BPL Card-ಪಡಿತರ ಚೀಟಿದಾರರೇ ಗಮನಿಸಿ ಈ ನಿಯಮ ಪಾಲಿಸದಿದ್ದರೆ ನಿಮ್ಮ ಕಾರ್ಡ ರದ್ದಾಗುತ್ತದೆ!

ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಗ್ರಾಹಕರು(Ration card ekyc status) ತಪ್ಪದೇ ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದ್ದು, ನೀವೆನಾದರು ಈ ತಿಂಗಳು ಮುಕ್ತಾಯವಾಗುವುದರ ಒಳಗಾಗಿ ಈ ಕೆಲಸ ಮಾಡದಿದ್ದಲ್ಲಿ ನಿಮ್ಮ ಪಡಿತರ ಚೀಟಿ ರದ್ದಾಗುತ್ತದೆ.

ಪಡಿತರ ಚೀಟಿ ಹೊಂದಿರುವ ಗ್ರಾಹಕರು ಯಾವ? ಕೆಲಸವನ್ನು ತಪ್ಪದೇ ಮಾಡಬೇಕು, ಆ ಕೆಲಸ ಯಾವುದು? ಎಲ್ಲಿ ಮಾಡಿಸಬೇಕು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳೇನು? ಇತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದೊಂದಿಗೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ BPL ಮತ್ತು APL ಕಾರ್ಡದಾರರಿಗೆ ಆಹಾರ ದಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ, ಆಹಾರ ದಾನ್ಯಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸಲು ಅರ್ಹ ಹಿಂದುಳಿದ ವರ್ಗದ ನಾಗರಿಕರಿಗೆ ಬಿಪಿಎಲ್ ಕಾರ್ಡ ಅನ್ನು ನೀಡಲಾಗುತ್ತದೆ, ಅರ್ಥಿಕವಾಗಿ ಸಬಲರಿರುವ ನಾಗರಿಕರಿಗೆ APL ಕಾರ್ಡ ಅನ್ನು ನೀಡಲಾಗುತ್ತದೆ.

ಇದನ್ನೂ ಓದಿ: Best Top 5 Tractors- ದಸರಾ ಹಬ್ಬಕ್ಕೆ ಕರ್ನಾಟಕದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್ ಗಳು!

ಈ ಎರಡು ಕಾರ್ಡ ಹೊಂದಿರುವ ಗ್ರಾಹಕರು ತಪ್ಪದೇ ಅಕ್ಟೋಬರ್ ತಿಂಗಳು ಮುಕ್ತಾಯವಾಗುವುದರ ಒಳಗಾಗಿ ಕಾರ್ಡನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ಮಾಡಿಸಿಕೊಳ್ಳವಂತೆ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

Ration card e kyc: ರೇಶನ್ ಕಾರ್ಡದಾರರು ಈ ಕೆಲಸ ಮಾಡುವುದು ಕಡ್ಡಾಯ!

ಪ್ರಸ್ತುತ ಪಡಿತರ ಚೀಟಿ ಹೊಂದಿರುವ ಎಲ್ಲಾ ಕಾರ್ಡಿನವರು ತಮ್ಮ ಕಾರ್ಡ ನಲ್ಲಿ ಎಷ್ಟು ಜನ ಸದಸ್ಯರು ಇರುತ್ತಿರೋ ಎಲ್ಲರೂ ಇ-ಕೆವೈಸಿ ಮಾಡಿಕೊಳ್ಳುವುದನ್ನು ಇಲಾಖೆಯಿಂದ ಕಡ್ಡಾಯ ಮಾಡಲಾಗಿದ್ದು, ಈ ಸಂಬಂದ ಎಲ್ಲಾ ಸದಸ್ಯರು ಈ ತಿಂಗಳ ಒಳಗಾಗಿ ರೇಶನ್ ಕಾರ್ಡನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ಮಾಡಿಸಿಕೊಳ್ಳಿ. ಈ ಕೆಲಸವನ್ನು ಮಾಡದಿದ್ದಲ್ಲಿ ನಿಮ್ಮ ಕಾರ್ಡ ರದ್ದಾಗುತ್ತದೆ ಒಂದೆರಡು ಸದಸ್ಯರ ಇ-ಕೆವೈಸಿ ಅಗದಿದ್ದಲ್ಲಿ ಆ ಸದಸ್ಯರನ್ನು ಕಾರ್ಡನಿಂದ ಕೈ ಬಿಡಲಾಗುತ್ತದೆ.

ಇದನ್ನೂ ಓದಿ: Dishank mobile app- ಕರ್ನಾಟಕದ ಯಾವುದೇ ಸ್ಥಳದ ಸರ್ವೆ ನಂಬರ್ ಮತ್ತು ಮಾಲೀಕರ ವಿವರ ಪಡೆಯಬಹುದು!

