ಹೊಸದಾಗಿ ಹೈನುಗಾರಿಕೆಯನ್ನು ಪ್ರಾರಂಭಿಸುವವರು ಅಥವಾ ಈಗಾಗಲೇ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವವರು ಕೃಷಿ ಇಲಾಖೆಯಿಂದ ಈ ಯೋಜನೆಯಡಿ ಹಸು/ಎಮ್ಮೆ ಸಾಕಾಣಿಕೆಗೆ 40 ಸಾವಿರ ಅರ್ಥಿಕ ನೆರವನ್ನು(Dairy farm subsidy scheme) ಪಡೆಯಬಹುದು.
ಪ್ರಸ್ತುತ ಹವಾಮಾನ ವೈಪರಿತ್ಯದಂತಹ ಸನ್ನಿವೇಶಗಳನ್ನು ರೈತರು ಕೇವಲ ಬೆಳೆಗಳನ್ನು ನೆಚ್ಚಿಕೊಂಡು ಕೃಷಿ ಚಟುವಟಿಕೆ ಮಾಡಿಕೊಂಡು ಹೋಗುವುದರ ಜೊತೆಗೆ ಕೃಷಿ ಉಪಕಸುಬುಗಳಾದ ಹೈನುಗಾರಿಕೆ(Dairy farm), ಮೀನುಗಾರಿಕೆ(Fish farming), ಕೋಳಿ(poultry farm) ಮತ್ತು ಕುರಿ/ಆಡು(sheep and goat farming) ಸಾಕಾಣಿಕೆಯಲ್ಲಿಯು ತೊಡಗಿಕೊಳ್ಳುವುದು ಅತ್ಯಗತ್ಯವಾಗಿದೆ.
ಹೈನುಗಾರಿಕೆ ಅಂದರೆ ಹಸು ಮತ್ತು ಎಮ್ಮೆ ಸಾಕಾಣಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಅರ್ಥಿಕವಾಗಿ ನೆರವಾಗಲು ಕೃಷಿ ಇಲಾಖೆಯಿಂದ ಕಳೆದ 2 ವರ್ಷದಿಂದ “ಸಮಗ್ರ ಕೃಷಿ ಪದ್ದತಿ” ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತಿದ್ದು ಈ ಯೋಜನೆಯ ಕುರಿತು ಇಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Labour card application- ಕಾರ್ಮಿಕ ಮಂಡಳಿಯಿಂದ ಸ್ಮಾರ್ಟ್ ಕಾರ್ಡ! ಈ ಕಾರ್ಡ ಹೊಂದಿರುವವರಿಗೆ 5 ಲಕ್ಷ ವಿಮೆ ಸೌಲಭ್ಯ!
Karnataka Agriculture deparment IFS scheme-“ಸಮಗ್ರ ಕೃಷಿ ಪದ್ದತಿ” ಯೋಜನೆಯಡಿ ಅರ್ಥಿಕ ನೆರವು
2022-23 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ ಹಾಗೂ ಪಶುಸಂಗೋಪನೆಗಳನ್ನು ಒಗ್ಗೂಡಿಸಿ “ಸಮಗ್ರ ಕೃಷಿ ಪದ್ದತಿ” ಮೂಲಕ ರೈತನ ಆದಾಯ ಹೆಚ್ಚಳ ಮಾಡುವುದು ಹಾಗೂ ಅಳವಡಿಸಿದ ಪ್ರದೇಶದಲ್ಲಿ/ ಜಮೀನಿನಲ್ಲಿ ಬೆಳೆ ಉತ್ಪಾದಕತೆ, ಸುಸ್ಥಿರತೆ, ಸಮತೋಲನಾ ಆಹಾರ ಉತ್ಪಾದನೆ, ತಾಜ್ಯಗಳ ಮರುಬಳಕೆ ಹಾಗೂ ವರ್ಷಪೂರ್ತಿ ಆದಾಯ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ.
ಇದನ್ನೂ ಓದಿ: Junior Power Man: KEB ಯಿಂದ SSLC ಪಾಸಾದವರಿಗೆ ಭರ್ಜರಿ ಉದ್ಯೋಗವಾಕಾಶ! 2,975 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!
IFS yojane- “ಸಮಗ್ರ ಕೃಷಿ ಪದ್ದತಿ” ಯೋಜನೆ ಉದ್ದೇಶಗಳು:
1) ಕೃಷಿ ಹಾಗೂ ಸಂಬಂಧಿತ ಕಾರ್ಯಕ್ಷೇತ್ರಗಳಲ್ಲಿ “ಸಮಗ್ರ ಕೃಷಿ ಪದ್ದತಿ ಮಾದರಿಗಳನ್ನು ಸಿದ್ದಪಡಿಸಿದ್ದು, ಆಯಾ ಕ್ಷೇತ್ರಕ್ಕೆ ಸೂಕ್ತವಾಗುವಂತೆ ಅಳವಡಿಸುವುದು.
2) ಉತ್ತಮ ಬೇಸಾಯ ಪದ್ದತಿಗಳಾದ ನೂತನ ತಾಂತ್ರಿಕತೆಗಳು, ಅಧಿಕ ಇಳುವರಿ ಕೊಡುವ ತಳಿಗಳನ್ನು ಸಂಯೋಜನೆಯಲ್ಲಿ ಬಳಸುವುದು.
3) ರೈತರ ಆದಾಯ ಹೆಚ್ಚಿಸಲು ಕೃಷಿ ಜೊತೆಗೆ ಇತರೆ ಆದಾಯ ಬರುವ ಉದ್ದಿಮೆಗಳನ್ನು ಅಳವಡಿಸಲು ಪ್ರೇರೇಪಿಸುವುದು.
ಈ ಯೋಜನೆಯಡಿ ಯಾವುದಕ್ಕೆಲ್ಲ ಅರ್ಥಿಕ ನೆರವು ಪಡೆಯಬಹುದು?
1) ಕೃಷಿ ಹೊಂಡ ನಿರ್ಮಾಣ/Farm pond
2) ಹಸು/ಎಮ್ಮೆ ಸಾಕಾಣಿಕೆಗೆ ಅರ್ಥಿಕ ನೆರವು/Dairy farm
3) ಎರೆಹುಳು ಗೊಬ್ಬರ ತಯಾರಿಕೆ ಘಟಕ/Vermicompost
4) ಅಜೋಲ್ಲಾ ಘಟಕ-Azolla bed
5) ಸಣ್ಣ ಪ್ರಮಾಣದ ಮೇವಿನ ಬೆಳೆಗೆ ನೆರವು/Fodder seeds
6) ಕೈತೋಟ ನಿರ್ಮಾಣಕ್ಕೆ ನೆರವು/Kitchen garden
7) ಮರ ಆಧಾರಿತ ಕೃಷಿಗೆ ನೆರವು/Forestry crops
8) ಮೀನು ಸಾಕಾಣಿಕೆ/Fish farming
ಇದನ್ನೂ ಓದಿ: Bigg boss kannada-ಬಿಗ್ ಬಾಸ್ ಗೆ ವಿದಾಯ ಹೇಳಿದ ಕಿಚ್ಚ ಸುದೀಪ್!
Dairy farming subsidy-ಘಟಕವಾರು ಅರ್ಥಿಕ ನೆರವಿನ ವಿವರ ಹೀಗಿದೆ:
ಘಟಕ | ಸಹಾಯ ಧನ |
ನೀರು ಸಂರಕ್ಷಣೆ: ವಿವಿಧ ಅಳತೆಗಳ ಚಿಕ್ಕ ಹೊಂಡಗಳು (ಲೈನಿಂಗ್ ಸಹಿತ/ ಲೈನಿಂಗ್ ರಹಿತ) (ರಿಯಾಯಿತಿ ಶೇ. 50 ರಂತೆ) | |
10*10*3 | 13,173/- |
12*12*3 | 16,508/- |
15*15*3 | 22,808/- |
18*18*3 | 30,665/- |
21*21*3 | 40,041/- |
ಲೈನಿಂಗ್ ವೆಚ್ಚ | 25000/- |
ಸಸ್ಯಬೇಲಿ | 2500/- |
ಬದುಗಳು/ಟ್ರೆಂಚ್ ಗಳು | 2000/- |
ಬೆಳೆ ಪದ್ದತಿ ಆಧಾರಿತ ಸಮಗ್ರ ಬೆಳೆ ಪ್ರಾತ್ಯಕ್ಷತೆ-ನೂತನ ತಳಿಗಳೊಂದಿಗೆ | 15000/- |
ಸಣ್ಣ ಪ್ರಮಾಣದ ಕುರಿ/ಮೇಕೆ/ಕೋಳಿ ಹಾಗೂ ಮೇವಿನ ಬೆಳೆಗಳು | 10000/- |
ಎರೆಹುಳು ಗೊಬ್ಬರ | 8500/- |
ಅಜೋಲ್ಲಾ | 1000/- |
ಮರ ಆಧಾರಿತ ಕೃಷಿ | 1000/- |
ಕೈ ತೋಟ | 1000/- |
ಮೀನುಗಾರಿಕೆ | 2500/- |
ಹಸು/ಎಮ್ಮೆ (2 ಸಂಖ್ಯೆ) ಖರೀದಿ, ಹೈಬ್ರಿಡ್ ನೇಪಿಯರ್/ ಗಿನಿ ಹುಲ್ಲು ಹಾಗೂ ಅವಶ್ಯಕವಿರುವ ಪಶು ಆಹಾರ | 40,000/- |
ಇದನ್ನೂ ಓದಿ: Monthly pension scheme- ರೈತರಿಗೆ ಈ ಯೋಜನೆಯಡಿ ಸಿಗುತ್ತೆ ತಿಂಗಳಿಗೆ ರೂ 3,000 ಪಿಂಚಣಿ!
