Gruhalakshmi Yojana-2023: ಇನ್ನೂ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೇ? ಈ ಕುರಿತು ಇಲಾಖೆಯಿಂದ ಟಿಪ್ಪಣಿ ಬಿಡುಗಡೆ.

ರಾಜ್ಯ ಸರಕಾರದಿಂದ ಪ್ರಸ್ತುತ ಜಾರಿಯಲ್ಲಿರುವ Gruhalakshmi ಯೋಜನೆಯ ಹಣವು ಇನ್ನು ಅನೇಕ ಮಹಿಳೆಯರಿಗೆ ಜಮಾ ಅಗಿರುವುದಿಲ್ಲ ಈ ಕುರಿತು ಅಧಿಕೃತ ಕಾರಣಗಳ ಟಿಪ್ಪಣಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಬಿಡುಗಡೆಗೊಳಿಸಲಾಗಿದೆ. ಇದರ ವಿವರವನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಸಲುವಾಗಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/-ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯು ಮೈಸೂರಿನಲ್ಲಿ ಚಾಲನೆಗೊಂಡು ದಿನಾಂಕ: 30-08-2023 ರಿಂದ ಫಲಾನುಭವಿಗಳಿಗೆ ಹಣ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗಿದೆ. 

ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ  ಅರ್ಹ 1.08 ಕೋಟಿ ಫಲಾನುಭವಿಗಳಿಗೆ ರೂ. 2,169 ಕೋಟಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಿದೆ.

ಇದನ್ನೂ ಓದಿ: BPL ಮತ್ತು  APL​​​ ಕಾರ್ಡ್​ದಾರರಿಗೆ ಆಹಾರ ಇಲಾಖೆಯಿಂದ ಗುಡ್ ನ್ಯೂಸ್!  ಮಿಸ್ ಮಾಡ್ದೆ ಸುದ್ದಿ ನೋಡಿ.

Gruhalakshmi Yojana amount- ದಿನಾಂಕ: 04-10-2023 ರವರೆಗೆ 93.00 ಲಕ್ಷ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ರೂ.2,000/- ಧನಸಹಾಯವನ್ನು ಯಶಸ್ವಿಯಾಗಿ ವರ್ಗಾವಣೆ ಮಾಡಲಾಗಿದೆ. 

5.5 ಲಕ್ಷ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸಿ DBT ಮೂಲಕ ಹಣ ಪಾವತಿಸಲು ಕ್ರಮವಹಿಸಲಾಗುತ್ತಿದೆ. ಉಳಿದ 9.44 ಲಕ್ಷ ಫಲಾನುಭವಿಗಳ ವಿವರಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆ ಇದ್ದು ಈ ಕುರಿತು ಸಂಬಂಧಪಟ್ಟ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದ ಮಾಹಿತಿ ಈ ಕೆಳಕಂಡಂತಿದೆ.

Reason for delaying gruhalakshmi Yojana amount- 9.44 ಲಕ್ಷ ಫಲಾನುಭವಿಗಳಿಗೆ ಗೃಹ ಲಕ್ಷ್ಮಿ ಹಣ ಜಮಾ ಅಗದಿರಲು ಮುಖ್ಯ ಕಾರಣಗಳು:

ಕಾರಣ-1: ಇದರಲ್ಲಿ 3,082 ಅರ್ಜಿದಾರರು ಅನರ್ಹರಾದವರು- ಮರಣ ಹೊಂದಿದ ಫಲಾನುಭವಿಗಳು ಅಗಿರುತ್ತಾರೆ. 

ಕಾರಣ-2: ಆಧಾರ್ ಡೆಮೋ ದೃಢೀಕರಣ ವಿಫಲವಾಗಿರುವುದು:- 1,59,356 ಫಲಾನುಭವಿಯ ಆಧಾರ್ ಮತ್ತು ಬ್ಯಾಂಕ್ ಅಕೌಂಟ್ ನಲ್ಲಿರುವ ಹೆಸರಿನಲ್ಲಿ ವ್ಯತ್ಯಾಸವಿದ್ದು, ಇದನ್ನು  ಬ್ಯಾಂಕ್ ಮೂಲಕ ಸರಿಪಡಿಸಲಾಗುತ್ತಿದೆ. 

ಕಾರಣ-3: ಫಲಾನುಭವಿಯ ಬ್ಯಾಂಕ್ ಖಾತೆಯು ಆಧಾರ್‌ ನೊಂದಿಗೆ ಜೋಡಣೆಯಾಗದಿರುವುದು-  ಒಟ್ಟು 5,96,268 ಪೈಕಿ ಇದುವರೆಗೆ 2,17,536 ಫಲಾನುಭವಿಗಳ ಖಾತೆಯನ್ನು ಯಶಸ್ವಿಯಾಗಿ ಆಧಾರ್ ನೊಂದಿಗೆ ಜೋಡಿಸಲಾಗಿದೆ. ಉಳಿದ ಫಲಾನುಭವಿಗಳಿಗೂ ಸಹ CDPO ಮೂಲಕ ಮಾಹಿತಿ ನೀಡಿ ಆಧಾರ್ ಸೀಡ್/ಲಿಂಕ್‌ ಮಾಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಒಂದು ಭಾರಿಯು ಅನ್ನಭಾಗ್ಯ ಯೋಜನೆಯಡಿ ಹಣ ಜಮಾ ಅಗಿಲ್ಲವೇ? ಇಲ್ಲಿದೆ ಸೂಕ್ತ ಪರಿಹಾರ ಕ್ರಮಗಳು.

ಕಾರಣ-4: ಒಟ್ಟು 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸಕ್ಕೆ ಸಂಬಂಧಿಸಿದಂತೆ ವ್ಯತ್ಯಾಸ ಕಂಡುಬಂದಿರುತ್ತದೆ: ಇದಕ್ಕೆ ಪರಿಹಾರ ಕೈಗೊಳ್ಳಲು ಬ್ಯಾಂಕ್‌ಗಳ ಮೂಲಕ ಫಲಾನುಭವಿಗಳ eKYC  ಮಾಡಿಸಲು ಕ್ರಮವಹಿಸಲಾಗಿದೆ.

ಕಾರಣ-5: ಇಂದೀಕರಿಸಿದ ದತ್ತಾಂಶ- 9,766 ಅರ್ಜಿದಾರರ ವಿವರವನ್ನು  ಸೇವಾಸಿಂಧು ಪೋರ್ಟಲ್ ವತಿಯಿಂದ ಪುನರ್ ಪರಿಶೀಲಿಸಲಾಗುತ್ತಿದೆ.

Gruhalakshmi 2nd installment: ಗೃಹಲಕ್ಷ್ಮಿ 2ನೇ ಕಂತಿನ ಹಣ:

ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 1 ಕೋಟಿ 14 ಲಕ್ಷ ಫಲಾನುಭವಿಗಳಿಗೆ 2ನೇ ಕಂತಿನ ಹಣವನ್ನು ವರ್ಗಾಹಿಸಲು DBT ಗಾಗಿ ರೂ.2,280.00 ಕೋಟಿಗಳನ್ನು ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆಗೊಳಿಸಿ ಫಲಾನುಭವಿಗಳಿಗೆ ಪಾವತಿಸಲು ಕ್ರಮವಹಿಸಲಾಗಿದೆ ಎಂದು ಇಲಾಖೆಯ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ,

ಗೃಹಲಕ್ಷ್ಮಿ ಯೋಜನೆಯ ಕುರಿತು ಟಿಪ್ಫಣಿ ಪ್ರತಿ:

ಇದನ್ನೂ ಓದಿ: PM-kisan amount- ಈ ರೀತಿ  ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!