ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಜಿಯ ಇ-ಕೆವೈಸಿ ಅಗಿರುವುದನ್ನು ರೈತರು ಖಚಿತಪಡಿಸಿಕೊಳ್ಳಲು ಕೇಂದ್ರ ಸರಕಾರದಿಂದ ಅಧಿಕೃತ ಪಿಎಂ ಕಿಸಾನ್ ಯೋಜನೆಯ(PM-kisan E-kyc status) ವೆಬ್ಸೈಟ್ ನಲ್ಲಿ ಅವಕಾಶ ನೀಡಲಾಗಿದೆ. ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಇ-ಕೆವೈಸಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
ಕೃಷಿ ಇಲಾಖೆಯಿಂದ ಪಿಎಂ ಕಿಸಾನ್ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಇಲಾಖೆಯಿಂದ ಈಗಾಗಲೇ ಪ್ರಕಟಣೆ ಹೊರಡಿಸಲಾಗಿದ್ದು, ನಿಮ್ಮ ಇ-ಕೆವೈಸಿ(E-kyc status) ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(kisan samman nidhi) ದೇಶದ ರೈತರ ಖಾತೆಗೆ ನೇರ ನಗದು ವರ್ಗಾವಣೆಯ(PM kisan E-kyc) ಮೂಲಕ 18ನೇ ಕಂತಿನ ಹಣ ಜಮಾ ಮಾಡಲಾಗುತ್ತಿದ್ದು, ಈ ಯೋಜನೆಯಡಿ ಇ-ಕೆವೈಸಿ ಆದವರಿಗೆ ಮಾತ್ರ ರೂ 2,000 ಹಣ ಜಮಾ ಅಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದು, ರೈತರು ತಮ್ಮ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಜಿಯ ಇ-ಕೆವೈಸಿ ಅಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳವ ವಿಧಾನವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Kisan samman-ಕಿಸಾನ್ ಸಮ್ಮಾನ್ ರೂ 2,000 ಹಣ ರೈತರ ಖಾತೆಗೆ! ನಿಮಗೆ ಬಂತಾ ಚೆಕ್ ಮಾಡಿ!
PM-kisan E-kyc status- ಇಲ್ಲಿದೆ ಇ-ಕೆವೈಸಿ ಅಗಿರುವುದನ್ನು ಚೆಕ್ ಮಾಡಲು ವೆಬ್ಸೈಟ್ ಲಿಂಕ್:
ರೈತರು ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಕೇಂದ್ರದ ಅಧಿಕೃತ ಪಿಎಂ ಕಿಸಾನ್ ಜಾಲತಾಣವನ್ನು ಭೇಟಿ ಮಾಡಿ ಇ-ಕೆವೈಸಿ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.
ಎರಡು ಹಂತ ಅನುಸರಿಸಿ ನಿಮ್ಮ ಇ-ಕೆವೈಸಿ ಅಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮೊದಲಿಗೆ ನಿಮ್ಮ ಪಿ ಎಂ ಕಿಸಾನ್ ಅರ್ಜಿಯ ರಿಜಿಸ್ಟರ್ ನಂಬರ್ ಅನ್ನು ಪಡೆದುಕೊಂಡು ನಂತರ ಇನ್ನೊಂದು ಟ್ಯಾಬ್ ಅನ್ನು ತೆರೆದುಕೊಂಡು ರಿಜಿಸ್ಟರ್ ನಂಬರ್ ಅನ್ನು ನಮೂದಿಸಿ ಇ-ಕೆವೈಸಿ ಸ್ಟೇಟಸ್ ಅನ್ನು ಖಚಿತಪಡಿಸಿಕೊಳ್ಳಬೇಕು.
ಇದನ್ನೂ ಓದಿ: Anganawadi job notification-2024: ಅಂಗನವಾಡಿ ಕೇಂದ್ರಗಳಲ್ಲಿ 552 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ನೇಮಕಾತಿ!
Step-1: ಪ್ರಥಮದಲ್ಲಿ ಈ pm kisan e-kyc status ಲಿಂಕ್ ಮೇಲೆ ಕ್ಲಿಕ್ ಮಾಡಿ ಕಿಸಾನ್ ಸಮ್ಮಾನ್ ಯೋಜನೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ತದನಂತರ 10 ಸಂಖ್ಯೆಯ ಮೊಬೈಲ್ ನಂಬರ್ ಅನ್ನು ನಮೂದಿಸಿ ಪಕ್ಕದಲ್ಲಿ ಕಾಣಿಸುವ ಕ್ಯಾಪ್ಚರ್ ಕೋಡ್ ಅನ್ನು ಹಾಕಿ “Get mobile” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Parihara farmer list-2024: ಹಳ್ಳಿವಾರು ಬೆಳೆ ಪರಿಹಾರ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!
Step-3: ಇದಾದ ಬಳಿಕ “Get mobile” ಬಟನ್ ಮೇಲೆ ಕ್ಲಿಕ್ ಮಾಡಿ ನಂತರ “OTP has been sent at registered mobile no” ಎಂದು ಮೇಸೆಜ್ ಬರುತ್ತದೆ ಇದಾದ ನಂತರ ನಿಮ್ಮ ಮೊಬೈಲ್ ಗೆ ಬಂದಿರುವ 4 ಸಂಖ್ಯೆ OTP ಅನ್ನು ಹಾಕಿ “Get Details” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ Registration Number ತೋರಿಸುತ್ತದೆ ಇದನ್ನು ಒಂದು ಕಡೆ ಬರೆದುಕೊಂಡು ಮುಂದಿನ ಹಂತದ ವಿಧಾನವನ್ನು ಅನುಸರಿಸಬೇಕು.
Step-5: ಮೇಲಿನ ಹಂತಗಳನ್ನು ಅನುಸರಿಸಿ ರಿಜಿಸ್ಟರ್ ನಂಬರ್ ಅನ್ನು ಒಂದು ಕಡೆ ಬರೆದುಕೊಂಡು ನಂತರ ಈ PM-kisan E-kyc status ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯ ರಿಜಿಸ್ಟರ್ ನಂಬರ್ ಅನು ಹಾಕಿ ಪಕ್ಕದಲ್ಲಿರುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Get OTP” ಆಯ್ಕೆಯ ಮೇಲೆ ಒತ್ತಿ ನಿಮ್ಮ ಮೊಬೈಲ್ ನಂಬರ್ ಗೆ ಬರುವ 4 ಸಂಖ್ಯೆಯ OTP ಅನ್ನು ನಮೂದಿಸಿ “Get Data” ಬಟನ್ ಮೇಲೆ ಪಿ ಎಂ ಕಿಸಾನ್ ಯೋಜನೆ ಅರ್ಜಿಯ ಸಂಪೂರ್ಣ ವಿವರ ತೋರಿಸುತ್ತದೆ.
ಈ ಪೇಜ್ ನ ಮಧ್ಯ ಭಾಗದಲ್ಲಿ “Eligibility Status” ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿ “Eligibility Status” ಆಯ್ಕೆಯಲ್ಲಿ “e-KYC Status :- Yes” ಎಂದು ತೋರಿಸಿದರೆ ಇ-ಕೆವೈಸಿ ಅಗಿದೆ ಎಂದು ಅರ್ಥ ಒಂದೊಮ್ಮೆ “e-KYC Status :- No” ಎಂದು ತೋರಿಸಿದರೆ ನಿಮ್ಮ ಇ-ಕೆವೈಸಿ ಅಗಿಲ್ಲ ಎಂದು ತಿಳಿಯಬೇಕು.
“e-KYC Status :- Yes” ಎಂದು ತೋರಿಸಿದರೆ ಮಾತ್ರ ಹಣ ಜಮಾ ಅಗುತ್ತದೆ!
ಮೇಲಿನ ವಿಧಾನವನ್ನು ಅನುಸರಿಸಿ ಪಿ ಎಂ ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಇ-ಕೆವೈಸಿ ಸ್ಟೇಟಸ್ ಅನ್ನು ಚೆಕ್ ಮಾಡಿದಾಗ “e-KYC Status :- Yes” ಎಂದು ತೋರಿಸಿದರೆ ಮಾತ್ರ ಈ ಯೋಜನೆಯಡಿ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ 2,000 ಹಣ ಜಮಾ ಅಗುತ್ತದೆ.