Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

ನಮ್ಮ ಜಾಲತಾಣದಲ್ಲಿ ರಾಜ್ಯ ಸರಕಾರದ ನೂತನ 5 ಯೋಜನೆಗಳ ಕುರಿತು ನಿರಂತರವಾಗಿ ಕಳೆದ ಒಂದು ತಿಂಗಳಿನಿಂದ ಸಮಗ್ರ ಮಾಹಿತಿಯನ್ನು ಪ್ರಕಟಿಸಿಕೊಂಡು ಬರುತ್ತಿದ್ದೇವೆ ಈ ಯೋಜನೆಯ ಲಾಭವನ್ನು ರಾಜ್ಯದ ಅರ್ಹ ಎಲ್ಲಾ ನಾಗರೀಕರು ಪಡೆಯಬೇಕು ಎನ್ನುವುದು ನಮ್ಮ ತಂಡದ ಮುಖ್ಯ ಉದ್ದೇಶವಾಗಿದ್ದು ಇಂದು ಅನ್ನ ಭಾಗ್ಯ ಯೋಜನೆಯ(Annabhagya amount check) ಕುರಿತು ಇನ್ನಷ್ಟು ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದಲ್ಲಿ ನಿಮ್ಮ ಅಪ್ತರಿಗೂ ಶೇರ್ ಮಾಡಿ ಸಹಕರಿಸಿ.

ನಮ್ಮ ಜಾಲತಾಣದಲ್ಲಿ ರಾಜ್ಯ ಸರಕಾರದ ನೂತನ 5 ಯೋಜನೆಗಳ ಕುರಿತು ನಿರಂತರವಾಗಿ ಕಳೆದ ಒಂದು ತಿಂಗಳಿನಿಂದ ಸಮಗ್ರ ಮಾಹಿತಿಯನ್ನು ಪ್ರಕಟಿಸಿಕೊಂಡು ಬರುತ್ತಿದ್ದೇವೆ ಈ ಯೋಜನೆಯ ಲಾಭವನ್ನು ರಾಜ್ಯದ ಅರ್ಹ ಎಲ್ಲಾ ನಾಗರೀಕರು ಪಡೆಯಬೇಕು ಎನ್ನುವುದು ನಮ್ಮ ತಂಡದ ಮುಖ್ಯ ಉದ್ದೇಶವಾಗಿದ್ದು ಇಂದು ಅನ್ನ ಭಾಗ್ಯ ಯೋಜನೆಯ(Annabhagya amount check) ಕುರಿತು ಇನ್ನಷ್ಟು ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದಲ್ಲಿ ನಿಮ್ಮ ಅಪ್ತರಿಗೂ ಶೇರ್ ಮಾಡಿ ಸಹಕರಿಸಿ.

ರಾಜ್ಯ ಸರಕಾರದಿಂದ ಈ ಹಿಂದಿನ ತಿಂಗಳು ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು ಪ್ರತಿ ಸದಸ್ಯರಿಗೆ 170 ರೂ, ರಂತೆ ಅರ್ಥಿಕ ಸಹಾಯಧನವನ್ನು ವಿತರಿಸಲಾಗಿತ್ತು ಆದರೆ ಅನೇಕ ಜನರಿಗೆ ಈ ಹಿಂದಿನ ತಿಂಗಳ ಅರ್ಥಿಕ ನೆರವು ತಮ್ಮ ಖಾತೆಗೆ ಜಮಾ ಅಗಿಲ್ಲವೆಂದು ನಮ್ಮ ವಾಟ್ಸಾಪ್ ನಂಬರ್ ಗೆ ಸಂದೇಶ ಕಳುಹಿಸಿದ್ದರು ಈ ಕೆಳಗೆ ಕೊಟ್ಟಿರುವ ಅಹಾರ ಇಲಾಖೆಯ ಜಾಲತಾಣದ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೋ ಇಲ್ಲಾವೋ? ಎಂದು ಒಮ್ಮೆ ಪರಿಶೀಲಿಸಿಕೊಳ್ಳಿ ಒಂದೊಮ್ಮೆ ಇದ್ದು ಸಹಾಯಧನ ಬರದೇ ಇದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ ಮಾಡಿಕೊಳ್ಳಿ.

Annabhagya yojane list- ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ 

ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಮುಂದಿನ ತಿಂಗಳ ಅನ್ನಭಾಗ್ಯ ಯೋಜನೆಯ ಸಹಾಯಧನ ಜಮಾ ಅಗಲಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡುವ ವಿಧಾನ.

Step-1: ನಿಮ್ಮಅ ಮೊಬೈಲ್ ಮೂಲಕ ಈ https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡಿ "ಇ-ಪಡಿತರ ಚೀಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗೆ ಗೋಚರಿಸುವ ಹಳ್ಳಿ ಪಟ್ಟಿ ಮೇಲೆ ಕ್ಲಿಕ್ ಮಾಡಿಕೊಳ್ಳಿ.

Step-2: ನಂತರದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ್, ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂಡು "GO" ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಹಳ್ಳಿಯ ಅರ್ಹ ಪಡಿತರ ಚೀಟಿದಾರರ ಪಟ್ಟಿ ತೋರಿಸುತ್ತದೆ.

ಈ ಪಟ್ಟಿಯಲ್ಲಿ ಫಲಾನುಭವಿಯ ರೇಷನ್ ಕಾರ್ಡ(RC number) ನಂಬರ್, ಹೆಸರು , ವಿಳಾಸ, ರೇಷನ್ ಕಾರ್ಡ ವಿಧ, ಒಟ್ಟು ಎಷ್ಟು ಜನ ರೇಶನ್ ಕಾರ್ಡನಲ್ಲಿ ಇದ್ದಾರೆ ಎಂದು ತೋರಿಸುತ್ತದೆ.

ಇದನ್ನೂ ಓದಿ: Crop loan details- ನಿಮ್ಮ ಮೊಬೈಲ್ ನಲ್ಲೇ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಬವುದು.

Annabhagaya amount status check: ಈ ಹಿಂದಿನ ತಿಂಗಳು ಎಷ್ಟು ಹಣ ಜಮಾ ಅಗಿದೆ ಎಂದು ಪರಿಶೀಲಿಸುವ ವಿಧಾನ:

ಹಿಂದಿನ ತಿಂಗಳು ಈ ಯೋಜನೆಯಡಿ ಅಕ್ಕಿಯ ಬದಲು ಹಣವನ್ನು ವರ್ಗಾವಣೆಯನ್ನು ಮಾಡಲಾಗಿತ್ತು, ನಿಮಗೆ ಎಷ್ಟು ಹಣ ಜಮಾ ಅಗಿದೆ ಮತ್ತು ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನವನ್ನು ವಿವರಿಸಲಾಗಿದೆ.

Step-1: https://ahara.kar.nic.in/lpg/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನಂತರ ಬೆಂಗಳೂರು ವಿಭಾಗ, ಕಲ್ಬುರ್ಗಿ ವಿಭಾಗ, ಮೈಸೂರು/ಬೆಳಗಾವಿ ವಿಭಾಗಕ್ಕೆ ಸೇರಿ ಒಟ್ಟು  3 ಲಿಂಕ್ ಗೋಚರಿಸುತ್ತದೆ ನಿಮ್ಮ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

Step-2: ಈ ಪುಟದಲ್ಲಿ ನೇರ ನಗದು ವರ್ಗಾವಣೆಯ ಸ್ಥಿತಿ(DBT) ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ವರ್ಷ "2023"  ತಿಂಗಳು ಮತ್ತು ನಿಮ್ಮ ರೇಷನ್ ಕಾರ್ಡ ನಂಬರ್ ಹಾಕಿ ಕೆಳಗೆ ಕಾಣುವ ಕ್ಯಾಪ್ಚಾ ಅನ್ನು ನಮೂದಿಸಿ "GO" ಮೇಲೆ ಕ್ಲಿಕ್ ಮಾಡಿದರೆ ಹಣ ಪಾವತಿ ವಿವರ ತೋರಿಸುತ್ತದೆ.

ಗಮನಿಸಿ: ಅತ್ಯೋದಯ ಕಾರ್ಡ ಇರುವವರಿಗೆ 3 ಜನರ ಮೇಲೆ ಇರುವವರಿಗೆ ಮಾತ್ರ ಪ್ರತಿ ವ್ಯಕ್ತಿಗೆ 170 ರೂ ಜಮಾ ಅಗುತ್ತದೆ.

ಸೂಚನೆ: ಈ ಮೇಲಿ ತಿಳಿಸಿರುವ ಆಹಾರ ಇಲಾಖೆಯ ಅರ್ಜಿ ಸ್ಥಿತಿ ಪರಿಶೀಲನೆ ಮಾಡುವ ಜಾಲತಾಣವು(Website) ಬೆಳಗ್ಗೆ 8-00 ರಿಂದ ರಾತ್ರಿ 8-00 ಗಂಟೆಯ ವರೆಗೆ ಮಾತ್ರ ಒಪನ್ ಅಗುತ್ತದೆ.
ಈ ಸಮಯದಲ್ಲಿ ಮಾತ್ರ ನೀವು ನಿಮ್ಮ ಅರ್ಜಿಯ ವಿವರವನ್ನು ಚೆಕ್ ಮಾಡಿಕೊಳ್ಳಬವುದು.

ಹೊಸ ಪಡಿತರ ಚೀಟಿ ಪಡಿತರ ಚೀಟಿ ತಿದ್ದುಪಡಿ ಮತ್ತು ರೇಷನ್ ಕಾರ್ಡ ಸದಸ್ಯರಿಗೆ ಅಧಾರ್ ಲಿಂಕ್ ಈ ಎಲ್ಲಾ ಮಾಹಿತಿಯನ್ನು ಈ ವೆಬ್ಸೈಟ್ ನಲ್ಲಿ ತಿಳಿಯಬವುದಾಗಿದೆ.

ಇದನ್ನೂ ಓದಿ: ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ, ಮತ್ತು ಬೆಳೆ ಪರಿಹಾರದ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.