ನಿಮ್ಮ ಹತ್ತಿರದಲ್ಲಿ ಅರಣ್ಯ ಇಲಾಖೆ ನರ್ಸರಿ ಎಲ್ಲಿದೆ? ಅಲ್ಲಿ ಲಭ್ಯವಿರುವ ಸಸಿಗಳು ಯಾವುವು? ಎಂದು ಹೇಗೆ ತಿಳಿಯುವುದು?

ಕರ್ನಾಟಕದಲ್ಲಿ ಅರಣ್ಯ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿಯು ನರ್ಸರಿಯನ್ನು ಹೊಂದಿದ್ದು ಇಲ್ಲಿ ಅನೇಕ ಬಗ್ಗೆಯ ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳ ಸಸಿಗಳನ್ನು ತಯಾರಿಸಿ ಪ್ರತಿ ವರ್ಷ ಮಳೆಗಾಲದಲ್ಲಿ ರೈತರಿಗೆ ಅತಿ ಕಡಿಮೆ ದರದಲ್ಲಿ ವಿತರಿಸಲಾಗುತ್ತದೆ.

ರೈತರು ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಿಮ್ಮ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆ ಕಚೇರಿ ಭೇಟಿ ಮಾಡಿ ತಮಗೆ ಬೇಕಾಗಿರುವ ಸಸಿಗಳ ಜಾತಿ ಮತ್ತು ಸಂಖ್ಯೆ, ಸಸಿಗಳನ್ನು ನೆಡಲು ಉದ್ದೇಶಿಸಿರುವ ಜಮೀನಿನ ಆರ್.ಟಿ.ಸಿ/ಪಹಣಿ/ಉತಾರ್ ಪ್ರತಿ, ರೈತನ ಆಧಾರ್ ಇತರೆ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕು.

ನಿಮ್ಮ ಹತ್ತಿರದಲ್ಲಿ ಅರಣ್ಯ ಇಲಾಖೆ ನರ್ಸರಿ ಎಲ್ಲಿದೆ? ಅಲ್ಲಿ ಲಭ್ಯವಿರುವ ಸಸಿಗಳ ವಿವರ ತಿಳಿಯುವ ವಿಧಾನ:

ಇದನ್ನೂ ಓದಿ: ಪ್ರಮುಖ ಸುದ್ದಿ: ರಾಜ್ಯ ಸರಕಾರದಿಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ 5 ಗ್ಯಾರಂಟಿ ಜಾರಿಗೆ ಅನುಮೋದನೆ.

ನಿಮ್ಮ ಹತ್ತಿರದ ನರ್ಸರಿ ತಿಳಿಯುವ ವಿಧಾನ:

https://aranya.gov.in/Enursery/Home/DashBoardNew.aspx ಈ ಕೊಂಡಿಯ ಮೇಲೆ ಒತ್ತಿ ಅರಣ್ಯ ಇಲಾಖೆಯ ಅಧಿಕೃತ ಸಸ್ಯಕ್ಷೇತ್ರದ ಜಿಯೋ ಟ್ಯಾಗ್ ಮ್ಯಾಪ್ ಜಾಲತಾಣಕ್ಕೆ ಭೇಟಿ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಆಯ್ಕೆ ಮಾಡಿಕೊಂಡು ನಿಮ್ಮ ಹತ್ತಿರದಲ್ಲಿ ನರ್ಸರಿ ಎಲ್ಲಿ ಇದೆ ಎಂದು ಸುಲಭವಾಗಿ ತಿಳಿಯಬವುದಾಗಿದೆ.

ನಾಟಿ ಮಾಡಿದ ಸಸಿಗಳಿಗೆ ಪ್ರೋತ್ಸಾಹ ಧನ :

ರೈತರು ನಾಟಿ ಮಾಡಿದ ಮಾರ್ಗಸೂಚಿಯನ್ವಯ ಆಯ್ದ ಸಸಿಗಳಿಗೆ ಅರಣ್ಯ ಇಲಾಖೆಯಿಂದ ಒಂದು ವರ್ಷದಿಂದ ಮೂರು ವರ್ಷದವರೆಗೆ ಪ್ರೋತ್ಸಾಹ ಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅರಣ್ಯ ಇಲಾಖೆಯ ಜಾಲತಾಣ www.aranya.gov.in  ಬೇಟಿ ಮಾಡಿ, ಅಥವಾ ಅರಣ್ಯ ಸಹಾಯವಾಣಿ 1926 ಗೆ ಕರೆ ಮಾಡಿ‌ ತಿಳಿಯಿರಿ.