Crop insurance 2023: ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

ಬೆಳೆ ವಿಮೆಗೆ (fasal bima yojana)ಅರ್ಜಿ ಸಲ್ಲಿಸಲು ರೈತರಿಗೆ ಒಂದು ದಿನ ಹೆಚ್ಚುವರಿಯಾಗಿ ಕಾಲಾವಕಾಶ ಕಲ್ಪಿಸಲಾಗಿದ್ದು, ರೈತ ಬಾಂಧವರು ಬೆಳೆ ವಿಮೆಗೆ(crop insurance) ಅರ್ಜಿ ಸಲ್ಲಿಸಲು ತಮ್ಮ ಹತ್ತಿರದ ಗ್ರಾಮ ಓನ್ ಕೇಂದ್ರ ಹಾಗೂ ಸಿ.ಎಸ್.ಸಿ ಸೆಂಟರ್ಗಳನ್ನು ಭೇಟಿ ಮಾಡಲು ತಿಳಿಸಲಾಗಿದೆ.

2023-24 ನೇ ಸಾಲಿನ ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ(Fasal bima yojana) ವಿಮಾ ಕಂತು ತುಂಬಲು ಈ ಹಿಂದೆ ದಿನಾಂಕ:31-07-2023ನ್ನು ಕೊನೆಯ ದಿನಾಂಕವೆಂದು ನಿಗಧಿಗೊಳಿಸಲಾಗಿತ್ತು. ಆದರೆ ಈಗ ದಿನಾಂಕ: 01-08-2023 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು  ರೈತರಿಗೆ ಒಂದು ದಿನ ಹೆಚ್ಚುವರಿಯಾಗಿ ಕಾಲಾವಕಾಶ ಕಲ್ಪಿಸಲಾಗಿದ್ದು, ರೈತ ಬಾಂಧವರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ತಮ್ಮ ಹತ್ತಿರದ ಗ್ರಾಮ ಓನ್ ಕೇಂದ್ರ ಹಾಗೂ ಸಿ.ಎಸ್.ಸಿ ಸೆಂಟರ್ಗಳನ್ನು ಭೇಟಿ ಮಾಡಲು ತಿಳಿಸಲಾಗಿದೆ.

Crop insurance type- ಬೆಳೆ ವಿಮೆಯಲ್ಲಿ ಎರಡು ಬಗ್ಗೆಯ ವಿಧಾನಗಳಿವೆ:

ಬೆಳೆ ವಿಮೆಯಲ್ಲಿ ಎರಡು ರೀತಿಯಿದ್ದು ಕೃಷಿ ಬೆಳೆಗಳು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಇದರ ಅಡಿಯಲ್ಲಿ ಬರುತ್ತವೆ ತೋಟಗಾರಿಕೆ ಬೆಳೆಗಳು(ಅಡಿಕೆ, ಕಾಳುಮೆಣಸು ಇತ್ಯಾದಿ) ಹವಾಮಾನ ಆಧಾರಿತ ಬೆಳೆ ವಿಮೆ  ಯೋಜನೆಯಡಿ ಬರುತ್ತದೆ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಕೃಷಿ ವಲಯದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ - a) ಅನಿರೀಕ್ಷಿತ ಘಟನೆಗಳಿಂದ ಅತೀವೃಷ್ಟಿ-ಅನಾವೃಷ್ಟಿಯಿಂದ ಉಂಟಾಗುವ ಬೆಳೆ ನಷ್ಟ/ಹಾನಿಯಿಂದ ಬಳಲುತ್ತಿರುವ ರೈತರಿಗೆ ಆರ್ಥಿಕ ಬೆಂಬಲವನ್ನು ನೀಡಲಾಗುತ್ತದೆ.

