ಅಡಿಕೆ ಮತ್ತು ತೆಂಗಿನ ಮರಗಳು ಈ ರೀತಿಯಾದಲ್ಲಿ ತಪ್ಪದೇ ಹೀಗೆ ಮಾಡಿ.

Facebook
Twitter
Telegram
WhatsApp

ನಮ್ಮ ರಾಜ್ಯದಲ್ಲಿ ಅಡಿಕೆ ಮತ್ತು ತೆಂಗು ಪ್ರಮುಖ ತೋಟಗಾರಿಕೆ ವಾಣಿಜ್ಯ ಬೆಳೆಗಳಾಗಿವೆ ಈ ಬೆಳೆಗಳನ್ನು ಅವಲಂಬಿಸಿಕೊಂಡು ಅನೇಕ ಜಿಲ್ಲೆಯ ರೈತರು ತಮ್ಮ ದೈನಂದಿನ ಅರ್ಥಿಕ ಚಟುವಟಿಕೆಗಳನ್ನು ನಡೆಸಿಕೊಂಡು ಹೊಗುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಇತ್ಯಾದಿ ಕಾರಣಗಳಿಂದ ಹಲವು ಜಿಲ್ಲೆಗಳಲ್ಲಿ ವಿವಿಧ ಬಗ್ಗೆಯ ರೋಗ ಮತ್ತು ಕೀಟಗಳಿಗೆ ಈ ಬೆಳೆ ತುತ್ತಾಗುತ್ತಿದ್ದು, ಇಂದು ಈ ಅಂಕಣದಲ್ಲಿ ಅಡಿಕೆ ಮತ್ತು ತೆಂಗು ಬೆಳೆಯಲ್ಲಿ ಅಂಬ್ರೋಸಿಯ ದುಂಬಿಯ ಬಾಧೆ ಹೇಗೆ ಗುರುತಿಸುವುದು ಮತ್ತು ನಿಯಂತ್ರಣ ಕ್ರಮಗಳನ್ನು ವಿವರಿಸಲಾಗಿದೆ.

ಕೀಟದ ಲಕ್ಷಣಗಳು:

ಪ್ರೌಢಾವಸ್ಥೆಯ ದುಂಬಿ: ಚಿಕ್ಕ ಗಾತ್ರದ (2-3 ಮಿ.ಮೀ.) ಕೆಂಪು ಮಿಶ್ರಿತ, ಬಣ್ಣದಿಂದ ಕೂಡಿದ್ದು, ದೇಹವು ಸಿಲಿಂಡರಾಕೃತಿ ಹೊಂದಿರುತ್ತದೆ.

ಮರಿ ದುಂಬಿ: ಚಿಕ್ಕ ಗಾತ್ರ, ಬಿಳಿ ಬಣ್ಣದಿಂದ ಕೂಡಿದ್ದು, ಕಾಲುಗಳಿರುವುದಿಲ್ಲ, 

ಹಾವಳಿಗೆ ಮತ್ತು ಸಂತಾನೋತ್ಪತ್ತಿಗೆ ಪೂರಕವಾದ ಅಂಶಗಳು:

1. ತೋಟದ ಸುತ್ತಲಿನ ಕಾಡುಜಾತಿಯ (ತೇಗ, ಸರ್ವೆ), ಮರಗಳು, ಅಲಂಕಾರಿಕ ನರ್ಸರಿ ಸಸ್ಯಗಳು ಮತ್ತು ಹಣ್ಣಿನ ಮರಗಳು.

2. ತೋಟದಲ್ಲಿ ನೀರು, ಪೋಷಕಾಂಶಗಳ ಕೊರತೆ, ಯಾಂತ್ರಿಕವಾಗಿ ಮರಗಳು ಗಾಯಗೊಂಡು ಕತ್ತರಿಸಿದ ಅಥವಾ ಸತ್ತ ಮರಗಳಿದ್ದರೆ ದುಂಬಿಯ ಬಾಧೆ ಹೆಚ್ಚು.

3. ನೀರು ಬಸಿದು ಹೋಗದಿರುವ ಮತ್ತು ಅಣಬೆ ರೋಗಕ್ಕೆ ತುತ್ತಾದ ತೋಟಗಳು, ದುಂಬಿ ಬೆಳವಣಿಗೆಗೆ ಮತ್ತು ಸಂತಾನೋತ್ಪತ್ತಿಗೆ ಪೂರಕವಾಗಿವೆ.

ಈ ಕೀಟದ ಹಾನಿಯ ಲಕ್ಷಣಗಳು ಹೀಗಿವೆ:

1. ಹೆಣ್ಣು ದುಂಬಿಗಳು ಮೊಟ್ಟೆಯನ್ನಿಡಲು ಮರದ ಕಾಂಡದ ಮೇಲೆ ಮನುಷ್ಯನ ಭುಜದ ಎತ್ತರಕ್ಕಿಂತ ಕೆಳ ಭಾಗದಲ್ಲಿ ರಂಧ್ರಗಳನ್ನು ಕೊರೆಯುತ್ತವೆ.

2. ಕಾಂಡದಲ್ಲಿ ವೃತ್ತಾಕಾರದ ಸೂಜಿ ಗಾತ್ರದ ರಂಧ್ರಗಳಿಂದ (2- 3 ಮಿ.ಮೀ.) ಮರದ ಪುಡಿಯು ಟೂತ್ಪಿಕ್ ಅಥವಾ ತಂತಿಯಾಕಾರದಂತೆ ಹೊರ ಬರುತ್ತದೆ ಮತ್ತು ಕೆಂಪು ಮಿಶ್ರಿತ ಕಂದು ಬಣ್ಣದ ದ್ರವವು ಸೋರುವುದು.

