ನಮ್ಮ ರಾಜ್ಯದಲ್ಲಿ ವಿವಿಧ ಎಸ್ಕಾಂಗಳಿಂದ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಪೂರೈಸಲಾಗುತ್ತದೆ ಅದರೆ ಗ್ರಾಮೀಣ ಭಾಗದ ಅನೇಕ ಮನೆಗಳಲ್ಲಿ ವಿದ್ಯುತ್ ಬಿಲ್ ನ ಸಧ್ಯ ವಾಸವಿರುವವರ ಹೆಸರಿನಲ್ಲಿ(Electric bill name change) ಇರುವುದಿಲ್ಲ ಅಂತವರು ಹೇಗೆ ತಮ್ಮ ಮೊಬೈಲ್ ಮೂಲಕ ವಿದ್ಯುತ್ ಬಿಲ್ ನಲ್ಲಿ ತಮ್ಮ ಹೆಸರನ್ನು ಸೇರ್ಪಡಿಸಲು ಅರ್ಜಿ ಸಲ್ಲಿಸಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ಗ್ರಾಹಕರು ತಮ್ಮ ಕರೆಂಟ್ ಬಿಲ್ ನಲ್ಲಿ ಹೆಸರು ಬದಲಾಯಿಸಲು ಎಸ್ಕಾಂ ಕಚೇರಿಗಳಿಗೆ ಅಲೆದಾಡದೆ ಮನೆಯಲ್ಲೆ ಕುಳಿತು ಒಂದಿಷ್ಟು ಮಾಹಿತಿಯನ್ನು ಭರ್ತಿ ಮಾಡಿ ಮೊಬೈಲ್ ಮೊಲಕವೇ ಅರ್ಜಿ ಸಲ್ಲಿಸಬವುದಾಗಿದೆ. ಈ ಕುರಿತು ಯಾವೆಲ್ಲ ವಿಧಾನಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ.
ವಿದ್ಯುತ್/ಕರೆಂಟ್ ಬಿಲ್ ನಲ್ಲಿ ಹೆಸರು ಬದಲಾವಣೆ ಮಾಡಲು ಎಸ್ಕಾಂ ವಾರು(Bescom/Hescom/Mescom ect) ವೆಬ್ಸೈಟ್ ಲಿಂಕ್ ಗಳಿದ್ದು ಗ್ರಾಹಕರು ತಮ್ಮ ಜಿಲ್ಲೆಯು ಯಾವ ಎಸ್ಕಾಂ ವಿಭಾಗದಲ್ಲಿ ಬರುತ್ತದೆಯೋ ಆ ಎಸ್ಕಾಂ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.
Electric bill name change application- ವಿದ್ಯುತ್ ಬಿಲ್ ಹೆಸರು ಬದಲಾಯಿಸಲು ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
Step-1: ಬೆಸ್ಕಾಂನ ಅನ್ಲೈನ್ ಪೋರ್ಟಲ್ ಗೆ ಈ ಹಿಂದೆ ನೋಂದಣಿ ಮಾಡಿಕೊಳ್ಳದವರು ಪ್ರಥಮ ಭಾರಿಗೆ ಈ ವೆಬ್ಸೈಟ್ ಭೇಟಿ ಮಾಡುವ ಗ್ರಾಹಕರು ಮೊದಲಿಗೆ ಈ https://onlineservices.bescom.org/ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ.
Step-2: ಮುಖಪುಟದ ಎಡಬದಿಯಲ್ಲಿ ಕಾಣುವ “Register” ಬಟಲ್ ಮೇಲೆ ಕ್ಲಿಕ್ ಮಾಡಿ Connection ID, Date pf birth, email id, , mobile number ,password ಸೃಜನೆ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಈ ಪುಟದ ಎಲ್ಲಾ ಕಾಲಂ ವಿವರ ಭರ್ತಿ ಮಾಡಿದ ನಂತರ ಕೊನೆಯಲ್ಲಿ ತೋರಿಸುವ “save” ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ “Registered Successfully” ಎಂದು ತೋರಿಸುತ್ತದೆ.
ವಿಶೇಷ ಸೂಚನೆ: ನೀವು ನಮೂದಿಸುವ user name ಮತ್ತು password ಅನ್ನು ತಪ್ಪದೇ ನಿಮ್ಮ ಬಳಿ ಬರೆದಿಟ್ಟುಕೊಳ್ಳಿ.
Step-3: ನಂತರ ಮುಖಪುಟದಲ್ಲಿ ಗೋಚರಿಸುವ login ಬಟನ್ ಮೇಲೆ ಒತ್ತಿ ನೀವು ಸೃಜನೆ ಮಾಡಿಕೊಂಡಿರುವ user name ಮತ್ತು password ಅನ್ನು ನಮೂದಿಸಿ ಅದರ ಮೇಲೆ ಕಾಣುವ Cuctomer/becom officer ಎರಡು ಆಯ್ಕೆಯಲ್ಲಿ “Cuctomer” ಎಂದು ಆಯ್ಕೆ ಮಾಡಿಕೊಂಡು “LOGIN” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4: LOGIN ಅದ ಬಳಿಕ ನಿಮ್ಮ ಗ್ರಾಹಕರ ಐಡಿಯ ವಿದ್ಯುತ್ ಬಿಲ್ ನ ವಿವರದ ಪುಟ ತೆರೆದುಕೊಳ್ಳುತ್ತದೆ ಇಲ್ಲಿ “MY Services” ಅಪ್ಶನ್ ಮೇಲೆ ಕ್ಲಿಕ್ ಮಾಡಿ “Name chame” ಬಟಲ್ ಮೇಲೆ ಕ್ಲಿಕ್ ಮಾಡಿದರೆ ಹೆಸರು ಬದಲಾವಣೆ ಅರ್ಜಿ ಪುಟ ತೆರೆದುಕೊಳ್ಳುತ್ತದೆ ಇಲ್ಲಿ ನಿಮ್ಮ Account ID, ಈಗ ವಿದ್ಯುತ್ ಬಿಲ್ ಯಾರ ಹೆಸರಿನಲ್ಲಿದಿಯೋ ಅವರ ಹೆಸರು ಗೋಚರಿಸುತ್ತದೆ ನಂತರ ನೀವು ಈ ಬದಲಾಯಿಸಲು ಇಚ್ಚೆಪಡುವ ಅರ್ಜಿದಾರನ ಹೆಸರು, ಹುಟ್ಟಿದ ದಿನಾಂಕ, ಸಂಬಧದ ವಿವರ,ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಭರ್ತಿ ಮಾಡಿ “I accept” ಮೇಲೆ ಟಿಕ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-5: ಇದಾದ ನಂತರ ಕೊನೆಯಲ್ಲಿ ಈ ಪುಟದಲ್ಲಿ Identity proof(Photocopy of PAN Card/Driving Licence /Passport/Aadhar Card /Voter ID(Only PDF Allowed)) ಮತ್ತು Proof of ownership ದಾಖಲೆಯ ಪಿಡಿಎಪ್ ಅನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಕಾಣುವ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.
Electric bill name change application Status check- ವಿದ್ಯುತ್ ಬಿಲ್ ಹೆಸರು ಬದಲಾವಣೆ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ:
ಇದೇ ಪುಟದಲ್ಲಿ ಕೆಳಗೆ ಗೋಚರಿಸುವ “Track Fast Track Services”(https://onlineservices.bescom.org/TrackFastTrackServiceRequests.aspx) ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Name change” ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು ಸಲ್ಲಿಸಿದ ವಿದ್ಯುತ್ ಬಿಲ್ ಹೆಸರು ಬದಲಾವಣೆ ಅರ್ಜಿಯ ಸ್ಥಿತಿ ಗೋಚರಿಸುತ್ತದೆ.
ಮೇಲೆ ತಿಳಿಸಿರುವ ಮಾಹಿತಿಯು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(Bescom) ಜಿಲ್ಲೆಯ ವ್ಯಾಪ್ತಿ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ ಇತರೆ ಎಸ್ಕಾಂ ವ್ಯಾಪ್ತಿಯ ಗ್ರಾಹಕರು ತಮ್ಮ ತಮ್ಮ ವ್ಯಾಪ್ತಿಯ ಎಸ್ಕಾಂ ನ ಅಧಿಕೃತ ವೆಬ್ಸೈಟ್ ಗಳ ಲಿಂಕ್ ಅನ್ನು ಈ ಕೆಳಗೆ ಹಾಕಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿ ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ನಿಮ್ಮ ಮನೆಯ ವಿದ್ಯುತ್ ಬಿಲ್ ನಲ್ಲಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಬವುದು.
ಮೆಸ್ಕಾಂ(mescom): https://mescom.karnataka.gov.in/info-3/Online+Payment+System/en
ಹೆಸ್ಕಾಂ(Hescom): https://www.hescom.co.in/SCP/Myhome.aspx
ಜೆಸ್ಕಾಂ(Gescom): https://gescom.karnataka.gov.in/info-3/Online+Payments/kn