Bank loan for business- ಬಡ್ಡಿದರ ರಿಯಾಯಿತಿಯಲ್ಲಿ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ! ಇಲ್ಲಿದೆ ಸಂಪೂರ್ಣ ವಿವರ!

ಕೇಂದ್ರ ಸರಕಾರದ ಲಖ್ಪತಿ ದೀದಿ ಯೋಜನೆಯಡಿ ಬಡ್ಡಿದರ ಸಬ್ಸಿಡಿಯಲ್ಲಿ ಸ್ವಂತ ಉದ್ದಿಮೆಯನ್ನು ಮಾಡಲು ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು(Without Interest Loan scheme) ನೀಡಲಾಗುತ್ತದೆ ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಲು ಸ್ವಂತ ಉದ್ದಿಮೆಯನ್ನು ಆರಂಭಿಸಲು ಅಥವಾ ಹೀಗಾಗಲೇ ಉದ್ದಿಮೆಯನ್ನು ಆರಂಭಿಸಿರುವ ಅರ್ಹ ಮಹಿಳೆಯರಿಗೆ ಅರ್ಥಿಕ ನೆರವು ಮತ್ತು ಮಾರುಕಟ್ಟೆ ನೆರವನ್ನು ನೀಡಲು ಕೇಂದ್ರ ಸರಕಾರದಿಂದ “ಲಖ್ಪತಿ ದೀದಿ”(Lakhpati Didi Yojana-2024)ಯೋಜನೆಯಡಿಯಲ್ಲಿ ಬಡ್ಡಿದರ ಸಬ್ಸಿಡಿಯಲ್ಲಿ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Aadhar card-ಆಧಾರ್ ಕಾರ್ಡ್‌ ನಲ್ಲಿ ಹೆಸರು, ವಿಳಾಸವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಿಸಬಹುದು?

ಈ ಯೋಜನೆಯು ಸ್ವ-ಸಹಾಯ ಸಂಘದ ಸದಸ್ಯ ಮಹಿಳೆಯರಿಗೆ ಮಾತ್ರ ಇದ್ದು. ಯಾರೆಲ್ಲರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯವಾಗಿ ಹೊಂದಿರಬೇಕಾದ ದಾಖಲೆಗಳೇನು? ಎಷ್ಟು ಸಾಲ(bank loan for business) ಒದಗಿಸಲಾಗುತ್ತದೆ? ಇತರೆ ಮಾಹಿತಿಯನ್ನು ಅಂಕಣದಲ್ಲಿ ವಿವರಿಸಲಾಗಿದೆ.

Lakhpati Didi Yojana- ಏನಿದು ಲಖ್ಪತಿ ದೀದಿ ಯೋಜನೆ?

ಲಖ್ಪತಿ ದೀದಿ ಯೋಜನೆಯು ಮಹಿಳೆಯರಿಗಾಗಿಯೇ ಕೇಂದ್ರದಿಂದ ಜಾರಿಗೆ ತಂದಿರುವ ಯೋಜನೆಯಾಗಿದ್ದು, ಸ್ವಂತ ಉದ್ಯೋಗವನ್ನು ಮಾಡಿ ಅರ್ಥಿಕವಾಗಿ ಸಬಲರಾಗಲು ಇಚ್ಚಿಸುವ ಮಹಿಳೆಯರಿಗೆ ಈ ಯೋಜನೆಯ ಮೂಲಕ ಅರ್ಥಿಕ ನೆರವು ಮತ್ತು ತಮ್ಮ ಉತ್ಪನ್ನವನ್ನು ಮಾರುಕಟ್ಟೆ ಮಾಡಲು ಸೂಕ್ತ ವೇದಿಕೆಯನ್ನು/ಮಾರ್ಗದರ್ಶನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: SSP Date Extended- ಎಲ್ಲಾ ರೀತಿಯ ವಿದ್ಯಾರ್ಥಿವೇತನಕ್ಕೆ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ!

Who can apply for Lakhpati didi- ಲಖ್ಪತಿ ದೀದಿ ಯೋಜನೆಯ ಪ್ರಯೋಜನವನ್ನು ಯಾರೆಲ್ಲ ಪಡೆಯಬಹುದು?

ಲಖ್ಪತಿ ದೀದಿ ಯೋಜನೆಯ ಸೌಲಭ್ಯ ಪಡೆಯಲು ಸ್ವ-ಸಹಾಯ ಸಂಘದಲ್ಲಿ ಸದಸ್ಯರಾಗಿರುವುದು ಕಡ್ಡಾಯವಾಗಿದೆ.

ಮಹಿಳೆಯರು ಮಾತ್ರ ಈ ಯೋಜನೆಯ ಪಯೋಜನ ಪಡೆಯಬಹುದು.

ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಕುಟುಂಬದ ಮಹಿಳೆಯರು ಸೌಲಭ್ಯ ಪಡೆಯಲು ಅರ್ಹರು.

