GKVK Krishimela-2023: ಈ ಭಾರಿಯ ಬೆಂಗಳೂರು ಕೃಷಿ ಮೇಳದಲ್ಲಿ ಬಿಡುಗಡೆಯಾದ ಹೊಸ ತಳಿಗಳ ವಿಶೇಷತೆಗಳೇನು?

ವಿವಿಧ ಮಳೆಯ ಪರಿಸ್ಥಿತಿಗಳೊಂದಿಗೆ ವೈವಿಧ್ಯಮಯ ಮಣ್ಣಿನಲ್ಲಿ ಹಾಗು ವಿವಿಧ ಭೌಗೊಳಿಕ ಕೃಷಿ ಪರಿಸ್ಥಿತಿಗಳಲ್ಲಿ ಕಿರುಧಾನ್ಯಗಳನ್ನು ಬೆಳೆಯಬಹುದಾಗಿದೆ. ಬರಕ್ಕೆ ಸಹಿಷ್ಣುತೆ, ಹವಾಮಾನಕ್ಕೆ ಅನುಗುಣವಾದ ಚೇತರಿಕೆಯ ಗುಣವನ್ನು ಹೊಂದಿದ್ದು, ಪ್ರಮುಖ ಕೀಟ ಮತ್ತು ರೋಗಗಳಿಗೆ ತುಲನಾತ್ಮಕವಾಗಿ ಕಡಿಮೆ ಮಟ್ಟದಲ್ಲಿ ತೊಂದರೆಗೆ ಒಳಗಾಗುತ್ತವೆ. ಮೆಥಿಯೋನಿನ್ ಮತ್ತು ಸಿಸ್ಟೈನ್‌ನಂತಹ ಅಮೈನೋ ಆಮ್ಲಗಳನ್ನು ಗಮನಾರ್ಹ ಪ್ರಮಾಣದಲ್ಲಿ ಹೊಂದಿರುತ್ತವೆ. 

ಸುಣ್ಣ, ರಂಜಕ, ಕಬ್ಬಿಣ, ನಾರಿನಂಶ, ಪಾಲಿಫಿನಾಲ್ ಮತ್ತು ಸಸಾರಜನಕದ ಅಂಶವು ಸಮೃದ್ಧವಾಗಿದ್ದು ಇತರೆ ಧಾನ್ಯಗಳಿಗಿಂತ ಅನನ್ಯವಾಗಿಸುತ್ತದೆ. ಕಿರುಧಾನ್ಯಗಳು ಪೌಷ್ಟಿಕಾಂಶಗಳಿಂದ ಸುಭೀಕ್ಷವಾಗಿರುವ ಕಾರಣ ಸಿರಿಧಾನ್ಯಗಳೆಂದು ಕರೆಯುತ್ತಾರೆ. ಅಷ್ಟೇ ಅಲ್ಲದೆ ಪಾರ್ಶ್ವವಾಯು, ಹೃದಯ ರಕ್ತನಾಳದ ಕಾಯಿಲೆಗಳು, ಕ್ಯಾನ್ಸರ್, ಬೊಜ್ಜು ಮತ್ತು ಮಧುಮೇಹದಂತಹ ಹಲವಾರು ದೀರ್ಘಕಾಲದ ಕಾಯಿಲೆಗಳ ವಿರುದ್ಧ ಸಹಾಯ ಮಾಡುವ ಸಂಯುಕ್ತಗಳಲ್ಲಿ ಸಿರಿಧಾನ್ಯಗಳು ಸಮೃದ್ಧವಾಗಿವೆ.

ವಿಶ್ವವಿದ್ಯಾನಿಲಯವು ಕಳೆದ ಮೂರು ವರ್ಷಗಳಲ್ಲಿ ಸಿರಿಧಾನ್ಯಗಳಲ್ಲಿ ಒಟ್ಟಾರೆ ಎಂಟು ನೂತನ ತಳಿಗಳನ್ನು (ರಾಗಿ: ಕೆಎಂಆರ್-316 ಮತ್ತು ಎಂಎಲ್-322, ನವಣೆ: ಜಿಪಿಯುಎಫ್-3, ಕೊರಲೆ: ಜಿಪಿಯುಬಿಟಿ-2, ಸಾಮೆ: ಜಿಪಿಯುಎಲ್-6 ಮತ್ತು ಜಿಪಿಯುಎಲ್ -11 ಹಾಗು ಬರಗು: ಜಿಪಿಯುಪಿ-28 ಮತ್ತು ಜಿಪಿಯುಪಿ-32) ಬಿಡುಗಡೆಗೊಳಿಸಿದೆ. ಇದರ ಜೊತೆಗೆ ಸುಸ್ಥಿರ ಮತ್ತು ಹೆಚ್ಚಿನ ಇಳುವರಿಗಾಗಿ ವೈಜ್ಞಾನಿಕವಾದ ಬೇಸಾಯ ಪದ್ಧತಿಗಳನ್ನು ಅಭಿವೃದ್ಧಿಪಡಿಸಿಲಾಗಿದೆ.

ಇದನ್ನೂ ಓದಿ: Annabhagya november amount-2023: ಅನ್ನಭಾಗ್ಯ ಯೋಜನೆ ನವೆಂಬರ್ ತಿಂಗಳ ಹಣ ಜಮಾ! ಈ ಎರಡು ವಿಧಾನ ಅನುಸರಿಸಿ ನಿಮಗೆ ಎಷ್ಟು ಹಣ ಬಂದಿದೆ ಎಂದು ಚೆಕ್ ಮಾಡಿ.

ರಾಜ್ಯದ ದಕ್ಷಿಣ ಭಾಗದ 10 ಜಿಲ್ಲೆಗಳಲ್ಲಿ ನೆಲೆಗೊಂಡಿರುವ 12 ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಸ್ಥಳ ನಿರ್ದಿಷ್ಟ ಸಂಶೋಧನಾ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಆಹಾರ ಭದ್ರತೆಯನ್ನು ಖಾತರಿಪಡಿಸುತ್ತ ರೈತ ಸಮುದಾಯದ ಏಳಿಗೆಗಾಗಿ ಹಾಗು ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲದೆ ಉತ್ಪಾದಕತೆ ಮತ್ತು ಕೃಷಿ ಸಂಪನ್ಮೂಲಗಳ ದಕ್ಷತೆಯನ್ನು ಹೆಚ್ಚಿಸುವ ನಿಖರ ಹಾಗೂ ಸುಸ್ಥಿರ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದು ವಿಶ್ವವಿದ್ಯಾಲಯದ ಮುಖ್ಯವಾದ ಧೈಯೋದ್ದೇಶವಾಗಿದೆ.

GKVK Bengalore-ನೂತನ ತಳಿಗಳ ಬಿಡುಗಡೆ

2022-23 ರಲ್ಲಿ ಸೂರ್ಯಕಾಂತಿ ತಳಿಯಲ್ಲಿ ಒಂದು ಸಂಕರಣ ತಳಿ ಹಾಗು ರಾಗಿ, ಸಾಮೆ, ಬರಗು ಮತ್ತು ಹಲಸು ಬೆಳೆಗಳಲ್ಲಿ ತಲಾ ಒಂದರಂತೆ ಒಟ್ಟು ನಾಲ್ಕು ಸುಧಾರಿತ ತಳಿಗಳನ್ನೊಳಗೊಂಡಂತೆ ಒಟ್ಟು ಐದು ಹೊಸ ತಳಿಗಳನ್ನು ರೈತ ಸಮುದಾಯ ಹಾಗೂ ಇತರೆ ಪಾಲುದಾರರಿಗೋಸ್ಕರ ಬಿಡುಗಡೆ ಮಾಡಲಾಗಿದೆ.

