ರಾಜ್ಯದಲ್ಲಿ ಕಳೆದ ಮೂರು ತಿಂಗಳ ಅಂತರದಲ್ಲಿ ಕಳೆನಾಶಕ(herbicide)ಸಿಂಪರಣೆ ಮಾಡುವಾಗ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸದೇ ಇರುವುದರಿಂದ 2 ಜನರು ಸಾವನ್ನಪಿದ್ದಾರೆ.
ಕಳೆದ 3 ತಿಂಗಳ ಹಿಂದೆ ದಾಂಡೇಲಿ ತಾಲ್ಲೂಕಿನ ಕುಳಗಿ ಅರಣ್ಯ ಇಲಾಖೆಯ(Forest department) ಸಾಗವಾನಿ ಸಸಿ ಮಡಿಗೆ ಕಳೆನಾಶಕ(Herbicide) ಸಿಂಪರಣೆ ಮಾಡುವ ವೇಳೆಯಲ್ಲಿ ವಿಷಕಾರಿ ಕಳೆನಾಶಕವನ್ನು ಸಿಂಪರಣೆ ಮಾಡಿದ ಕೈಯಲ್ಲಿ ಆಹಾರ ಸೇವಸಿದ ಅರಣ್ಯಾಧಿಕಾರಿ ಯೋಗೇಶ ನಾಯ್ಕ(33) ಮರಣ ಹೊಂದಿದ್ದರು.
ಈಗ ಮತ್ತೊಬ್ಬರು ಕೇವಲ 23 ವರ್ಷದ ಹಾಸನ ತಾಲೂಕಿನ ಕಾರ್ಲೆ ಗ್ರಾಮದ ಕೀರ್ತಿ ಎನ್ನುವ ಹೆಸರಿನ ಯುವ ರೈತ ಕಳೆನಾಶಕ ಸಿಂಪಡಿಸುವ ವೇಳೆ ಮುಖಕ್ಕೆ ಮಾಸ್ಕ್ ಧರಿಸದೆ, ಅದೇ ಕೈಯಿಂದಲೇ ನೀರು, ಆಹಾರ ಸೇವಿಸಿದ್ದ ಕಾರಣದಿಂದಾಗಿ ಮರಣ ಹೊಂದಿದ್ದಾರೆ.
ಎರಡು ಪ್ರಕರಣದ ವೈದ್ಯಕೀಯ ವರದಿಯಲ್ಲಿ ಕಿಡ್ನಿ, ಲಿವರ್, ಶ್ವಾಸಕೋಶವು ನಿಷ್ಕ್ರಿಯಗೊಂಡು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ರೈತರು ಮುಖ್ಯ ಬೆಳೆಯನ್ನು ಕಳೆಗಳಿಂದ ರಕ್ಷಣೆ ಮಾಡಿಕೊಳ್ಳಲು ಮತ್ತು ಕೂಲಿ ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಕಳೆ ತೆಗೆಸುವುದು ಹೆಚ್ಚು ವೆಚ್ಚವಾಗಿರುವುದರಿಂದ ಹೆಚ್ಚು ಹೆಚ್ಚು ರೈತರು ಕಳೆನಾಶಕ ಸಿಂಪರಣೆಯ ಮೊರೆ ಹೊಗುತ್ತಿದ್ದಾರೆ. ಅದರೆ ಯಾವುದೇ ರಾಸಾಯನಿಕ ಔಷದಿಗಳನ್ನು ಬಳಕೆ ಮಾಡುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೂಳ್ಳುವುದು ಅತ್ಯವಶ್ಯಕ. ಮತ್ತು ಅತೀ ಅಗತ್ಯ ಬಿದ್ದರೆ ಮಾತ್ರ ಕಳೆನಾಶಕ ಸಿಂಪರಣೆ ಮಾಡಬೇಕು.
ಇನ್ನಾದರು ರೈತರು ಈ ಎರಡು ಪ್ರಕರಣಗಳನ್ನು ಗಮನದಲ್ಲಿಟ್ಟು ಕೊಂಡು ಸಿಂಪರಣೆ ಮಾಡುವಾಗ ಈ ಕೆಳಗೆ ತಿಳಿಸಿರುವ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಮತ್ತು ಈ ಮಾಹಿತಿಯನ್ನು ಅದಷ್ಟು ಶೇರ್ ಮಾಡಿ ಈ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ತಾವೆಲ್ಲರೂ ಸೇರಿ ಮಾಡಬೇಕಿದೆ.
ಇದನ್ನೂಓದಿ: Vehicle subsidy scheme-2023: ವಾಹನ ಖರೀದಿಸಲು ಸಹಾಯಧನಕ್ಕೆ ಅರ್ಜಿ ಅಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?