ಇಲ್ಲಿ ಬೆಳೆ ಅಂದಾಜು ಸಮೀಕ್ಷೆಯ(CCE) ಇಳುವರಿಯ ಮಾಹಿತಿಯನ್ನು ಬೆಳೆ ವಿಮೆ ಪಾವತಿಗೆ ಬಳಕೆ ಮಾಡಲಾಗುತ್ತದೆ, ಅಧಿಸೂಚಿತ ಘಟಕದಲ್ಲಿ ಒಟ್ಟು ಸರಾಸರಿ ಇಳುವರಿ ಕಡಿಮೆ ಬಂದಾಗ ವಿಮಾ ಕಂಪನಿಯು ಆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೆಳೆ ವಿಮೆ ತುಂಬಿದ ಎಲ್ಲಾ ರೈತರಿಗೆ  ಬೆಳೆ ವಿಮಾ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.

ಹವಾಮಾನ ಆಧಾರಿತ ಬೆಳೆ ವಿಮೆ(WBCIS) ಯೋಜನೆಯಡಿ ಹವಾಮಾನ ಆಧಾರಿತ ಬೆಳೆ ವಿಮೆ ಇದಾಗಿದ್ದು ಮಳೆ, ತಾಪಮಾನ, ಹಿಮ, ಆರ್ದ್ರತೆ ಇತ್ಯಾದಿ ಹವಾಮಾನ ನಿಯತಾಂಕಗಳ ಪ್ರತಿಕೂಲ ಪರಿಸ್ಥಿತಿಗಳಿಂದ ಉಂಟಾಗುವ ನಿರೀಕ್ಷಿತ ಬೆಳೆ ನಷ್ಟಕ್ಕೆ ರೈತರಿಗೆ ಬೆಳೆ ವಿಮೆ ಪಾವತಿ ಮಾಡಲಾಗುತ್ತದೆ.

ಅಂದರೆ ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ ಅತೀ ಕಡಿಮೆ ಮಳೆ ಅಥವಾ ಅತೀ ಹೆಚ್ಚು ಮಳೆ ಬಂದು ಬೆಳೆ ಹಾನಿಯಾದಾಗ ಬೆಳೆ ವಿಮೆ ಪಾವತಿ ಮಾಡಲಾಗುತ್ತದೆ.

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

How to check crop insurance application status- ನಿಮ್ಮ ಬೆಳೆ ವಿಮಾ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು ವಿಧಾನ:

ರೈತರು ಈಗಾಗಲೇ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದಲ್ಲಿ ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಹೇಗೆ ತಿಳಿಯಬವುದು ಎಂದು ಈ ಕೆಳಗೆ ವಿವರಿಸಲಾಗಿದೆ.

Step-1: ಈ ಲಿಂಕ್ https://samrakshane.karnataka.gov.in/Premium/CheckStatusMain_aadhaar.aspx ಮೇಲೆ ಕ್ಲಿಕ್ ಮಾಡಿ ಬೆಳೆ ವಿಮಾ ತಂತ್ರಾಶ ಸಂರಕ್ಷಣೆ ವೆಬ್ಸೈಟ್ ಭೇಟಿ ಮಾಡಬೇಕು.

Step-2: ನಂತರ ಈ ಪುಟದಲ್ಲಿ Proposal Id/mobile no/Aadhar ಹೀಗೆ 3 ಆಯ್ಕೆಯನ್ನು ತೋರಿಸುತ್ತದೆ ‘ನಿಮ್ಮ ಬಳಿ ಲಭ್ಯವಿರುವ ಮಾಹಿತಿಯ ಪ್ರಕಾರ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಂಡು ಉದಾ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡು ಅರ್ಜಿದಾರರ ಮೊಬೈಲ್ ಸಂಖ್ಯೆ ನಮೂದಿಸಿ ನಂತರ ಕ್ಯಾಪ್ಚ ಕೋಡ್ ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಈ ರೀತಿ ವಿಧಾನವನ್ನು ಅನುಸರಿಸಿದ ನಂತರ ಈ ಪುಟದಲ್ಲಿ ಅರ್ಜಿದಾರರ ಬೆಳೆ ವಿಮೆ ಅರ್ಜಿಯ ಸಂಪೂರ್ಣ ವಿವರ ಗೋಚರಿಸುತ್ತದೆ ಇಲ್ಲಿ "GramaOne Payment Successful ಮತ್ತು Approved by Bank and Forwarded to insurance Co.    " ಎಂದು ತೋರಿಸಿದರೆ ಮಾತ್ರ ನಿಮ್ಮ ಬೆಳೆ ವಿಮಾ ಅರ್ಜಿ ಯಶ್ವವಿಯಾಗಿ ಸಲ್ಲಿಕೆ ಅಗಿದೆ ಎಂದು ಒಂದು ವೇಲೆ "ಬೆಳೆ ನೋಂದಣಿಯು ಪ್ರಗತಿಯಲ್ಲಿದೆ/Data Entry In Progress" ಎಂದು  ಅಥವಾ "No date found" ಎಂದು ತೋರಿಸಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು.

Step-4: proposal id ಯ ಕೊನೆಯಲ್ಲಿ ಕಾಣುವ "select" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ "view details" ಮೇಲೆ ಕ್ಲಿಕ್ ಮಾಡಿದರೆ ಅರ್ಜಿದಾರರ ಇನ್ನಷ್ಟು ಮಾಹಿತಿ ತೋರಿಸುತ್ತದೆ ರೈತನ ಸರ್ವೆ ನಂಬರ್, ಒಟ್ಟೂ ಬೆಳೆ ವಿಮೆ ಇತರೆ ಹಲವು ವಿವರವನ್ನು ಇಲ್ಲಿ ತಿಳಿದುಕೊಳ್ಳಬವುದು.

District wise crop insurance application detaisl- ಇಲ್ಲಿಯವರೆಗೆ ರೈತರಿಂದ  ಸಲ್ಲಿಕೆಯಾದ ಜಿಲ್ಲಾವಾರು ಬೆಳೆ ವಿಮೆ  ಅರ್ಜಿಗಳ ಸಂಖ್ಯೆಗಳು(31-07-2023):

ರಾಜ್ಯದಲ್ಲಿ ಇಲ್ಲಿಯವರೆಗೆ ಸಲ್ಲಿಕೆಯಾದ ಒಟ್ಟು ಅರ್ಜಿಗಳು 20,21,538 ಸಂಗ್ರಹಿಸಲಾದ ಒಟ್ಟು ಬೆಳೆ ವಿಮೆ ಪ್ರಿಮಿಯಂ ಮೊತ್ತ 270,77,35,713 ರೂ ಅಗಿರುತ್ತದೆ.

ಹಾವೇರಿ- 3,43,297, ಬೀದರ್- 2,20,924, ಗುಲ್ಬರ್ಗ- 1,76,631, ಬಿಜಾಪುರ- 1,32,294, ದಾರವಾಡ- 1,22,920, ಚಿತ್ರದುರ್ಗ- 1,08,166, ಶಿವಮೊಗ್ಗ- 98,409, ತುಮಕೂರು- 96,874, ಗದಗ- 93,097, ಕೊಪ್ಪಳ- 84,801, ಕಾರವಾರ- 72,664, ಹಾಸನ- 62,727, ಮಂಗಳೂರು- 57, 557, ದಾವಣಗೆರೆ- 56,103, ಬೆಳಗಾವಿ- 47,658, ಮಂಡ್ಯ- 46674, ರಾಯಚೂರು- 45099, ಚಿಕ್ಕಬಳ್ಳಾಪುರ- 39,811, ವಿಜಯನಗರ- 32,124, ಚಿಕ್ಕಮಗಳೂರು- 39,811, ಚಾಮರಾಜನಗರ- 16,776, ಬಾಗಲಕೋಟೆ- 15,981, ಯಾದಗಿರಿ- 7,503, ಉಡುಪಿ- 6,236, ಮೈಸೂರು- 3,831
ಬಳ್ಳಾರಿ- 2,266.

ಇದನ್ನೂ ಓದಿ: Crop loan details- ನಿಮ್ಮ ಮೊಬೈಲ್ ನಲ್ಲೇ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಬವುದು.