ಜಿಲ್ಲಾಧಿಕಾರಿಗಳ ಕಾರ್ಯಾಲಯ ಕಲಬುರಗಿ ಕಚೇರಿಯಿಂದ ಆಧಾರ್ ಕಾರ್ಡ(Aadhar card update) ಹೊಂದಿರುವ ನಾಗರೀಕರಿಗೆ ಒಂದು ಪ್ರಮುಖ ಸೂಚನೆಯನ್ನು ಪ್ರಕಟಿಸಿದೆ ಇದು ರಾಜ್ಯದ ಎಲ್ಲಾ ಭಾಗದ ಜನರಿಗೂ ಅನ್ವಯವಾಗುತ್ತದೆ ಪ್ರಕಟಣೆ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪತ್ರಿಕಾ ಪ್ರಕಟಣೆ ವಿವರ ಈ ರೀತಿ ಇದೆ ಆಧಾರ್ ಕಾರ್ಡ ಹೊಂದಿ ಹತ್ತು(10) ವರ್ಷ ಅಗಿರುವವರು ತಾವು ನೋದಣಿ ಮಾಡಿಕೊಂಡಿರುವ ಸಮಯದಲ್ಲಿ ನಮೂದಿಸಿರುವ ವಿಳಾಸ ಮತ್ತು ತಮ್ಮ ಗುರುತಿನ ವಿವರವನ್ನು ತಪ್ಪದೇ ನವೀಕರಿಸಲು ಸೂಚಿಸಲಾಗಿದೆ, ಈ ಕೆಲಸ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರಕಾರಿ ಯೋಜನೆಗಳಡಿ ಸೌಲಭ್ಯ ಪಡೆಯಲು ಅಗುವುದಿಲ್ಲ ಅದರಿಂದ ಇದನ್ನು ನಿರ್ಲಕ್ಷ ಮಾಡದಿರಿ.
ರಾಜ್ಯದಲ್ಲಿ ಆಧಾರ್ ಕಾರ್ಡ ಹೊಂದಿ 10 ವರ್ಷ ಮೇಲ್ಪಟ್ಟ ನಾಗರೀಕರು ಆಧಾರ್ ನೋದಣಿ ಸಮಯದಲ್ಲಿ ನಮೂದಿಸಿದ ವಿಳಾಸದಲ್ಲಿ ಈಗಲೂ ಇದ್ದರೂ ಸಹಿತ ಅಂತಹ ಆಧಾರ ಕಾರ್ಡಗಳು ನಿಷ್ಕ್ರಿಯವಾಗುತ್ತಿರುವುದರಿಂದ 11 ವರ್ಷ ಮೇಲ್ಪಟ್ಟ ಆಧಾರ್ ಕಾರ್ಡ ಹೊಂದಿದವರು
ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ ನವೀಕರಿಸದೇ ಇರುವವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ (Proof of Ilitity ) ಮತ್ತು ವಿಳಾಸದ ದಾಖಲೆಗಳೊಂದಿಗೆ (Proof of Address) ಹತ್ತಿರದ ಆಧಾರ ನೋಂದಣಿ ಕೇಂದ್ರದಲ್ಲಿ ಆಧಾರ್ ಪ್ರಾಧಿಕಾರ(UIDAI) ರವರು ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣ/ಕಾಲೋಚಿತಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಅದೇ ರೀತಿ 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ಮತ್ತು ಮೋಬೈಲ್ ನಂಬರ್ ಅನ್ನು
ನವೀಕರಣಗೊಳಿಸಬೇಕಾಗಿರುತ್ತದೆ.
ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವುದರಿಂದ ನಾಗರೀಕರು ಪ್ರತಿ 10 ವರ್ಷಕ್ಕೊಮ್ಮೆ Bio-Metric ನವೀಕರಣ ಮಾಡಿಸಿಕೊಳ್ಳಲು ಕೋರಿದೆ.
ಇದನ್ನೂ ಓದಿ: Crop loan details- ನಿಮ್ಮ ಮೊಬೈಲ್ ನಲ್ಲೇ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಬವುದು.
ಆಧಾರ್ ಸೇವಾ ಶುಲ್ಕ ವಿವರ ಈ ಕೆಳಗಿನಂತಿರುತ್ತದೆ:
ಹೊಸ ನೋಂದಣಿಯು ಉಚಿತವಾಗಿರುತ್ತದೆ.
5 ವರ್ಷ ಮೇಲ್ಪಟ್ಟು 1 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೆಟ್ರಿಕ್ ನವೀಕರಣವು ಉಚಿತವಾಗಿರುತ್ತದೆ.
ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗೂ ಮೊಟೇಲ್ ನಂಬರಗಳ ವಿವರಗಳ (Demographic) ನವೀಕರಣಕ್ಕೆ 50 ರೂ ಶುಲ್ಕ ಇರುತ್ತದೆ.
ಕಣ್ಣು, ಮುಖ, ಕೈ ಬೆರಳುಗಳ ವಿವರಗಳ (Bio-Metric) ನವೀಕರಣಕ್ಕೆ 100 ರೂ ಶುಲ್ಕ ಇರುತ್ತದೆ.
ಆಧಾರ್ ನೋಂದಣಿ ಮಾಡಿಸಿದ ನಂತರ ಸ್ವೀಕೃತಿಯಲ್ಲಿ ನಮೂದಿಸಿರುವ ಶುಲ್ಕವನ್ನು ಮಾತ್ರ ಪಾವತಿಸಬೇಕು ಹಾಗೂ ಪೂರ್ಣ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಬೇಕು.
ಆದ್ದರಿಂದ ರಾಜ್ಯದ ನಾಗರೀಕರು ಆಧಾರ್ ಹೊಸ ನೋಂದಣಿ ಹಾಗೂ ನವೀಕರಣಗಳ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.
Adhar card Update link- ನಿಮ್ಮ ಮೊಬೈಲ್ ನಲ್ಲೇ ಮಾಡಬವುದು ಆಧಾರ್ ನವೀಕರಣ:
ಈ https://www.krushikamitra.com/111 ಲಿಂಕ್ ಮೇಲೆ ಕ್ಲಿಕ್ ಮಾಡಿ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲೇ ಹೇಗೆ ಆಧಾರ್ ಕಾರ್ಡ ನವೀಕರಣ(Aadhar update) ಮಾಡಬವುದು ಎಂದು ತಿಳಿಯಿರಿ.
ಇದನ್ನೂ ಓದಿ: ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ, ಮತ್ತು ಬೆಳೆ ಪರಿಹಾರದ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.