Krishi mela Dharwad-2023: ಧಾರವಾಡ ಕೃಷಿ ಮೇಳ 2023ಕ್ಕೆ ಡೇಟ್‌ ಫಿಕ್ಸ್‌! ಈ ಬಾರಿಯ ಮೇಳದ ವಿಶೇಷತೆಯೇನು?

ಈ ಭಾರಿಯ ಕೃಷಿ ಮೇಳವು(krishi mela-2023) "ಸುಸ್ಥಿರ ಕೃಷಿಗೆ ಸಿರಿದಾನ್ಯ"(millects for sustainable agriculture) ಎನ್ನುವ ಘೋಷವಾಕ್ಯದ ಮೇಲೆ ಆಯೋಜನೆ ಮಾಡಲು ತಯಾರಿ ನಡೆಸಲಾಗುತ್ತಿದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ 2023 ನೇ ವರ್ಷವನ್ನು ಸಿರಿದಾನ್ಯ ವರ್ಷ ಎಂದು ಅಚರಣೆ ಮಾಡುತ್ತಿರುವುದರಿಂದ ಕೃಷಿ ವಿಶ್ವವಿದ್ಯಾಲಯ ಧಾರವಾಡದಿಂದ ಈ ವರ್ಷದ ಕೃಷಿ ಮೇಳದಲ್ಲಿ ಸಿರಿದಾನ್ಯ ಬೆಳೆಗಳಿಗೆ ಹೆಚ್ಚು ಪ್ರಮುಖ್ಯತೆ ಕೊಡಲಾಗಿದೆ.

ಪ್ರತಿ ವರ್ಷದಂತೆ ಈ ವರ್ಷವು ಧಾರವಾಡ ಕೃಷಿ ಮೇಳವನ್ನು(krishi mela dharwad-2023) 09 ಸೆಪ್ಟಂಬರ್ 2023 ರಿಂದ 12 ಸೆಪ್ಟಂಬರ್ 2023 ರವರೆಗೆ ಒಟ್ಟು 4 ದಿನ ಕೃಷಿ  ಮೇಳವನ್ನು ಆಯೋಜನೆ ಮಾಡಲಾಗಿದೆ. ಈ ಕುರಿತು ಕೃಷಿ ವಿಶ್ವವಿದ್ಯಾಲಯ ಧಾರವಾಡದಿಂದ ಪ್ರಕಟಣೆ ಹೊರಡಿಸಲಾಗಿದೆ.

ಈ ಭಾರಿಯ ಕೃಷಿ ಮೇಳವು "ಸುಸ್ಥಿರ ಕೃಷಿಗೆ ಸಿರಿದಾನ್ಯ"(millects for sustainable agriculture) ಎನ್ನುವ ಘೋಷವಾಕ್ಯದ ಮೇಲೆ ಆಯೋಜನೆ ಮಾಡಲು ತಯಾರಿ ನಡೆಸಲಾಗುತ್ತಿದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ 2023 ನೇ ವರ್ಷವನ್ನು ಸಿರಿದಾನ್ಯ ವರ್ಷ ಎಂದು ಅಚರಣೆ ಮಾಡುತ್ತಿರುವುದರಿಂದ ಕೃಷಿ ವಿಶ್ವವಿದ್ಯಾಲಯ ಧಾರವಾಡದಿಂದ ಈ ವರ್ಷದ ಕೃಷಿ ಮೇಳದಲ್ಲಿ ಸಿರಿದಾನ್ಯ ಬೆಳೆಗಳಿಗೆ ಹೆಚ್ಚು ಪ್ರಮುಖ್ಯತೆ ಕೊಡಲಾಗಿದೆ.

ಸಿರಿದಾನ್ಯ ಬೆಳೆಗಳಾದ ಬರಗು, ರಾಗಿ, ಊದಲು, ನವಣೆ, ಸಾವಿ, ಸಜ್ಜೆ ಇದಕ್ಕೆ ಸಂಬದಪಟ್ಟಂತೆ ಉತ್ತಮ ಇಳುವರಿ ಕೊಡುವ ತಳಿಗಳ ಪರಿಚಯ, ರೈತರಿಗೆ ಈ ಬೆಳೆಗಳ ಮೌಲ್ಯವರ್ಧನೆ, ಮಾರುಕಟ್ಟೆ ಅವಕಾಶಗಳು ಇತ್ಯಾದಿ ವಿಷಯಗಳ ಕುರಿತು ಮಾಹಿತಿ ಒದಗಿಸಲಾಗುತ್ತದೆ.

