ರೈತರು ಸಹ ತಮ್ಮ ಜಮೀನನ್ನು ಕಾಯಲು ಅಥವಾ ತೋಟದ ಮನೆಯ ಸುರಕ್ಷತೆ ದೃಷ್ಠಿಯಿಂದ ನಾಯಿಗಳನ್ನು ಸಾಕುತ್ತಾರೆ ಇಂದು ಈ ಅಂಕಣದಲ್ಲಿ ನಾಯಿ ಕಡಿತದ ಕುರಿತು ಡಾ ಸಂದೀಪ್ ಹೆಚ್ ಎಸ್ ರವರು ಬರೆದಿರುವ ಉಪಯುಕ್ತ ಅಂಕಣದ ವಿವರವಾದ ಮಾಹಿತಿಯನ್ನು ನಾಯಿ ಕಡಿತದ ಜಾಗೃತಿಗಾಗಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ನಾಯಿ ಕಡಿತವು ಭಾರತದಲ್ಲಿ ಅಪರೂಪವೇನಲ್ಲ. ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಪ್ರತಿದಿನ ಅಂದಾಜು ಐದೂವರೆ ಸಾವಿರಕ್ಕೂ ಹೆಚ್ಚು ಮಂದಿ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಅಂದರೆ ಒಂದು ವರ್ಷದಲ್ಲಿ ಒಂದು ಮುಕ್ಕಾಲು ಕೋಟಿಯಷ್ಟು ಜನರು ನಾಯಿ ಕಡಿತಕ್ಕೆ ತುತ್ತಾಗುತ್ತಿದ್ದಾರೆ. ಅವರುಗಳಲ್ಲಿ ರೇಬೀಸ್ ಉಂಟಾಗಿ ಪ್ರತೀ ವರ್ಷ ಭಾರತದಲ್ಲಿ 20 ಸಾವಿರ ಜನರು ಸಾವನಪ್ಪುತ್ತಿದ್ದಾರೆ.
Dog bites- ಭಾರತದಲ್ಲಿ ನಾಯಿ ಕಡಿತಕ್ಕೆ ವರ್ಷಕ್ಕೆ 20 ಸಾವಿರ ಸಾವು!
ನಂಬಲು ಆಸಾಧ್ಯ ಅನಿಸಿದರು ಇದು ಸತ್ಯಕ್ಕೆ ಹತ್ತಿರವಾದ ಅಂಕಿ-ಅಂಶವಾಗಿದೆ ಪ್ರತಿದಿನ ಭಾರತದಲ್ಲಿ 5 ಸಾವಿರಕ್ಕೂ ಹೆಚ್ಚಿನ ಜನ ನಾಯಿ ಕಡಿತಕ್ಕೆ ಒಳಗಾಗುತ್ತಾರೆ 365 ದಿನಕ್ಕೆ 1.75 ಕೋಟಿ ಆಗುತ್ತದೆ ಇದರಲ್ಲಿ ಚಿಕಿತ್ಸೆ ಪಲಿಸದೇ ಇತರೆ ಕಾರಣಗಳಿಂದ ರೇಬೀಸ್ ರೋಗಕ್ಕೆ ತಗುಲಿ ಒಂದು ವರ್ಷಕ್ಕೆ 20,000 ಜನ ಮರಣ ಹೊಂದುತ್ತಾರೆ. ಈ ಎಲ್ಲಾ ಕಾರಣದಿಂದಾಗಿ ಈ ನಾಯಿ ಕಡಿತದ ಕುರಿತು ಸರಿಯಾದ ಮಾಹಿತಿಯನ್ನು ಎಲ್ಲಾ ನಾಗರಿಕರು ಪಡೆದುಕೊಳ್ಳುವುದು ಅತ್ಯಗತ್ಯ.
ಇದನ್ನೂ ಓದಿ: pm kisan 15th installment date: ಕೇಂದ್ರ ಸರಕಾರದಿಂದ ಪಿ.ಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ವರ್ಗಾವಣೆಗೆ ಅಧಿಕೃತ ದಿನಾಂಕ ಪ್ರಕಟ!
ರೇಬೀಸ್ ಬರುವುದು ಹೇಗೆ?
ಪ್ರಾಣಿಗಳಿಂದ ಮನುಷ್ಯನಿಗೆ “ರೇಬೀಸ್” ವೈರಾಣುವಿನಿಂದ ಉಂಟಾಗುವ ಮಾರಣಾಂತಿಕ ರೋಗವಿದು. ರೇಬೀಸ್ ಇರುವ ಪ್ರಾಣಿಗಳ ಎಂಜಲಿನಿಂದ ಹರಡುತ್ತದೆ. ರೇಬೀಸ್ ಕೇವಲ ಹುಚ್ಚು ನಾಯಿ ಕಚ್ಚಿದರೆ ಮಾತ್ರ ಬರುವುದು ಎಂದೇನಿಲ್ಲ. ಬೆಕ್ಕು, ಹೆಗ್ಗಣ, ಕೋತಿ, ಹಂದಿ, ಕುರಿ ಮೊದಲಾದ ಯಾವುದೇ ಪ್ರಾಣಿಯು ಕಚ್ಚುವುದರಿಂದ ಬರಬಹುದು. ಆದರೆ ರೇಬೀಸ್ ಬ೦ದಿರುವವರಲ್ಲಿ ಶೇ. 96 ಕ್ಕೂ ಹೆಚ್ಚು ಮಂದಿಗೆ ನಾಯಿ ಕಚ್ಚಿರುವುದರಿ೦ದಲೇ ಬಂದಿದೆ. ಹುಚ್ಚು ನಾಯಿ ಕಚ್ಚಿದರೆ ಮಾತ್ರ ರೇಬೀಸ್ ಬರುತ್ತದೆ. ಆದರೆ ಕಚ್ಚಿರುವ ನಾಯಿಗೆ ಹುಚ್ಚು ಇದೆಯೋ ಇಲ್ಲವೇ ಎಂದು ತಿಳಿಯುವುದು ಕಷ್ಟ. ಆದ್ದರಿಂದ ಯಾವ ನಾಯಿ ಕಚ್ಚಿದರೂ ‘ಹುಚ್ಚು ನಾಯಿ ಕಚ್ಚಿದೆ’ ಎಂದೇ ಪರಿಗಣಿಸುವುದು ಸೂಕ್ತ. ರೇಬೀಸ್ ರೋಗ ಶುರುವಾದರೆ ಅದಕ್ಕೆ ಯಾವುದೇ ಔಷಧಿ ಇಲ್ಲ. ಅದ್ದರಿಂದ ನಾವು ಈ ಬಗ್ಗೆ ಜಾಗರೂಕರಾಗಿರಬೇಕು.
ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.
ಹುಚ್ಚು ನಾಯಿ ನಮ್ಮನ್ನು ನೆಕ್ಕಿದರೆ ರೇಬೀಸ್ ಬರುತ್ತಾ?
ಗಾಯವಿರದ ಚರ್ಮದ ಮೇಲೆ ಹುಚ್ಚು ನಾಯಿ ನೆಕ್ಕಿದರೆ ರೇಬೀಸ್ ಹರಡುವುದಿಲ್ಲ. ಆದರೆ ಗಾಯವಿರುವ ಚರ್ಮದ ಮೇಲೆ ಅಥವಾ ಬಾಯಿ ಮೊದಲಾದ ಹಸಿ ಇರುವ ದೇಹದ ಭಾಗದ ಮೇಲೆ ಹುಚ್ಚು ನಾಯಿ ಕೇವಲ ನೆಕ್ಕಿದರೂ ರೇಬೀಸ್ ಬರಬಹುದು. ಅದು ಕಚ್ಚಲೇಬೇಕೆಂದಿಲ್ಲ. ಇನ್ನು ನಾಯಿಗಳು ತಮ್ಮ ಕಾಲುಗಳನ್ನು ಆಗಾಗ ನೆಕ್ಕಿಕೊಳ್ಳುತ್ತಿರುತ್ತವೆ. ಹಾಗಾಗಿ ಅದು ಉಗುರಿನಿಂದ ಗೀರಿದರೂ ಸಹ ರೇಬೀಸ್ ಬರಬಹುದು ಬಾಯಿಯಿಂದಲೇ ಕಚ್ಚಬೇಕೆಂದಿಲ್ಲ.
ಸಾಕು ಪ್ರಾಣಿಗಳನ್ನು ಸಾಕುವವರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ:
ನಾಯಿ ಸಾಕುವವರು ತಪ್ಪದೇ ನಿಮ್ಮ ಹತ್ತಿರದ ಪಶು ಅಸ್ಪತ್ರೆಯನ್ನು ಭೇಟಿ ಮಾಡಿ ರೋಗ ಬರುವ ಮುಂಚಿತವಾಗಿಯೇ ಪೂರಕ ಲಸಿಕೆಗಳನ್ನು ಹಾಕಿಸಿಕೊಳ್ಳಿ.
ಇದನ್ನೂ ಓದಿ: Farm pond: ರಾಜ್ಯ ಸರ್ಕಾರದಿಂದ ಮತ್ತೆ ಕೃಷಿ ಭಾಗ್ಯ ಯೋಜನೆಗೆ ಮರು ಚಾಲನೆ! ಅನುದಾನ ಎಷ್ಟು? ಎಷ್ಟು ಜಿಲ್ಲೆ ಆಯ್ಕೆ ಮಾಡಲಾಗಿದೆ?
ನಾಯಿ ಕಚ್ಚಿದರೆ ಏನು ಮಾಡಬೇಕು?
ಯಾವುದೇ ನಾಯಿ ಕಚ್ಚಿದರೂ ಆ ಜಾಗವನ್ನು ಚೆನ್ನಾಗಿ ಸೋಪು ಮತ್ತು ನೀರಿನಿಂದ ಹತ್ತು ನಿಮಿಷಗಳವರೆಗೆ ತೊಳೆಯಬೇಕು. ನಂತರ ಪೊವಿಡೋನ್ ಐಯೋಡಿನ್ ದ್ರಾವಣದಿಂದ ಸ್ವಚ್ಛ ಮಾಡಬೇಕು. ಸ್ಪಿರಿಟ್ ಹಚ್ಚಬಾರದು. ಗಾಯಕ್ಕೆ ಹೊಲಿಗೆ ಹಾಕದಿರುವುದು ಉತ್ತಮ. ಟೆಟನಸ್ ಚುಚ್ಚುಮದ್ದು ಅಗತ್ಯವಿದ್ದಲ್ಲಿ ಕೊಡಿಸಬೇಕು. ಒಟ್ಟು ನಾಲ್ಕು ರೇಬೀಸ್ ಚುಚ್ಚುಮದ್ದುಗಳನ್ನು ಮೊದಲನೇ ದಿನ, 3 ನೇ ದಿನ, ಏಳನೇ ದಿನ, 14ನೇ ದಿನಗಳಂದು ಪ್ರತಿ ಬಾರಿ ಒಂದೊಂದು ಚುಚ್ಚುಮದ್ದು ಕೊಡಿಸಬೇಕು.
ನಾಯಿ ಕಚ್ಚಿದಾಗ ಮಾಡಬಾರದು?
ಉಪ್ಪು ಅಥವಾ ಎಣ್ಣೆ ಮೊದಲಾದ ಮನೆ ಮದ್ದುಗಳನ್ನು ಹಚ್ಚಬಾರದು.
ಗಾಯಕ್ಕೆ ಬ್ಯಾಂಡೇಜ್ ಕಟ್ಟಬಾರದು.
ನಾಯಿಗಳಿಗೆ ಚುಚ್ಚುಮದ್ದು :
ಇತ್ತೀಚಿನ ದಿನಗಳಲ್ಲಿ ನಾಯಿಗಳನ್ನು ಶೋಕಿಯೊಂದಿಗೆ ಹವ್ಯಾಸವು ಆಗಿದೆ. ಮನೆಯಲ್ಲಿ ಸಾಕಿದ ಶ್ವಾನಗಳು ಕಚ್ಚುವುದು ಸಾಮಾನ್ಯವಾಗಿದೆ. ಆದರೆ ಒಂದಷ್ಟು ಮಂದಿ ಯಾವುದೇ ಔಷಧ ತೆಗೆದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಶ್ವಾನ ಯಾವುದೇ ಇರಲಿ ಹುಟ್ಟಿದ 10 ಮತ್ತು 14 ನೇ ವಾರಕ್ಕೆ, ನಂತರ ಪ್ರತೀ ವರ್ಷ ಸಾಕು ನಾಯಿಗಳಿಗೆ ಚುಚ್ಚು ಮದ್ದನ್ನು ಕೊಡಿಸಬೇಕು.
ಇದನ್ನೂ ಓದಿ: Akrama-sakrama yojana: ಕೃಷಿ ಪಂಪ್ ಸೆಟ್ ಅಕ್ರಮ ಸಕ್ರಮ ಯೋಜನೆ ಕುರಿತು ಹೊಸ ಆದೇಶ ಹೊರಡಿಸಿದ ರಾಜ್ಯ ಸರಕಾರ!
ಮೊದಲೇ ರೇಬೀಸ್ ಚುಚ್ಚುಮದ್ದನ್ನು ತೆಗೆದುಕೊಳ್ಳಬಹುದೇ?
ಪಶುವೈದ್ಯರು, ಪಶುವೈದ್ಯ ವಿದ್ಯಾರ್ಥಿಗಳು, ಶ್ವಾನ ಹಿಡಿಯುವವರು, ಅರಣ್ಯಾಧಿಕಾರಿಗಳು ಕ್ರಮವಾಗಿ ಮೊದಲಾದವರು ಮುಂಜಾಗರೂಕತಾ ರೇಬೀಸ್ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕು. ಚುಚ್ಚು ಮದ್ದು ತೆಗೆದುಕೊಂಡಿದ್ದರೆ ಮೊದಲ ಮೂರು ತಿಂಗಳು ಯಾವುದೇ ನಾಯಿ ಕಚ್ಚಿದರೂ ರೇಬೀಸ್ ಚುಚ್ಚುಮದ್ದಿನ ಅವಶ್ಯಕತೆ ಇರುವುದಿಲ್ಲ.
ಮಾಹಿತಿ ಕೃಷಿ: ಡಾ| ಸಂದೀಪ್ ಹೆಚ್ ಎಸ್