Gruha joythi bill: ಗೃಹ ಜ್ಯೋತಿ ಯೋಜನೆಯ ಶೂನ್ಯ ವಿದ್ಯುತ್ ಬಿಲ್ ಹೇಗೆ ಬರಲಿದೆ ಇಲ್ಲಿದೆ ಸ್ಯಾಂಪಲ್ ಬಿಲ್.

ರಾಜ್ಯ ಸರಕಾರದ ಗೃಹ ಜ್ಯೋತಿ ಯೋಜನೆಯಡಿ(gruha joythi bill)ಪ್ರತಿ ಮನೆಗೆ ನೀಡುವ ಶೂನ್ಯ ವಿದ್ಯುತ್ ಬಿಲ್ ನ ಸ್ಯಾಂಪಲ್ ಬಿಲ್ ಅನ್ನು ಬೆಸ್ಕಾಂ(Bescom) ಬಿಡುಗಡೆಗೊಳಿಸಿದ್ದು ಈ ತಿಂಗಳ ಬಿಲ್ ಅನ್ನು ಕೆಲವು ಗ್ರಾಹಕರಿಗೆ ಈಗಾಗಲೇ ವಿತರಿಸುವ ಕಾರ್ಯವನ್ನು ಪ್ರಾರಂಬಿಸಿದೆ.

ರಾಜ್ಯ ಸರಕಾರದ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ನೀಡುವ ಶೂನ್ಯ ವಿದ್ಯುತ್ ಬಿಲ್ ನ ಸ್ಯಾಂಪಲ್ ಬಿಲ್ ಅನ್ನು ಬೆಸ್ಕಾಂ ಬಿಡುಗಡೆಗೊಳಿಸಿದ್ದು ಈ ತಿಂಗಳ ಬಿಲ್ ಅನ್ನು ಕೆಲವು ಗ್ರಾಹಕರಿಗೆ ಈಗಾಗಲೇ ವಿತರಿಸುವ ಕಾರ್ಯವನ್ನು ಪ್ರಾರಂಬಿಸಿದೆ.

ಈ ಕುರಿತು ಬೆಂಗಳೂರಿನಲ್ಲಿ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ಗೃಹ ಜ್ಯೋತಿ ಯೋಜನೆಯಡಿ ಅರ್ಹ ಗ್ರಾಹಕರಿಗೆ ನೀಡಲಾಗುವ ಶೂನ್ಯ ಬಿಲ್ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದ್ದಾರೆ.‌

ಈಗಾಗಲೇ  2.5 ಕೋಟಿ ಗ್ರಾಹಕರ ರಲ್ಲಿ ರಾಜ್ಯ ಸರಕಾರದ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆ 200 ಯುನಿಟ್ ಉಚಿತ ವಿದ್ಯುತ್ ಪಡೆಯಲು 1.42 ಕೋಟಿ ಗ್ರಾಹಕರು ಅರ್ಜಿ ಸಲ್ಲಿಸಿದ್ದು ಇವರಿಗೆ ಈ ತಿಂಗಳಿನಿಂದ ಶೂನ್ಯ ಬಿಲ್ ಪಾವತಿ ಮಾಡಲಾಗುತ್ತದೆ.

05 ಆಗಸ್ಟ್ 2023 ರಂದು ಗುಲ್ಬರ್ಗಾದ ಎನ್.ವಿ ಮೈದಾನದಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ನೆರವೇರಲಿದೆ. ಸನ್ಮಾನ್ಯ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರು ಹಾಗೂ ಗಣ್ಯಾತಿಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಕೆ.ಜೆ.ಜಾರ್ಜ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

ಈ ದಿನಾಂಕದ ನಂತರ ಅರ್ಜಿ ಸಲ್ಲಿಸದವರಿಗಿಲ್ಲ ಈ ತಿಂಗಳ ಉಚಿತ ಬಿಲ್!

ಜುಲೈ 28 ರ ನಂತರ ಅರ್ಜಿ ಸಲ್ಲಿಸಿದವರಿಗೆ ಈ ತಿಂಗಳು ಶೂನ್ಯ ಬಿಲ್ ಬರುವುದಿಲ್ಲ ಬದಲಾಗಿ ಅವರು  ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗುತ್ತದೆ ಮುಂದಿನ ತಿಂಗಳು ಶೂನ್ಯ ಬಿಲ್ ಬರುತ್ತದೆ ಏಕೆಂದರ ಪ್ರತಿ ತಿಂಗಳ ಬಿಲ್ ಅವಧಿ 27ಕ್ಕೆ ಕೊನೆಗೊಳ್ಳುತ್ತದೆ ಅದ್ದರಿಂದ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಿಲ್ಲ ಅದರೆ ತಡ ಮಾಡಿದಷ್ಟು ಆ ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗುತ್ತದೆ ಅದರಿಂದ  ಅರ್ಜಿ ಸಲ್ಲಿಸದವರು ಕೂಡಲೇ ಅರ್ಜಿ ಸಲ್ಲಿಸಿ.

Gruha joyti Status check- ಗೃಹ ಜ್ಯೋತಿ ಅರ್ಜಿ ಸ್ಥಿತಿ ಮತ್ತು ಯಾವ ದಿನಾಂಕದಂದು ಅರ್ಜಿ ಹಾಕಲಾಗಿದೆ ಎಂದು ಚೆಕ್ ಮಾಡುವ ವಿಧಾನ:

Step-1:https://sevasindhu.karnataka.gov.in/StatucTrack/Track_Status ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ವೆಬ್ಸೈಟ್ ಭೇಟಿ ಮಾಡಬೇಕು.

Step-2: ನಂತರ ನಿಮ್ಮ ಎಸ್ಕಾಂ ಆಯ್ಕೆ ಮಾಡಿಕೊಂಡು ವಿದ್ಯುತ್ ಬಿಲ್ ನ ಅಕೌಂಟ್ ಸಂಖ್ಯೆಯನ್ನು ನಮೂದಿಸಿ  "Check Status" ಮೇಲೆ ಕ್ಲಿಕ್ ಮಾಡಿದ್ದಾರೆ ನಿಮ್ಮ ಅರ್ಜಿಯ ಸಂಖ್ಯೆ, ಅರ್ಜಿ ಸಲ್ಲಿಸಿದ ದಿನಾಂಕ, ಅರ್ಜಿ ಸ್ಥಿತಿ ತೋರಿಸುತ್ತದೆ "Status: Your application for GruhaJyothi Scheme is received and sent to ESCOM for processing" ಈ ರೀತಿ ಗೋಚರಿಸಿದ್ದರೆ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿ ಎಂದು ತಿಳಿಯಬೇಕು.

ಇದನ್ನೂ ಓದಿ: Crop loan details- ನಿಮ್ಮ ಮೊಬೈಲ್ ನಲ್ಲೇ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಬವುದು.