ರೈತರು ತಮ್ಮ ಕೃಷಿ ಜಮೀನಿನ ಪಹಣಿಯಲ್ಲಿ ಮಾಲೀಕರ ವಿವರವನ್ನು(Land owner details) ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ಈ ಕೆಳಗೆ ತಿಳಿಸಲಾಗಿದೆ.
ರಾಜ್ಯದಲ್ಲಿ ವಕ್ಫ್ ವಿವಾದ ಸೃಷ್ಟಿಯಾದ ನಂತರ ಕೃಷಿ ಜಮೀನಿನನ್ನು ಹೊಂದಿರುವ ನಾಗರಿಕರು ತಮ್ಮ ಜಮೀನು ಯಾರ ಹೆಸರಿಗೆ(Land owner )ಇದೆ ಎಂದು ಮೊಬೈಲ್ ನಲ್ಲೇ ಕಾಲಕಾಲಕ್ಕೆ ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ಅನೇಕ ಜನರು ವಿಚಾರಿಸಿದ್ದು ಇದರ ಬಗ್ಗೆ ಇಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Raagi Msp price-ರೈತರಿಗೆ ಸಿಹಿ ಸುದ್ದಿ ಕ್ವಿಂಟಲ್‌ಗೆ ₹4,290 ರೂ ರಂತೆ ರಾಗಿ ಖರೀದಿ!
ಕಂದಾಯ ಇಲಾಖೆಯಿಂದ ಕೃಷಿ ಜಮೀನಿನ ಎಲ್ಲಾ ಅಧಿಕೃತ ದಾಖಲೆಗಳನ್ನು(Bhoomi rtc) ನಿರ್ವಹಣೆ ಮಾಡಲಾಗುತ್ತದೆ ಈ ಇಲಾಖೆಯಿಂದ ಅಭಿವೃದ್ದಿಪಡಿಸಿರುವ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಪಹಣಿಯಲ್ಲಿನ ಮಾಲೀಕರ ಮಾಹಿತಿಯನ್ನು ಒಂದೆರಡು ಕ್ಲಿಕ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.
Land owner details- ಒಂದೆರಡು ಕ್ಲಿಕ್ ನಲ್ಲಿ ಜಮೀನಿನ ಮಾಲೀಕರ ವಿವರ ತಿಳಿಯಬಹುದು:
ಕಂದಾಯ ಇಲಾಖೆಯಿಂದ ಅಭಿವೃದ್ದಿಪಡಿಸಿರುವ bhoomi ತಂತ್ರಾಂಶವನ್ನು ಪ್ರವೇಶ ಮಾಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ಪಹಣಿಯಲ್ಲಿನ ಮಾಲೀಕರ ವಿವರ ಸೇರಿದಂತೆ ಇತರೆ ಮಾಹಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.
Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ View RTC ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು
Step-2: ನಂತರ ಇಲ್ಲಿ ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ, ಹಳ್ಳಿ ಮತ್ತು ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ “Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Supreme Court Order- ಸುಪ್ರೀಂಕೋರ್ಟ್ ನಿಂದ ಕೃಷಿ ಭೂಮಿ ಮಾರಾಟದ ಬಗ್ಗೆ ಮಹತ್ವದ ತೀರ್ಪು ಪ್ರಕಟ!
Step-3: “GO” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ “Surnoc” ಅನ್ನು ಆಯ್ಕೆ ಮಾಡಿಕೊಂಡು “Hissa No” ಅನ್ನು ಆಯ್ಕೆ ಮಾಡಿ ಪಕ್ಕದಲ್ಲಿ “Period” ಅನ್ನು ಸೆಲೆಕ್ಟ್ ಮಾಡಿಕೊಂಡು “Fetch” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4: “Fetch” ಬಟನ್ ಮೇಲೆ ಕ್ಲಿಕ್ ಮಾಡಿದರೆ Your Land ID ಮತ್ತು “Owner Details” ಕಾಲಂ ನಲ್ಲಿ ಜಮೀನಿನ ಮಾಲೀಕರ ಹೆಸರುಗಳು ಮತ್ತು ಒಟ್ಟು ಜಮೀನಿನ ವಿಸ್ತೀರ್ಣ ಮತ್ತು Khatah Number ತೋರಿಸುತ್ತದೆ.
Step-5: ಇದೆ ಪೇಜ್ ನ ಕೆಳಗೆ ಪಕ್ಕದಲ್ಲಿ ಕಾಣುವ “View” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಅಧಿಕೃತ ಪಹಣಿ/ಉತಾರ್/RTC ಅನ್ನು ನೋಡಬಹುದು.
ಇಲ್ಲಿ ಜಮೀನಿನ ಪಹಣಿಯಲ್ಲಿ ಸ್ವಾಧೀನದಾರರ ಹೆಸರು, ಸ್ವಾಧೀನತೆಯ ರೀತಿ, ಋಣಗಳು, ಬೆಳೆ, ಒಟ್ಟು ವಿಸ್ತೀರ್ಣ ಜಮೀನಿನ ಮಾಲೀಕರ ಹೆಸರು ಸಂಪೂರ್ಣ ಮಾಹಿತಿಯನ್ನು ನೋಡಬಹುದು.
ಇದನ್ನೂ ಓದಿ: PAN Card News: ನಿಮ್ಮ ಬಳಿ ಪಾನ್ ಕಾರ್ಡ್ ಇದ್ಯಾ? ಆಗಿದ್ದರೆ ತಪ್ಪದೆ ಈ ಮಾಹಿತಿ ತಿಳಿಯಿರಿ!
Online RTC Download- ಅಧಿಕೃತ ಪಹಣಿಯನ್ನು ಮೊಬೈಲ್ ನಲ್ಲೇ ಹಣ ಪಾವತಿ ಮಾಡಿ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:
ಕಂದಾಯ ಇಲಾಖೆಯ landrecords.karnataka.gov.in ಈ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಹಣ ಪಾವತಿ ಮಾಡಿ ಅಧಿಕೃತ ಪಹಣಿಯನ್ನು ನೋಡಬಹುದು.
Step-1: ಪ್ರಥಮದಲ್ಲಿ ಇಲ್ಲಿ Online RTC Download ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.
ಇದನ್ನೂ ಓದಿ: Janana pramana patra-2024: ಜನನ ಪ್ರಮಾಣ ಪತ್ರ ಪಡೆಯುವುದು ಬಾರೀ ಸುಲಭ! ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!
Step-2: ಬಳಿಕ I-RTC ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಮೊಬೈಲ್ ನಂಬರ್ ಇ-ಮೇಲ್ ಐಡಿ ಹಾಕಿ “Proceed” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
Step-3: ಲಾಗಿನ್ ಅದ ಬಳಿಕ ನಿಮ್ಮ ಜಿಲ್ಲೆ,ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು ಹಣ ಪಾವತಿ ಮಾಡಿ ಅಧಿಕೃತ ಪಹಣಿ/ಉತಾರ್/RTC ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.