3. ಹೆಚ್ಚು ಬಾಧೆಗೊಳಗಾದ ಮರದ ಕಾಂಡದಲ್ಲಿ 10 ಚದರ ಸೆಂ.ಮೀ. ನಲ್ಲಿ 6-8 ರಂಧ್ರಗಳನ್ನು ಕಾಣಬಹುದು.

4. ಹಾನಿಗೊಳಗಾದ ಮರದ ಬೆಳವಣಿಗೆ ಕ್ಷಿಪ್ರವಾಗಿ ಕುಂಠಿತವಾಗುವುದು, ಹೊಸ ಎಲೆಗಳು ಬರುವುದಿಲ್ಲ, ಮತ್ತು ತುದಿ ಎಲೆಗಳು ನಂತರದಲ್ಲಿ ಬೊಡ್ಡೆ ಎಲೆಗಳು ಒಣಗಲಾರಂಭಿಸುವವು.

5. ಮರವು ಒಣಗಲಾರಂಭಿಸಿ ಸತ್ತು ಹೋಗುವುದು, ನಂತರದಲ್ಲಿ ಸುತ್ತಮುತ್ತಲಿನ ಮರಗಳು ಆರಂಭಿಸುವವು (ಸಿಡಿಲು ಬಡಿದ ರೀತಿಯಲ್ಲಿ). ಸಾಯಲು ಆರಂಬಿಸುವವು.

ಇದನ್ನೂ ಓದಿ: ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದೇಗೆ? ಅಗತ್ಯ ದಾಖಲಾತಿ ಮಾಹಿತಿ.

ನಿರ್ವಹಣೆಯ ಕ್ರಮಗಳು:

1. ದುಂಬಿಯ ಬಾಧೆಗೆ ಒಳಗಾಗಿ ಅಥವಾ ಇತರ ಕಾರಣಗಳಿಂದ ಸತ್ತ ಮರಗಳನ್ನು ತೋಟದಿಂದ ಹೊರ ಹಾಕಿ ಸುಡುವುದು.

2. ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಗಿಡಗಳಿಗೆ ಪೋಷಕಾಂಶಗಳನ್ನು ನೀಡುವುದು. 

3. ತೋಟಗಳಲ್ಲಿ ಹೆಚ್ಚಾದ ನೀರು ನಿಲ್ಲದೆ, ಬಸಿದು ಹೋಗುವಂತೆ ನೋಡಿಕೊಳ್ಳುವುದು. 

4. ತೋಟದ ಸುತ್ತಲೂ ಎಕರೆಗೆ 6-8 ಶೇಕಡಾ 75% ರ ಎಥೆನಾಲ್ ಬಲೆಗಳನ್ನು ಅಲ್ಲಲ್ಲಿ ಹಾಕುವುದರ ಮೂಲಕ ಹೆಣ್ಣು ದುಂಬಿಗಳ ಚಟುವಟಿಕೆಯನ್ನು ಗಮನಿಸಬಹುದು ಮತ್ತು ಸಾಮೂಹಿಕ ನಿರ್ವಹಣೆಯನ್ನು ಮಾಡಬಹುದಾಗಿದೆ.

5. ಹೆಣ್ಣು ದುಂಬಿಗಳು ಹಾನಿ ಮಾಡಿದ ಮರದ ಪಕ್ಕದಲ್ಲಿರುವ ಇತರೆ ಮರಗಳಿಗೆ ರಂಧ್ರ ಮಾಡದಂತೆ ಹಿಮ್ಮೆಟ್ಟಿಸಲು, ಸತ್ತ ಮರ ಮತ್ತು ಸುತ್ತಮುತ್ತಲಿನ ಮರಗಳಿಗೆ ಬೈಫೆಂಥಿನ್ 10% ಇ.ಸಿ. 1.5 ಮಿಲಿ / ಲೀಟರ್ + ಮ್ಯಾಂಕೊಜೆಬ್ 75 ಡಬ್ಲ್ಯೂಪಿ. 2 ಗ್ರಾಂ / ಲೀಟರ್ ಅಥವಾ ಬೈಫೆಂಥಿನ್ 10% ಇ.ಸಿ. 1.5 ಮಿಲಿ / ಲೀಟರ್ + ಕ್ಲೋರ್‌ ಫೈರಿಫಾಸ್ 30% ಇ.ಸಿ. 2 ಮಿ.ಲೀ. / ಲೀಟರ್ + ಮ್ಯಾಂಕೊಜೆಬ್ ಡಬ್ಲ್ಯೂ.ಪಿ. 2 ಗ್ರಾಂ / ಲೀಟರ್ ಮಿಶ್ರಣವನ್ನು ಮರದ ಕಾಂಡಗಳಿಗೆ ಕೈಗೆಟುಕುವ ಅಂತರದವರೆಗ ಸಿಂಪರಣೆ ಮಾಡುವುದು.

ಹೆಚ್ಚಿನ ಮಾಹಿತಿಗಾಗಿ https://youtu.be/n82XIuCWTFA ಈ ವಿಡಿಯೋ ನೋಡಿ.

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Bele parihara

Bele parihara- ಮಳೆಯಿಂದ ಜಮೀನಿನ ಬೆಳೆ ಹಾನಿಯಾಗಿದ್ದರೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ರಾಜ್ಯದಲ್ಲಿ ಕಳೆದ 2 ವಾರದಿಂದ ಬಿಟ್ಟು ಬಿಡದೇ ನಿರಂತರವಾಗಿ ಮಳೆ ಬರುತ್ತಿರುವ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಅತೀಯಾದ ಮಳೆಯಿಂದ ಬೆಳೆ ನಾಶವಾಗಿದ್ದು(Bele parihara) ಅಂತಹ ರೈತರು ಬೆಳೆ ಹಾನಿಯ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದು.

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