2024-25ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯನ್ನು(Krishi bhagya scheme details) ಮರು ಜಾರಿಗೆ ತರಲಾಗಿದ್ದು ಅರ್ಹ ರೈತರು ಅರ್ಜಿ ಸಲ್ಲಿಸಿ ಕೃಷಿ ಹೊಂಡ ಸೇರಿದಂತೆ ಒಟ್ಟು 6 ಘಟಕಗಳಿಗೆ ಸಹಾಯಧನವನ್ನು ಪಡೆಯಬಹುದು.
ರಾಜ್ಯದಲ್ಲಿ ಮಳೆಯಾಶ್ರಿತ ರೈತ ಸಮುದಾಯದ ಜೀವನೋಪಾಯವನ್ನು ಉತ್ತಮಪಡಿಸಲು “ಕೃಷಿಭಾಗ್ಯ”(Krishi honda) ಯೋಜನೆ ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು. 2024-25ನೇ ಸಾಲಿನಲ್ಲಿ ಮರು ಜಾರಿಗೊಳಿಸಿದ್ದು ಪ್ರಸಕ್ತ ಸಾಲಿನಲ್ಲಿ ವಿಪತ್ತು ಉಪಶಮನ ನಿಧಿ(SDMF-State Disaster Mitigation Fund) ಯೋಜನೆಯಲ್ಲಿಯೂ ಕೃಷಿ ಭಾಗ್ಯ ಯೋಜನೆಯಲ್ಲಿಯೂ ಅನುಷ್ಠಾನ ಮಾಡಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳೇನು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ರೈತರ ಆಯ್ಕೆ ವಿಧಾನ ಹೇಗೆ ಮಾಡಲಾಗುತ್ತದೆ? ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Horticulture Diploma- ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!
Krishi bhagya yojane-2024: ಕೃಷಿ ಭಾಗ್ಯ ಯೋಜನೆ ಯೋಜನೆಯ ಉದ್ದೇಶ ಮತ್ತು ಸವಲತ್ತುಗಳು:
ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಬರಗಾಲದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳವಣಿಗೆ ನೀರಿನ ಲಭ್ಯತೆ. ಕೃಷಿ ಉತ್ಪಾದಕತೆಯನ್ನು ಉತ್ತಮಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು. ಕೃಷಿ ಭಾಗ್ಯ ಪ್ಯಾಕೇಜ್ನಲ್ಲಿ ಒಟ್ಟಾರೆ 6 ಕಡ್ಡಾಯ ಘಟಕಗಳಿದ್ದು, ಫಲಾನುಭವಿ ರೈತರು ಎಲ್ಲಾ ಘಟಕಗಳನ್ನು ತಪ್ಪದೇ ಅಳವಡಿಸಿಕೊಳ್ಳಬೇಕಾಗಿರುತ್ತದೆ (ಕ್ಷೇತ್ರ ಬದು + ಕೃಷಿ ಹೊಂಡ + ಪಾಲಿಥೀನ್ ಹೊದಿಕೆ + ಡೀಸಲ್ ಪಂಪ್ ಸೆಟ್ + ಲಘು ನೀರಾವರಿ + ತಂತಿ ಬೇಲಿ)
Krishi honda-ಕೃಷಿ ಹೊಂಡ ನಿರ್ಮಿಸಲು ಅವಕಾಶ:
ರೈತರಿಗೆ ಶೇ. 80ರ ಸಹಾಯಧನದಡಿ 5 ಅಳತೆಯ ಕೃಷಿ ಹೊಂಡ ಸಿರ್ಮಿಸಲು ಅವಕಾಶ ಇದರಿಂದಾಗಿ ಮಳೆ ನೀರು ಸಂಗ್ರಹಣೆ ಹಾಗೂ ಬೆಳೆಗಳ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರಿನ ಲಭ್ಯತೆ, ಮಣ್ಣಿನ ಅಂತರ್ಜಲ ತಡೆಯುವಿಕೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಕಾರಿ. ಮಣ್ಣು ಮತ್ತು ನೀರಿನ ಸಂರಕ್ಷಣೆ.
ಇದನ್ನೂ ಓದಿ: PM Internship Yojana-2024: ಕೇಂದ್ರದಿಂದ ಪಿ ಎಂ ಇಂಟರ್ನಶಿಪ್ ಯೋಜನೆ ಜಾರಿಗೆ ಅಸ್ತು! ತಿಂಗಳಿಗೆ ರೂ 5,000 ಭತ್ಯೆ!
1) ಕೃಷಿ ಹೊಂಡದ ಅಳತೆಗಳು(ಮೀಟರ್ ಗಳಲ್ಲಿ)/Farm pond size:
1) 10 x 10 x 3
2) 12 x 12 x 3
3) 15 x 15 x 3
4) 18 x 18 x 3
5) 21 x 21 x 3
Farm pond subsidy-ಅಳತೆವಾರು ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ವಿವರ:
ಇದನ್ನೂ ಓದಿ: Free hostel application-ಉಚಿತ ಹಾಸ್ಟೆಲ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
2) ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ/ Farm pond polythene :
ಕೃಷಿ ಹೊಂಡದಲ್ಲಿ ಸಂಗ್ರಹಣೆಯಾದ ನೀರು ಇಂಗಿ ಹೋಗದಂತೆ ತಡೆಗಟ್ಟಲು ಕೆಂಪು ಮಣ್ಣಿನಲ್ಲಿ ನಿರ್ಮಿಸಲಾದ ಕೃಷಿ ಹೊಂಡಕ್ಕೆ ಪಾಲಿಥೀನ್ ಹೊದಿಕೆ ಅಳವಡಿಸುವುದು ಕಡ್ಡಾಯವಾಗಿರುತ್ತದೆ.
3) ಕ್ಷೇತ್ರ ಬದು ನಿರ್ಮಾಣ :
ರೈತರ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಪೋಲಾಗದಂತೆ ಅದೇ ಜಮೀನಿನಲ್ಲಿ ಇಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ಸಂಗ್ರಹಿಸಲು ಅನುವಾಗುವಂತೆ ರೈತರ ಜಮೀನಿನಲ್ಲಿ ಕ್ಷೇತ್ರ ಬದು ನಿರ್ಮಾಣ ಮಾಡುವುದು.
4) ತಂತಿ ಬೇಲಿ:
ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ನಿರ್ಮಿಸಿಕೊಳ್ಳುವ ಕೃಷಿ ಹೊಂಡದಲ್ಲಿ ಯಾವುದೇ ಜಾನುವಾರು / ಜನರು ಆಕಸ್ಮಿಕವಾಗಿ ಬಿದ್ದು ಅವಘಡಗಳು/ಪ್ರಾಣ ಹಾನಿ ಸಂಭವಿಸದಂತೆ ತಡೆಯಲು ಕಡ್ಡಾಯವಾಗಿ ತಂತಿ ಬೇಲಿ ಘಟಕವನ್ನು ಅಳವಡಿಸಿಕೊಳ್ಳಬೇಕಾಗಿರುತ್ತದೆ ಹಾಗೂ ಸಂತರದಲ್ಲೂ ಸರಿಯಾಗಿ ನಿರ್ವಹಣೆ ಮಾಡಬೇಕಾಗಿರುತ್ತದೆ.
ಇದನ್ನೂ ಓದಿ: E-kyc status- ಇ-ಕೆವೈಸಿ ಆದವರಿಗೆ ಮಾತ್ರ ಸಿಗಲಿದೆ ಪಿಎಂ ಕಿಸಾನ್ ಹಣ! ಇ-ಕೆವೈಸಿ ಆಗಿದಿಯಾ? ಚೆಕ್ ಮಾಡಿಕೊಳ್ಳಿ!
5) ಡೀಸಲ್ ಪಂಪ್ ಸೆಟ್/Diesel pump set:
ಕೃಷಿ ಹೊಂಡದಿಂದ ನೀರನ್ನು ಎತ್ತಲು ಡೀಸೆಲ್ ಪಂಪ್ ಸೆಟ್ ಅನ್ನು ಸಹಾಯಧನದಲ್ಲಿ ರೈತರು ಪಡೆಯಬಹುದು.
ಇದನ್ನೂ ಓದಿ: Kisan samman-ಕಿಸಾನ್ ಸಮ್ಮಾನ್ ರೂ 2,000 ಹಣ ರೈತರ ಖಾತೆಗೆ! ನಿಮಗೆ ಬಂತಾ ಚೆಕ್ ಮಾಡಿ!
6) ಲಘು ನೀರಾವರಿ/Irrigation:
ಕೃಷಿ ಹೊಂಡದಿಂದ ನೀರನ್ನು ಎತ್ತಿದ ಬಳಿಕ ರೈತರು ತಮ್ಮ ಬೆಳೆಗಳಿಗೆ ನೀರನ್ನು ಒದಗಿಸಲು ಲಘು ನೀರಾವರಿ ಘಟಕವನ್ನು ಸಹ ಸಹಾಯಧನದಲ್ಲಿ ಪಡೆಯಬಹುದು.
Application- ಅರ್ಜಿ ಸಲ್ಲಿಕೆ ಮಾಹಿತಿ:
ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
Documents-ಅರ್ಜಿ ಸಲ್ಲಿಸಲು ದಾಖಲೆಗಳು:
1) ಆಧಾರ್ ಕಾರ್ಡ ಪ್ರತಿ
2) ಪೋಟೋ
3) ಪಹಣಿ/ಊತಾರ್/RTC
4) ಬ್ಯಾಂಕ್ ಪಾಸ್ ಬುಕ್
5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ(ಅನ್ವಯಿಸಿದ್ದಲ್ಲಿ ಮಾತ್ರ)
Krishi bhagya guideline 2024-25/ಕೃಷಿ ಭಾಗ್ಯ ಮಾರ್ಗಸೂಚಿ: Download Now