Free phenyl making training- 10 ದಿನ ಉಚಿತ ಅಗರ ಬತ್ತಿ, ಮೆಣದ ಬತ್ತಿ,ಫಿನೈಲ್ ತಯಾರಿಕಾ ತರಬೇತಿಗೆ ಅರ್ಜಿ!

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಕೇಂದ್ರದಿಂದ 10 ದಿನದ ಉಚಿತ ಅಗರ ಬತ್ತಿ, ಮೆಣದ ಬತ್ತಿ,ಫಿನೈಲ್(phenyl making training) ತಯಾರಿಕಾ ತರಬೇತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಈ ತರಬೇತಿ ಪಡೆಯುವುದರಿಂದ ಆಗುವ ಪ್ರಯೋಜನಗಳೇನು? ತರಬೇತಿಯನ್ನು(self employment training) ಪಡೆಯಲು ಅರ್ಹರು ಯಾರು? ಇತರೆ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಅಗರ ಬತ್ತಿ, ಮೆಣದ ಬತ್ತಿ,ಫಿನೈಲ್ ತಯಾರಿಕಾ ಕ್ಷೇತ್ರದಲ್ಲಿ ಸ್ವ-ಉದ್ಯೋಗ ಮಾಡಲು ಆಸಕ್ತಿಯರುವ ಅಭ್ಯರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Gruhalakshmi Status-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌!

Free business training-ತರಬೇತಿ ನಡೆಯುವ ಅವಧಿ:

ಉಚಿತ ಅಗರ ಬತ್ತಿ, ಮೆಣದ ಬತ್ತಿ,ಫಿನೈಲ್ ತಯಾರಿಕಾ ತರಬೇತಿಯು ದಿನಾಂಕ 14 ಅಕ್ಟೋಬರ್ 2024 ರಿಂದ ಪ್ರಾರಂಭವಾಗಿ ದಿನಾಂಕ: 23 ಅಕ್ಟೋಬರ್ 2024ಕ್ಕೆ ಮುಕ್ತಾಯವಾಗುತ್ತದೆ. ಈ ತರಬೇತಿಯು ಒಟ್ಟು 10 ದಿನ ನಡೆಯುತ್ತದೆ.

ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

1) 18 ರಿಂದ 45 ವರ್ಷದ ಒಳಗಿರುವವರು ಭಾಗವಹಿಸಬಹುದು.

2) ತರಬೇತಿಯನ್ನು ಪಡೆದ ಬಳಿಕ ಅಭ್ಯರ್ಥಿಯು ಸ್ವ-ಉದ್ಯೋಗವನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.

4) ತರಬೇತಿಯಲ್ಲಿ ಭಾಗವಹಿಸಲು ಗ್ರಾಮೀಣ ಭಾಗದ BPL ಕಾರ್ಡ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಅದ್ಯತೆ ನೀಡಲಾಗುತ್ತದೆ.

business training

ಇದನ್ನೂ ಓದಿ: Krishi honda subsidy-ಶೇ 80% ಸಬ್ಸಿಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಅರ್ಜಿ!

ತರಬೇತಿಗೆ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಈ ಮೇಲೆ ತಿಳಿಸಿದ ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಈ 9449860007, 9538281989, 9916783825, 8880444612 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಮ್ಮ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಬೇಕು.

ವಸತಿ-ಊಟ ಸಹಿತ ಸಂಪೂರ್ಣ ಉಚಿತ ತರಬೇತಿ:

ಅಗರ ಬತ್ತಿ, ಮೆಣದ ಬತ್ತಿ,ಫಿನೈಲ್ ತಯಾರಿಕೆ ತರಬೇತಿಯು ಉಚಿತ ಊಟ ಮತ್ತು ವಸತಿಯನ್ನು ಒಳಗೊಂಡಿದ್ದು ಅಭ್ಯರ್ಥಿಗಳು ತರಬೇತಿ ಮುಗಿಯುವವರಿಗೆ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯವನ್ನು ತರಬೇತಿ ಕೇಂದ್ರದಿಂದಲೇ ಪಡೆಯಬಹುದು.

ಇದನ್ನೂ ಓದಿ: Horticulture Diploma- ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
ಫೋಟೋ,
ಬ್ಯಾಂಕ್ ಪಾಸ್ ಬುಕ್,
ರೇಶನ್ ಕಾರ್ಡ ಪ್ರತಿ.

Training benefits-ತರಬೇತಿ ಪಡೆಯುವುದರಿಂದ ಆಗುವ ಪ್ರಯೋಜನಗಳೇನು?

ಈ ಸಂಸ್ಥೆ ಮೂಲಕ ತರಬೇತಿಯನ್ನು ಪಡೆಯುವುದರಿಂದ ಆ ಕ್ಷೇತ್ರದಲ್ಲಿ ನೈಪುಣ್ಯತೆ ಪಡೆಯುವುದರ ಜೊತೆಗೆ ಸ್ವ-ಉದ್ಯೋಗವನ್ನು ಆರಂಭಿಸಲು ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಸೂಕ್ತ ಮಾರ್ಗದರ್ಶನವನ್ನು ಸಹ ಪಡೆಯಬಹುದು.