್ಡ ನಂಬರ್ ಪಡೆಯುಲು ವೆಬ್ಸೈಟ್ ಲಿಂಕ್: 

ಈ ಮೇಲಿನ ವಿವರವನ್ನು ತಿಳಿಯಲು ನಿಮ್ಮ ಬಳಿ ರೇಷನ್ ಕಾರ್ಡ ಇಲ್ಲದಿದಲ್ಲಿ ಈ https://mahitikanaja.karnataka.gov.in ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಕಣಜ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ, ಗ್ರಾಮ ಮತ್ತು ಕಾರ್ಡ ಪ್ರಕಾರ ಆಯ್ಕೆ ಮಾಡಿಕೊಂಡು "ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಗ್ರಾಮದ ಎಲ್ಲಾ ಜನರ ರೇಷನ್ ಕಾರ್ಡ ನಂಬರ್ ತೋರಿಸುತ್ತದೆ. ಇದನ್ನು ಪಡೆದು ನೀವು ಯಾವ ದಿನ ಅರ್ಜಿ ಸಲ್ಲಿಬೇಕು ಎನ್ನುವ ವಿವರ ತಿಳಿಯಬವುದು.

ಆಶಾ ಕಾರ್ಯಕರ್ತಯರು, ಅಂಗನವಾಡಿ ಕಾರ್ಯಕರ್ತೆಯರಿಗೂ ಗೃಹಲಕ್ಷ್ಮಿ ಯೋಜನೆ ವಿಸ್ತರಣೆ:

ಆಶಾ ಕಾರ್ಯಕರ್ತಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಾಜಿ ದೇವದಾಸಿಯರೂ ಸಹ ಗೃಹಲಕ್ಷ್ಮಿ ಯೋಜನೆಯ ವ್ಯಾಪ್ತಿಗೆ ಸೇರುತ್ತಾರೆ ಎಂದು ಘೋಪಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ತಯಾರಕರು ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿಯಾಗಿದ್ದು, ಆಕೆ ಹಾಗೂ ಆಕೆಯ ಪತಿ ಆದಾಯ ತೆರಿಗೆ ಹಾಗೂ GST Returns ಪಾವತಿದಾರರಾಗದಿದ್ದಲ್ಲಿ ಮತ್ತು ಮಾಜಿ ದೇವದಾಸಿಯರೂ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿಯಾಗಿದ್ದು, ಅವರು ಪಾವತಿದಾರರಾಗದಿದ್ದಲ್ಲಿ ತೆರಿಗೆ ಹಾಗೂ GST Returns ಮೇಲೆ  ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ.

Gruhalakshmi yojane helpline numbers- ಗೃಹಲಕ್ಷ್ಮಿ ಯೋಜನೆ ಸಹಾಯವಾಣಿ ಸಂಖ್ಯೆ: 

ಕರೆ ಮಾಡಲು: 1902
ಸಂದೇಶ ಕಳುಹಿಸಲು: 8147500500 

ಇದನ್ನೂ ಓದಿ: Pm kisan: ಪಿ ಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಕೇಂದ್ರ ಸರಕಾರ!