ಕೇಂದ್ರ ಸರಕಾರದಿಂದ 15 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ! ಇಲ್ಲಿದೆ ಸಂಪೂರ್ಣ ವಿವರ.

ನವದೆಹಲಿ: ರೈತರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಬೆಲೆ ಒದಗಿಸುವ ದೇಸೆಯಲ್ಲಿ ಬುಧವಾರ, ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು ಹಾಲಿ ಮಾರುಕಟ್ಟೆ ಋತುವಿನ ಎಲ್ಲ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. 

ಮೆಕ್ಕೆಜೋಳ, ಭತ್ತ, ಜೋಳ, ಸಜ್ಜೆ, ರಾಗಿ, ತೊಗರಿಬೇಳೆ, ಹೆಸರುಬೇಳೆ, ಉದ್ದು, ನೆಲಗಡಲೆ, ಹತ್ತಿ, ಸೂರ್ಯಕಾಂತಿ ಸೇರಿ ಪ್ರಮುಖ 15 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ರೈತರಿಗೆ ಬೆಳೆ ಬೆಳೆಯಲು ಉತೇಜನ ನೀಡಲು ಮತ್ತು ಮಾರುಕಟ್ಟೆ ಧಾರಣೆ ಕುಸಿತವಾದಾಗ ಸರಕಾರದಿಂದ ಅರ್ಥಿಕವಾಗಿ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ಉತ್ಪನ್ನ ಖರೀದಿ ಮಾಡಿ ಅನುಕೂಲ ಮಾಡುವ  ಉದ್ದೇಶದಿಂದ 15 ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ.

2022 ನೇ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಭತ್ತ 143 ರೂ, ಹೆಸರುಕಾಳು 803 ರೂ, ತೊಗರಿ ಬೇಳೆ 400 ರೂ, ಹೈಬ್ರೀಡ್ ಜೋಳ 210 ರೂ, ಉದ್ದಿನ ಬೇಳೆ 350 ರೂ, ರಾಗಿ 268 ರೂ, ಮೆಕ್ಕೆಜೋಳ 128 ರೂ, ಶೇಂಗಾ 527 ರೂ, ಸೂರ್ಯಕಾಂತಿ 360 ರೂ, ಹತ್ತಿ(ಮಧ್ಯಮ) 540 ರೂ, ಹತ್ತಿ (ಉದ್ದ)640 ರೂ ಬೆಂಬಲ ಬೆಲೆಯನ್ನು ಹೆಚ್ಚಳ  ಮಾಡಲಾಗಿದೆ. ಹೆಸರುಕಾಳು 803 ರೂ ಅತ್ಯಧಿಕ ಏರಿಕೆಯಾಗಿದೆ.

ಇದನ್ನೂ ಓದಿ: ವೃದ್ದಾಪ್ಯ , ಸಂಧ್ಯಾ ಸುರಕ್ಷಾ ಇತರೆ ಮಾಸಿಕ ಪಿಂಚಣಿದಾರರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು 15 ಜೂನ್ 2023 ಕಡೆಯ ದಿನ.

ಪರಿಷ್ಕರಣೆ ಮಾಡಿದ ಕನಿಷ್ಟ ಬೆಂಬಲ ಬೆಲೆ ದರ ಪಟ್ಟಿ: 

ಸರಕಾರದ  2022-23ನೇ ಸಾಲಿನ ಮೂರನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು 330.5 ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದ್ದು, ಇದು ಹಿಂದಿನ ವರ್ಷ 2021-22ಕ್ಕೆ ಹೋಲಿಸಿದರೆ 14.9 ಮಿಲಿಯನ್ ಟನ್‌ಗಳಷ್ಟು ಉತ್ಪಾದನೆ ಹೆಚ್ಚಾಗಿದ್ದು, ಇದು ಕಳೆದ 5 ವರ್ಷಗಳಲ್ಲೇ ಗರಿಷ್ಠ ಏರಿಕೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.