ರೈತರು ಮತ್ತು ಕೃಷಿ ಜಮೀನು ಖರೀದಿ ಮಾಡಲು ಆಸಕ್ತಿಯಿರುವವರು ಆ ಜಮೀನಿನ ಮೇಲೆ ಎಷ್ಟು ಸಾಲವಿದೆ(Crop loan) ಮತ್ತು ಈ ಕುರಿತು ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಯಾವ ಸರಕಾರಿ ಕಚೇರಿಗೆ ಭೇಟಿ ಮಾಡದೆ ಹೇಗೆ ತಿಳಿಯಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಅಪ್ತರಿಗೂ ಶೇರ್ ಮಾಡಿ ನಮ್ಮ ತಂಡವನ್ನು ಬೆಂಬಲಿಸಿ.
ರೈತರು ಅಥವಾ ಹೊಸದಾಗಿ ಕೃಷಿ ಜಮೀನು ಖರೀದಿ ಮಾಡುವವರು ಆ ಜಮೀನಿನ/ಸರ್ವೆ ನಂಬರ್ ಮೇಲೆ ಸಾಲವಿದಿಯೇ? ಇಲ್ಲವೇ ಎಂದು ಮತ್ತು ಸಾಲವಿದಲ್ಲಿ ಯಾವೆಲ್ಲ ಬ್ಯಾಂಕ್ ಗಳಲ್ಲಿ ಇದೆ? ಒಟ್ಟು ಸಾಲದ ಮೊತ್ತ ಎಷ್ಟು ಹೀಗೆ ಹಲವು ಮಾಹಿತಿಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ವೆಬ್ಸೈಟ್ ಭೇಟಿ ಮಾಡಿ ತಿಳಿಯಬವುದು.
ಹೊಸದಾಗಿ ಜಮೀನು ಖರೀದಿ ಮಾಡುವವರಿಗೆ ಮತ್ತು ಹಾಲಿ ಕೃಷಿಕರಿಗೆ ಯಾವ ಸರ್ವೆ ನಂಬರ್ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿದಿರುವುದಿಲ್ಲ ಮತ್ತು ಅದನ್ನು ಎಲ್ಲಿ ವಿಚಾರಿಸಬೇಕು ಎನ್ನುವ ಮಾಹಿತಿಯು ಬಹಳ ಜನರಿಗೆ ಗೊತ್ತಿರುವುದಿಲ್ಲ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ರಾಜ್ಯ ಸರಕಾರದ ಬೆಳೆ ಸಾಲ ಕುರಿತು ರಚಿಸಿರುವ ಈ https://clws.karnataka.gov.in/ ತಂತ್ರಾಂಶದಲ್ಲಿ ದೊರೆಯುತ್ತದೆ.
ಯಾವೆಲ್ಲ ಮಾಹಿತಿ ಲಭ್ಯ:
ವಾಣಿಜ್ಯ ಬ್ಯಾಂಕ್ ನಲ್ಲಿ ಎಷ್ಟು ಸಾಲಪಡೆದಿದ್ದಾರೆ ಅದರ ವಿವರ ಇದರ ಜೊತೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಎಷ್ಟು ಸಾಲ ಪಡೆದ್ದಿದಾರೆ ಅದರ ವಿವರ, ರೈತನ ಹೆಸರು, ಜಿಲ್ಲೆ ,ತಾಲ್ಲೂಕು, ಯಾವ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದಾರೆ? ಸಾಲದ ಖಾತೆ ಸಂಖ್ಯೆ, ಸಾಲ ಪಡೆದ ದಿನಾಂಕ, ಒಟ್ಟು ಸಾಲದ ಮೊತ್ತದ ಸರ್ವೆ ನಂಬರ್ ಮಾಹಿತಿ ದೊರೆಯುತ್ತದೆ.
