ಆಧಾರ್ ಕಾರ್ಡ ಒಂದು ಭಾರತೀಯ ನಾಗರಿಕರಿಗೆ ಅಗತ್ಯ ಗುರುತಿನ ಚೀಟಿಯಲ್ಲಿ ಒಂದಾಗಿದ್ದು ಈ ಕಾರ್ಡನಲ್ಲಿ(Aadhaar Card News) ನಮೂದಿಸಿರುವ ಮಾಹಿತಿ ಸರಿಯಾಗಿ ಇಟ್ಟುಕೊಳ್ಳುವುದು ಅತೀ ಮುಖ್ಯವಾಗಿದೆ. ಆಧಾರ್ ಕಾರ್ಡ ನವೀಕರಣದ ಕುರಿತು ಆಧಾರ್ ಪ್ರಾಧಿಕಾರದಿಂದ ಹೊರಡಿಸಿರುವ ಅಧಿಕೃತ ಮಾಹಿತಿಯ ವಿವರ ಇಲ್ಲಿದೆ.
ಒಮ್ಮೆ ಆಧಾರ್ ಕಾರ್ಡ ಅನ್ನು ಪಡೆದುಕೊಂಡ ಬಳಿಕ ಇಂತಿಷ್ಟು ವರ್ಷ ಪೂರ್ಣಗೊಂಡ ನಂತರ ಕಾರ್ಡ ಅನ್ನು ಮತ್ತೆ ನವೀಕರಣ ಮಾಡಿಕೊಳ್ಳಬೇಕು ಎಂದು ಆಧಾರ್ ಪ್ರಾಧಿಕಾರದಿಂದ ಮಾರ್ಗಸೂಚಿಯನ್ನು ಜಾರಿಗೆ ತಂದಿದ್ದು ಈ ಮಾರ್ಗಸೂಚಿಯ ಮಾಹಿತಿಯನ್ನು ಸಹ ಇಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: DBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ದ ಅಧಿಕೃತ ಪ್ರಕಟಣೆಯನ್ವಯ ಆಧಾರ್ ಕಾರ್ಡ ಹೊಂದಿರುವವರು ತಮ್ಮ ವಿವರಗಳನ್ನು 14 ಡಿಸೆಂಬರ್ 2024ರ ಒಳಗಾಗಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ ಆನ್‌ಲೈನ್‌ನಲ್ಲಿ ನವೀಕರಿಸಲು ಅವಕಾಶ ನೀಡಲಾಗಿದೆ.
Last date for aadhaar card renewal- ಯಾರೆಲ್ಲ 14 ಡಿಸೆಂಬರ್ 2024ರ ಒಳಗಾಗಿ ಆಧಾರ್ ಕಾರ್ಡ ಅನ್ನು ನವೀಕರಿಸಬೇಕು?
ಆಧಾರ್ ಕಾರ್ಡ ಅನ್ನು ಮಾಡಿಸಿ 10 ವರ್ಷ ಪೂರೈಸಿದ ಸಾರ್ವಜನಿಕರು 14 ಡಿಸೆಂಬರ್ 2024ರ ಒಳಗಾಗಿ ಆಧಾರ್ ಕಾರ್ಡಿನ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಆಧಾರ್ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಬಹುದು ಅಥವಾ ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ ಆಧಾರ್ ಕಾರ್ಡ ನವೀಕರಣವನ್ನು ಮಾಡಿಸಿಬಹುದು.
Why aadhaar card renewal is important-ಆಧಾರ್ ಕಾರ್ಡ ನವೀಕರಣ ಏಕೆ ಮಾಡಿಸಬೇಕು?
ಅಧಾರ್ ಕಾರ್ಡ ಅನ್ನು ಹೊಂದಿರುವ ನಾಗರಿಕರ ಆಧಾರ್ ಕಾರ್ಡ ವಿವರದ ನೈಜತೆಯನ್ನು ಖತರಿಪಡಿಸಿಕೊಳ್ಳಲು 10 ವರ್ಷ ಪೂರ್ಣಗೊಳಿಸಿದ ನಾಗರಿಕರು ತಮ್ಮ ಆಧಾರ್ ಕಾರ್ಡ ಅನ್ನು ನವೀಕರಿಸುವುದು ಅತ್ಯಗತ್ಯ.
ಇದನ್ನೂ ಓದಿ: BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!
Aadhaar card renewal in online-ಆಧಾರ್ ಕಾರ್ಡ ವಿವರವನ್ನು ಆನ್‌ಲೈನ್‌ನಲ್ಲಿ ನವೀಕರಿಸುವುದು ಹೇಗೆ?
ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಆಧಾರ್ ಕಾರ್ಡನ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅಧಾರ್ ಕಾರ್ಡ ಅನ್ನು ನವೀಕರಿಸಬಹುದು.
Step-1: Aadhaar card renewal ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಇದಾದ ಬಳಿಕ ನಿಮ್ಮ ಆಧಾರ್ ಕಾರ್ಡಿನ ಸಂಖ್ಯೆಯನ್ನು ಹಾಕಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ ಇಲ್ಲಿ ಕಾಣಿಸುವ ನಿಮ್ಮ ಆಧಾರ್ ಕಾರ್ಡನಲ್ಲಿ ನಮೂದಿಸಿರುವ ವಿವರ ಸರಿಯಾಗಿದಿಯೇ? ಎಂದು ಪರಿಶೀಲಿಸಿ ಮುಂದುವರೆಯಬೇಕು.
Step-3: ತದನಂತರ ನಿಮ್ಮ ಗುರುತಿನ ಚೀಟಿ(Pan Card) ಮತ್ತು ವಿಳಾಸ ಪೂರಾವೆ(Voter ID) ಅನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Power tiller subsidy- ಶೇ.90ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ!
ವಿಧಾನ-2: ಈ ಕೇಂದ್ರಗಳನ್ನು ಭೇಟಿ ಮಾಡಿ ನವೀಕರಣ ಮಾಡಿಕೊಳ್ಳಬಹುದು:
ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಆಧಾರ್ ಕಾರ್ಡ ನವೀಕರಣ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಫಲಾನುಭವಿಗಳು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಆಧಾರ್ ಕಾರ್ಡ ನೋಂದಣಿ ಕೇಂದ್ರ ಅಥವಾ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ನವೀಕರಣ ಮಾಡಿಕೊಳ್ಳಬಹುದು.
ಇದನ್ನೂ ಓದಿ: Vidyasiri scholarship-ವಿದ್ಯಾಸಿರಿ ವಿದ್ಯಾರ್ಥಿವೇತನ ಪ್ರತಿ ತಿಂಗಳಿಗೆ ರೂ 2,000 ಕ್ಕೆ ಏರಿಕೆ!
Documents-ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ ವಿವರಗಳನ್ನು ನವೀಕರಿಸಲು ಸಾರ್ವಜನಿಕರು ತಮ್ಮ ಹೆಸರಿರುವ ರೇಷನ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ, ಪಾಸ್‌ಪೋರ್ಟ್ ಅಥವಾ ಬ್ಯಾಂಕ್ ಪಾಸ್‌ಬುಕ್ ರೀತಿಯ ದಾಖಲೆಗಳನ್ನು ಸಲ್ಲಿಸಬಹುದು.
ಆಧಾರ್ ಕಾರ್ಡ ನವೀಕರಣದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: Click here