mgnreg yojana- ವೈಯಕ್ತಿಕ ಫಲಾನುಭವಿಗಳಿಗೆ ನರೇಗಾ ನೆರವು ದ್ವಿಗುಣ! ಕಾಮಗಾರಿ ಮಿತಿ 5 ಲಕ್ಷಕ್ಕೆ ಏರಿಕೆ!

mgnrega: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(Mgnreg yojane) ಈ ಹಿಂದೆ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಥಾನ ಮಾಡಲು ಇದ 2.5 ಲಕ್ಷದ ಮಿತಿಯನ್ನು 5 ಲಕ್ಷಕ್ಕೆ ಏರಿಕೆ ಮಾಡಿ ಸರಕಾರದಿಂದ ಆದೇಶ ಹೊರಡಿಸಲಾಗಿದೆ.

ಈ ಆದೇಶದಂತೆ ಇನ್ನು ಮುಂದೆ ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕವಾಗಿ ಒಬ್ಬರು 5 ಲಕ್ಷದವರೆಗೆ ವಿವಿಧ ಚಟುವಟಿಕೆಗಳನ್ನು ಈ ಯೋಜನೆಯಡಿ ಕೈಗೊಳ್ಳಬವುದುದಾಗಿದೆ. ಯಾವೆಲ್ಲ ಕಾಮಗಾರಿಕಗಳನ್ನು ಅನುಷ್ಥಾನ ಮಾಡಬವುದು? ಅನುದಾನ ಎಷ್ಟು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Mgnrega karnataka: ವೈಯಕ್ತಿಕ ಕಾಮಗಾರಿಗೆ ಯಾರೆಲ್ಲ ಅರ್ಜಿ ಸಲ್ಲಿಸಬವುದು?

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರು
ಅಲೆಮಾರಿ ಬುಡಕಟ್ಟುಗಳು ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು.
ಮಹಿಳಾ ಪ್ರಧಾನ ಕುಟುಂಬಗಳು.
ವಿಕಲಚೇತನ ಕುಟುಂಬಗಳು.
ಭೂ ಸುಧಾರಣಾ ಫಲಾನುಭವಿಗಳು.
ವಸತಿ ಯೋಜನೆಯ ಫಲಾನುಭವಿಗಳು.
ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು.
ಸಣ್ಣ ಮತ್ತು ಅತಿ ಸಣ್ಣ ರೈತರು. ಈ ಯೋಜನೆಯಡಿ ಅರ್ಜಿ ಸಲ್ಲಿಸಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬವುದು.

ಇದನ್ನೂ ಓದಿ: free tailoring machine-ಉಚಿತ ಹೊಲಿಗೆ ಯಂತ್ರ,ಕುಶಲಕರ್ಮಿಗಳು ಉಪಕರಣ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

mgnrega work: ಈ ಯೋಜನೆಯಡಿ ಯಾವೆಲ್ಲ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಬವುದು? ಅನುದಾನದ ವಿವರ:

ನರೇಗಾ ಯೋಜನೆಯಡಿ ರೈತರು ವೈಯಕ್ತಿಕವಾಗಿ ಕೃಷಿ,ಹೊಂಡ, ತೆರೆದ ಬಾವಿ, ಕೊಳವೆ ಬಾವಿ ಮರುಪೂರಣ,ಜಮೀನು ಸಮತಟ್ಟು, ದನದ ಕೊಟ್ಟಿಗೆ, ಕುರಿ ದೊಡ್ಡಿ,ಆಡು/ಮೇಕೆ ಶೆಡ್, ಕೋಳಿ ಶೆಡ್, ಈರುಳ್ಳಿ ಉಗ್ರಾಣ, ಎರೆಹುಳು ಗೊಬ್ಬರ ತೊಟ್ಟಿ, ವಿವಿಧ ತೋಟಗಾರಿಕೆ ಇಲಾಖೆಯ ಬೆಳೆಗಳನ್ನು ಬೆಳೆಯಲು ಈ ಯೋಜನೆಯಡಿ ಅರ್ಥಿಕ ನೆರವನ್ನು ಪಡೆಯಬವುದು.

nrega application: ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರರು ನೀವು ಅನುಷ್ಥಾನ ಮಾಡಲು ಇಚ್ಚಿಸುವ ಕಾಮಗಾರಿಯ ಬೇಡಿಗೆಯನ್ನು ನಿಮ್ಮ್ಮ ಗ್ರಾಮ ಪಂಚಾಯತಿ ಅಥವಾ ಹತ್ತಿರದ ಕಾಮಗಾರಿ ಸಂಬಂದಪಟ್ಟ ಇಲಾಖೆ ಅಂದರೆ ಕೃಷಿ ,ತೋಟಗಾರಿಕೆ,ರೇಷ್ಮೆ,ಪಶುಪಾಲನೆ, ಅರಣ್ಯ ಇಲಾಖೆ ಕಚೇರಿಗಳಿಗೆ ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲೆ ಕೊಟ್ಟು ಅರ್ಜಿ ಸಲ್ಲಿಸಬವುದು ಅಥವಾ ನೇರವಾಗಿ ನಿಮ್ಮ ಮೊಬೈಲ್ ಮೂಲಕ ಕಾಯಕ ಮಿತ್ರ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಅರ್ಜಿ ಸಲ್ಲಿಸಬವುದು. ಕಾಯಕ ಮಿತ್ರ ಅಪ್ಲಿಕೇಶನ್ ಲಿಂಕ್: Download Now 

ಇದನ್ನೂ ಓದಿ: Fruits ID: ಸರಕಾರದ ಎಲ್ಲಾ ಬಗ್ಗೆಯ ಬೆಳೆ ಪರಿಹಾರ ಪಡೆಯಲು ಈ ವೆಬ್ಸೈಟ್ ನಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರಿಸುವುದು ಕಡ್ಡಾಯ!

Nrega helpline-ಸಹಾಯವಾಣಿಗೆ ಕರೆ ಮಾಡಿ ಕೆಲಸದ ಬೇಡಿಕೆ ಸಲ್ಲಿಸಬವುದು:

ನರೇಗಾ ಯೋಜನೆಯಡಿ ನಿಮ್ಮ ಊರಿನಲ್ಲಿ ಕೆಲಸ ಮಾಡಲು ಆಸಕ್ತಿಯಿರುವ ಸಾರ್ವಜನಿಕರು ಈ ಯೋಜನೆಯ ಸಹಾಯವಾಣಿ ಸಂಖ್ಯೆ: 1800-4258-666 ಈ ನಂಬರ್ ಗೆ ಕರೆ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಇತ್ಯಾದಿ ವಿವರ ತಿಳಿಸಿ ಕೆಲಸದ ಬೇಡಿಕೆ ಸಲ್ಲಿಸಬವುದು.

Job card- ಉದ್ಯೋಗ ಚೀಟಿ ಪಡೆಯುವ ವಿಧಾನ:

ಈ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ಯೋಗ ಚೀಟಿಯನ್ನು ಹೊಂದಿವುದು ಕಡ್ಡಾಯವಾಗಿದ್ದು ಇದಕ್ಕಾಗಿ ಅರ್ಜಿದಾರರು ತಮ್ಮ ಕುಟುಂಬದಲ್ಲಿ 18 ವರ್ಷ ತುಂಬಿರುವ ಎಲ್ಲಾ ಸದಸ್ಯರ ಅಧಾರ್ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ ಪ್ರತಿ ಜೊತೆ ಗ್ರಾಮ ಪಂಚಾಯತಿ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಉದ್ಯೋಗ ಚೀಟಿ ಪಡೆಯಬವುದು.

ನರೇಗಾ ಕೂಲಿ ವಿವರ:

ಈ ಯೋಜನೆಯಡಿ ಕೆಲಸ ಮಾಡುವ ಗಂಡು ಮತ್ತು ಹೆಣ್ಣು ಕಾರ್ಮಿಕರಿಗೆ ಇಬ್ಬರಿಗೂ ಸಮಾನ ಕೂಲಿ ನೀಡಲಾಗುತ್ತದೆ. ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 100 ದಿನ ಕೆಲಸ ಮತ್ತು ಒಂದು ದಿನಕ್ಕೆ ರೂ 316/- ಕೂಲಿ ಪಡೆಯಬವುದು.

ಇದನ್ನೂ ಓದಿ: Data entry operator Job: ಹೊಸದಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಡಾಟಾ ಎಂಟ್ರಿ ಆಪರೇಟ‌ರ್ ನೇಮಕಕ್ಕೆ ಆದೇಶ! 

mgnrega work process- ಕಾಮಗಾರಿ ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ:

ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಗ್ರಾಮ ಪಂಚಾಯತಿ ಕಾರ್ಯಲಯದಲ್ಲಿ ಜರುಗುವ ಗ್ರಾಮ ಸಭೆಯಲ್ಲಿ ನಿಮ್ಮ ಕಾಮಗಾರಿ ಬೇಡಿಕೆಯ ಅರ್ಜಿಯನ್ನು ಮಂಡಿಸಿ ಕ್ರ‍ಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಕಳುಹಿಸಲಾಗುತ್ತದೆ, ಕ್ರ‍ಿಯಾಯೋಜನೆ ಅನುಮೋದನೆ ಅದ ಬಳಿಕ ಕಾಮಗಾರಿ ಅನುಷ್ಥಾನಕ್ಕೆ ಸಂಬಂದಪಟ್ಟ ಇಲಾಖೆಗೆ ಕಡತವನ್ನು ವರ್ಗಾಹಿಸಿ ಅರ್ಜಿದಾರರಿಗೆ ಕೆಲಸ ಪ್ರಾರಂಭಿಸಲು ವರ್ಕ್ ಆರ್ಡರ್ ನೀಡಲಾಗುತ್ತದೆ.

ಇದಾದ ಬಳಿಕ ಕಾಮಕಾರಿ ಪ್ರಾರಂಭವಾಗುವ ಮುಂಚಿತವಾಗಿ ಒಂದು ಜಿಪಿಎಸ್ ಪೋಟೋ ಮತ್ತು ಕಾಮಕಾರಿ ನಡೆಯುತ್ತಿರುವಾಗ ಮತ್ತು ಕಾಮಕಾರಿ 30% ಪೂರ್ಣಗೊಂಡಾಗ ಹೀಗೆ ವಿವಿಧ ಹಂತಗಳಲ್ಲಿ ಜಿಪಿಎಸ್ ಪೋಟೊ ಪಡೆದು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ನೇರ ನಗದು ವರ್ಗಾವಣೆ ಮೂಲಕ ಕಾಮಗಾರಿ ಹಣವನ್ನು ಫಲಾನುಭವಿಗೆ ಪಾವತಿ ಮಾಡಲಾಗುತ್ತದೆ.

MGNREG Twitter account: Click here