ನೀವು ಸಲ್ಲಿಸಿದ ಬೆಳೆ ವಿಮೆ ಅರ್ಜಿ ಸ್ವೀಕಾರವಾಗಿದಿಯೇ? ಇಲ್ಲವೇ ಎಂದು ಚೆಕ್ ಮಾಡಲು ಇಲ್ಲಿದೆ ವೆಬ್ಸೈಟ್ ಲಿಂಕ್.

ರಾಜ್ಯಾದ್ಯಂತ ಎಲ್ಲಾ ಕಡೆ ರೈತರು ತಮ್ಮ ಬೆಳೆಗಳಿಗೆ ವಿಮೆ ಹಣ(fasal bima yojana) ಪಾವತಿ ಮಾಡುತ್ತಿದ್ದಾರೆ ಆದರೆ ಹಣ ಪಾವತಿ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ತಾವು ಸಲ್ಲಿಸಿದ ಅರ್ಜಿ ಯಶಸ್ವಿಯಾಗಿ ಸಲ್ಲಿಕೆ ಅಗಿದಿಯೋ? ಇಲ್ಲವೋ ಎಂದು ರಾಜ್ಯ ಸರಕಾರದ ಸಂರಕ್ಷಣೆ(samrakshane) ವೆಬ್ಸೈಟ್ ಭೇಟಿ ಮಾಡಿ ಸಂಪೂರ್ಣ ವಿವರ ಚೆಕ್ ಮಾಡಬೇಕು.

ರೈತರು ತಮ್ಮ ಬೆಳೆಗಳಿಗೆ ವಿಮೆ ಕಟ್ಟಿದ ನಂತರ ತಪ್ಪದೇ ನೀವು ಸಲ್ಲಿಸಿದ ಬೆಳೆ ವಿಮೆ ಅರ್ಜಿ(crop insurance application) ಸ್ವೀಕಾರವಾಗಿದಿಯೋ ಅಥವಾ ಇಲ್ಲವೋ ಎಂದು ಈ ಅಂಕಣದಲ್ಲಿ ಕೊಟ್ಟಿರುವ ಸಂರಕ್ಷಣೆ ಪೊರ್ಟಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಒಮ್ಮೆ ಚೆಕ್ ಮಾಡಿಕೊಳ್ಳಿ.

ರಾಜ್ಯಾದ್ಯಂತ ಎಲ್ಲಾ ಕಡೆ ರೈತರು ತಮ್ಮ ಬೆಳೆಗಳಿಗೆ ವಿಮೆ ಹಣ(fasal bima yojana) ಪಾವತಿ ಮಾಡುತ್ತಿದ್ದಾರೆ ಆದರೆ ಹಣ ಪಾವತಿ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ತಾವು ಸಲ್ಲಿಸಿದ ಅರ್ಜಿ ಯಶಸ್ವಿಯಾಗಿ ಸಲ್ಲಿಕೆ ಅಗಿದಿಯೋ? ಇಲ್ಲವೋ ಎಂದು ರಾಜ್ಯ ಸರಕಾರದ ಸಂರಕ್ಷಣೆ ವೆಬ್ಸೈಟ್ ಭೇಟಿ ಮಾಡಿ ಸಂಪೂರ್ಣ ವಿವರ ಚೆಕ್ ಮಾಡಬೇಕು.

Bele vime Status check - ಅರ್ಜಿ ಪರಿಶೀಲಿಸಲು ವೆಬ್ಸೈಟ್ ಲಿಂಕ್:

ರಾಜ್ಯ ಸರಕಾರದಿಂದ ರೈತರ ಬೆಳೆ ವಿಮೆ ಅರ್ಜಿ ಸ್ವೀಕಾರ, ಬೆಳೆ ವಿಮೆ ಪರಿಹಾರ ಪಾವತಿ ಮತ್ತು ಬೆಳೆ ವಿಮೆಯ ಎಲ್ಲಾ ಬಗ್ಗೆಯ ಅರ್ಜಿ ವಿಲೇವಾರಿಗೆ ಸಂರಕ್ಷಣೆ(samrakshane) ಪೋರ್ಟಲ್ ಬಳಕೆ ಮಾಡಲಾಗುತ್ತದೆ.

Step-1: ಈ https://samrakshane.karnataka.gov.in/Premium/Check ಲಿಂಕ್ ಮೇಲೆ ಕ್ಲಿಕ್ ಮಾಡದ ಬಳಿಕ ಸಂರಕ್ಷಣೆ ಪೋರ್ಟಲ್ ತೆರೆದುಕೊಳ್ಳುತ್ತದೆ ಇಲ್ಲಿ ಅರ್ಜಿದಾರರ ಅಪ್ಲಿಕೇಶನ್ ನಂಬರ್ ಅಥವಾ ಮೊಬೈಲ್ ಸಂಖ್ಯೆ/ ಆಧಾರ್ ನಂಬರ್ ನಮೂದಿಸಬೇಕು. 

