High interest FD scheme-2023: ಅಂಚೆ ಇಲಾಖೆಯಿಂದ ಅತೀ ಹೆಚ್ಚು ಬಡ್ಡಿ ನೀಡುವ ಠೇವಣಿ ಯೋಜನೆ ಜಾರಿ! ಇಲ್ಲಿದೆ ಸಂಪೂರ್ಣ ವಿವರ.

Facebook
Twitter
Telegram
WhatsApp

ಹಣ ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಗತ್ಯವಾಗಿ ಬೇಕಾಗುತ್ತದೆ. ನಾವು ಹಣ ಗಳಿಸುವುದರ ಜೊತೆಗೆ ಹಣವನ್ನು ಸರಿಯಾಗಿ ನಿರ್ವಹಣೆ ಮಾಡುವುದು ಅಷ್ಟೆ ಮುಖ್ಯ, ನಾವು ಪ್ರತಿ ತಿಂಗಳು ನಮ್ಮ ಬಳಿಯಿರುವ  20 % ಭಾಗದಷ್ಟು ಹಣವನ್ನು ಉಳಿತಾಯ(Money savings) ಮಾಡಲೇಬೇಕು, ಇಲ್ಲವಾದಲ್ಲಿ ದುಡುಮೆ ಮಾಡಿದೆಲ್ಲ ಖರ್ಚಾಗಿ ಕಷ್ಟ ಕಾಲದಲ್ಲಿ ಸಾಲ ಮಾಡಬೇಕಾಗುತ್ತದೆ.

ಅದರಲ್ಲೂ ಗ್ರಾಮೀಣ ಭಾಗದ ರೈತ ಕುಟುಂಬದ ಮಹಿಳೆಯರು ತಮ್ಮ ಬಳಿಯಿರುವ ಉಳಿತಾಯದ(savings) ಹಣವನ್ನು ಹೂಡಿಕೆ ಮಾಡಿ ಅದರಿಂದ ಆದಾಯ ಗಳಿಸುವುದು ಹೇಗೆ? ಅಂತಹ ಯೋಜನೆಯ(High interest FD schemes) ಕುರಿತು ಈ ಅಂಕಣದಲ್ಲಿ ವಿವರಿಸಲಾಗಿದೆ. ಹೌದು ಇದಕ್ಕೆ ಪೂರಕವಾಗಿ ಅಂಚೆ ಇಲಾಖೆಯಿಂದ ನೂತನ ಯೋಜನೆ ಒಂದನ್ನು ಜಾರಿಗೆ ತರಲಾಗಿದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ(Mahila Samman Savings certificate)  ಯೋಜನೆ, ಬ್ಯಾಂಕ್ ಎಫ್‌ಡಿಗಳಿಗಿಂತ(FD account) ಹೆಚ್ಚಿನ ದರದಲ್ಲಿ ಬಡ್ಡಿಯನ್ನು ಪಡೆಯಿರಿ. ಈ ಯೋಜನೆಯು ಎರಡು ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿರುತ್ತದೆ. ಈ ಉಳಿತಾಯ ಯೋಜನೆಯು 7.5% ಬಡ್ಡಿದರವನ್ನು ನೀಡುತ್ತದೆ. 

ಇದನ್ನೂ ಓದಿ: Ration card correction guidelines- ಪಡಿತರ ಚೀಟಿಯಲ್ಲಿ ತಿದ್ದುಪಡಿ ಮತ್ತು ಸೇರ್ಪಡೆಗೆ ಯಾವೆಲ್ಲ ನಿಯಮ ಪಾಲಿಸಬೇಕು ಎಂದು ಮಾರ್ಗಸೂಚಿ ಬಿಡುಗಡೆ!

ಈ ಬಡ್ಡಿಯನ್ನು(Interest rates) ಪ್ರತಿ ಮೂರು ತಿಂಗಳಿಗೊಮ್ಮೆ ಲೆಕ್ಕಾಚಾರ ಹಾಕಿ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯು ಜನಪ್ರಿಯ ಯೋಜನೆಗಳಾಗಿವೆ ಕಾರಣ ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿದೆ ಮತ್ತು ಇಲ್ಲಿ ಆದಾಯವನ್ನು ನಿಗದಿಪಡಿಸಲಾಗಿದೆ ಮತ್ತು ಖಾತರಿಪಡಿಸಲಾಗಿದೆ. ಈ ಯೋಜನೆಯು ಎಲ್ಲಾ ಬ್ಯಾಂಕುಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ 7.5%  ಬಡ್ಡಿ ದರ ನೀಡುತ್ತದೆ, SBI ಗರಿಷ್ಠ 7.25% ಬಡ್ಡಿಯನ್ನು ಮತ್ತು HDFC ಬ್ಯಾಂಕ್ , ICICI ಬ್ಯಾಂಕ್‌ಗಳಿಗೆ  7% ನೀಡುತ್ತಿವೆ.

