Crop loan-ರಾಜ್ಯ ಸರಕಾರದಿಂದ ರೈತರ ಸಾಲದ ಬಡ್ಡಿ ಮನ್ನಾ! ಈ ಪಟ್ಟಿಯಲ್ಲಿರುವವರಿಗೆ ಪ್ರಯೋಜನ

ರಾಜ್ಯ ಸರಕಾರದಿಂದ ರೈತರಿಗೆ ಬರಗಾಲ ಸನ್ನಿವೇಶದಲ್ಲಿ ಅರ್ಥಿಕವಾಗಿ ನೆರವಾಗಲು ಸಹಕಾರಿ ಬ್ಯಾಂಕ್ ಗಳಲ್ಲಿರುವ ಸಾಲದ ಬಡ್ದಿಯನ್ನು ಮನ್ನಾ ಮಾಡಲು ರಾಜ್ಯ ಸರಕಾರದಿಂದ ಅಧಿಕೃತ ನಿರ್ಣಯ ತೆಗೆದುಕೊಳ್ಳಲಾಗಿದೆ.

ಯಾವೆಲ್ಲ ಸಾಲಕ್ಕೆ ಬಡ್ದಿ ಮನ್ನಾ ಅಗಲಿದೆ? ಯಾರೆಲ್ಲೆ ಅರ್ಹರು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ರೈತರ ಸಾಲದ ಮೇಲೆ ಬಡ್ಡಿ ಮನ್ನಾ ಕುರಿತು ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಮಂಡಲ ಅಧಿವೇಶನದ ಕೊನೆಯ ದಿನವಾದ ಇಂದು ರಾಜ್ಯದ ಏಳು ಕೋಟಿ ಕನ್ನಡಿಗರ ಪ್ರಗತಿಯ ಮುನ್ನೋಟದೊಂದಿಗೆ ಕೆಲವು ಪ್ರಮುಖ ಘೋಷಣೆಗಳನ್ನು ಮಾಡುತ್ತಿದ್ದೇವೆ. 

ಭೀಕರ ಬರದಿಂದ ಬೆಳೆ ನಷ್ಟವಾಗಿ ನಾಡಿನ ಅನ್ನದಾತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸುವುದು ನಮ್ಮ ಆದ್ಯ ಕರ್ತವ್ಯವೆಂದು ಭಾವಿಸಿದ್ದೇವೆ. ರೈತರ ಹಿತಕಾಪಾಡುವ ನಮ್ಮ ಪ್ರಯತ್ನದ ಭಾಗವಾಗಿ ಸಹಕಾರ ಬ್ಯಾಂಕುಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲು ನಾವು ನಿರ್ಧರಿಸಿದ್ದೇವೆ. 

ಇದನ್ನೂ ಓದಿ: akrama sakrama yojane- ಅಕ್ರಮ-ಸಕ್ರಮ ಯೋಜನೆಯಡಿ 4 ಲಕ್ಷ ಕೃಷಿ ಪಂಪ್ ಸೆಟ್ ಗೆ ವಿದ್ಯುತ್: ಇಂದನ ಸಚಿವ ಕೆ ಜೆ ಚಾರ್ಜ್

ಇದರಿಂದ ಲಕ್ಷಾಂತರ ರೈತರು ಬಡ್ಡಿಯ ಹೊರೆಯಿಂದ ಮುಕ್ತರಾಗಿ ನೆಮ್ಮದಿಯ ದಿನಗಳನ್ನು ಕಾಣಬಹುದಾಗಿದೆ. ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Crop loan details-ವಿಧಾನ-1: ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಇರುವುದನ್ನು ಚೆಕ್ ಮಾಡುವ ವಿಧಾನ:

ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಜಮೀನಿನ ಮೇಲೆ ಯಾವೆಲ್ಲ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಲಾಗಿದೆ ಸಹಕಾರಿ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡಿರುವ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬವುದಾಗಿದೆ.

Step-1: ಮೊದಲಿಗೆ ಈ ಲಿಂಕ್ Loan status check ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಹಾಕಿ “GO” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: “GO” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಸರ್ವೆ ನಂಬರ್ ನ ಹಿಸ್ಸಾವನ್ನು ಆಯ್ಕೆ ಮಾಡಿಕೊಂಡು “fetch details” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: “fetch details” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇದೆ ಪೇಜ್ ನಲ್ಲಿ ಕೆಳಗಡೆ ಬಲ ಬದಿಯಲ್ಲಿ ಕಾಣುವ “view” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: “view” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಪಹಣಿ/ಉತಾರ್/RTC ತೆಗೆದುಕೊಳ್ಳುತ್ತದೆ ಈ ಪುಟದ ಕೊನೆಯ ಕಾಲಂ ನಲ್ಲಿ ಋಣಗಳು ವಿಭಾಗದಲ್ಲಿ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ಪಡೆಯಲಾಗಿದೆ? ಯಾವ ವರ್ಷ? ಎಷ್ಟು ಹಣ? ಎಂದು ಸಂಪೂರ್ಣ ವಿವರ ತೋರಿಸುತ್ತದೆ.

ಗಮನಿಸಿ: ಮೇಲೆ ನೀಲಿ ಬಣ್ಣದಿಂದ ಕಾಣುವ “next” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಹಣಿಯ ಮುಂದಿನ ಪುಟವನ್ನು ನೋಡಬೇಕು.

ಇದನ್ನೂ ಓದಿ: Annabhagya amount-ಈ ಪಟ್ಟಿಯಲ್ಲಿರುವವರಿಗೆ ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ!

Agriculture loan-ವಿಧಾನ-2: ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಇರುವುದನ್ನು ಚೆಕ್ ಮಾಡುವ ವಿಧಾನ:

ಮೇಲಿನ ವಿಧಾನವನ್ನು ಅನುಸರಿಸಿ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ಚಾಲ್ತಿಯಲ್ಲಿದೆ ಎಂದು ತಿಳಿದುಕೊಳ್ಳಬವುದು ಈ ಕೆಳಗೆ ವಿವರಿಸಿರುವ ಎರಡನೇ ವಿಧಾನವನ್ನು ಅನುಸರಿಸಿ ನೀವು ಯಾವೆಲ್ಲ ಬ್ಯಾಂಕ್ ನಲ್ಲಿ ನಿಮ್ಮ ಜಮೀನಿನ ಮೇಲೆ ಸಾಲ ತೆಗೆದುಕೊಂಡಿದ್ದಿರಾ? ಎಂದು ಆಧಾರ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಬವುದು.

Step-1: ಮೊದಲಿದೆ ಈ ಲಿಂಕ್ crop loan status ಮೇಲೆ ಕ್ಲಿಕ್ ಮಾಡಿ ಸರಕಾರದ ಸಾಲ ವಿತರಣೆಗೆ ಇರುವ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು. ನಂತರ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಹಾಕಿ “Fetch Report” ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Yuva nidhi application-2023: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ದಿನಾಂಕ ನಿಗದಿ! ಎಲ್ಲಿ ಅರ್ಜಿ ಸಲ್ಲಿಸಬೇಕು?

Step-2: ಇದಾದ ಬಳಿಕ ಇಲ್ಲಿ ನೀವು ರಾಷ್ಟ್ರೀಕೃತ  ಬ್ಯಾಂಕ್ ನಲ್ಲಿ ಎಷ್ಟು ಸಾಲ ಪಡೆದಿದ್ದಿರಾ? ಎಂದು “Commercial Bank Loan Details” ವಿಭಾಗದ ಕೆಳಗೆ ತೋರಿಸುತ್ತದೆ. “PACS Loan Details” ವಿಭಾಗದಲ್ಲಿ ಸಹಕಾರಿ ಬ್ಯಾಂಕ್ ನಲ್ಲಿ ಎಷ್ಟು ಸಾಲ ತೆಗೆದುಕೊಂಡಿದ್ದಿರಾ? ಎಂದು ತೋರಿಸುತ್ತದೆ.

Step-3: “Reports” ಕಾಲಂ ನಲ್ಲಿ ತೋರಿಸುವ “PDF” ಚಿನ್ನೆಯ ಮೇಲೆ ಕ್ಲಿಕ್ ಮಾಡಿ ಇನ್ನು ಹೆಚ್ಚಿನ ಮಾಹಿತಿಯನ್ನು ನೋಡಬವುದಾಗಿದೆ.