Electricity bill download: ಪ್ರತಿ ತಿಂಗಳ ಕರೆಂಟ್ ಬಿಲ್ ಅನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು! ಇಲ್ಲಿದೆ ವೆಬ್ಸೈಟ್ ಲಿಂಕ್.

ಮನೆಯ ವಿದ್ಯುತ್ ಬಳಕೆ ಮಾಡುವ ಗ್ರಾಹಕರು ತಮ್ಮ ಪ್ರತಿ ತಿಂಗಳ ವಿದ್ಯುತ್ ಬಿಲ್ ಅನ್ನು ಮೊಬೈಲ್ ನಲ್ಲಿ ಹೇಗೆ ಡೌನ್ಲೋಡ್(Electricity bill copy download) ಮಾಡಿಕೊಳ್ಳಬವುದು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

ಗ್ರಾಹಕರು ತಮ್ಮ ಎಸ್ಕಾಂ ವಿಭಾಗದ ಅಧಿಕೃತ ಜಾಲತಾಣ ಭೇಟಿ ಮಾಡಿ ಪ್ರತಿ ತಿಂಗಳ ಕೊನೆಯ ವಾರದಲ್ಲಿ ಆ ತಿಂಗಳ ಕರೆಂಟ್ ಬಿಲ್ ನ ಪಿಡಿಎಫ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬವುದಾಗಿದೆ.

ಈ ಪಿಡಿಎಫ್ ಕರೆಂಟ್ ಬಿಲ್ ಪ್ರತಿ ತಿಂಗಳು ನಿಮ್ಮ ಮನೆಗೆ ಮೀಟರ್ ರೀಡಿಂಗ್ ಮಾಡಿದಾಗ ನಂತರ ನೀಡುವ ಪ್ರತಿ ಹೇಗೆ ಇರುತ್ತದೆಯೋ ಆ ರೀತಿಯೇ ಇರುತ್ತದೆ ಯಾವುದೇ ವ್ಯತ್ಯಾಸವಿರುವುದಿಲ್ಲ, ಒಂದೊಮ್ಮೆ ನಿಮಗೆ ನೀಡಿದ ಕರೆಂಟ್ ಬಿಲ್ ಕಳೆದುಹೋದರೆ ಈ ಕೆಳಗೆ ನೀಡಿರುವ ವೆಬ್ಸೈಟ್ ಭೇಟಿ ಮಾಡಿ ಪಿಡಿಎಫ್ ಕರೆಂಟ್ ಬಿಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬವುದು.

ಇದನ್ನೂ ಓದಿ: Gruhalakshmi 1st instalment: ಆಗಸ್ಟ್ 27 ರಂದು “ಗೃಹಲಕ್ಷ್ಮೀ” ಯೋಜನೆಯ ಮೊದಲ ಕಂತಿನ ಹಣ ವರ್ಗಾವಣೆ! ಪಟ್ಟಿಯಲ್ಲಿ ನಿಮ್ಮ ಹೆಸರಿದಿಯೇ ಚೆಕ್ ಮಾಡಿ.

Electricity bill copy download: ನಿಮ್ಮ ಮೊಬೈಲ್ ನಲ್ಲಿ ಕರೆಂಟ್ ಬಿಲ್ ಅನ್ನು  ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:

Step-1: ಪ್ರಥಮ ಹಂತದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://onlineservices.bescom.org/ (ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯವರಿಗೆ ಮಾತ್ರ) ಗ್ರಾಹಕರು  “Register” ಬಟನ್ ಮೇಲೆ ಒತ್ತಿ ನಿಮ್ಮ ಮನೆಯ ಕರೆಂಟ್ ಬಿಲ್ ಅಕೌಂಟ್ ಐಡಿ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಹಾಕಿ user name ಮತ್ತು password ರಚನೆ ಮಾಡಿಕೊಂಡು ಈ ವೆಬ್ಸೈಟ್ ಗೆ ಬಳಕೆದಾರರಾಗಬೇಕು.

Step-2: ನಂತರ “Login” ಆಯ್ಕೆ ವಿಭಾಗದಲ್ಲಿ ನೀವು ರಚನೆ ಮಾಡಿಕೊಂಡಿರುವ user name ಮತ್ತು password ಹಾಕಿ “Customer” ಆಯ್ಕೆಯ ಮೇಲೆ ಟಿಕ್ ಮಾಡಿ “Login”  ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ನಿಮ್ಮ ವಿದ್ಯುತ್ ಬಿಲ್ ಸಂಬಂಧಿತ ವಿವರಗಳ ಪುಟ ತೆರೆದುಕೊಳ್ಳುತ್ತದೆ, ಇಲ್ಲಿ “My Account” ಆಯ್ಕೆಯ ಮೇಲೆ ಒತ್ತಿ ನಂತರ “View Bill” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಹೀಗೆ “View Bill” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ವಿದ್ಯುತ್ ಬಿಲ್ ನ ವಿವರ ಗೋಚರಿಸುತ್ತದೆ, ಇಲ್ಲಿ “Show as PDF” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿದ್ಯುತ್ ಬಿಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬವುದಾಗಿದೆ. (ಗಮನಿಸಿ: ನಿಮ್ಮ ಮನೆಯ ಪ್ರತಿ ತಿಂಗಳ ಮೀಟರ್ ರೀಡಿಂಗ್ ಅದ ಬಳಿಕವಷ್ಟೇ ಇಲ್ಲಿ ವಿದ್ಯುತ್ ಬಿಲ್ ವಿವರ ತೋರಿಸುತ್ತದೆ).

ಮೇಲೆ ವಿವರಿಸಿರುವ ಮಾಹಿತಿಯು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(Bescom) ವಿಭಾಗದ ವ್ಯಾಪ್ತಿಯ ಜಿಲ್ಲೆಯ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ, ಬೇರೆಯ ಎಸ್ಕಾಂ ಭಾಗದ ಗ್ರಾಹಕರು ನಿಮ್ಮ ನಿಮ ಭಾಗದ ಎಸ್ಕಾಂ ನ ಅಧಿಕೃತ ವೆಬ್ಸೈಟ್ ಗಳ ಲಿಂಕ್ ಅನ್ನು ಈ ಕೆಳಗೆ ತಿಳಿಸಲಾಗಿದ್ದು ಇವುಗಳ ಮೇಲೆ ಕ್ಲಿಕ್ ಮಾಡಿ ನಿಮ್ಮ ಮನೆಯ ವಿದ್ಯುತ್ ಬಿಲ್ ನ ವಿವರವನ್ನು ಪಡೆದುಕೊಳ್ಳಬವುದು.

ಇದನ್ನೂ ಓದಿ: Electric bill Details: ಒಂದು ವರ್ಷದಲ್ಲಿ ನಿಮ್ಮ ಮನೆಯ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ಹೇಗೆ ತಿಳಿಯಬವುದು? ಇಲ್ಲಿದೆ ವೆಬ್ಸೈಟ್ ಲಿಂಕ್

ಹೆಸ್ಕಾಂ(Hescom): https://www.hescom.co.in/SCP/Myhome.aspx 

ಮೆಸ್ಕಾಂ(mescom): https://mescom.karnataka.gov.in/info-3/Online+Payment+System/en

ಜೆಸ್ಕಾಂ(Gescom): https://gescom.karnataka.gov.in/info-3/Online+Payments/kn