ಯಾರು ಮಹಿಳಾ ಸಮ್ಮಾನ್(Mahila Samman Savings certificate) ಖಾತೆ ತೆರೆಯಬಹುದು?

ಭಾರತ ದೇಶದ ಪೌರತ್ವ ಹೊಂದಿರುವ ಯಾವುದೇ ಮಹಿಳೆಯು ಈ ಖಾತೆಯನ್ನು ತೆರೆಯಬಹುದಾಗಿದೆ. ಬಾಲಕಿಯರಿಗೆ ಅವರ ವಾರಸುದಾರರು (ತಂದೆ/ಗಾರ್ಡಿಯನ್) ಖಾತೆ ತೆರೆಯಬಹುದು.   

ಠೇವಣಿಯ ಮೇಲಿನ ಇತಿಮಿತಿಗಳು-FD schemes

ಈ ಯೋಜನೆಯಲ್ಲಿ ಒಮ್ಮೆ ಮಾತ್ರ ಠೇವಣಿ ಮಾಡಲು ಅವಕಾಶವಿದೆ. ಎಷ್ಟು ಠೇವಣಿ ಮಾಡಬೇಕು ಎಂಬುದನ್ನು ಮೊದಲೇ ಲೆಕ್ಕಾಚಾರ ಹಾಕಿ, ಅವರವರ ಅನುಕೂಲಕ್ಕೆ ತಕ್ಕಂತೆ ಇಲ್ಲಿ ಠೇವಣಿ ಮಾಡಬಹುದು. ಮಹಿಳಾ ಸಮ್ಮಾನ್ ಖಾತೆಯನ್ನು ತೆರೆದ ನಂತರ, ಅದರಲ್ಲಿ ಕನಿಷ್ಟ 1,000 ರೂ.ಗಳನ್ನು ಠೇವಣಿ ಮಾಡಲು ಅವಕಾಶವಿದೆ. ಗರಿಷ್ಠ 2 ಲಕ್ಷ ರೂ.ಗಳವರೆಗೆ ಠೇವಣಿ ಇಡಬಹುದು. ಈ ಯೋಜನೆಯ ಖಾತೆಯ 2 ವರ್ಷಗಳ ಅವಧಿಯ ನಂತರ ಮೆಚ್ಯೂರಿಟಿಯಾಗುತ್ತದೆ.

ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಖಾತೆ ತೆರಯುವುದು ಹೇಗೆ?

ಅಂಚೆ ಕಚೇರಿಯಲ್ಲಿ ಈ ಯೋಜನೆಯ ಖಾತೆ ತೆರೆಯಬಹುದು ಏಪ್ರಿಲ್ 1, 2023 ರಿಂದ ಅಂಚೆ ಇಲಾಖೆಯಲ್ಲಿ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಖಾತೆ ತೆರೆಯಲು ಅವಕಾಶವಿದೆ. ಭಾರತದ ಪ್ರತಿಯೊಬ್ಬ ಹೆಣ್ಣು ಮತ್ತು ಮಹಿಳೆಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಕಾರಣದಿಂದ ಈ ಯೋಜನೆಯನ್ನು ಆರಂಭ ಮಾಡಲಾಗಿದೆ. 

Indian Post office account- ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವ ಪ್ರಕ್ರಿಯೆ ಹೇಗಿರುತ್ತದೆ?

Step-1:: ಅಂಚೆ ಕಚೇರಿಗೆ ಭೇಟಿ ನೀಡಿ

Step-2: ಖಾತೆ ತೆರೆಯುವ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ

Step-3: ಕೆವೈಸಿ ಡಾಕ್ಯುಮೆಂಟ್ (ಆಧಾರ್ ಮತ್ತು ಪ್ಯಾನ್ ಕಾರ್ಡ್) ಸಲ್ಲಿಸಿ.

Step-4: ಹತ್ತಿರದ ಅಂಚೆ ಕಛೇರಿಯಲ್ಲಿ ಡೆಪಾಸಿಟ್ ಮೊತ್ತ/ ಚೆಕ್ ಜೊತೆಗೆ ದಾಖಲೆ ಸಲ್ಲಿಸಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಅಂಚೆ ಇಲಾಖೆ ವೆಬ್ಸೈಟ್: https://www.indiapost.gov.in
Post office Toll Free Enquiry Helpline: 18002666868 (9:00 AM – 6:00 PM)

ಕೃಷಿಕರಿಗೆ ಸಂಬಧಿಸಿದ ಇತರೆ ಅಂಕಣಗಳು:

ಇದನ್ನೂ ಓದಿ: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

ಇದನ್ನೂ ಓದಿ: Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!

Facebook
Twitter
Telegram
WhatsApp
Picture of siddesh

siddesh

Leave a Comment

Top Stories

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ

Crop insurance

Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು(Rabi Crop Insurance) ಮಾಡಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು? ಅರ್ಜಿ