Crop Loan Details- ನಿಮ್ಮ ಮೊಬೈಲ್ ನಲ್ಲೇ ಜಮೀನಿನ ಮೇಲಿರುವ ಸಾಲದ ವಿವರ ತಿಳಿಯುವ ವಿಧಾನ:
ವಿಧಾನ-1
Step-1: ಮೊದಲಿಗೆ ಈ https://clws.karnataka.gov.in/clws/ ಮೇಲೆ ಕ್ಲಿಕ್ ಮಾಡಿ ನಂತರ “Aadhar number” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step-2: ಈ ರೀತಿ ಆಧಾರ್ ನಂಬರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಬಳಿಕ ಅಲ್ಲೇ ಪಕ್ಕದಲ್ಲಿ ಕಾಣುವ ಬಾಕ್ಸ್ ನಲ್ಲಿ ಚೆಕ್ ಮಾಡಬೇಕಾದ ರೈತರ ಆಧಾರ್ ನಂಬರ್ ನಮೂದಿಸಿ “Fetch Details” ಮೇಲೆ ಕ್ಲಿಕ್ ಮಾಡಿದರೆ ಸಾಕು ವಾಣೀಜ್ಯ ಬ್ಯಾಂಕ್, ಪ್ರಾಥಮಿಕ ಸಹಕಾರ ಸಂಘದಲ್ಲಿ ಎಷ್ಟು ಸಾಲವಿದೆ ಈ ಕುರಿತು ಸಂಪೂರ್ಣ ವಿವರ ಗೋಚರಿಸುತ್ತದೆ.
Step-3: ಅಲ್ಲೇ ಈ ಪುಟ ಎಡ ಬದಿಯ ಮೊದಲನೇ ಕಾಲಂನಲ್ಲಿರುವ “Reports” ಆಯ್ಕೆಯ ಚಿನ್ನೆಗಳ ಮೇಲೆ ಕ್ಲಿಕ್ ಮಾಡಿ ಬೆಳೆ ಸಾಲದ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬವುದು, ಇಲ್ಲಿ ರೈತರ ಸರ್ವೆ ನಂಬರ್, ವಿಸ್ತೀರ್ಣ ಹೀಗೆ ಹಲವು ಮಾಹಿತಿಯ ಪಿಡಿಎಫ಼್ ಪುಟ ತೆರೆದುಕೊಳ್ಳುತ್ತದೆ.
ವಿಧಾನ-2
Step-1: ಈ ಕೊಂಡಿಯ https://landrecords.karnataka.gov.in ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಕಂದಾಯ ಇಲಾಖೆಯ ಲಾಂಡ್ ರೆಕಾರ್ಡ ಜಾಲತಾಣಕ್ಕೆ ಭೇಟಿ ಮಾಡಬೇಕು, ನಂತರ ಇಲ್ಲಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
Step-2: ತದನಂತರ ಜಮೀನಿನ ವಿವರಗಳು ವಿಭಾಗದಲ್ಲಿ “ಸ್ವಾಧೀನದಾರರ ವಾರು” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು, ಬಳಿಕ ನಿಮ್ಮ ಜಿಲ್ಲೆ ತಾಲ್ಲೂಕು , ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅಲ್ಲೇ ಕೆಳಗೆ ಕಾಣುವ “ವಿವರಗಳನ್ನು ಪಡೆ” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸರ್ವೇ ನಂಬರ್ ವಾರು ನಿಮ್ಮ ಗ್ರಾಮದ ಎಲ್ಲಾ ರೈತರ ಜಮೀನಿನ ವಿವರ ಗೋಚರಿಸುತ್ತದೆ.
Step-3: ಈ ಪುಟದಲ್ಲಿ ನಿಮ್ಮ್ಅ ಹೆಸರನ್ನು ಹುಡುಕಿ ಮೊದಲನೇ ಕಾಲಂನ ವೀಕ್ಷಣೆ ಕೆಳಗೆ ಇರುವ “View” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಜಮೀನ ಸಂಪೂರ್ಣ ವಿವರ ಗೋಚರಿಸುತ್ತದೆ.
Step-4: ಇದೇ ಪುಟದ ನೀಲಿ ಬಣ್ಣದ “Owner Details” ವಿಭಾಗದ ಕಾಲಂ ನಂಬರ್ 11.Other rights and liablities” ನಲ್ಲಿ ಈ ಸರ್ವೆ ನಂಬರ್ ಮೇಲೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲವಿದೆ ಎಂದು ಗೋಚರಿಸುತ್ತದೆ ಒಂದೊಮ್ಮೆ ಈ ಕಾಲಂ ಖಾಲಿ ಇದ್ದಲ್ಲಿ ಈ ಸರ್ವೆ ನಂಬರ್ ಮೇಲೆ ಯಾವುದೇ ಸಾಲವಿಲ್ಲ ಎಂದು.
ಇದನ್ನೂ ಓದಿ: ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ, ಮತ್ತು ಬೆಳೆ ಪರಿಹಾರದ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.