Elsol irrigation solution: ಬಿಜಾಪುರದ ಈ ರೈತ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ 20 ಎಕರೆ ದ್ರಾಕ್ಷಿ ತೋಟಕ್ಕೆ ನೀರು ಮತ್ತು ಗೊಬ್ಬರ ಕೊಡುತ್ತಾರೆ!

ಆತ್ಮೀಯ ರೈತ ಬಾಂಧವರೇ ಪ್ರಸ್ತುತ ತೋಟಗಾರಿಕೆ ಬೆಳೆಗಳಿಗೆ ನೀರನ್ನು ಹಾಯಿಸಲು ವಿದ್ಯುತ್ ಬರುವ ಸಮಯವನ್ನು ಕಾದು ಮೋಟಾರ್ ಆನ್ ಮಾಡಿ ನೀರು ಬಿಡುವುದು ಒಂದು ಸವಾಲಿನ ಕೆಲಸವಾಗಿದೆ ಏಕೆಂದರೆ ಸದ್ಯ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಹೆಚ್ಚು ತೊಂದರೆ ಉಂಟು ಮಾಡುತ್ತಿದೆ.

ಇದಲ್ಲದೆ ಕೈಕೊಟ್ಟ ಮುಂಗಾರಿನಿಂದ ಇರುವ ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವುದು ಅಷ್ಟೇ ಮುಖ್ಯ ಈ ಎರಡು ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸಲು ವಿಜಯಪುರ ಜಿಲ್ಲೆಯ ತ್ರಿಕೋಟದ ರೈತರಾದ ಶ್ರ‍ೀ ವಿಜಯಕುಮಾರ ರಾಠೋಡರವರು ತಮ್ಮ 20 ಎಕರೆ ಜಮೀನಿಗೆ Elsol irrigation solution ಕಂಪನಿಯ ಸ್ವಯಂ ಚಾಲಿತ ನೀರಾವರಿ ಮತ್ತು ಗೊಬ್ಬರ ಕೊಡುವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.

ಇಂದು ಈ ಅಂಕಣದಲ್ಲಿ ಈ ಸ್ವಯಂ ಚಾಲಿತ ನೀರಾವರಿ ಮತ್ತು ಗೊಬ್ಬರ ತಂತ್ರಜ್ಞಾನದ ಕುರಿತು ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ. ಈ ವ್ಯವಸ್ಥೆ ಯಾವ ರೀತಿ ಕೆಲಸ ಮಾಡುತ್ತದೆ? ಇದನ್ನು ಅಳವಡಿಕೆ ಮಾಡಿಕೊಂಡಿರುವ ರೈತರ ಅನುಭವ ಮತ್ತು ಈ ಪದ್ದತಿ ಅಳವಡಿಕೆಯಿಂದಾಗುವ ಪ್ರಯೋಜನಗಳು ಇತ್ಯಾದಿ ಸಂಪೂರ್ಣ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

ತಮ್ಮ 20 ಎಕರೆ ದ್ರಾಕ್ಷಿ ತೋಟಕ್ಕೆ ಸ್ವಯಂ ಚಾಲಿತ ನೀರಾವರಿ ಮತ್ತು ಗೊಬ್ಬರ ಕೊಡುವ ವ್ಯವಸ್ಥೆ ಮಾಡಿದ: ಶ್ರ‍ೀ ವಿಜಯಕುಮಾರ ರಾಠೋಡ

Elsol irrigation solution ಕಂಪನಿಯ ಸ್ವಯಂ ಚಾಲಿತ ನೀರಾವರಿ ಮತ್ತು ಗೊಬ್ಬರ ಕೊಡುವ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ:

