Fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!

ಈಗಾಗಲೇ ರಾಜ್ಯದ್ಯಂತ ಕೃಷಿ ಮತ್ತು ಕಂದಾಯ ಇಲಾಖೆಯಿಂದ ರೈತರಿಗೆ FID ಮಾಡಿಕೊಳ್ಳಲು ಅಭಿಯಾನ ರೂಪದಲ್ಲಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಇದರೆ ಜೊತೆಗೆ ಈ ಕುರಿತು ಮತ್ತೊಂದು ಪ್ರಕಟಣೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಹೊರಡಿಸಲಾಗುತ್ತಿದೆ.

ಹೊಸ ಪ್ರಕಟಣೆಯ ಪ್ರಕಾರ FID ನಂಬರ್ ಹೊಂದಿಲ್ಲದ ರೈತರು FID ನಂಬರ್ ಅನ್ನು ರಚನೆ ಮಾಡಿಕೊಳ್ಳುವುದರ ಜೊತೆಗೆ ಈಗಾಗಲೇ ಈ ನಂಬರ್ ಅನ್ನು ಹೊಂದಿರುವ ರೈತರು ತಮ್ಮ ಎಲ್ಲಾ ಜಮೀನಿನ ಸರ್ವೆ ನಂಬರ್ ಅನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಉಂಟಾಗಿದ್ದು ಬೆಳೆ ನಷ್ಟವಾಗಿರುವ ರೈತರು ಬೆಳೆ ನಷ್ಟ ಪರಿಹಾರ ಧನ ಪಡೆದುಕೊಳ್ಳಲು ತಮ್ಮ ಜಮೀನಿನ ಸಂಪೂರ್ಣ ವಿವರಗಳನ್ನು ಒಳಗೊಂಡ FRUITS ID ಹೊಂದಿರುವುದು ಕಡ್ಡಾಯವಾಗಿರುತ್ತದೆ. 

ಇದನ್ನೂ ಓದಿ: Annabhagya november amount-2023: ಅನ್ನಭಾಗ್ಯ ಯೋಜನೆ ನವೆಂಬರ್ ತಿಂಗಳ ಹಣ ಜಮಾ! ಈ ಎರಡು ವಿಧಾನ ಅನುಸರಿಸಿ ನಿಮಗೆ ಎಷ್ಟು ಹಣ ಬಂದಿದೆ ಎಂದು ಚೆಕ್ ಮಾಡಿ.

ಬೆಳೆ ನಷ್ಟ ಪರಿಹಾರ ಪಡೆದುಕೊಳ್ಳಲು FRUITS ID ಗೆ ಎಲ್ಲ ಸರ್ವೇ ನಂಬರ್ ಗಳ ಜೋಡಣೆ ಕಡ್ಡಾಯ: ಜಿಲ್ಲಾಧಿಕಾರಿಗಳು, ಹಾವೇರಿ

ಹಾವೇರಿ ಜಿಲ್ಲೆಯ ಎಲ್ಲಾ 8 ತಾಲೂಕುಗಳನ್ನು ರಾಜ್ಯ ಸರ್ಕಾರವು ಬರಪೀಡಿತ ತಾಲೂಕುಗಳೆಂದು ಎಂದು ಘೋಷಣೆ ಮಾಡಿದೆ. ಬರ ಪೀಡಿತ ತಾಲೂಕುಗಳಲ್ಲಿ ಬೆಳೆ ನಷ್ಟವಾಗಿರುವ ರೈತರು ಬೆಳೆ ನಷ್ಟ ಪರಿಹಾರ ಧನ ಪಡೆದುಕೊಳ್ಳಲು ತಮ್ಮ ಜಮೀನಿನ ಸಂಪೂರ್ಣ ವಿವರಗಳನ್ನು ಒಳಗೊಂಡ FRUITS ID ಹೊಂದಿರುವುದು ಕಡ್ಡಾಯವಾಗಿರುತ್ತದೆ. 

FRUITS ತಂತ್ರಾಂಶದಲ್ಲಿ ದಾಖಲಿಸಿದ ಭೂ ದಾಖಲೆಗಳ ವಿಸ್ತೀರ್ಣ ಪ್ರಕಾರ ಬೆಳೆ ನಷ್ಟ ಪರಿಹಾರವು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಮುಂದುವರೆದು ಮ್ಯಾನುವಲ್ ಎಂಟ್ರಿಗೆ ಯಾವುದೇ ಅವಕಾಶ ಇರುವದಿಲ್ಲ. 

ಜಿಲ್ಲೆಯಲ್ಲಿ ಇದುವರೆಗೆ FRUITS ತಂತ್ರಾಂಶದಲ್ಲಿ 3.73 ಲಕ್ಷ ಪಹಣಿಗಳ ಮಾಹಿತಿ ನೊಂದಾಯಿಸಲಾಗಿದ್ದು ಉಳಿದ 1.43 ಲಕ್ಷ ಪಹಣಿಗಳ ಮಾಹಿತಿಯನ್ನು ರೈತರು ತುರ್ತಾಗಿ ನೊಂದಾಯಿಸಲು ಕೋರಿದೆ. 

ಇದನ್ನೂ ಓದಿ: akrama-sakrama yojana: ಅಕ್ರಮ ಸಕ್ರಮ ಯೋಜನೆಯಡಿ ಜಮೀನು ಪಡೆಯಲು ರಾಜ್ಯ ಸರಕಾರದಿಂದ ನೂತನ ಕ್ರಮ ಚಾರಿ!

