Isha foundation: ಆತ್ಮೀಯ ರೈತ ಬಾಂಧವರೇ ಇಶಾ ಫೌಂಡೇಶನ್ ಕಾವೇರಿ ಕೂಗು ತಂಡದಿಂದ ಅತೀ ಕಡಿಮೆ ಬೆಲೆಯಲ್ಲಿ ರೈತರಿಗೆ ಅರಣ್ಯ ಜಾತಿಯ ಸಸಿಗಳನ್ನು ವಿತರಣೆ ಮಾಡಲು ಪ್ರಕಟಣೆ ಹೊರಡಿಸಲಾಗಿದೆ ಆಸಕ್ತ ರೈತರು ಈ ಕಾರ್ಯಕ್ರಮದ ಪ್ರಯೋಜನೆ ಪಡೆಯಲು ಈ ಅಂಕಣದಲ್ಲಿ ತಿಳಿಸಿರುವ ವಿವರವನ್ನು ಪಡೆದು ಸಸಿಗಳನ್ನು ಪಡೆದುಕೊಳ್ಳಬವುದು.
Cauvery calling- ಇಶಾ ಫೌಂಡೇಶನ್ ಕಾವೇರಿ ಕೂಗು ತಂಡದ ಪ್ರಕಟಣೆ ವಿವರ ಈ ಕೆಳಗಿನಂತಿದೆ:
ಸಮಸ್ತ ರೈತ ಬಾಂಧವರಿಗೆ ಉಪಯುಕ್ತ ಮಾಹಿತಿ ಇಶಾ ಫೌಂಡೇಶನ್ ಕಾವೇರಿ ಕೂಗು ತಂಡದ ವತಿಯಿಂದ ಈ ವರ್ಷ ಅರಣ್ಯ ಜಾತಿಯ ಸಸಿಗಳನ್ನ ರಿಯಾಯಿತಿ ದರದಲ್ಲಿ ಕೇವಲ 3 ರೂಪಾಯಿಗೆ ಒಂದು ಗಿಡವನ್ನು ವಿತರಣೆ ಮಾಡುತ್ತಿದ್ದು ಈ ಒಂದು ಅನುಕೂಲತೆಯನ್ನ ಸಮಸ್ತ ರೈತ ಬಾಂಧವರು ಪಡೆದುಕೊಳ್ಳಿಲು ವಿನಂತಿಸಿದೆ.
ಈ ಯೋಜನೆಯಡಿ ಸಸಿಗಳನ್ನು ಪಡೆಯಲು ರೈತರು ಯಾವುದೇ ದಾಖಲೆಗಳ ಒದಗಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: free tailoring machine-ಉಚಿತ ಹೊಲಿಗೆ ಯಂತ್ರ,ಕುಶಲಕರ್ಮಿಗಳು ಉಪಕರಣ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!
forest saplings- ಯಾವೆಲ್ಲ ಅರಣ್ಯ ಜಾತಿಯ ಸಸಿಗಳು ಲಭ್ಯ?
- ತೇಗ
- ಮಹಾಗಣಿ
- ರಕ್ತ ಚಂದನ
- ಶ್ರೀಗಂಧ
- ಶಿವನೇ (ಕೂಳಿ)
- ಬೀಟೆ
- ಹೊನ್ನೆ
- ಹೇಬ್ಬೆವು
- ಕರಿಮತ್ತಿ
- ಬೆಟ್ಟದ ನೆಲ್ಲಿ
- ಸೀತಾ ಫಲ
- ನಿಂಬೆ
ಸಸಿಗಳ ಬೆಲೆ:
ರೂ 3/-
ಇದನ್ನೂ ಓದಿ: Fruits ID: ಸರಕಾರದ ಎಲ್ಲಾ ಬಗ್ಗೆಯ ಬೆಳೆ ಪರಿಹಾರ ಪಡೆಯಲು ಈ ವೆಬ್ಸೈಟ್ ನಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರಿಸುವುದು ಕಡ್ಡಾಯ!
ಸಸಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:- 8925841283-(ಕಿರಣ್)
ಕೆಲವು ಅರಣ್ಯ ಮರಗಳ ಕುರಿತು ಮಾಹಿತಿ:
(1)ಹೊನ್ನೆ ಮರದ(Pterocarpus marsupium) ವಿಶೇಷತೆ:
- ಕಳಪೆ ಗುಣಮಟ್ಟದ ಮಣ್ಣಿನಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತದೆ
- ಬರ ಪರಿಸ್ಥಿತಿಗಳಿಗೆ ನಿರೋಧಕ
- ತೇಗದ ನಂತರ ಇದುವೇ ಅತ್ಯಂತ್ಯ ದುಬಾರಿ ಮರ
- ಬಲಿಷ್ಠವಾದ ಈ ಮರವು ತಿಳಿ ಕೆಂಪು ಬಣ್ಣವನ್ನು ಹೊಂದಿದ್ದು, ಇದರ ಹಾಲನ್ನು ಔಷಧಿಯಾಗಿ ಬಳಸಲಾಗುತ್ತದೆ
- ಚೆನ್ನಾಗಿ ಬರಿದಾದ ಮಣ್ಣಿನಲ್ಲಿ ತ್ವರಿತ ಬೆಳವಣಿಗೆ
- ಮರ ನೆಟ್ಟ 20 ವರ್ಷಗಳ ನಂತರ ಕೊಯ್ಲಿಗೆ ಸಿದ್ಧವಾಗುತ್ತದೆ.
(2)ತೇಗ (Tectona grandis)
- ಎಲ್ಲ ರೀತಿಯ ಮಣ್ಣಿನಲ್ಲಿಯೂ ಬೆಳೆಯಬಲ್ಲದು (ಜೇಡಿ ಮಣ್ಣು ಮತ್ತು ಲವಣಾಂಶ ಹೊಂದಿದ ಮಣ್ಣನ್ನು ಹೊರತು ಪಡಿಸಿ)
- ನೀರಿನಲ್ಲಿನ ಲವಣಾಂಶ 1000ppm ಗಿಂತಲೂ ಕಡಿಮೆಯಿದ್ದಲ್ಲಿ, ಈ ಮರದ ಬೆಳವಣಿಗೆ ತ್ವರಿತಗತಿಯಲ್ಲಿ ಆಗುತ್ತದೆ.
- ಮಾರಾಟದ ಅವಕಾಶ ಬಲುಸುಲಭ
- 12 ಅಡಿ ಅಂತರದಲ್ಲಿ ಮಹೋಗನಿ, ಹೊನ್ನೆ, ಅರಿಶಿನ ತೇಗ ಮರಗಳೊಂದಿಗೆ ಈ ಮರಗಳನ್ನು ಬೆಳೆಸಿದಲ್ಲಿ, ಕಟಾವಿಗೆ ಕಡಿಮೆ ಅವಧಿಯಲ್ಲಿ ಲಭ್ಯವಾಗುತ್ತವೆ.
(3)ಶಿವನೆ ಮರ (Gmelina arborea)
- ಉತ್ತಮ ಗುಣಮಟ್ಟದ ಮಣ್ಣು ಮತ್ತು ನೀರಾವರಿ ಸೌಲಭ್ಯವುಳ್ಳ ಜಾಗದಲ್ಲಿ ಮಾತ್ರ ಚೆನ್ನಾಗಿ ಬೆಳೆಯುತ್ತದೆ.
- ಕೇವಲ 7 ರಿಂದ 10 ವರ್ಷಗಳಲ್ಲಿ ಕಟಾವಿಗೆ ಲಭ್ಯ.
- ಇದರ ಬೇರುಗಳನ್ನು ಆಯುರ್ವೇದ ಔಷಧಗಳಲ್ಲಿ ಮತ್ತು ಕಾಂಡದ ಭಾಗವನ್ನು ಮರದ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.
ಇದನ್ನೂ ಓದಿ: Data entry operator Job: ಹೊಸದಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಡಾಟಾ ಎಂಟ್ರಿ ಆಪರೇಟರ್ ನೇಮಕಕ್ಕೆ ಆದೇಶ!