GKVK New variety-ಬೆಳೆವಾರು ಹೊಸ ತಳಿಗಳ ವಿವರ ಹೀಗಿದೆ

(1)ರಾಗಿ: ಎಂಎಲ್-322

ಅವಧಿ : 105–110 ದಿನಗಳು

ಧಾನ್ಯದ ಇಳುವರಿ: ನೀರಾವರಿ: 15 – 20 ಕ್ವಿಂ/ಎಕರೆ

ಖುಷಿ: 10 – 12 ಕ್ವಿಂ/ಎಕರೆ

ಮೇವಿನ ಇಳುವರಿ: 2.0-2.2 ಟನ್/ಎಕರೆ

ಗಟ್ಟಿಯಾದ ಖಾಂಡವನ್ನು ಹೊಂದಿದ್ದು ತೆನೆ ನೆಲಕ್ಕೆ ಬೀಳುವುದಿಲ್ಲ.

ಹೆಚ್ಚಿನ ತೆಂಡೆ ಒಡೆಯುವಿಕೆ (6-7)

ಬೆಂಕಿ ರೋಗ ನಿರೋಧಕ ಮತ್ತು ಬರ ಸಹಿಷ್ಣುತೆಯನ್ನು ಹೊಂದಿದೆ

ಒಕ್ಕಣೆ ಮಾಡುವಾಗ ಕಡಿಮೆ ಹೊಟ್ಟಿನ ದೂಳನ್ನು ಹೊಂದಿರುತ್ತದೆ

ವಲಯ – 5ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: akrama-sakrama yojana: ಅಕ್ರಮ ಸಕ್ರಮ ಯೋಜನೆಯಡಿ ಜಮೀನು ಪಡೆಯಲು ರಾಜ್ಯ ಸರಕಾರದಿಂದ ನೂತನ ಕ್ರಮ ಚಾರಿ!

(2)ಸಾಮೆ: ಜಿಪಿಯುಎಲ್-11

ಅವಧಿ : 90 – 95 ದಿನಗಳು

ಧಾನ್ಯ ಇಳುವರಿ: 6.1-8,1 ಕ್ವಿಂ/ಎಕರೆ

ಮೇವಿನ ಇಳುವರಿ: 1.2-1.5 ಟನ್/ಎಕರೆ

ಮುಂಗಾರು ಹಂಗಾಮಿಗೆ (ಜೂನ್-ಜುಲೈ) ಸೂಕ್ತವಾಗಿದೆ

ಮಧ್ಯಮ ಸಾಂದ್ರತೆ ಮತ್ತು ಆರ್ಕಿಡ್ ಆಕಾರದ ತೆನೆಯನ್ನು ಹೊಂದಿದೆ.

ಬೀಜಗಳು ಅಂಡಾಕಾರವಿದ್ದು ಬೂದು ಬಣ್ಣದಿಂದ ಕೂಡಿವೆ

ಎಲೆ ಅಂಗಮಾರಿ ರೋಗ ಮತ್ತು ತೆನೆ ಕಾಡಿಗೆ ರೋಗಕ್ಕೆ ನಿರೋಧಕತೆಯನ್ನು ಹೊಂದಿದೆ.

