Mahindra Oja tractor : ಮಹಿಂದ್ರಾ ಕಂಪನಿಯಿಂದ ಹೊಸ ‘ಓಜಾ’ ಮಾದರಿ ಟ್ರಾಕ್ಟರ್ ಬಿಡುಗಡೆ! ಈ ಟ್ರಾಕ್ಟರ್ ವಿಶೇಷತೆಗಳೇನು?

Facebook
Twitter
Telegram
WhatsApp

ಈಗ ಪ್ರತಿಯೊಬ್ಬ ರೈತರಿಗು ತಮ್ಮ ಕೃಷಿ ಚಟುವಟಿಕೆಯನ್ನು ಕೈಗೊಳ್ಳಲು ಅತ್ಯವಶ್ಯಕವಾಗಿ ಉಪಯೋಗಿಸುವ ಉಪಕರಣಗಳಲ್ಲಿ ಟ್ರ್ಯಾಕ್ಟರ್(new tractor) ಪ್ರಥಮ ಸ್ಥಾನದಲ್ಲಿ ಬರುತ್ತದೆ. ನಮ್ಮ ದೇಶದಲ್ಲಿ ಅನೇಕ ಕಂಪನಿಗಳು ವಿವಿಧ ಬಗ್ಗೆಯ ಟ್ರಾಕ್ಟರ್ ಉತ್ಪಾದನೆ ಮತ್ತು ಮಾರುಕಟ್ಟೆ ಮಾಡುತ್ತವೆ.

ಈ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಮಹಿಂದ್ರಾ ಕಂಪನಿಯು ಹೊಸ  ಮಾದರಿ(Mahindra Oja tractor ) ಟ್ರಾಕ್ಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ವಿನೂತ ಹೊಸ ಮಾದರಿ ಟ್ರಾಕ್ಟರ್ ಗಳಿಗೆ ‘ಓಜಾ’  ಎಂದು ಹೆಸರಿಡಲಾಗಿದೆ. ಏನಿದರ ವಿಶೇಷತೆ? ಸಧ್ಯ ಮಾರುಕಟ್ಟೆಯಲ್ಲಿ ಇರುವ ಟ್ರ್ಯಾಕ್ಟರ್ ಗಳಿಗೂ ಇದಕ್ಕೂ ಇರುವ ವ್ಯತ್ಯಾಸಗಳೇನು? ದರ ಇತ್ಯಾದಿ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Mahindra Oja tractor: ಮಹಿಂದ್ರಾ ‘ಓಜಾ’ ಮಾದರಿ ಟ್ರಾಕ್ಟರ್ 

ಅತ್ಯಾಧುನಿಕ ವಿಭಿನ್ನ ತಂತ್ರಜ್ಞಾನಗಳನ್ನು ಹೊಂದಿರುವ ಮಹೀಂದ್ರ OJA ಶ್ರೇಣಿಯು ಕಡಿಮೆ ತೂಕ ಹಾಗೂ ಅಧಿಕ ಕಾರ್ಯಕ್ಷಮತೆಯ 4WD ಟ್ರ್ಯಾಕ್ಟರ್ ಆಗಿದೆ ಎಂದು ತಿಳಿಸಲಾಗಿದ್ದು, 20-40 HP ವರೆಗೆ ಒಟ್ಟು 7 ಮಾದರಿಯಲ್ಲಿ ಓಜಾ ಟ್ರಾಕ್ಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.

3 ತಂತ್ರಜ್ಞಾನದ ಶೇಣಿಯಲ್ಲಿ ಮಾದರಿಗಳನ್ನು ವಿಂಗಡಿಸಲಾಗಿದೆ MYOJA (Intelligence Pack), PROJA (Productivity Pack) and ROBOJA (Automation Pack) ಎಂದು ಪುಣೆ ಮಾರುಕಟ್ಟೆಯಲ್ಲಿ ಇವುಗಳ ದರ INR 5,64,500 ರಿಂದ ಪ್ರಾರಂಭವಾಗಿ Rs. 7,35,000 ರವರೆಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Nrega Yojana Shed: ಜಾನುವಾರು ಶೆಡ್ ನಿರ್ಮಾಣಕ್ಕೆ ರೂ. 57,000 ಸಹಾಯಧನ ಪಡೆಯುವುದು ಹೇಗೆ?

ಈ ಟ್ರಾಕ್ಟರ್ ವಿಶೇಷತೆಗಳೇನು?

ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಆಟೊಮೇಷನ್ ಗೆ ಹೆಚ್ಚು ಒತ್ತು ಕೊಡಲಾಗಿದೆ. ಈ ಟ್ರಾಕ್ಟರ್ ನಲ್ಲಿ ಕಾರ್ ಮಾದರಿಯ ಕೀ ಮತ್ತು ಸಿಂಪರಣೆ ಮಾಡುವಾಗ ಒಂದು ಸಾಲು ಬಿಟ್ಟು ಮತ್ತೊಂದು ಸಾಲಿಗೆ ತಿರುಗುವ ಸಮಯದಲ್ಲಿ ಔಷದಿಯು ತಾನಗಿಯೇ ನಿಂತು ಬಿಡುತ್ತದೆ. ಕಡಿಮೆ ತೂಕ ಹೊಂದಿದ್ದು , ಹೆಚ್ಚು ಕಾರ್ಯಕ್ಷಮತೆಯಿಂದ ಕಾರ್ಯ ನಿರ್ವಹಿಸುವ ದಕ್ಷತೆಯನ್ನು ಹೊಂದಿವೆ.

ಈ ಟ್ರ್ಯಾಕ್ಟರ್‌ ನಾಲ್ಕೂ ಚಕ್ರಗಳಿಗೆ ಶಕ್ತಿ ನೀಡುವ ಸಾಮರ್ಥ್ಯ(4WD) ಹೊಂದಿದೆ. ಅಧಿಕ ಶಕ್ತಿ, ಯಾವುದೇ ಬಗೆಯ ನೆಲದ ಮೇಲೂ ನಿಯಂತ್ರಣ ಸಾಧಿಸುವ ಟ್ರ್ಯಾಕ್ಷನ್, ಇಂಧನ ಕ್ಷಮತೆಯ ಜತೆಗೂ ಅಧಿಕ ಶಕ್ತಿ ಉತ್ಪಾದಿಸುವ ಅತ್ಯಾಧುನಿಕ ಎಂಜಿನ್, ಚಾಲಕನ ಹಿತಕ್ಕೆ ಅನುಗುಣವಾಗುವಂತೆ ಟಿಲ್ಟ್ ಸೌಲಭ್ಯವಿರುವ ಟೆಲಿಸ್ಕೋಪಿಕ್ ಸ್ಟಿಯರಿಂಗ್, ಕಡಿಮೆ ನಿರ್ವಹಣಾ ವೆಚ್ಚ ಇದು ಹೊಂದಿದೆ’ ಎಂದು ತಿಳಿಸಲಾಗಿದೆ.

MAHINDRA OJA models- ಮಾರುಕಟ್ಟೆಗೆ ಒಟ್ಟು 7 ಮಾದರಿ ಓಜಾ ಟ್ರಾಕ್ಟರ್ ಬಿಡುಗಡೆ:

MAHINDRA OJA 2121 – 15.7 kW (21 HP)
MAHINDRA OJA 2124 – 18.1 kW (24 HP)
MAHINDRA OJA 2127 – 20.5 kW (27 HP)
MAHINDRA OJA 2130 – 22.4 kW (30 HP)
MAHINDRA OJA 3132 – 26.8 kW (36 HP)
MAHINDRA OJA 3140 – 29.5 kW (40 HP)

‘ಓಜಾ’ ವಿವಿಧ ಮಾದರಿವಾರು ಟ್ರಾಕ್ಟರ್ ಪೋಟೋ ಸಹಿಸ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ಟ್ರಾಕ್ಟರ್ ಕುರಿತು ಇನ್ನು ಹೆಚ್ಚಿನ ಅಧಿಕೃತ  ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಕೃಷಿ ಯಂತ್ರೋಪಕರಣಗಳ ಕುರಿತು ನಮ್ಮ ಇತರೆ ಅಂಕಣಗಳು:

ಇದನ್ನೂ ಓದಿ: Tractor Juction: ಕಡಿಮೆ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಸೇರಿದಂತೆ ಎಲ್ಲಾ ಕೃಷಿ ಉಪಕರಣಗಳು ಇಲ್ಲಿ ಲಭ್ಯ.

ಇದನ್ನೂ ಓದಿ: ಭಾರತದಲ್ಲಿ ಹೆಚ್ಚು ಬಳಕೆ ಮಾಡುವ 4WD ಟಾಪ್ 10 ಟ್ರ್ಯಾಕ್ಟರಗಳು!

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Bele parihara

Bele parihara- ಮಳೆಯಿಂದ ಜಮೀನಿನ ಬೆಳೆ ಹಾನಿಯಾಗಿದ್ದರೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ರಾಜ್ಯದಲ್ಲಿ ಕಳೆದ 2 ವಾರದಿಂದ ಬಿಟ್ಟು ಬಿಡದೇ ನಿರಂತರವಾಗಿ ಮಳೆ ಬರುತ್ತಿರುವ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಅತೀಯಾದ ಮಳೆಯಿಂದ ಬೆಳೆ ನಾಶವಾಗಿದ್ದು(Bele parihara) ಅಂತಹ ರೈತರು ಬೆಳೆ ಹಾನಿಯ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದು.

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