Safe use of chemical spray- ರೈತರು ಯಾವುದೇ ನಾಶಕಗಳನ್ನು ಸಿಂಪರಣೆ ಮಾಡುವಾಗ ಯಾವೆಲ್ಲ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸಬೇಕು:
- ಸೋರುವ ಅಥವಾ ಹಾಳಾದ ಸ್ಪ್ರೇಯರ್ ಅಥವಾ ಡಸ್ಟರನ್ನು ಉಪಯೋಗಿಸಬೇಡಿ.
- ಸಿಂಪರಣೆ ಮಾಡಿದ ನಂತರ ಬಟ್ಟೆಗಳು ಕಲ್ಮಶಗೊಂಡಿದ್ದರೆ ತಪ್ಪದೇ ಚೆನ್ನಾಗಿ ತೊಳೆಯಿರಿ.
- ಯಾವಾಗಲು ಸಿಂಪರಣೆ ಮಾಡುವಾಗ ಗಾಳಿ ಬೀಸುವ ದಿಕ್ಕಿನಲ್ಲಿ ಸಿಂಪರಣೆ ಮಾಡಿರಿ.
- ಬಾಯಿಯಿಂದ ಸಿಂಪರಣೆ ಉಪಕರಣ ನಾಝ ಅನ್ನು ಸ್ವಚ್ಚಗೊಳಿಸಬೇಡಿ.
- ಸಿಂಪಡಿಸುವಾಗ ಯಾವುದೇ ಕಾರಣಕ್ಕೂ ಧೂಮಪಾನ ಮಾಡಬೇಡಿ ಮತ್ತು ಎನ್ನನು ಕುಡಿಯಬೇಡಿ ಮತ್ತು ತಿನ್ನಬೇಡಿ.
- ಬಾಯಿಗೆ ಮಾಸ್ಕ ಮತ್ತು ಕೈಗೆ ಗ್ಲೋಸ್ ಹಾಕಿಕೊಂಡು ಸಿಂಪರಣೆ ಮಾಡಿ.
- ಸಿಂಪರಣೆ ಮಾಡವ ಸ್ಥಳದ ಹತ್ತಿರ ಆಹಾರ ಪದಾರ್ಥಗಳನ್ನು ಇರಿಸಬೇಡಿ.
- ಧೂಮಪಾನ ಮಾಡುವ ಕುಡಿಯುವ ಅಥವಾ ತಿನ್ನುವ ಮೊದಲು ಕೈಗಳನ್ನು ಮತ್ತು ಮುಖವನು ಚೆನ್ನಾಗಿ ಸೋಪಿನಿಂದ ತೊಳೆಯಿರಿ.
- ಒಂದೊಮ್ಮೆ ಅಕಸ್ಮಾತ್ ವಿಷ ತಗಲಿದರೆ ಪ್ರಥಮ ಚಿಕಿತ್ಸೆ ನೀಡಿ ಡಾಕ್ಟರ್ ಗೆ ಕೂಡಲೆ ತೋರಿಸಿ. ಜೊತೆಗೆ ಅವರ ಬಳಿ ಹೋಗುವಾಗ ಸಿಂಪರಣೆ ಮಾಡಿದ ಔಷದಿ ಬಾಟಲ್ ಅನ್ನು ತಪ್ಪದೇ ತೆಗೆದುಕೊಂಡು ಹೋಗಿ.
- ಸಿಂಪರಣೆ ಮಾಡಿದ ಬಳಿಕ ಖಾಲಿಯಾದ ಔಷದಿ ಬಾಟಲ್ ಗಳನ್ನು ನಾಶಪಡಿಸಿ ಹಾಗೂ ಹೂತಿಡಿರಿ.
- ಮನೆಯಲ್ಲಿ ಮಕ್ಕಳ ಕೈಗೆ ಸಿಗದಂತೆ ರಾಸಾಯನಿಕ ಔಷದಿಗಳನ್ನು ದೂರವಿಡಬೇಕು.
ಇದನ್ನೂಓದಿ: Free sewing machine- ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಅಹ್ವಾನ!
ರಾಸಾಯನಿಕ ನಾಶಕಗಳ ವಿಷದ ಮಟ್ಟವನ್ನು ಪ್ರತಿ ಬಾಟಲ್ ನಲ್ಲಿ ಈ ರೀತಿ ಬಣ್ಣದಿಂದ ಮುದ್ರಿಸಲಾಗಿರುತ್ತದೆ.
ಕೆಂಪು ಬಣ್ಣ- ಅತ್ಯಂತ ವಿಷಕಾರಿ.
ಹಳದಿ- ಹೆಚ್ಚು ವಿಷಕಾರಿ.
ನೀಲಿ- ಸಾಮಾನ್ಯ ವಿಷಕಾರಿ.
ಹಸಿರು- ಸ್ವಲ್ಪ ವಿಷಕಾರಿ.