(3)ಬರಗು: ಜಿಪಿಯುಪಿ-32

ಅವಧಿ: 80-85 ದಿನಗಳು

ಧಾನ್ಯ ಇಳುವರಿ: 7.2-8.1 ಕ್ವಿಂ/ಎಕರೆ

ಮೇವಿನ ಇಳುವರಿ: 1.2-1.5 ಟನ್/ಎಕರೆ

ಮುಂಗಾರು ಹಂಗಾಮಿಗೆ (ಜೂನ್-ಜುಲೈ) ಸೂಕ್ತವಾಗಿದೆ

ಮಧ್ಯಮ ಸಾಂದ್ರತೆ ಮತ್ತು ಡಿಪ್ಯೂಸ್ ಆಕಾರದ ತೆನೆಯನ್ನು ಹೊಂದಿದೆ

ಬೀಜಗಳು ಅಂಡಾಕಾರವಿದ್ದು ಹಳದಿ ಬಣ್ಣದಿಂದ ಕೂಡಿವೆ

ತೆನೆ ಕಾಡಿಗೆ ರೋಗ ಮತ್ತು ಕಂದು ಚುಕ್ಕೆ ರೋಗಕ್ಕೆ ನಿರೋಧಕತೆಯನ್ನು ಹೊಂದಿದೆ

ವಲಯ – 5 ಮತ್ತು 6ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: PM kisan amount: ಪಿ. ಎಮ್ ಕಿಸಾನ್ ಯೋಜನೆಯಡಿ ದೇಶದ 8 ಕೋಟಿ ರೈತರ ಖಾತೆ 18,000 ಸಾವಿರ ಕೋಟಿ ಹಣ ವರ್ಗಾವಣೆ!

(4)ಹಲಸು : ಜಿಕೆವಿಕೆ ಕೆಂಪು ಹಲಸು

ಬೇಗ ಫಸಲಿಗೆ ಬರುತ್ತದೆ (ನಾಟಿ ಮಾಡಿದ 3.5 ವರ್ಷಕ್ಕೆ)

ಇಳುವರಿ (10) ವರ್ಷದ ಹಣ್ಣುಗಳು/ಮರ/ವರ್ಷ 120-150

ತೊಳೆಗಳ ತೂಕ : 600-700 ಗ್ರಾಂ / ಒಂದು ಕೆಜಿ ಹಣ್ಣಿಗೆ

ತೊಳೆಗಳು: ಮಧ್ಯಮ ಗಾತ್ರದ (ಪತಿ ತೊಳೆ: 25-35 ಗ್ರಾಂ), ತಾಮ್ರ ಕಡುಗೆಂಪು ಬಣ್ಣದ ಉದ್ದವಾದ ತೊಳೆಗಳನ್ನು ಹೊಂದಿದೆ

ಹಣ್ಣು: ಹಸಿರು ಸಿಪ್ಪೆಯ ಮಧ್ಯಮ ಗಾತ್ರದ (5.5-10 ಕೆಜಿ/ಹಣ್ಣು) ಉದ್ದ ಆಕಾರದ ಹಣ್ಣುಗಳು ಪ್ರಾಥಮಿಕ ರಂಬೆಗಳಲ್ಲಿ ಬಿಡುತ್ತವೆ. ಮತ್ತು ಚಿಕ್ಕದಾದ ದಿಂಡನ್ನು (<1.5 ಸೆಂಮಿ ಮತ್ತು ಪ್ರತಿ ಕೆಜಿಗೆ 300-400 ಗ್ರಾಂ ಇರುತ್ತದೆ) ಹೊಂದಿದೆ

ತೊಳೆಯು ತಿನ್ನಲು ಹೆಚ್ಚಿನ ಆದ್ಯತೆ ಹೊಂದಿದ್ದು ಮೌಲ್ಯವರ್ಧನೆಗೂ ಸೂಕ್ತವಾಗಿದೆ

ಹಣ್ಣಿನ ಮತ್ತು ತೊಳೆಯ ಅನುಪಾತವು ಉತ್ತಮವಾಗಿದೆ (0.63)

ತೊಳೆಗಳ ಸಕ್ಕರೆ ಅಂಶ: 25-30 ಬ್ರಿಕ್ಸ್

ಬೀಜಗಳು ಚಿಕ್ಕದಾಗಿದೆ (ಇಪ್ಪತ್ತು, ಬೀಜಗಳ ತೂಕವು ಸರಿಸುಮಾರು 100-130 ಗ್ರಾಂ)

