ರಾಜ್ಯ ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕ ವೃದ್ಧರು, ವಿಧವೆಯರು ಮತ್ತು ಅಂಗವಿಕಲರು ಹಾಗೂ ಅವಿವಾಹಿತ ಮಹಿಳೆಯರಿಗೆ ಅರ್ಥಿಕವಾಗಿ ಸಹಾಯ ನೀಡುವ ಉದ್ದೇಶದಿಂದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನು(Pension Schemes) ಜಾರಿಗೆ ತರಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ಎಲ್ಲಾ ಪಿಂಚಣಿ ಯೋಜನೆಗಳ ಅನುಷ್ಥಾನವನ್ನು ಕಂದಾಯ ಇಲಾಖೆ ಅಡಿಯಲ್ಲಿರುವ ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯವು ಈ ಪಿಂಚಣಿ ಯೋಜನೆಗಳನ್ನು ನಿರ್ವಹಿಸುತ್ತದೆ. ಈ ಅಂಕಣದಲ್ಲಿ ಮೊಬೈಲ್ ನಲ್ಲೇ ಹಳ್ಳಿವಾರು ಪಿಂಚಣಿದಾರರ ಅರ್ಹ ಫಲಾನುಭವಿಗಳ ಪಟ್ಟಿಯನ್ನು(Pension Beneficiary list) ಹೇಗೆ ಪಡೆಯಬವುದು ಮತ್ತು ಹೊಸದಾಗಿ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
Karnataka Pension Schemes- ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳು:
ಯೋಜನೆ | ವಯಸ್ಸಿನ ಮಿತಿ | ತಿಂಗಳಿಗೆ ಪಿಂಚಣಿ ಮೊತ್ತ | ಒಟ್ಟು ಫಲಾನುಭವಿಗಳು |
ರಾಷ್ರಿಯ ಇಂದಿರ ಗಾಂಧಿ ವೃದ್ಯಾಪ ಪಿಂಚಣಿ | 60-64ವರ್ಷದ ಒಳಗೆ | Rs. 600 | 1867663 |
65ವರ್ಷಮೇಲ್ಪಟ್ಟವರು | Rs. 1200 | ||
80ವರ್ಷಮೇಲ್ಪಟ್ಟವರು | Rs. 1200 | ||
ಅಂಗವಿಕಲರ ಪಿಂಚಣಿ | 40 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆ. | Rs. 800 | 923449 |
75 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ . | Rs. 1400 | ||
75 ರಷ್ಟು ಹಾಗೂ ಅದಕ್ಕಿಂತ ಹೆಚ್ಚಿನ ಮನೋವೈಕಲ್ಯತೆಯುಳ್ಳ ವ್ಯಕ್ತಿಗಳು. | Rs. 2000 | ||
ವಿಧವೆಯರ ಪಿಂಚಣಿ | ಎಲ್ಲಾ ವರ್ಗದವರಿಗೂ | Rs. 800 | 1779453 |
ಸಂಧ್ಯಾ ಸುರಕ್ಷಾ ಯೋಜನೆ | 65ವರ್ಷ ಮೇಲ್ಪಟ್ಟವರು | Rs. 1200 | 3039543 |
ಮನಸ್ವಿನಿ | ಎಲ್ಲಾ ವರ್ಗದವರಿಗೂ | Rs. 800 | 139912 |
ಮೈತ್ರಿ | ಎಲ್ಲಾವರ್ಗದವರಿಗೂ | Rs. 800 | 2076 |
ಆಸಿಡ್ ದಾಳಿಗೆ ಒಳಗಾದ ಸಂತ್ರಸ್ಥರಿಗೆ ಪಿಂಚಣಿ | ಎಲ್ಲಾ ವರ್ಗದವರಿಗೂ | Rs. 10,000 | 47 |
ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ | ಎಲ್ಲಾ ವರ್ಗದವರಿಗೂ | Rs. 800 | 4614 |
ಎಂಡೋಸಲ್ಪಾನ್ ಸಂತ್ರಸ್ಥರಿಗೆ ಪಿಂಚಣಿ ಯೋಜನೆ | ಶೇ.25 ರಿಂದ 59 ರಷ್ಟು ಅಂಗವಿಕಲತೆಯುಳ್ಳವರಿಗೆ | Rs. 2000 | 6756 |
ಶೇ.60 ಕ್ಕಿಂತ ಹೆಚ್ಚಿನ ಅಂಗವಿಕಲತೆಯುಳ್ಳವರಿಗೆ | Rs. 4000 |
Pension Beneficiary list- ಪಿಂಚಣಿದಾರರ ಅರ್ಹ ಫಲಾನುಭವಿಗಳ ಪಟ್ಟಿ:
ಈ ಕೆಳಗೆ ವಿವರಿಸಿರುವ ವಿಧಾನವಾನ್ನು ಅನುಸರಿಸಿ ಕಂದಾಯ ಇಲಾಖೆ ಅಡಿಯಲ್ಲಿರುವ ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಈಗಾಗಲೇ ವಿವಿಧ ಪಿಂಚಣಿ ಯೋಜನೆಯಡಿ ಅರ್ಜಿ ಸಲ್ಲಿಸಿದವರು ತಮ್ಮ ಹಳ್ಳಿಯ ಅರ್ಹ ಪಿಂಚಣಿದಾರರ ಫಲಾನುಭವಿ ಪಟ್ಟಿಯನ್ನು ತಮ್ಮ ಮೊಬೈಲ್ ನಲ್ಲೇ ನೋಡಬವುದಾಗಿದೆ.
ವಿಶೇಷ ಸೂಚನೆ: ಮೊಬೈನ್ ನಲ್ಲಿ ಚೆಕ್ ಮಾಡುವವರು ನಿಮ್ಮ ಕ್ರೋಮ್ ಬ್ರೊಸರ್ ನಲ್ಲಿ “Desktop Site” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಿ.
Step-1: ಈ ಲಿಂಕ್ https://dssp.karnataka.gov.in/dssp ಮೇಲೆ ಕ್ಲಿಕ್ ಮಾಡಿ ಮೊದಲಿಗೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ತಾಲ್ಲೂಕು, ತದನಂತರ ಗ್ರಾಮೀಣ/ನಗರ ಪ್ರದೇಶದ ಆಯ್ಕೆಯಲ್ಲಿ ನಿಮ್ಮ ಭಾಗವನ್ನು ಟಿಕ್ ಮಾಡಿಕೊಳ್ಳಬೇಕು.
Step-2: ಈ ಹಂತ ಮುಗಿಸಿದ ಬಳಿಕ ನಿಮ್ಮ ಹೋಬಳಿ, ಮತ್ತು ಗ್ರಾಮ/ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡ ನಂತರ 5 ಅಂಕಿಯ ಕ್ಯಾಪ್ಚರ್ ಗೋಚರಿಸುತ್ತದೆ ಅನ್ನು ಕೆಳಗಿನ “Enter the captcha” ಕಾಲಂ ನಲ್ಲಿ ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಹಳ್ಳಿಯ/ಗ್ರಾಮದ ಪಿಂಚಣಿದಾರರ ಅರ್ಹ ಫಲಾನುಭವಿಗಳ ಪಟ್ಟಿ ತೋರಿಸುತ್ತದೆ.
ಈ ಪಟ್ಟಿಯಲ್ಲಿ ಯಾವ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದಾರೆ ಮತ್ತು ಪಿಂಚಣಿ ಮೊತ್ತ ಎಷ್ಟು, ಮಂಜೂರಾದ ದಿನಾಂಕ, ಫಲಾನುಭವಿ ಹೆಸರು ಇತ್ಯಾದಿ ಸಂಪೂರ್ಣ ಮಾಹಿತಿ ಗೋಚರಿಸುತ್ತದೆ.
ಪಿಂಚಣಿ ಐಡಿ ಹಾಕಿ ನಿಮ್ಮ ಪಿಂಚಣಿ ಸ್ಥಿತಿ ತಿಳಿಯುವ ವಿಧಾನ:
ಈ ಲಿಂಕ್ ಮೇಲೆ https://dssp.karnataka.gov.in/dssp/Beneficiary_Status.aspx ಕ್ಲಿಕ್ ಮಾಡಿ ಸಾಮಾಜಿಕ ಮತ್ತು ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಬಳಿಯಿರುವ ಮಂಜೂರಿ ಪತ್ರದ “Beneficiary ID” ಯನ್ನು ನಮೂದಿಸಿ ನಂತರ ಕ್ಯಾಪ್ಚರ್ ಕೋಡ ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಿಂಚಣಿ ಸ್ಥಿತಿಯನ್ನು ತಿಳಿದುಕೊಳ್ಳಬವುದು.
Required Documents For Pension Schemes- ಹೊಸದಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆVrudapya vetana):
1)ವಾಸಸ್ಥಳ ದೃಡೀಕರಣ ಪತ್ರ.
2)ವಯಸ್ಸಿನ ದೃಢೀಕೃತ ದಾಖಲೆ.
3)ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು.
4)ಆಧಾರ್ ಕಾರ್ಡ್.
ಸಂಧ್ಯಾ ಸುರಕ್ಷಾ ಯೋಜನೆ(Sandya suraksha):
1)ವಾಸಸ್ಥಳ ದೃಡೀಕರಣ ಪತ್ರ.
2)ವಯಸ್ಸಿನ ದೃಢೀಕೃತ ದಾಖಲೆ.
3)ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು.
4)ಆಧಾರ್ ಕಾರ್ಡ್.
5)ಪಡಿತರ ಚೀಟಿ ಸಂಖ್ಯೆ.
ಅಂಗವಿಕಲರ ಮಾಸಾಶನ ಯೋಜನೆ:
1)ವಾಸಸ್ಥಳ ದೃಡೀಕರಣ ಪತ್ರ.
2)ವೈದ್ಯಕೀಯ ಪ್ರಮಾಣ ಪತ್ರ.
3)ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು.
4)ಆಧಾರ್ ಕಾರ್ಡ್.
ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಪತ್ನಿಯರಿಗೆ ವಿಧವಾ ವೇತನ:
1)ಕೃಷಿ ಇಲಾಖೆಯಲ್ಲಿ ಪರಿಹಾರ ಪಡೆದಿರುವ ಬಗ್ಗೆ ಆದೇಶದ ಪ್ರತಿ.
2)ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
3)ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು
4)ಆಧಾರ್ ಕಾರ್ಡ್
ಪಿಂಚಣಿ ಯೋಜನೆಗಳ ಸಂಪೂರ್ಣ ಮಾಹಿತಿಗಾಗಿ: ಇಲ್ಲಿ ಕ್ಲಿಕ್ ಮಾಡಿ.
ಪಿಂಚಣಿ ಯೋಜನೆಯಡಿ ಸೌಲಭ್ಯ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಲು ಅರ್ಜಿ ನಮೂನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಎಲ್ಲಿ ಸಲ್ಲಿಸಬೇಕು:
ಅಗತ್ಯ ದಾಖಲಾತಿ ಸಮೇತ ಅರ್ಜಿದಾರರು ನಿಮ್ಮ ಹತ್ತಿರದ ನಾಡಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.
ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ನಂತರ ನೀವು ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಸಹಾಯವಾಣಿ ಸಂಖ್ಯೆ: 155245