ಒಬ್ಬ ರೈತರು ಮಳೆಯಾಶ್ರಿತ ಪ್ರದೇಶದ ಸಮಗ್ರ ಕೃಷಿ ಪದ್ದತಿ ಯೋಜನೆಯಡು ಒಟ್ಟು ಎಲ್ಲಾ ಘಟಕಗಳ ಸಹಾಯದನ ಗರಿಷ್ಠ ರೂ 1,25,000/- ದ ವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ.
ಗಮನಿಸಿ: ಅನುದಾನ ಲಭ್ಯತೆ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
Dairy farming loan- ಹೈನುಗಾರಿಕೆಗೆ 50 ಸಾವಿರ ಸಹಾಯಧನ:
ಈ ಯೋಜನೆಯಲ್ಲಿ ಮೇಲಿನ ಟೇಬಲ್ ನಲ್ಲಿ ಹಾಕಿರುವ ಅಂಕಿ-ಅಂಶದ ಪ್ರಕಾರ ಹೈನುಗಾರಿಕೆ ಘಟಕಕ್ಕೆ ಅಂದರೆ 2 ಹಸು ಅಥವಾ ಎಮ್ಮೆ ಸಾಕಾಣಿಕೆಗೆ ರೂ 50,000 ಸಾವಿರದವರೆಗೆ ನೀರಾವರಿ ಪ್ರದೇಶದ ರೈತರು ಸಹಾಯಧನವನ್ನು ಪಡೆಯಬಹುದು.
ಇದನ್ನೂ ಓದಿ: Home loan- ಮನೆ ಕಟ್ಟಲು ಸಾಲ ಪಡೆಯಬೇಕೆ? ಇಲ್ಲಿದೆ ಉಪಯುಕ್ತ ಮಾಹಿತಿ!
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
Documents for IFS yojana-ಅರ್ಜಿ ಸಲ್ಲಿಸಲು ಡ್ಯಾಕುಮೇಂಟ್ ಗಳು:
ಅರ್ಜಿದಾರರ ಅಧಾರ್ ಕಾರ್ಡ/Aadhar ವಿವರ.
ಅರ್ಜಿದಾರರ ಪೋಟೋ/Photo.
ಜಮೀನಿನ ಪಹಣಿ/RTC.
ಬ್ಯಾಂಕ್ ಪಾಸ್ ಬುಕ್ ಪ್ರತಿ/Bank pass book.
ಅರ್ಜಿ ನಮೂನೆ(ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತದೆ)
ಮೊಬೈಲ್ ನಂಬರ್/Mobile number.
ಇದನ್ನೂ ಓದಿ: RTC Aadhar link- ಪಹಣಿಗೆ ಆಧಾರ್ ಲಿಂಕ್ ಸರಕಾರದಿಂದ ಮಹತ್ವದ ಮಾಹಿತಿ ಪ್ರಕಟ!
Karnataka agriculture department website-ಇನ್ನು ಅಧಿಕ ಮಾಹಿತಿ ಪಡೆಯಲು ಕೃಷಿ ಇಲಾಖೆ ವೆಬ್ಸೈಟ್: Click here
IFS scheme guidelines- ಸಮಗ್ರ ಕೃಷಿ ಪದ್ದತಿ ಯೋಜನೆಯ ಮಾರ್ಗಸೂಚಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
: Download Now