Required documents for ration card: ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಯಾವೆಲ್ಲ ದಾಖಲಾತಿ ಬೇಕಾಗುತ್ತದೆ?

required documents for ration card: ಪ್ರಸ್ತುತ ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ವಿಭಾಗವಾರು ಒಟ್ಟು 9 ದಿನ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಇದರಂತೆ ಗ್ರಾಹಕರು ನಿಮ್ಮ ಹತ್ತಿರದ ಗ್ರಾಮ್ ಒನ್ , ಕರ್ನಾಟಕ ಒನ್ ಕೇಂದ್ರಗಳನ್ನು ಭೇಟಿ ಮಾಡಿ ನಿಮ್ಮ ಪಡಿತರ ಚೀಟಿ(Ration card)ಯ ತಿದ್ದುಪಡಿ ಮತ್ತು ಕುಟುಂಬದ ಹೊಸ ಸದಸ್ಯರ ಸೇರ್ಪಡೆ ಮಾಡಬವುದು.

ರೇಷನ್ ಕಾರ್ಡ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಮತ್ತು ಆಹಾರ ಇಲಾಖೆಯಿಂದ ಪ್ರಸ್ತುತ ಯಾವೆಲ್ಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬವುದು ಎಂದು ಸಹ ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Ration card application: ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಈ ಜಿಲ್ಲೆಯವರಿಗೆ ಇನ್ನು 2 ದಿನ ಮಾತ್ರ ಅವಕಾಶ!

ಅರ್ಜಿ ಸ್ವೀಕರಿಸುವ ದಿನಾಂಕ:

ದಿನಾಂಕ: 05-10-2023 ರಿಂದ 13-10-2023 ರವರೆಗೆ

ಸಮಯ: 10 ಗಂಟೆಯಿಂದ 7 ಗಂಟೆಯವರೆಗೆ ಮಾತ್ರ

Required documents for ration card correction: ರೇಷನ್ ಕಾರ್ಡ ನಲ್ಲಿ ಯಾವೆಲ್ಲ ತಿದ್ದುಪಡಿ ಮಾಡಿಕೊಳ್ಳಬವುದು?

1) ಹೊಸ ಸದಸ್ಯರ ಹೆಸರು ಸೇರ್ಪಡೆ.

2) ಸದಸ್ಯರ ಹೆಸರು ತೆಗೆದುಹಾಕುವುದು.

3) ವಿಳಾಸ ಬದಲಾವಣೆ ಮಾಡುವುದು.

4) ಕುಟುಂಬ ಮುಖ್ಯಸ್ಥರ ಬದಲಾವಣೆ.

5) Ration Card Ekyc & Print.

ಇದನ್ನೂ ಓದಿ: Old age Pension: ಈ ಯೋಜನೆಯಡಿ ಪ್ರತಿ ತಿಂಗಳು 1200 ರೂ ವರೆಗೆ ಪಿಂಚಣಿ ಪಡೆಯಬವುದು!

Required documents for ration card new member add: ಹೊಸ ಸದಸ್ಯರ ಸೇರ್ಪಡೆಗೆ ಬೇಕಾಗುವ ದಾಖಲಾತಿಗಳೇನು?

1) 6 ವರ್ಷದ ಒಳಗಿನ ಮಗುವನ್ನು ಸೇರ್ಪಡೆ ಮಾಡಲು ಜನ್ಮ ದಾಖಲೆ(Birth certificate), ಆದಾರ್ ಕಾರ್ಡ್ ಪ್ರತಿ ಮತ್ತು ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು.

2) 6 ವರ್ಷದ ಮೇಲೆ ಇದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಆದಾರ ಕಾರ್ಡ್ ಪ್ರತಿ ಸಲ್ಲಿಸಬೇಕು.

ಇದನ್ನೂ ಓದಿ: ನಿಮಗೆ ಇನ್ನೂ ಗೃಹಲಕ್ಷ್ಮಿ ಮೊದಲನೇ ಕಂತಿನ ಹಣ ಬಂದಿಲ್ವಾ? ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

ರೇಷನ್ ಕಾರ್ಡ ಇ-ಕೆವೈಸಿಗೆ ಅವಕಾಶ:

ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಇದರಂತೆ ಇ-ಕೆವೈಸಿ ಮಾಡಿಕೊಳ್ಳದವರು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯನ್ನು ಇ-ಕೆವೈಸಿ ಅಗದ ಸದಸ್ಯರು ಖುದ್ದು ಭೇಟಿ ಮಾಡಿ ಬೆರಚ್ಚು ಕೊಟ್ಟು ಇ-ಕೆವೈಸಿ ಮಾಡಿಕೊಳ್ಳಬವುದು.

ಇ-ಕೆವೈಸಿ ಮಾಡಿಕೊಳ್ಳದವರಿಗಿಲ್ಲ ಆಹಾರ ದಾನ್ಯ ವಿತರಣೆ ಮತ್ತು ಗೃಹಲಕ್ಷ್ಮಿ ಹಣ:

ಒಂದೊಮ್ಮೆ ನಿಮ್ಮ ಪಡಿತರ ಚೀಟಿಯಲ್ಲಿರುವ ಸದಸ್ಯರ ಇ-ಕೆವೈಸಿ ತಪ್ಪಿ ಹೋಗಿದ್ದರೆ ಅಂತಹ ರೇಷನ್ ಕಾರ್ಡ ಗೆ ಪ್ರತಿ ತಿಂಗಳು ವಿತರಣೆ ಮಾಡುವ ಆಹಾರ  ದಾನ್ಯ/ಅಕ್ಕಿ ಸಿಗುವುದಿಲ್ಲ ಜೊತೆಗೆ ಗೃಹಲಕ್ಷ್ಮಿ ಹಣವು ಜಮಾ ಅಗುವುದಿಲ್ಲ ಎಂದು ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: LPG subsidy: ಅಡುಗೆ ಸಿಲಿಂಡರ್ ಸಬ್ಸಿಡಿ ಬಿಡುಗಡೆ! ಎಲ್‌ಪಿಜಿ ಸಬ್ಸಿಡಿ ಹೆಚ್ಚಿಸಿದ ಕೇಂದ್ರ ಸರಕಾರ.