ಅಂಟು ರಹಿತವಾಗಿದ್ದು ರುಚಿಕರವಾದ ಕೆಂಪು ತೊಳೆಯನ್ನು ಹೊಂದಿರುವ ಕಾರಣ ವಾಣಿಜ್ಯ ಬೆಳೆಯಾಗಿ ಬೆಳೆಯಲು ಸೂಕ್ತವಾಗಿದೆ

ಇತರೆ ಕೆಂಪು ತೊಳೆಯ ತಳಿಗಳಿಗಿಂತ ಅಧಿಕ ಟೈಟಲ್ ಕ್ಯಾರೊಟಿನಾಯ್ಡ್ (604.75 ಮೈಕ್ರೋ ಗ್ರಾಂ/100 ಗ್ರಾಂ), ಲೈಕೊಪಿನ್ (4.30 ಮೈಕ್ರೋ ಗ್ರಾಂ/100 ಗ್ರಾಂ), ಮತ್ತು ಲುಟೀನ್ (20.68 ಮೈಕ್ರೋ ಗ್ರಾಂ/100 ಗ್ರಾಂ) ಹೊಂದಿದೆ. ವಲಯ –5ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: Drought relief amount: ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ಬರುತ್ತದೆ: ಸಚಿವ ಕೃಷ್ಣ ಬೈರೇಗೌಡ

(5)ಸೂರ್ಯಕಾಂತಿ: ಕೆಬಿಎಸ್‌ ಹೆಚ್-85

ಅವಧಿ: 95-98 ದಿನಗಳು

ಬೀಜ ಇಳುವರಿ: 8.9-10.5 ಕ್ವಿಂ/ಎ

ತೈಲ ಇಳುವರಿ: 3.6-4.0 ಕ್ವಿಂ/ಎ

ಮಧ್ಯಮ ಎತ್ತರದ ಗಿಡಗಳು

ಗಟ್ಟಿಮುಟ್ಟಾದ ಕಾಂಡ ಮತ್ತು ನೆಟ್ಟಗಿನ ಸಸ್ಯ ಮಾದರಿ ಗುಂಪಿಗೆ ಸೇರಿರುತ್ತದೆ

ಕೇದಿಗೆ ರೋಗಕ್ಕೆ ನಿರೋಧಕತೆ ಹೊಂದಿದೆ.

ಇದನ್ನೂ ಓದಿ: Invalid ration card list-ಈ ಪಟ್ಟಿಯಲ್ಲಿ ಹೆಸರಿರುವವರಿಗಿಲ್ಲ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ!

ಹೊಸ ತಳಿಗಳ ಬೀಜ ಖರೀದಿಗಾಗಿ ಈ ನಂಬರ್ ಗೆ ಸಂಪರ್ಕಿಸಿ: 8023620494

ಎಲ್ಲಾ ಬೆಳೆಗಳ ಹೊಸ ತಳಿಯ ತಾಕುಗಳ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಕೃಷಿ ಮೇಳದಲ್ಲಿ ಬಿಡುಗಡೆಯಾದ ಹೊಸ ತಾಂತ್ರಿಕತೆಯ ಕೈಪಿಡಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Download Now

Krishimela bengalore live-ನಿಮ್ಮ  ಮೊಬೈಲ್ ನಲ್ಲೇ ಬೆಂಗಳೂರು ಕೃಷಿ ಮೇಳದ ಲೈವ್ ನೋಡಬವುದು: 

ಆಸಕ್ತ ರೈತರು ತಮ್ಮ ಮೊಬೈಲ್ ನಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Krishimela bengalore live  ಬೆಂಗಳೂರು ಕೃಷಿ ಮೇಳದ ಲೈವ್ ನೇರಪ್ರಸಾರವನ್ನು ನೋಡಬವುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿ.ವಿ  ವೆಬ್ಸೈಟ್ ಭೇಟಿ ಮಾಡಿ: click here