BPL card-ಈ ಕಾರ್ಡ ಹೊಂದಿರುವವರಿಗೆ BPL ರ‍ೇಶನ್ ಕಾರ್ಡ ಪಡೆಯಲು ಅವಕಾಶ!

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ(BPL card)ಅನ್ನು ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಅರ್ಹ ನಾಗರಿಕರು ಈ ಅವಕಾಶವನ್ನು ಬಳಕೆ ಮಾಡಿಕೊಂಡು ಅರ್ಥಿಕವಾಗಿ ಹಿಂದುಳಿದವರು ಹಾಗೂ ಇ-ಶ್ರಮ್ ಕಾರ್ಡ(e-shram card) ಹೊಂದಿರುವವರು ಬಿಪಿಎಲ್ ರೇಶನ್ ಕಾರ್ಡ ಅನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Student Incentives-ಸರಕಾರದಿಂದ ಈ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲುವ ವಿದ್ಯಾರ್ಥಿಗಳಿಗೆ 2 ಲಕ್ಷ ಪ್ರೋತ್ಸಾಹಧನ!

ಇ-ಶ್ರಮ್ ಕಾರ್ಡ ಪಡೆಯಲು ಯಾರೆಲ್ಲ ಅರ್ಹರು? ಮತ್ತು ಇ-ಶ್ರಮ್ ಕಾರ್ಡ ಹೊಂದಿರುವವರು ಆದ್ಯತಾ ಪಡಿತರ ಚೀಟಿ(BPL card)ಅನ್ನು ಪಡೆಯುವುದು ಹೇಗೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Who can apply for e shram card- ಇ-ಶ್ರಮ್ ಕಾರ್ಡ ಅನ್ನು ಯಾರೆಲ್ಲ ಪಡೆಯಬಹುದು?

ಹೋಟಲ್ ಕಾರ್ಮಿಕರು, ಆಟೋ ಚಾಲಕರು, ಇತರೆ ವಾಹನ ಚಾಲಕರು, ಗೃಹ ಕಾರ್ಮಿಕರು, ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಕುಂಬಾರರು, ಚಮ್ಮಾರರು, ಕ್ಷೌರಿಕರು, ಕಸಾಯಿ ಖಾನೆ ಕಾರ್ಮಿಕರು, ಕಮ್ಮಾರರು, ಅಕ್ಕಸಾಲಿಗರು, ಚಿತ್ರ ಬಿಡಿಸುವವರು, ಕುಶಲ ಕಾರ್ಮಿಕರು, ಟಿಂಬರ್ ಕಾರ್ಮಿಕರು, ಮುದ್ರಕರು, ಬೀದಿ ಬದಿ ವ್ಯಾಪಾರಿಗಳು, ಚಿಂದಿ ಆಯುವವರು,

ಅಡಿಗೆ ಕೆಲಸಗಾರರು, ಸಫಾಯಿ ಕರ್ಮಚಾರಿಗಳು, ಭದ್ರತಾ ಸಿಬ್ಬಂದಿ/ ವಾಚ್‌ಮೆನ್‌ಗಳು, ಪ್ರವಾಸಿ ಗೈಡ್‌ ಗಳು, ಮಂಡಕ್ಕಿ ಭಟ್ಟಿ ಕಾರ್ಮಿಕ, ಛಾಯವೃತ್ತಿ ಕಾರ್ಮಿಕರು, ಮಿಲ್ ಕೆಲಸಗಾರು, ಎಲ್ಲಾ ಬಗೆಯ ರಿಪೇರಿ ಕೆಲಸಗಾರರು, ಕಲ್ಲು ಹೊಡೆಯುವ ಕಾರ್ಮಿಕರು, ಬಿದಿರು ಕೆಲಸಗಾರರು, ಕಾಟನ್ ಗಿನ್ನಿಂಗ್ ಮತ್ತು ಪ್ರೊಸೆಸಿಂಗ್, ಬೀಡಿ ಕಟ್ಟುವವರು, ಅಗರಬತ್ತಿ ತಯಾರಿಸುವ ಕಾರ್ಮಿಕರು, ಕಸಾಯಿ ಖಾನೆ ಕಾರ್ಮಿಕರು.