ರೈತರು ಈ ತಂತ್ರಜ್ಞಾನವನ್ನು ನಿಮ್ಮ ತೋಟಕ್ಕೆ ಅಳವಡಿಸಿಕೊಳ್ಳು Elsol irrigation solution ಗೆ ತಿಳಿಸಿದ ಬಳಿಕ  ನಂತರ ಈ ಕಂಪನಿಯ ಪ್ರತಿನಿಧಿಯು ಪ್ರಾರಂಭದಲ್ಲಿ ತಮ್ಮ ಜಮೀನಿಗೆ ಭೇಟಿ ಮಾಡಿ ಒಟ್ಟು ಜಮೀನಿನ ವಿಸ್ತೀರ್ಣ ಎಷ್ಟು? ಎಷ್ಟು ವಾಲ್ವ್ ಇವೆ? ಎಷ್ಟು ಇಂಚು ನೀರು ಬರುತ್ತದೆ? ಇತ್ಯಾದಿ ಸ್ವಯಂ ಚಾಲಿತ  ವ್ಯವಸ್ಥೆ ಅಳವಡಿಸಲು ಅಗತ್ಯವಾಗಿ ಬೇಕಾಗುವ ಪೂರಕ ಮಾಹಿತಿ ಪಡೆಯಲು ಒಂದು ಸರ್ವೆ ಮಾಡಿ ಸ್ವಯಂ ಚಾಲಿತ ನೀರಾವರಿ ಮತ್ತು ಗೊಬ್ಬರ ನೀಡುವ ಪದ್ದತಿಯನ್ನು ಅಳವಡಿಕೆ ಮಾಡಲು ಮಾದರಿಯನ್ನು ಸಿದ್ದಪಡಿಸಿ ಈ ವ್ಯವಸ್ಥೆಯನ್ನು ಅನುಷ್ಥಾನ ಮಾಡಲಾಗುತ್ತದೆ.

ಈಗಾಗಲೇ ನೀವೆನಾದರೂ ಡ್ರಿಪ್ ಇರಿಗೇಷನ್ ಅಳವಡಿಕೆ ಮಾಡಿಕೊಂಡಿದ್ದಾರೆ ಪ್ರಸ್ತುತ ಇರುವ ಮ್ಯಾನುವಲ್ ವಾಲ್ವ್ ಗಳನ್ನು ತೆಗೆದು Elsol irrigation solution ನ ಸ್ವಯಂ ಚಾಲಿತ ವಾಲ್ವ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ.

ಈ ವಾಲ್ವ್ ಗಳಲ್ಲಿ ಅಳವಡಿಸಿರುವ ಸೆನ್ಸಾರ್ ಮತ್ತು ಮೋಟಾರ್ ಪೆಟ್ಟಿಗೆಯಲ್ಲಿರುವ ಅಳವಡಿಕೆ ಮಾಡುವ ಸಾಧನಗಳ ಸೆನ್ಸಾರ್ ಮೂಲಕ ಡೇಟಾವನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಮಾನಿಟರ್ ಮಾಡಿ ನಿಮ್ಮ ಜಮೀನಿಗೆ ಸ್ವಯಂ ಚಾಲಿತ ನೀರು ಮತ್ತು ಗೊಬ್ಬರವನ್ನು ಕೊಡುವ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ.

ಇದನ್ನೂ ಓದಿ: Solar pumpset subsidy- ಸೋಲಾರ್ ಪಂಪ್ ಸೆಟ್‌ಗೆ ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬವುದು? 

Irrigation automation: ರೈತರು ತಿಳಿಸಿದ ಸ್ವಯಂ ಚಾಲಿತ ನೀರಾವರಿ ಮತ್ತು ಗೊಬ್ಬರ ಕೊಡುವ ವ್ಯವಸ್ಥೆಯ ಪ್ರಯೋಜನಗಳು:

  • ಈ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುವ ಮೊದಲು ನಾವು ನಮ್ಮ ತೋಟಕ್ಕೆ ನೀರನ್ನು ಬಿಡಲು ಒಂದು ದಿನಕ್ಕೆ ಒಬ್ಬ ಕಾರ್ಮಿಕ ಬೇಕಾಗುತ್ತಿದ್ದು ಈ ಪದ್ದತಿ ಅಳಡಿಸಿಕೊಂಡ ನಂತರ ನಾವು ಬೇರೆ ಊರಿನಲ್ಲಿದರು ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ನಮ್ಮ ತೋಟಕ್ಕೆ ನೀರು ಬಿಡಬವುದು. ಇದರಿಂದ ಕೂಲಿ ವೆಚ್ಚ ಮತ್ತು ಸಮಯ ಉಳಿತಾಯವಾಗುತ್ತದೆ.
  • ನೀರು ಹಾಯಿಸುವುದರ ಜೊತೆಗೆ ಗೊಬ್ಬರವನ್ನು ಸಹ ಇದರಲ್ಲಿ ಸಮ ಪ್ರಮಾಣದಲ್ಲಿ ಎಲ್ಲಾ ಗಿಡಗಳಿಗೆ ಸರಿಯಾದ ಸಮಯಕ್ಕೆ ಕಡಿಮೆ ಕೂಲಿ ಕಾರ್ಮಿಕರನ್ನು ಬಳಕೆ ಮಾಡಿ ಗೊಬ್ಬರ ಕೊಡಬವುದು.
  • ಕರೆಂಟ್ ಯಾವಾಗ ಬರುತ್ತದೆ ಎಂದು ಕಾದು ಕುಳಿತುಕೊಂಡು ಆ ಸಮಯಕ್ಕೆ ತೋಟಕ್ಕೆ ಬಂದು ನೀರು ಹಾಯಿಸುವ ಅಥವಾ ವಿದ್ಯುತ್ ಸಮಸ್ಯೆಯಿಂದ ಸಮಯ ವ್ಯರ್ಥ ಮಾಡುವ ಸನ್ನಿವೇಶ ಇರುವುದಿಲ್ಲ ಒಂದು ದಿನಕ್ಕೆ ಇಷ್ಟು ಸಮಯ ನೀರು ನಮ್ಮ ತೋಟಕ್ಕೆ ಬಿಡಬೇಕು ಎಂದು ಮೊಬೈಲ್ ಅಪ್ಲಿಕೇಶನ್ ಅಲ್ಲಿ ಸೆಟ್ ಮಾಡಿದರೆ ಸಾಕು ಅದ ತನ್ನ ಕೆಲಸವನ್ನು ಸ್ವಯಂ ಚಾಲಿತವಾಗಿ ಮಾಡುತ್ತದೆ ಎನ್ನುತಾರೆ ರೈತ ಶ್ರ‍ೀ ವಿಜಯಕುಮಾರ ರಾಠೋಡ.

ಶ್ರ‍ೀ ವಿಜಯಕುಮಾರ ರಾಠೋಡ ರೈತರ ತೋಟದ ವಿಡಿಯೋ:


Elsol irrigation solution ಕಂಪನಿ ಸಾಧನದ ವಿಶೇಷತೆಗಳು:

ನಿಖರ ಮಾಹಿತಿ ಸಂಗ್ರಹಿಸಿ ದೀರ್ಘಕಾಲ ಕಾರ್ಯನಿರ್ವಹಿಸಲು ಸ್ವಯಂ ಚಾಲಿತ ವಾಲ್ವ್ ಗಳು.
ತೋಟಕ್ಕೆ ಸ್ವಯಂ ಚಾಲಿತ ನೀರು ಮತ್ತು ಗೊಬ್ಬರ ಕೊಡುವುದರ ಜೊತೆಗೆ ನಿಮ್ಮ ಪ್ರದೇಶದ ಹವಾಮಾನ ಮಾಹಿತಿಯನ್ನು ಅಂದರೆ ಪ್ರಸ್ತುತ ಮಣ್ಣಿನಲ್ಲಿ ಎಷ್ಟು ತೇವಾಂಶವಿದೆ? ಈ ದಿನ ಎಷ್ಟು ಸಮಯ ನೀರನ್ನು ತೋಟಕೆ ಕೊಡಬೇಕು? ಗಾಳಿಯ ವೇಗ ಇತ್ಯಾದಿ ಹವಾಮಾನ ಮಾಹಿತಿಯನ್ನು ಈ ಕಂಪನಿಯ ಸಾಧನಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ರೈತರಿಗೆ ಮುನ್ಸೂಚನೆ ನೀಡುತ್ತವೆ.

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಈ ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆಯನ್ನು ಅಳವಡಿಕೆ ಮಾಡಿಕೊಳ್ಳಲು ಆಸಕ್ತಿಯಿರುವವರು ಇಂದೇ ಸಂಪರ್ಕಿಸಿ:

Elsol Irrigation Solutions Channel Partners of Mobitech Wireless Solution Pvt. Ltd.

Davanagere: 861/12, Shivkumar Swamy Nagar 1st Stage, Shivakumara Swamy Nagara, Davanagere, Karnataka-577005

Bengalore: Survey No. 27, No.1, 9th Block, Vishweshwaraiah Layout, Malathahalli, Bengaluru-560056 Mob: +91 9901529901

website: https://elsolindia.com

ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ ಕೈಪಿಡಿ: Download Now

ಇದನ್ನೂ ಓದಿ: mgnreg yojana- ವೈಯಕ್ತಿಕ ಫಲಾನುಭವಿಗಳಿಗೆ ನರೇಗಾ ನೆರವು ದ್ವಿಗುಣ! ಕಾಮಗಾರಿ ಮಿತಿ 5 ಲಕ್ಷಕ್ಕೆ ಏರಿಕೆ!