Scholarship online application- 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

Facebook
Twitter
Telegram
WhatsApp

ರಾಜ್ಯ ಸರಕಾರದಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ವಿದ್ಯಾರ್ಥಿ ವೇತನ(Scholarship application) ಪಡೆಯಲು 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ರಾಜ್ಯ ಸರಕಾರದಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರತ್ಯೇಕ ಜಾಲತಾಣವನ್ನು ರಚನೆ ಮಾಡಿದ್ದು ವಿದ್ಯಾರ್ಥಿಗಳು ಈ ವೆಬ್ಸೈಟ್ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿ ವೇತನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳು ಏನು? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಸಂಬಂಧಪಟ್ಟ ಇಲಾಖೆಗಳ ಸಹಾಯವಾಣಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Car loan Subsidy-ಸರಕು ಅಥವಾ ಯೆಲ್ಲೋ ಬೋರ್ಡ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

SSP website-ಎಲ್ಲಾ ಬಗ್ಗೆಯ ಸರಕಾರಿ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಒಂದೇ ವೆಬ್ಸೈಟ್:

ರಾಜ್ಯ ಸರಕಾರದಿಂದ ಎಲ್ಲಾ ಇಲಾಖೆಗಳಿಂದ ಜಾರಿಯಲ್ಲಿರುವ ವಿವಿಧ ಬಗ್ಗೆಯ ವಿದ್ಯಾರ್ಥಿ ವೇತನವನ್ನು ಪಡೆಯಲು 1 ನೇ ತರಗತಿಯಿಂದ ಪದವಿ ವ್ಯಾಸಂಗ ಮಾಡುತ್ತಿರುವವರ ವರೆಗಿನ ಎಲ್ಲಾ ವಿದ್ಯಾರ್ಥಿಗಳು ಇ-ಆಡಳಿತ ಇಲಾಖೆಯಿಂದ ಅಭಿವೃದ್ದಿಪಡಿಸಿರುವ SSP PORTAL(https://ssp.postmatric.karnataka.gov.in/) ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಥಿಗಳು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Google Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!

Documents for SSP Scholarship-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1) ಅರ್ಜಿದಾರರ ಆಧಾ‌ರ್ ಸಂಖ್ಯೆ ಮತ್ತು ಆಧಾರ್ ನಲ್ಲಿ ಇರುವ ಹಾಗೆ ಹೆಸರು

2) ಅರ್ಜಿದಾರರ ಮೊಬೈಲ್ ಸಂಖ್ಯೆ

3) ಅರ್ಜಿದಾರರ ಇ-ಮೇಲ್ ಐ.ಡಿ.

4) ಅರ್ಜಿದಾರರ ಶಾಲಾ ನೋಂದಣಿ ವಿವರ

5) ಅರ್ಜಿದಾರರ ಹೆಸರಿನಲ್ಲಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆ‌ರ್.ಡಿ ಸಂಖ್ಯೆ

6) ಅರ್ಜಿದಾರರ ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ

7) ಅರ್ಜಿದಾರರ ವಾಸವಿರುವ ಜಿಲ್ಲೆ, ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ

8) ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ)

ಇದನ್ನೂ ಓದಿ: Ganga Kalyana- ಕೊಳವೆ ಬಾವಿ ಕೊರೆಸಲು 4.25 ಲಕ್ಷ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

SSP Scholarship Online link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿ ವೇತನ ಪಡೆಯಲು ಅರ್ಹರಿರುವ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿಯನ್ನು ಅನುಸರಿಸಿ ಆ ಹಂತಗಳನ್ನು ಪಾಲಿಸಿ SSP ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Step-1: ಪ್ರಥಮದಲ್ಲಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ SSP ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

Scholarship application

Step-2: ಬಳಿಕ ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಪ್ರವೇಶ ಮಾಡುತ್ತಿರುವವರು ಖಾತೆಯನ್ನು ಸೃಜನೆ ಮಾಡಿಕೊಳ್ಳಬೇಕು ಈಗಾಗಲೇ ಖಾತೆಯನ್ನು ಸೃಜನೆ ಮಾಡಿಕೊಂಡಿರುವವರು ನೇರವಾಗಿ ನಿಮ್ಮ ಬಳಕೆದಾರ ಐಡಿಯನ್ನು ಹಾಕಿ ಲಾಗಿನ್ ಆಗಬೇಕು.

ಇದನ್ನೂ ಓದಿ: Best mileage bikes-ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳು!ಫುಲ್ ಟ್ಯಾಂಕ್ ಮಾಡಿದರೆ 700-750 km ಓಡಿಸಬಹುದು!

ಹೊಸದಾಗಿ ಖಾತೆಯನ್ನು ರಚನೆ ಮಾಡಿಕೊಳ್ಳುವ ವಿಧಾನದ ಸಂಪೂರ್ಣ ಮಾಹಿತಿ ಕೈಪಿಡಿ: Download Now

Step-3: ಲಾಗಿನ್ ಅಗಿ ಅರ್ಜಿದಾರರ ಆಧಾರ್ ಕಾರ್ಡ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಾಕಿ ಇ-ಕೆವೈಸಿಯನ್ನು ದೃಡೀಕರಿಸಿ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿವರವನ್ನು ಭರ್ತಿ ಮಾಡಿ ಮುಂದುವರೆಯಬೇಕು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿಯ ಕೈಪಿಡಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: Download Now

ಇದನ್ನೂ ಓದಿ: Bele vime parihara-ಬೆಳೆ ವಿಮೆ ಈ ಜಿಲ್ಲೆಯ ರೈತರಿಗೆ 45 ಕೋಟಿ ಬಿಡುಗಡೆ!

Scholarship Helpline numbers- ಇಲಾಖಾವಾರು ಸಹಾಯವಾಣಿಗಳು:

STATE SCHOLARSHIP PORTAL HELPLINE NUMBER- 1902
ಸಮಾಜ ಕಲ್ಯಾಣ ಇಲಾಖೆ- 9482300400/08022634300
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- 8277799990
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ- 9482300400/080-22634300
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ- 8050770004/8050770005
ಕುಟುಂಬ ವೆಬ್ಸೈಟ್- 080-22371030

Facebook
Twitter
Telegram
WhatsApp
Picture of siddesh

siddesh

Leave a Comment

Top Stories

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ

Crop insurance

Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು(Rabi Crop Insurance) ಮಾಡಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು? ಅರ್ಜಿ