ಸಮಾಜ ಕಲ್ಯಾಣ ಇಲಾಖೆಯಿಂದ ಯಾವೆಲ್ಲ ಸೌಲಭ್ಯ ಪಡೆಯಬವುದು?

ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳು:

  • ಮೆಟ್ರಿಕ್ ಪೂರ್ವ ಮತ್ತು ನಂತರದ ಬಾಲಕ/ಬಾಲಕಿಯರಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಕಲ್ಪಿಸುವುದು ಹಾಗೂ ವಸತಿ ಶಾಲೆಗಳ ಪ್ರವೇಶ ಮಂಜೂರಾತಿ ನೀಡಲಾಗುತ್ತದೆ.
  • ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳಿಗೆ (ಪರಿಶಿಷ್ಠ ಜಾತಿ(ಪಂಗಡ) ವಿದ್ಯಾರ್ಥಿವೇತನ ಮಂಜೂರಾತಿ ಕುರಿತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುತ್ತದೆ.

  • ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶಾವಕಾಶ ನೀಡಲಾಗುತ್ತದೆ.

ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು:

  • ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ 1995 ಹಾಗೂ ನಿಯಮಗಳು 1977 ಕರ್ನಾಟಕ ಅನುಸೂಚಿತ ಜಾತಿಗಳ ಹಾಗೂ ಅನುಸೂಚಿತ ಪಂಗಡಗಳ (ದೌರ್ಜನ್ಯ ಪ್ರತಿಬಂಧ ಅಧಿನಿಯಮ) 1989 ಹಾಗೂ ನಿಯಮಗಳು 1995 ಅನ್ವಯ ಅಂತರತಜಾತಿ ವಿವಾಹವಾಗುವ ದಂಪತಿಗಳಿಗೆ ಪ್ರೋತ್ಸಾಹಧನ.
  • ಸಾಮಾಜಿಕ ಸರಳವಿವಾಹ ಯೋಜನೆ.
  • ವಿಧವಾ ಮರುವಿವಾಹಕ್ಕೆ ಪ್ರೋತ್ಸಾಹಧನ.
  • ಒಳಪಂಗಡಗಳ ಅಂತರಜಾತಿ ವಿವಾಹ.

ಇದನ್ನೂ ಓದಿ: ನಿಮ್ಮ ಗ್ರಾಮದ ಮಳೆ ಮುನ್ಸೂಚನೆಯನ್ನು ಒಂದೇ ಒಂದು ಪೋಲ್ ಕರೆಯಲ್ಲಿ ತಿಳಿಯಿರಿ!

ಪರಿಶಿಷ್ಠ ಜಾತಿ ಉಪಯೋಜನೆ:

ಪರಿಶಿಷ್ಠ ಜಾತಿ/ಪಂಗಡದ ಉದ್ಯಮಿಗಳು ರಾಷ್ಟ್ರೀಕೃತ ಬ್ಯಾಂಕ್/ಡಿಸಿಸಿ ಬ್ಯಾಂಕ್/ ಅಪೆಕ್ಸ್ ಬ್ಯಾಂಕ್ ಗಳಿಂದ ಪಡೆದ ಸಾಲಕ್ಕೆ ಬಡ್ಡಿ ಸಹಾಯಧನ ಕಾರ್ಯಕ್ರಮ.

ಎಸ್.ಸಿ.ಎಸ್.ಟಿ /ಐ.ಎಸ್.ಪಿ. ಯೋಜನೆಯಡಿ ವಿವಿಧ ಇಲಾಖೆಗಳು ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡದವರ ಅಭಿವೃದ್ಧಿಗಾಗಿ ಅನುಷ್ಠಾನ ಮಾಡುತ್ತಿರುವ ಕಾರ್ಯಕ್ರಮಗಳು.

ಮೂಲಭೂತ ಸೌಕರ್ಯ ವಿಭಾಗದಲ್ಲಿ:

ಪರಿಶಿಷ್ಠ ಜಾತಿ ಕಾಲೋನಿಗಳ ಅಭಿವೃದ್ದಿಗಾಗಿ ಪರಿಶಿಷ್ಠ ಜಾತಿ ಉಪಯೋಜನೆ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ/ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಗಳ ಮುಖಾಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಕೂಡು ರಸ್ತೆಗಳು, ಶುದ್ಧ ಕುಡಿಯುವ ನೀರು, ಬೀದಿ ದೀಪ, ಅತಿ ಸಣ್ಣ ಪ್ರಮಾಣದ ಸೇತುವೆಗಳು ಮುಂತಾದ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ವಿವರ:

  • ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ.
  • ಸರ್ಕಾರಿ ವಿದ್ಯಾರ್ಥಿ ನಿಲಯಗಳ ದುರಸ್ತಿ ಹಾಗ ಉನ್ನತೀಕರಣ.
  • ಡಾ. ಬಿ.ಆರ್. ಅಂಬೇಡ್ಕರ್/ ಡಾ. ಬಾಬು ಜಗಜೀವನರಾಮ್ ಸಮುದಾಯಭವನಗಳ ನಿರ್ಮಾಣ.
  • ಪರಿಶಿಷ್ಠ ಜಾತಿಯ ಸಂಘ ಸಂಸ್ಥೆಗಳ ವತಿಯಿಂದ ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಕಟ್ಟಡ ನಿರ್ಮಾಣ.
  • ಪರಿಶಿಷ್ಠ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.
  • ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ.
  • ಮುಖ್ಯಮಂತ್ರಿಗಳ ಮಾದರಿ ಗ್ರಾಮ ಯೋಜನೆ.

ಹೆಚ್ಚಿನ ಮಾಹಿತಿಗಾಗಿ:

ಸಹಾಯವಾಣಿ: 9482300400

ವೆಬ್ಸೈಟ್ ವಿಳಾಸ: https://sw.kar.nic.in/