ಮಹಿಳೆಯರ ವಯಸ್ಸು 18 ವರ್ಷದಿಂದ 50 ವರ್ಷಗಳ ನಡುವೆ ಇರಬೇಕು.

ಅರ್ಜಿದಾರರ ಮಹಿಳೆಯ ಕುಟುಂಬದ ಸದಸ್ಯರು ಸರಕಾರಿ ನೌಕರಿಯಲ್ಲಿ ಇರಬಾರದು.

Lakhpati didi

Lakhpati didi yojana financial support- ಈ ಯೋಜನೆಯ ಮೂಲಕ ಸಿಗುವ ಸಾಲ ಸೌಲಭ್ಯ ವಿವರ ಹೀಗಿದೆ:

ಎರಡು ವಿಧದಲ್ಲಿ ಈ ಯೋಜನೆಯ ಮೂಲಕ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಬಹುದು ಒಂದು ವೈಯಕ್ತಿವಾಗಿ ಎರಡನೇಯರು ಸ್ವ-ಸಹಾಯ ಸಂಘದ ಹೆಸರಿನಲ್ಲಿ ಪಡೆಯಬಹುದು.

ಇದನ್ನೂ ಓದಿ: Diesel pumpset subsidy- ಶೇ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

1) 20 ಲಕ್ಷದ ವರೆಗೆ ಬ್ಯಾಂಕ್ ಮೂಲಕ ಸಾಲ(Collateral-free bank loan up to Rs. 20 lakh for SHGs):

ನೋಂದಾಯಿತ ಸ್ವ-ಸಹಾಯ ಸಂಘಕ್ಕೆ ಸ್ವಂತ ಉದ್ಯೋಗವನ್ನು ಆರಂಭಿಸಲು ಅಥವಾ ಈಗಾಗಲೇ ಇರುವ ಉದ್ದಿಮೆಯನ್ನು ಮತ್ತೊಷ್ಟು ಉನ್ನತ ಮಟ್ಟಕ್ಕೆ ಏರಿಕೆ ಮಾಡಲು ಬ್ಯಾಂಕ್ ನಿಂದ 20 ಲಕ್ಷದ ವರೆಗೆ Collateral-free ಅಗಿ ಸಾಲವನ್ನು ಪಡೆಯಬಹುದು.

ಈ ಸಾಲದ ಬಡ್ಡಿಯನ್ನು ಪಾವತಿ ಮಾಡಲು ರೂ 3.0 ಲಕ್ಷದ ವರೆಗೆ ಬಡ್ಡಿ ಪಾವತಿ ಮಾಡಲು ಆರ್ಥಿಕ ನೆರವನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ.

2) ವೈಯಕ್ತಿಕ ಉದ್ದಿಮೆ ಆರಂಭಿಸಲು 5 ಲಕ್ಷದ ವರಗೆ ಸಾಲ(individual enterprises):

ಸ್ವ-ಸಹಾಯ ಸಂಘದ ಸದಸ್ಯರು ಸ್ವಂತ ಉದ್ದಿಮೆಯನ್ನು/ಬ್ಯುಸಿನೆಸ್ ಅನ್ನು ಆರಂಬಿಸಲು ಬ್ಯಾಂಕ್ ಮೂಲಕ ರೂ 5 ಲಕ್ಷದ ವರೆಗೆ ಸಾಲವನ್ನು ಪಡೆದು ಈ ಸಾಲ ಮೇಲಿನ ಬಡ್ಡಿಯನ್ನು ಪಾವತಿ ಮಾಡಲು ಈ ಯೋಜನೆಯ ಮೂಲಕ ರೂ 1.5 ಲಕ್ಷ ಅರ್ಥಿಕ ನೆರವನ್ನು ಪಡೆಯಬಹುದಾಗಿದೆ.

ಒಟ್ಟಾರೆಯಾಗಿ ಅತೀ ಕಡಿಮೆ ಬಡ್ಡಿಯಲ್ಲಿ ಸ್ವಂತ ಬ್ಯುಸಿನೆಸ್ ಅನ್ನು ಪ್ರಾರಂಭಿಸಲು ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Sukanya samriddhi- ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ!

Lakhpati didi application-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಮಹಿಳೆಯರು ಅಗತ್ಯ ದಾಖಲಾತಿಗಲಾದ ಆಧಾರ್ ಕಾರ್ಡ, ಪಾನ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಸ್ವಂತ ಉದ್ದಿಮೆಯ ಯೋಜನಾ ವರದಿ, ಪೋಟೋ ಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ತಾಲ್ಲೂಕಿನ NRLM ಯೋಜನೆಯ ಅಧಿಕಾರಿಗಳನ್ನು(ತಾಲ್ಲೂಕು ಪಂಚಾಯತಿಯಲ್ಲಿ ಸಿಗುತ್ತಾರೆ) ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸುವ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದು.

Lakhpatididi official webiste- ಲಖ್ಪತಿ ದೀದಿ ಯೋಜನೆಯ ಅಧಿಕೃತ ವೆಬ್ಸೈಟ್- Click here