ಇದರೆ ಜೊತೆಗೆ ರೈತರು-ವಿಜ್ಞಾನಿಗಳ ಸಂವಾದ, ಚರ್ಚ ಗೋಷ್ಟಿ, ನೂತನ ಕೃಷಿ ಯಂತ್ರೋಪಕರಣ (farm machinery)ಪ್ರಾತ್ಯಕ್ಷಿಕೆ, ಕೃಷಿ ಪರಿಕರ(agriculture inputs) ಮಳಿಗೆಗಳು, ಸಾವಯವ/ನೈಸರ್ಗಿಕ ಕೃಷಿ ಪ್ರಾತ್ಯಕ್ಷಿಕೆ, ಪಶುಸಂಗೋಪನೆ/ಕೋಳಿ/ಕುರಿ ಸಾಕಾಣಿಕೆ ಮಾಹಿತಿ, ಪಲಪುಷ್ಪ ಪ್ರದರ್ಶನವನ್ನು ಈ ಕೃಷಿ ಮೇಳದಲ್ಲಿ ನೋಡಬವುದು.

ಧಾರವಾಡ ಕೃಷಿ ಮೇಳವು (Agriculture university dharwad) ಕರ್ನಾಟಕದ ಮಧ್ಯ ಭಾಗದಲ್ಲಿ ಆಯೋಜನೆ ಮಾಡುವುದರಿಂದ ಎಲ್ಲಾ ಭಾಘದ ರೈತರಿಗೂ ಮೇಳಕ್ಕೆ ಬರಲು ಅನುಕೂಲವಾಗುವುದರಿಂದ ಅತೀ ಹೆಚ್ಚು ಸಂಖ್ಯೆಯಲ್ಲಿ ರೈತರು ಭಾಗವಹಿಸುತ್ತಾರೆ ಈ ಹಿಂದಿನ ವರ್ಷದ(2022) ಮೇಳಕ್ಕೆ 21 ಲಕ್ಷ ಜನ ಭೇಟಿ ಮಾಡಿರುತ್ತಾರೆ.

ಇದನ್ನೂ ಓದಿ: Crop loan details- ನಿಮ್ಮ ಮೊಬೈಲ್ ನಲ್ಲೇ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಬವುದು.

ಇನ್ನೂ ಹೆಚ್ಚಿನ ವ್ಯವಸ್ಥಿತ ನಿರ್ವಹಣೆ ಅಗತ್ಯವಿದೆ:

ನಮ್ಮ ರಾಜ್ಯದ ಈ ಕೃಷಿ ಮೇಳಕ್ಕೆ ಅತೀ ಹೆಚ್ಚು ಸಂಖ್ಯೆ   ಜನ ಬರುವುದರಿಂದ ಜನ ಜಂಗುಳಿ ಹೆಚ್ಚಿರುತ್ತದೆ ರೈತರು ಸ್ಟಾಲ್ ಗಳಲ್ಲಿ ಮಾಹಿತಿಯನ್ನು ಪಡೆಯಲು ಕೆಲವೊಮ್ಮೆ ಜನರ ದಟ್ಟನೆ ಹೆಚ್ಚಿರುತ್ತದೆ ಇಷ್ಟೇ ಪ್ರಮಾಣದ ಜನ ಸಂಖ್ಯೆ ಸೇರುವ ಬಾರಾಮತಿ ಕೃಷಿ ಮೇಳದಲ್ಲಿ ತುಂಬಾ ಅಚ್ಚುಕಟ್ಟಾಗಿ ಜನ ಸಂಧನಿಯನ್ನು ನಿರ್ವಹಣೆ ಮಾಡಲಾಗುತ್ತದೆ ಇದೆ ಮಾದರಿಯಲ್ಲಿ ಈ ಭಾರಿ ಕೃಷಿ ಮೇಳದ ಜನ ಸಂಧನಿ ನಿರ್ಹವಣೆ ಮಾಡಿದರೆ ರೈತರಿಗೆ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ.

ಇನ್ನು ಕೆಲವು ರೈತರು ಮೇಳದಲ್ಲಿ ವಾಣಿಜ್ಯ ಮಳಿಗೆಗಳಷ್ಟೆ ಪ್ರಮಾಣದಲ್ಲಿ ಕೃಷಿ ಮಾಹಿತಿ ನೀಡುವ ಮಳಿಗೆಗಳಿಗೆ ಸ್ಥಳಾವಕಾಶ ಮಾಡಿಕೊಡಬೇಕೆಂದು ತಮ್ಮ ಅಭಿಪ್ರಾಯ/ಸಲಹೆಯನ್ನು ಹಂಚಿಕೊಂಡಿದ್ದಾರೆ. 

ಕೃಷಿ ಮೇಳದಲ್ಲಿ ರೈತರು/ಇತರರು ತಮ್ಮ ಉತ್ಪನ್ನದ ಮಳಿಗೆಯನ್ನು ಮುಂಗಡ ಬುಕಿಂಗ್ ಮಾಡಲು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ:

8277478507 ಅಥವಾ 08362214468

ಮಳಿಗೆಗಳ ಬಾಡಿಗೆ ದರ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.


ಧಾರವಾಡ ಕೃಷಿ ವಿಶ್ಯವಿದ್ಯಾಲಯದ ಕುರಿತು ಹೆಚ್ಚಿನ ಮಾಃಇತಿ ಪಡೆಯಲು: http://uasd.edu/

ಇದನ್ನೂ ಓದಿ: ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ, ಮತ್ತು ಬೆಳೆ ಪರಿಹಾರದ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.