ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರುವತಿಯಿಂದ 2024ನೇ ವರ್ಷದ ಕೃಷಿ ಮೇಳವನ್ನು(Gkvk krishi mela-2024) ಆಯೋಜನೆ ಮಾಡಲು ಆಧಿಕೃತ ದಿನಾಂಕವನ್ನು ಬಿಡುಗಡೆ ಮಾಡಲಾಗಿದ್ದು, ಈ ವರ್ಷದ ಕೃಷಿ ಮೇಳದಲ್ಲಿ ಯಾವೆಲ್ಲ ತಾಂತ್ರಿಕತೆಗಳನ್ನು ರೈತರಿಗೆ ಪ್ರದರ್ಶಿಸಲಾಗುತ್ತದೆ? ಇತರೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ(GKVK)ದಿಂದ ಈ ಬಾರಿಯ ಮೇಳವನ್ನು “ಹವಾಮಾನ ಚತುರ ಡಿಜಿಟಲ್ ಕೃಷಿ” ಎನ್ನುವ ಘೋಷವಾಕ್ಯದ ಮೇಲೆ ಆಯೋಜನೆ ಮಾಡಲಾಗುತ್ತಿದ್ದು ಡಿಜಿಟಲ್ ಕೃಷಿ ತಾಂತ್ರಿಕತೆಗಳ ಕುರಿತು ರೈತರಿಗೆ ಹೆಚ್ಚಿನ ಮಾಹಿತಿಯನ್ನು ಈ ಮೇಳದಲ್ಲಿ ಪ್ರದರ್ಶಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ.
ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು, ನಬಾರ್ಡ್ ಮತ್ತು ಕರ್ನಾಟಕ ಹಾಲು ಮಹಾಮಂಡಳಿಯ ಸಹಯೋಗದಲ್ಲಿ ಈ ಮೇಳವನ್ನು ಆಯೋಜನೆ ಮಾಡಲಾಗುತ್ತಿದೆ.
ಇದನ್ನೂ ಓದಿ: Horticulture Department-ತೋಟಗಾರಿಕೆ ಇಲಾಖೆಯಿಂದ ಈ ಯೋಜನೆಯಡಿ ಹಲವು ಸೌಲಭ್ಯ! ಇಲ್ಲಿದೆ ಅರ್ಜಿ ಸಲ್ಲಿಕೆ ವಿವರ!
Krishi mela bengalore-ಈ ಬಾರಿ ಮೇಳದ ವಿಶೇಷ ಆಕರ್ಷಣೆಗಳು:
1) ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ.
2) ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ.
3) ಖುಷಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು.
4) ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು.
5) ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ.
6) ಮಳೆ ಹಾಗೂ ಮೇಲ್ಲಾವಣಿ ನೀರಿನ ಕೊಯ್ಲು.
7) ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ.
8) ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ.
9) ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು.
10) ಕೊಯೊಕ್ತರ ತಾಂತ್ರಿಕತೆಗಳು, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ.
ಇದನ್ನೂ ಓದಿ: Sukanya Samriddhi Yojana-2024: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ತಪ್ಪದೇ ಈ ಕೆಲಸ ಮಾಡಿ!
ಇದನ್ನೂ ಓದಿ: RGEP Program-ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
11) ಸಿರಿ ಧಾನ್ಯಗಳು ಮತ್ತು ಅವಗಳ ಮಹತ್ವ.
12) ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ.
13) ಜಲಾನಯನ ನಿರ್ವಹಣೆ.
14) ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ.
15) ಸಾವಯವ ಕೃಷಿ ಪದ್ಧತಿಗಳು.
16) ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ
17) ಸಮಗ್ರ ಕೀಟ, ರೋಗ ಹಾಗೂ ಪೋಷಕಾಂಶಗಳ ನಿರ್ವಹಣೆ
18) ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ
19) ಮಣ್ಣು ರಹಿತ ಕೃಷಿ
20) ಕೃಷಿ ಸ್ವಯಂ ಚಾಲಿತ ತಂತ್ರಜ್ಞಾನಗಳು
21) ಮಾರುಕಟ್ಟೆ ನೈಮಣ್ಯದ ಮಾಹಿತಿ
22) ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ವ್ಯವಸ್ಥೆ
23) ರೈತರ ಕೃಷಿ ತಾಂತ್ರಿಕ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ
24) ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: PM kisan 18th Installment- ಕೇಂದ್ರದಿಂದ ಪಿ ಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟ!
GKVK Krishimela date-ಕೃಷಿ ಮೇಳ ಆಯೋಜನೆಗೆ ನಿಗದಿಪಡಿಸಿದ ದಿನಾಂಕ:
14, 15, 16 ಮತ್ತು 17 ನವೆಂಬರ್ 2024 ಒಟ್ಟು ನಾಲ್ಕು ದಿನ ಕೃಷಿ ಮೇಳ ನಡೆಯಲಿದೆ.
Krishi mela place-ಕೃಷಿ ಮೇಳ ನಡೆಯುವ ಸ್ಥಳ:
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಅವರಣದಲ್ಲಿ ಒಟ್ಟು ನಾಲ್ಕು ದಿನ ಮೇಳ ನಡೆಯಲಿದೆ.
For more information-ಮೇಳದ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು:
ಅಧಿಕೃತ ವೆಬ್ಸೈಟ್: Click here
ದೂರವಾಣಿ: 08023638883
ಕಚೇರಿ ವಿಳಾಸ: ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560065