Pm kisan 15th installment date: ಕೇಂದ್ರ ಸರಕಾರದಿಂದ ಪಿ.ಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ವರ್ಗಾವಣೆಗೆ ಅಧಿಕೃತ ದಿನಾಂಕ ಪ್ರಕಟ!

Facebook
Twitter
Telegram
WhatsApp

ಕೇಂದ್ರ ಸರಕಾರದಿಂದ ಪಿ.ಎಂ ಕಿಸಾನ್ ಯೋಜನೆಯ 15ನೇ ಕಂತಿನ ರೂ 2,000 ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲು ಅಧಿಕೃತ ದಿನಾಂಕ ಪ್ರಕಟ ಮಾಡಲಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರದ ಕೃಷಿ ಸಚಿವಾಲಯದ Pm-kisan ಯೋಜನೆಯ ವಿಭಾಗವು ತನ್ನ ಎಕ್ಸ್ ಖಾತೆಯಲ್ಲಿ ಯಾವ ದಿನಾಂಕದಂದು ದೇಶದ ರೈತರಿಗೆ 15 ನೇ ಕಂತಿನ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ದೇಶದ ಎಲ್ಲಾ ರೈತರಿಗೆ ಶುಭ ಸುದ್ದಿ ನೀಡುವ ದೇಸೆಯಲ್ಲಿ 15 ನವೆಂಬರ್ 2023 ರಂದು ದೇಶದ ಎಲ್ಲಾ ಕಿಸಾನ್ ಸಮ್ಮಾನ್ ಫಲಾನುಭವಿಗಳಿಗೆ ಏಕ ಕಾಲಕ್ಕೆ ನೇರ ನಗದು ವರ್ಗಾವಣೆ ಮೂಲಕ 15 ನೇ ಕಂತಿನ ರೂ 2,000 ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು Pmkisan ಯೋಜನೆಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಈ ದಿನ ರೈತರ ಖಾತೆಗೆ ಬರಲಿದೆ 15 ನೇ ಕಂತಿನ ಹಣ!

ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮಾ ಮಾಡುವ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ 15 ನವೆಂಬರ್ 2023 ರ ಸಂಜೆ 3-00 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಕೊಡಲಿದ್ದಾರೆ. ಈ ಕಾರ್ಯಕ್ರಮ ಉದ್ಘಾಟನೆಯಾದ ಬಳಿಕ ರೈತರ ಖಾತೆ ಹಣ ವರ್ಗಾವಣೆ ಆರಂಭವಾಗುತ್ತದೆ ಒಂದೆರಡು ದಿನದ ಒಳಗಾಗಿ ದೇಶದ ಎಲ್ಲಾ ರೈತರಿಗೆ ಹಣ ಜಮಾ ಅಗಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ವೀಡಿಯೋ ಕಾನ್ಫರೆನ್ಸ್ ಸಂವಾದಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ: Apply Now ನಿಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಿ.

ಇದನ್ನೂ ಓದಿ: Farm pond: ರಾಜ್ಯ ಸರ್ಕಾರದಿಂದ ಮತ್ತೆ ಕೃಷಿ ಭಾಗ್ಯ ಯೋಜನೆಗೆ ಮರು ಚಾಲನೆ! ಅನುದಾನ ಎಷ್ಟು? ಎಷ್ಟು ಜಿಲ್ಲೆ ಆಯ್ಕೆ ಮಾಡಲಾಗಿದೆ?

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

PM-kisana yojana list: ಪಿ. ಎಮ್ ಕಿಸಾನ್ ಯೋಜನೆಯ ಅರ್ಹ ಫಲಾನುಭವಿ ಪಟ್ಟಿ ಬಿಡುಗಡೆ:

ಈ ಯೋಜನೆಯಡಿ ಯಾರೆಲ್ಲ ಅರ್ಥಿಕ ನೆರವನ್ನು ಪಡೆಯಬವುದು ಎಂದು ಕೇಂದ್ರದಿಂದ ಅಧಿಕೃತ ಅರ್ಹ ಫಲಾನುಭವಿ ಪಟ್ಟಿಯನ್ನು pm-kisan ವೆಬ್ಸೈಟ್ ನಲ್ಲಿ ಪ್ರಕಟಣೆ ಮಾಡಲಾಗಿದೆ. ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿ ಹಳ್ಳಿವಾರು ಫಲಾನುಭವಿ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬವುದು.

Step-1: ಇಲ್ಲಿ ಕ್ಲಿಕ್ ಮಾಡಿ> Pmkisan website link ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-KISAN) ಯೋಜನೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ಇಲ್ಲಿ ಬಲಬದಿಯಲ್ಲಿ ಕೆಳಗೆ ಗೋಚರಿಸುವ “Beneficiary list” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: “Beneficiary list” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಬಳಿಕ ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ನಿಮ್ಮ ಹಳ್ಳಿಯನ್ನು ಆಯ್ಕೆ ಮಾಡಿಕೊಂಡು Get Report ಬಟನ್ ಮೇಲೆ ಕ್ಲಿಕ್ ಮಾಡಿದರೆ ಪಿ. ಎಮ್ ಕಿಸಾನ್ ಯೋಜನೆಯ ಅರ್ಹ ಫಲಾನುಭವಿಗಳ ನಿಮ್ಮ ಹಳ್ಳಿಯ ಪಟ್ಟಿ ತೋರಿಸುತ್ತದೆ.

ಇದನ್ನೂ ಓದಿ: Akrama-sakrama yojana: ಕೃಷಿ ಪಂಪ್ ಸೆಟ್ ಅಕ್ರಮ ಸಕ್ರಮ ಯೋಜನೆ ಕುರಿತು ಹೊಸ ಆದೇಶ ಹೊರಡಿಸಿದ ರಾಜ್ಯ ಸರಕಾರ!

Pmkisan Status check: ಪಿ ಎಂ ಕಿಸಾನ್ ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ:

ಪಿ ಎಂ ಕಿಸಾನ್ ಫಲಾನುಭವಿಗಳು ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಅಗಿದೆ? ಯಾವ ಯಾವ ದಿನಾಂಕದಂದು ಹಣ ಜಮಾ ಅಗಿದೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ.

Step-1: ಇಲ್ಲಿ ಕ್ಲಿಕ್ ಮಾಡಿ> Pmkisan status check ಕಿಸಾನ್ ಸಮ್ಮಾನ್ ನಿಧಿ(PM-KISAN) ಯೋಜನೆಯ ವೆಬ್ಸೈಟ್ ಭೇಟಿ ಮಾಡಬೇಕು. ಇಲ್ಲಿ ಬಲಬದಿಯಲ್ಲಿ ಗೋಚರಿಸುವ “Know your status” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: PMSBY Insurance Scheme- ವರ್ಷಕ್ಕೆ 20 ರೂ ಪಾವತಿಸಿ 2 ಲಕ್ಷ  ವಿಮಾ ಸೌಲಭ್ಯ  ಪಡೆಯಲು ಅರ್ಜಿ ಆಹ್ವಾನ!

Step-2: ನಂತರ “Know your registration no” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಫಲಾನುಭವಿಯ ಮೊಬೈಲ್ ಸಂಖ್ಯೆಯನ್ನು ಹಾಕಿ ಕ್ಯಾಪ್ಚರ್ ಕೋಡ ನಮೂದಿಸಿ Get Mobile OTP ಮೇಲೆ ಕ್ಲಿಕ್ ಮಾಡಿ OTP ನಮೂದಿಸಿ Get details ಮೇಲೆ ಕ್ಲಿಕ್ ಮಾಡಿದಾಗ ಅರ್ಜಿದಾರರ Registration Number ಮತ್ತು ಹೆಸರು ತೋರಿಸುತ್ತದೆ. 

Step-3: ಈ Registration Number ಅನು ಒಂದು ಕಡೆ ಬರೆದುಕೊಂಡು ಹಿಂದಿನ ಪುಟಕ್ಕೆ ಹೋಗಿ ಅಲ್ಲಿ ನಮೂದಿಸಬೇಕು. ಇಲ್ಲಿ ಕ್ಲಿಕ್ ಮಾಡಿ: click here ಅರ್ಜಿದಾರರ Registration Number ಅನ್ನು ಹಾಕಿ ಕ್ಯಾಪ್ಚರ್ ಕೋಡ್ ನಮೂದಿಸಿ Get Data ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಪಿ ಎಂ ಕಿಸಾನ್ ಅರ್ಜಿ ಸ್ಥಿತಿ ತೋರಿಸುತ್ತದೆ.

Facebook
Twitter
Telegram
WhatsApp
Picture of siddesh

siddesh

Leave a Comment

Top Stories

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ

Crop insurance

Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು(Rabi Crop Insurance) ಮಾಡಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು? ಅರ್ಜಿ