ರೈತರು FRUITS ID ಜೊತೆಗೆ ತಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೇ ನಂಬರ್‌ಗಳನ್ನು ಸೇರಿಸಿಕೊಳ್ಳದೆ ಇದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ಸಿಗುವುದಿಲ್ಲ. ಕಾರಣ FRUITS ID ಹೊಂದಿರುವ ರೈತರು ಆಧಾರ ಕಾರ್ಡ್ ಹಾಗೂ ಉತಾರ್ ದಾಖಲಾತಿಗಳೊಂದಿಗೆ ಹತ್ತಿರದ ಗ್ರಾಮ ಒನ್/ಸಾಮಾನ್ಯ ಸೇವಾ ಕೇಂದ್ರ ರೈತ ಸಂಪರ್ಕ ಕೇಂದ್ರಗಳು/ ಕಂದಾಯ ಇಲಾಖೆ /ತೋಟಗಾರಿಕೆ ಇಲಾಖೆ /ರೇಷ್ಮೆ ಇಲಾಖೆ ಪಶುಸಂಗೋಪನಾ ಇಲಾಖೆಗಳಿಗೆ ಭೇಟಿ ನೀಡಿ ತುರ್ತಾಗಿ ಬಾಕಿ ಇರುವ ಎಲ್ಲ ಜಮೀನುಗಳ ಸರ್ವೇ ನಂಬರ್‌ಗಳನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ಸೇರಿಸಿಕೊಳ್ಳಲು ಈ ಮೂಲಕ ಕೋರಿದ ಎಂದು ಹಾವೇರಿಯ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

FID survey number add-ಇನ್ನು ರಾಜ್ಯದಲ್ಲಿ ಶೇ 30 ಕ್ಕಿಂತ ಹೆಚ್ಚಿನ ಸರ್ವೆ ನಂಬರ್ ಸೇರ್ಪಡೆ ಬಾಕಿ!

ಕೃಷಿ ಇಲಾಖೆಯ ಅಂಕಿ-ಅಂಶದ ಮಾಹಿತಿಯ ಪ್ರಕಾರ ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು ಲಭ್ಯವಿರುವ ಸರ್ವೆ ನಂಬರ್ ಗಳ ಪೈಕಿ ಇನ್ನು ಶೇ 30 ರಷ್ಟು ಜಮೀನಿನ ಸರ್ವೆ ನಂಬರ್ ಗಳನ್ನು ರೈತರು FID ಗೆ ಸೇರಿಸುವುದು ಬಾಕಿ ಇದೆ ಎನ್ನಲಾಗಿದೆ. ಈ ಕಾರಣ ರೈತರು ತಪ್ಪದೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಬಿಟ್ಟು ಹೋಗಿರುವ ಸರ್ವೆ ನಂಬರ್ ಅನ್ನು ಸೇರಿಸಿಕೊಳ್ಳಿ.

Required documents for FID numberಎಫ್ ಐ ಡಿ ಮಾಡಿಸಲು ಬೇಕಾಗುವ ದಾಖಲಾತಿಗಳು:

  1. ಆಧಾರ್ ಕಾರ್ಡ್ ಪ್ರತಿ
  2. ಪಹಣಿ ಪ್ರತಿ
  3. ಬ್ಯಾಂಕ್ ಪಾಸ್ ಬುಕ್ ಪ್ರತಿ
  4. ಮೊಬೈಲ್ ಸಂಖ್ಯೆ
  5. ST /SC  ಜಾತಿಗೆ ಸೇರಿದವರು ಜಾತಿ ಪ್ರಮಾಣ ಪತ್ರ.
  6. ಪೋಟೋ  

ಇದನ್ನೂ ಓದಿ: PM kisan amount: ಪಿ. ಎಮ್ ಕಿಸಾನ್ ಯೋಜನೆಯಡಿ ದೇಶದ 8 ಕೋಟಿ ರೈತರ ಖಾತೆ 18,000 ಸಾವಿರ ಕೋಟಿ ಹಣ ವರ್ಗಾವಣೆ!

RTC Joint owner-ಜಂಟಿ ಖಾತೆದಾರರು ಇದ್ದಲ್ಲಿ ಪ್ರತ್ಯೇಕವಾಗಿ FID  ಮಾಡಿಸಿಕೊಳ್ಳಬೇಕು:

ಒಂದೊಮ್ಮೆ ನಿಮ್ಮ ಜಮೀನಿನ ಸರ್ವೆ ನಂಬರ್ ಜಂಟಿ ಮಾಲೀಕರನ್ನು ಹೊಂದಿದ್ದರೆ ಎಲ್ಲಾ ಮಾಲೀಕರ ದಾಖಲಾತಿಗಳನ್ನು ಸಲ್ಲಿಸಿ ಪ್ರತೇಕವಾಗಿ ಒಂದೊಂದು FID ನಂಬರ್ ಅನ್ನು ರಚನೆ ಮಾಡಿಕೊಳ್ಳಬೇಕು. ಜಂಟಿ ಖಾತೆದಾರರು ಇದ್ದಲ್ಲಿ ಪ್ರತ್ಯೇಕವಾಗಿ FID  ಮಾಡಿಸಿಕೊಳ್ಳಬೇಕು.

ನಿಮ್ಮ ಮೊಬೈಲ್ ನಲ್ಲಿ FID ನಂಬರ್ ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ.