New ration card- ಆಹಾರ ಇಲಾಖೆಯಿಂದ ಗ್ರಾಹಕರಿಗೆ ಸಿಹಿ ಸುದ್ದಿ!

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಹೊಸ ಮಾಹಿತಿ ಹೊರಬಿದ್ದಿದು ಹೊಸ ಪಡಿತರ ಕಾರ್ಡ್ ವಿತರಣೆಗೆ ಆಹಾರ ಇಲಾಖೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಅರ್ಹ ಗ್ರಾಹಕರಿಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗಿತ್ತದೆ ಎಂದು ಈ ಇಲಾಖೆಯೆ ಸಚಿವರು ಸುದ್ದಿಗೋಷ್ಥಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ ಮತ್ತೊಮ್ಮೆ ರೇಷನ್ ಕಾರ್ಡ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಇಲಾಖೆಯಿಂದ ಅವಕಾಶ ನೀಡಲಾಗಿದೆ.
ಈ ಹಿಂದೆ 2-3 ಬಾರಿ ತಿದ್ದುಪಡಿಗೆ ಅವಕಾಶ ನೀಡಿದ್ದರು ಸರ್ವರ್ ಸಮಸ್ಯೆಯಿಂದ ಇನ್ನು ಅನೇಕ ಜನರು ಅರ್ಜಿ ಸಲ್ಲಿಸುವುದು ಬಾಕಿಯಿರುವ ಕಾರಣ ಈಗ ಮತ್ತೊಮ್ಮೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾರ ನೀಡಲಾಗಿದೆ.

ಹೊಸ ರೇಷನ್ ಕಾರ್ಡ ವಿತರಣೆಗೆ ಸಂಬಂಧಿಸಿದಂತೆ ಪಡಿತರ ಚೀಟಗೆ ಈಗಾಗಲೇ ಅರ್ಜಿ ಸಲ್ಲಿಸಿದವರ ಅರ್ಜಿಗಳ ದಾಖಲಾತಿಗಳ ಪರಿಶೀಲನಾ ಕಾರ್ಯ ಶೇ.75ರಷ್ಟು ಮುಗಿದ್ದಿದ್ದು, ಶೇ 100ರಷ್ಟು ಪರಿಶೀಲನಾ ಕಾರ್ಯ ಸಂಪೂರ್ಣವಾಗಿ ಶೀಘ್ರದಲ್ಲೇ ಪೂರ್ಣಗೊಂಡು ಅರ್ಹ ಫಲಾನುಭವಿಗಳ ಕೈಗೆ ಮಾತ್ರ ಹೊಸ ಪಡಿತರ ಚೀಟಿ ಸಿಗಲಿದೆ. 

ಇದನ್ನೂ ಓದಿ: Karnataka Drought Fund : ರಾಜ್ಯ ಸರಕಾರದಿಂದ 324 ಕೋಟಿ ರೂ. ಬರ ಪರಿಹಾರ ಬಿಡುಗಡೆ! ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆ?

New ration card-2.90 ಲಕ್ಷ ಕುಟುಂಬಗಳಿಗೆ ಶೀಘ್ರವೇ ಹೊಸ ಪಡಿತರ ಚೀಟಿ: ಕೆ.ಎಚ್.ಮುನಿಯಪ್ಪ

“ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಾಗಿ 2.90 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಶೀಘ್ರದಲ್ಲಿಯೇ ಅರ್ಜಿಗಳನ್ನು ಪರಿಶೀಲನೆ ಮಾಡಿ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ.”
-ಕೆ.ಎಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು.

New ration card appalication-ಹೊಸ ಪಡಿತರ ಚೀಟಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ಹೊಸ ರೇಷನ್ ಕಾರ್ಡ ಪಡೆಯಲು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ತಾಲೂಕಿನ ಆಹಾರ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕು.

ಸುದ್ದಿ ವಿವರಹೊಸ ರೇಷನ್ ಕಾರ್ಡ ವಿತರಣೆ ಮತ್ತು ತಿದ್ದುಪಡಿ ಅವಕಾಶ
ಇಲಾಖೆ ವೆಬ್ಸೈಟ್ ಲಿಂಕ್click here
ಸಹಾಯವಾಣಿClick here
ಆಹಾರ ಇಲಾಖೆ ಕಚೇರಿ ವಿವರClick here

ಇದನ್ನೂ ಓದಿ: Voter ID list-2023: ಚುನಾವಣಾ ಆಯೋಗದಿಂದ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಸರಿ ಇದೆಯೇ ಚೆಕ್ ಮಾಡಿ.

ರೇಷನ್ ಕಾರ್ಡ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಮತ್ತೊಮೆ ಅವಕಾಶ:

ಇಲಾಖೆಯಿಂಡ ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಈ ಹಿಂದೆ ಅಕ್ಟೋಬರ್ 19 ರಿಮದ 21 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು, ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಇನ್ನು ಅನೇಕ ಅರ್ಜಿಗಳ ವಿಲೇವಾರಿ ಬಾಕಿ ಉಳಿದಿರುವುದರಿಂದ ಈಗ ಮತ್ತೊಮ್ಮೆ ಈ ತಿಂಗಳ ಮೊದಲ ವಾರದಿಂದ ರೇಷನ್ ಕಾರ್ಡ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲು ಆಹಾರ ಇಲಾಖೆ ಮುಂದಾಗಿದೆ.

ಹೊಸ ಸದಸ್ಯರ ಸೇರ್ಪಡೆಗೆ ಯಾವೆಲ್ಲ ದಾಖಲಾತಿ ಸಲ್ಲಿಸಬೇಕು?

ನಿಮ್ಮ ಪಡಿತರ ಚೀಟಿಗೆ ಹೊಸ ಸದಸ್ಯರ ಸೇರ್ಪಡೆಗೆ ಅಗತ್ಯವಾಗಿ ಒದಗಿಸಬೇಕಾದ ದಾಖಲಾತಿಗಳ ವಿವರ ಹೀಗಿದೆ:

ಇದನ್ನೂ ಓದಿ: farm mechanization- ತೋಟಗಾರಿಕೆ ಇಲಾಖೆ ಈ ಯಂತ್ರ ಪಡೆಯಲು 60 % ಸಹಾಯಧನ ನೀಡಲು ಅರ್ಜಿ ಆಹ್ವಾನ!

ಆರು ವರ್ಷದೊಳಗಿನ ಮಕ್ಕಳ ಸೇರ್ಪಡೆಗೆ:

  • ಮೊಬೈಲ್ ನಂಬರ್ ಜೋಡಣೆಯಾಗಿರುವ ಆಧಾರ ಕಾರ್ಡ ಪ್ರತಿ.
  • ಆದಾಯ ಪ್ರಮಾಣ ಪತ್ರ.
  • ಜನನ ಪ್ರಮಾಣ ಪತ್ರ.
  • ಮನೆಯ ಪಡಿತರ ಚೀಟಿ ಪ್ರತಿ.

ಹೆಂಡತಿ/ಮನೆಯ ಇತರೆ ಸದಸ್ಯರ ಸೇರ್ಪಡೆಗೆ:

  • ಮೊಬೈಲ್ ನಂಬರ್ ಜೋಡಣೆಯಾಗಿರುವ ಆಧಾರ ಕಾರ್ಡ ಪ್ರತಿ.
  • ಆದಾಯ ಪ್ರಮಾಣ ಪತ್ರ.
  • ಮನೆಯ ಪಡಿತರ ಚೀಟಿ ಪ್ರತಿ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರರು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳನ್ನು ಬೆಳಿಗ್ಗೆ 10-00 ರಿಂದ ಸಂಜೆ 6-00 ನಡುವೆ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.

ಇದನ್ನೂ ಓದಿ: Vehicle subsidy loan: ಈ ಯೋಜನೆಯಡಿ ನಾಲ್ಕು ಚಕ್ರದ ವಾಹನ ಖರೀದಿಗೆ ಸಿಗುತ್ತೆ 3 ಲಕ್ಷ ಸಹಾಯಧನ!

ration card status-ಆನ್ಲೈನ್ ನಲ್ಲಿ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿ:

ಪಡಿತರ ಚೀಟಿಯ ಎಲ್ಲಾ ಬಗ್ಗೆಯ ಅರ್ಜಿ ಸ್ಥಿತಿಯನ್ನು ಆಹಾರ ಇಲಾಖೆಯ ಅಧಿಕೃತ ಭೇಟಿ ಮಾಡಿ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೆ ತಿಳಿಯಬವುದಾಗಿದೆ. ತಿದ್ದುಪಡಿತ ಅರ್ಜಿ ಸ್ಥಿತಿ, ಹೊಸ ರೇಷನ್ ಕಾರ್ಡ ಅರ್ಜಿ ಸ್ಥಿತಿ, ಹಾಲಿ ರೇಷನ್ ಕಾರ್ಡ ಸ್ಥಿತಿ, ಇ-ಕೆವೈಸಿ ಮಾಹಿತಿ, ಅನ್ನಭಾಗ್ಯ DBT ಹಣ ವರ್ಗಾವಣೆ ಮಾಹಿತಿ ಇತರೆ ಸಂಪೂರ್ಣ ವಿವರ ವನ್ನು ಈ ಕೆಳಗೆ ನಮೂದಿಸಿರುವ ವೆಬ್ಸೈಟ್ ಭೇಟಿ ಮಾಡಿ ಮಾಹಿತಿ ತಿಳಿಯಬವುದು.

ಆಹಾರ ಇಲಾಖೆ ವೆಬ್ಸೈಟ್: click here