ಇ-ಕೆವೈಸಿಯನ್ನು ಎಲ್ಲಿ ಮಾಡಬೇಕು?

ಇಲ್ಲಿಯವರೆಗೆ ಪಡಿತರ ಚೀಟಿ ಇ-ಕೆವೈಸಿ ಮಾಡಿಸದವರು ಅಥವಾ ಕಾರ್ಡನಲ್ಲಿ ಒಂದೆರಡು ಸದಸ್ಯರ ಇ-ಕೆವೈಸಿ ಬಿಟ್ಟು ಹೋಗಿದರು ನಿಮ್ಮ ಹಳ್ಳಿಯ ನ್ಯಾಯಬೆಲೆ ಅಂಗಡಿಯನ್ನು ಬೆಳಗ್ಗೆ 10-00 ರಿಂದ ಸಂಜೆ 5-00 ಗಂಟೆಯ ಮಧ್ಯ ಅಗತ್ಯ ದಾಖಲಾತಿ ಮತ್ತು ಖುದ್ದು ಸದಸ್ಯರು ಭೇಟಿ ಮಾಡಿ ಇ-ಕೆವೈಸಿಯನ್ನು ಮಾಡಿಕೊಳ್ಳಬೇಕು. ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಯಾವುದೇ ಶುಲ್ಕ ನೀಡುವಂತಿಲ್ಲ.

ಕೆವೈಸಿಯನ್ನು ಏಕೆ ಮಾಡಬೇಕು?

ಅನೇಕ ಮಂದಿಗೆ ಈ ಪ್ರಶ್ನೆ ಕಾಡುತ್ತದೆ ರಾಜ್ಯ ಮತ್ತು ಕೇಂದ್ರ ಸರಕಾರ ಹಾಗೂ ಬ್ಯಾಂಕ್ ಗಳಲ್ಲಿ ಇ-ಕೆವೈಸಿ ಮಾಡಿಕೊಳ್ಳು ಎಂದು ಅಗ್ಗಾಗ ಹೇಳುತ್ತಿರುತ್ತಾರೆ ಏಕೆ ಕೆವೈಸಿ ಮಾಡಿಕೊಳ್ಳಬೇಕು ಎಂದರೆ ಅರ್ಹ ಫಲಾನುಭವಿಗಳಿಗೆಯೇ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆಯೇ ಎಂದು ಫಲಾನುಭವಿಯ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಕೆವೈಸಿ ಮಾಡಿಕೊಳ್ಳಲು ಸೂಚಿಸಲಾಗುತ್ತದೆ.

ಇದನ್ನೂ ಓದಿ: Google Pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 9.0 ಲಕ್ಷದವರೆಗೆ ಲೋನ್!

Documents for ration card e-KYC-ಕೆವೈಸಿಗೆ ದಾಖಲೆಗಳು:

1) ಒರಿಜಿನಲ್ ರೇಶನ್ ಕಾರ್ಡ.

2) ಸದಸ್ಯರ ಅಧಾರ್ ಕಾರ್ಡ.

3) ರೇಶನ್ ಕಾರ್ಡ ಲಿಂಕ್ ಯಿರುವ ಮೊಬೈಲ್.

How check ration card E-kyc status-ಈಗಾಗಲೇ ಇ-ಕೆವೈಸಿ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

ರಾಜ್ಯ ಸರಕಾರದ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳ ಭಾಗದಲ್ಲಿ ವಿವರಿಸಿರುವ ಹಂತಗಳನ್ನು ಅನುಸರಿಸಿ ಈಗಾಗಲೇ ಇ-ಕೆವೈಸಿ ಅಗಿರುವುದನ್ನು ಒಮ್ಮೆ ಖಚಿತಪಡಿಸಿಕೊಳ್ಳಬಹುದು.

Step-1: ಪ್ರಥಮದಲ್ಲಿ ಇಲ್ಲಿ ಮೂರು ಲಿಂಕ್ ಗಳನ್ನು ಕೊಟ್ಟಿದು ಜಿಲ್ಲೆಗಳ ವಿಭಾಗವಾರು ಗ್ರಾಹಕರು ತಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: D.Pharm admission-2024: ಡಿ.ಫಾರ್ಮ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!

Bengalore- Click here

Ballari, Bidar, Chikkaballapura, Chitradurga, Davangere, Kalaburagi, Kolar, Koppal, Raichur,Ramanagara, Shivamoga, Tumakuru, Yadgir, Vijayanagara districts only- Click here

Bagalkote, Belagavi, Chamarajnagara, Chikkamagaluru, Dakshinakannada, Dharwar, Gadag, Hassan, Haveri, Kodagu, Mandya, Mysuru, Udupi, Uttarakannada, Vijayapura districts only- Click here

Ration card ekyc

Step-2: ಇಲ್ಲಿ “ಪಡಿತರ ಚೀಟಿ ವಿವರ/Status Of Ration card” ಆಯ್ಕೆಯ ಮೇಲೆ ಕ್ಲಿಕ್ ಮಾಡಿ Select verification type: with Out OTP ಆಯ್ಕೆಯನ್ನು ಟಿಕ್ ಮಾಡಿಕೊಂಡು RC No/ RC ನಂ * ಕಾಲಂ ನಿಮ್ಮ ರೇಶನ್ ಕಾರ್ಡ ನಂಬರ್ ಅನ್ನು ಹಾಕಿ Go ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಈ ಪೇಜ್ ನಲ್ಲಿ ನಿಮ್ಮ ರೇಶನ್ ಕಾರ್ಡನ ಸಂಪೂರ್ಣ ವಿವರ ತೋರಿಸುತ್ತದೆ ಇಲ್ಲಿ Member count ಆಯ್ಕೆ ವಿಭಾಗದಲ್ಲಿ e-KYC Done ಎಂದು ತೋರಿಸಿ ಎಲ್ಲಾ ಸದಸ್ಯರ ಸಂಖ್ಯೆ ಗೋಚರಿಸಿದರೆ ನಿಮ್ಮ ರೇಶನ್ ಕಾರ್ಡನ ಎಲ್ಲಾ ಸದಸ್ಯರ ಕೆವೈಸಿ ಅಗಿದೆ ಎಂದು ಒಂದು ವೇಳೆ ನಿಮ್ಮ ಪಡಿತರ ಚೀಟಿಯಲ್ಲಿ 5 ಜನ ಸದಸ್ಯರಿದ್ದು e-KYC Done ಕಾಲಂ ಮುಂದೆ 4 ಸಂಖ್ಯೆ ತೋರಿಸಿ e-KYC Remaining ಕಾಲಂ ಮುಂದೆ 1 ಎಂದು ಸಂಖ್ಯೆ ತೋರಿಸಿದರೆ ಇನ್ನು ಒಬ್ಬ ಸದಸ್ಯರ ಕೆವೈಸಿ ಮಾಡಿಸುವುದು ಪೇಂಡಿಂಗ್ ಇದೆ ಎಂದು ತಿಳಿಯಬೇಕು.

ration card status

ಇದನ್ನೂ ಓದಿ: Colgate Scholarship 2024 – ಕೋಲ್ ಗೇಟ್ ಕಂಪನಿಯಿಂದ ವಿದ್ಯಾರ್ಥಿಗಳಿಗೆ 75 ಸಾವಿರ ವಿದ್ಯಾರ್ಥಿ ವೇತನ!

ಪ್ರಸ್ತುತ ಆಹಾರ ಇಲಾಖೆಯಿಂದ ಎಷ್ಟು ದಾನ್ಯ ವಿತರಣೆ ಮಾಡಲಾಗುತ್ತದೆ?

ಅಕ್ಟೋಬರ್ 2024 ರ ಮಾಹೆಯ ಪಡಿತರ ವಿತರಣೆಯಲ್ಲಿ ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ ಅಕ್ಕಿ-21 ಕೆಜಿ, ಜೋಳ-14 ಕೆಜಿ ಉಚಿತವಾಗಿ ವಿತರಿಸಲಾಗುತ್ತದೆ. ಹಾಗೂ ಪಿಎಚ್‍ಎಚ್ (BPL) ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ ಅಕ್ಕಿ-3 ಕೆಜಿ, ಜೋಳ- 2 ಕೆಜಿ ಉಚಿತವಾಗಿ ವಿತರಿಸಲಾಗುತ್ತದೆ. ಅಂತರರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯುವವರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ಸದಸ್ಯರಿಗೆ- 5ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ.

ಕಾಳಸಂತೆಯಲ್ಲಿ ಅನಧಿಕೃತವಾಗಿ ಆಹಾರಧಾನ್ಯವನ್ನು ದಾಸ್ತಾನು ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಮ ಕೈಗೊಳ್ಳಲಾಗುತ್ತದೆ. ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ, ಸಂಬಂಧಿಸಿದ ತಹಶೀಲದಾರ ಕಛೇರಿ ಅಥವಾ ಜಂಟಿ ನಿರ್ದೇಶಕರ ಕಛೇರಿ ಆಹಾರ ಇಲಾಖೆ ಇವರಿಗೆ ದೂರು ಸಲ್ಲಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಜಿಲ್ಲಾವಾರು ಆಹಾರ ಇಲಾಖೆ ಕಚೇರಿ ದೂರವಾಣಿ ಸಂಖ್ಯೆಗಳು/Office numbers pdf- Download Now