Step-2: ಇದಾದ ನಂತರ ಅಲ್ಲೇ ಪಕ್ಕದಲ್ಲಿ ಕಾಣುವ ಕ್ಯಾಪ್ಚರ್ ಕೋಡ್ ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ಇಲ್ಲಿ ನಿಮ್ಮ ಪ್ರೊಪೊಸಲ್ ನಂಬರ್ ಅರ್ಜಿದಾರರ ಹೆಸರು ಮತ್ತು ಅರ್ಜಿ ಸ್ಥಿತಿ ಗೋಚರಿಸುತ್ತದೆ ಅರ್ಜಿ ಯಶಸ್ವಿಗಾಗಿ ಸಲ್ಲಿಕೆಯಾಗಿದರೆ ಮಾತ್ರ ಇಲ್ಲಿ ವಿವರ(Payment Successful/GramaOne Payment Successful) ತೋರಿಸುತ್ತದೆ ಇಲ್ಲವಾದಲ್ಲಿ ತೋರಿಸುವುದಿಲ್ಲ.

Step-4: ಈ ಪುಟದ ಕೊನೆಯಲ್ಲಿ ಕಾಣುವ "Select" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ "View Details" ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಹೆಸರು, ಗ್ರಾಮ , ಬೆಳೆ ವಿಮೆ ಪಾವತಿ ಮಾಡಿದ ಸರ್ವೆ ನಂಬರ್, ಒಟ್ಟು ಬೆಳೆ ವಿಮೆ ಮೊತ್ತ ಎಷ್ಟು? ಪಾವತಿ ವಿವರ ಎಲ್ಲಾ ಮಾಹಿತಿ ತೋರಿಸುತ್ತದೆ.

ಇದನ್ನೂ ಓದಿ: Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ವೇಳಾಪಟ್ಟಿಯ ಮೇಸೆಜ್ ಪಡೆಯಲು ವೆಬ್ಸೈಟ್ ನಲ್ಲಿ ಬದಲಾವಣೆ!

ಬೆಳೆ ವಿಮೆ ಅರ್ಜಿ ಎಲ್ಲಿ ಸಲ್ಲಿಸಬೇಕು?ಮತ್ತು ಕೊನೆಯ ದಿನಾಂಕ ಮತ್ತು ಅಗತ್ಯ ದಾಖಲಾತಿಗಳು:

ಅರ್ಜಿದಾರರ ಪಹಣಿ/ಉತಾರ್/RTC, ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಮತ್ತು ನಂಬರ್ ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಕೇಂದ್ರಕ್ಕೆ  ದಿನಾಂಕ: 31-07-2023 ರ ಒಳಗೆ ಭೇಟಿ ಮಾಡಿ ಬೆಳೆ ವಿಮೆ ಕಟ್ಟಬೇಕು.

ಅರ್ಜಿ ಸಲ್ಲಿಸಿದ ನಂತರ ಈ ಕೆಲಸವನ್ನು ತಪ್ಪದೇ ಮಾಡಿ:

ರೈತರು ಬೆಳೆ ವಿಮೆ ಪಾವತಿ ಮಾಡಿದ ನಂತರ ಲಭ್ಯವಾಗುವ ಪಾವತಿ ಸ್ವೀಕೃತಿಯನ್ನು ಕಳೆಯದೆ ತಮ್ಮ ಬಳಿ ಕಾಯ್ದುಕೊಳ್ಳುವುದು. ಮುಂದಿನ ದಿನಗಳಲ್ಲಿ ಅರ್ಜಿ ಸ್ಥಿತಿ ಕುರಿತು ವಿಚಾರಿಸಲು ಬೇಕಾಗುತ್ತದೆ.

ಸಂರಕ್ಷಣೆ ಪೋರ್ಟಲ್(https://samrakshane.karnataka.gov.in/) ಭೇಟಿ ಮಾಡಿ ನಿಮ್ಮ ಬಾಗದ ಬೆಳೆ ವಿಮೆ ಕಂಪನಿಯ ಪ್ರತಿ ನಿಧಿ ನಂಬರ್ ಪಡೆದು ನಿಮ್ಮ ಬಳಿ ಇಟ್ಟುಕೊಳ್ಳಿ ಅತೀಯಾದ ಮಳೆ ಅಥವಾ ಇತರೆ ಕಾರಣಗಳಿಂದ ಬೆಳೆ ಹಾನಿಯಾದಲ್ಲಿ ಬೆಳೆ ವಿಮೆ ಕಂಪನಿಯ ಪ್ರತಿನಿಧಿಗೆ 72 ಗಂಟೆಯ ಒಳಗೆ ಕರೆ ಮಾಡಿ ಸ್ಥಳ ಪರಿಶೀಲನೆ ಮಾಡಲು ತಿಳಿಸಿ.

ಇದನ್ನೂ ಓದಿ: Karnataka weather- 2023: ರಾಜ್ಯದ ಈ  ಜಿಲ್ಲೆಗಳಲ್ಲಿ  ಜುಲೈ 27ರವರೆಗೆ ಭಾರಿ ಮಳೆ ಸಾಧ್ಯತೆ!