ಇದನ್ನೂ ಓದಿ: Maize msp price- ಕೆಎಂಎಫ್‌ ನಿಂದ ರೂ 2,400/- ದರದಲ್ಲಿ ಮೆಕ್ಕೆಜೋಳ ಖರೀದಿ!

e shram card

ಇದನ್ನೂ ಓದಿ: Crop loss Input subsidy-ಮೊದಲ ಹಂತದಲ್ಲಿ 13.02 ಕೋಟಿ ಬೆಳೆ ಪರಿಹಾರ ಬಿಡುಗಡೆಗೆ ಸಿದ್ದತೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

E-shram card application- ಇ-ಶ್ರಮ್ ಕಾರ್ಡ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ನಾಗರಿಕರು ಇ-ಶ್ರಮ್ ಕಾರ್ಡ ಅನ್ನು ಪಡೆಯಲು ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಬಹುದು.

Documents required for e-shram card- ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ
2) ಪೋಟೋ
3) ಬ್ಯಾಂಕ್ ಪಾಸ್ ಬುಕ್
4) ಮೊಬೈಲ್ ನಂಬರ್

ಇದನ್ನೂ ಓದಿ: PM Vidyalaxmi Scheme- ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಜಾರಿ! ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಈಗಾಗಲೇ ಇ-ಶ್ರಮ್ ಕಾರ್ಡ ಹೊಂದಿರುವವರು ರೇಶನ್ ಕಾರ್ಡ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಈಗಾಗಲೇ ಇ-ಶ್ರಮ್ ಕಾರ್ಡ ಹೊಂದಿರುವ ಗ್ರಾಹಕರು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಆದ್ಯತಾ ಪಡಿತರ ಚೀಟಿ(BPL card)ಅನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 1800 425 9339 ಅಥವಾ ಸಹಾಯವಾಣಿ 1967ಕ್ಕೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.30 ಗಂಟೆಯ ಒಳಗಾಗಿ ಸಂಪರ್ಕಿಸಬಹುದು.

e shram card benefits

ಇದನ್ನೂ ಓದಿ: New ration card- ಎಲ್ಲಾ ಜಿಲ್ಲೆಗಳಲ್ಲೂ ಹೊಸ ರೇಶನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

E-ram card benefits- ಇ-ಶ್ರಮ್ ಕಾರ್ಡ ಇತರೆ ಪ್ರಯೋಜನಗಳು:

ಇ-ಶ್ರಮ್ ಕಾರ್ಡ ಹೊಂದಿರುವವರು 60 ವರ್ಷ ವಯಸ್ಸಿನ ನಂತರ ರೂ 3000/- ಪಿಂಚಣಿ ಪಡೆಯಬಹುದು.

ಕಾರ್ಮಿಕರು ಅಪಘಾತದಿಂದ ಮರಣಹೊಂದಿದರೆ, ಅವರ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡಲಾಗುತ್ತದೆ.

ಕಾರ್ಮಿಕ ಅಪಘಾತದಿಂದ ಅಂಗವೈಕಲ್ಯಕ್ಕೊಳಗಾದರೆ, ಅವರಿಗೆ 1 ಲಕ್ಷ ಪರಿಹಾರ ನೀಡಲಾಗುತ್ತದೆ.

ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ ರೂ 2000 ಶಿಕ್ಷಣ ಭತ್ಯೆ ನೀಡಲಾಗುತ್ತದೆ ಮತ್ತು ಗರ್ಭವತಿ ಮಹಿಳೆಗೆ – 5,000 ಮಾತೃತ್ವ ಲಾಭ ಸಹಾಯಧನ ನೀಡಲಾಗುತ್ತದೆ.

ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ 10,000 ವರೆಗೆ ಸಹಾಯಧನ ನೀಡಲಾಗುತ್ತದೆ ಹಾಗೂ ಕಾರ್ಮಿಕರಿಗೆ ಉಚಿತ ವೃತ್ತಿಪರ ತರಬೇತಿ ನೀಡಲಾಗುವುದು, ಇದು ಅವರಿಗೆ ಉತ್ತಮ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಕಾರ್ಮಿಕರು ಸ್ವಯಂ ಉದ್ಯೋಗಕ್ಕಾಗಿ 2 ಲಕ್ಷದವರೆಗೆ ಸಣ್ಣ ಸಾಲಗಳನ್ನು ಪಡೆಯಲು ಅರ್ಹರಾಗುತ್ತಾರೆ.