ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೈತರಿಗೆ ಕೃಷಿ ಬೆಳೆಗಳಿಗೆ ಸಮರ್ಪಕವಾಗಿ ನೀರನ್ನು ಒದಗಿಸಲು ಶೇ 80% ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್(Solar Pumpset subsidy)ಅನ್ನು ಅಳವಡಿಸಿಕೊಳ್ಳಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕುಸುಮ್ ಬಿ ಯೋಜನೆಯಡಿ ಅರ್ಹ ರೈತರಿಗೆ ತಮ್ಮ ಕೃಷಿ ಪಂಪ್ ಸೆಟ್(Pumpset) ಗಳಿಗೆ ಸೋಲಾರ್ ಪಂಪ್ ಸೆಟ್ ಅನ್ನು ಅಳವಡಿಸಿಕೊಳ್ಳಲು ಸಬ್ಸಿಡಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: Pan card 2.0-ಪಾನ್ ಕಾರ್ಡನಲ್ಲಿ ಮಹತ್ವದ ಬದಲಾವಣೆ! ಇನ್ಮುಂದೆ ಈ ರೀತಿ ಪಾನ್ ಕಾರ್ಡ್ ಬರಲಿದೆ!
ಏನಿದು ಕುಸುಮ್ ಬಿ ಯೋಜನೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
KUSUMA-B: ಕುಸುಮ್ ಬಿ ಯೋಜನೆ:
ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಅನುಷ್ಥಾನ ಮಾಡಿತ್ತಿರುವ ಯೋಜನೆ ಇದಾಗಿದ್ದು ಈ ಯೋಜನೆಯಡಿ ಅರ್ಹ ರೈತರಿಗೆ ಶೇ 80%ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಕೆ ಮಾಡಲು ಅವಕಾಶವಿದ್ದು ರೈತರು ಘಟಕ ಅನುಷ್ಥಾನ ಮಾಡಲು ತಗಲುವ ಒಟ್ಟು ವೆಚ್ಚಕ್ಕೆ ಶೇ 20% ಹಣ ವನ್ನು ಭರಿಸಬೇಕಾಗುತ್ತದೆ.
ಇದನ್ನೂ ಓದಿ: Pmkisan farmer list-ಪಿ ಎಂ ಕಿಸಾನ್ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!
HP ವಾರು ಸೋಲಾರ್ ಪಂಪ್ ಸೆಟ್ ಗೆ ನೀಡುವ ಸಬ್ಸಿಡಿ ವಿರವ ಹೀಗಿದೆ:
How to apply for solar pumpset subsidy yojana-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು:
ಆಸಕ್ತ ರೈತರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ತಾಲ್ಲೂಕಿನ ಎಸ್ಕಾಂ ಕವೇರಿಯನ್ನು ಭೇಟಿ ಮಾಡಿಯು ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.
Documents-ಅರ್ಜಿ ಸಲ್ಲಿಸಲು ದಾಖಲೆಗಳು:
ರೈತರ ಆಧಾರ್ ಕಾರ್ಡ
ಪೋಟೋ
ಬ್ಯಾಂಕ್ ಪಾಸ್ ಬುಕ್
ಜಮೀನಿನ ಪಹಣಿ/ಉತಾರ್
ರೇಶನ್ ಕಾರ್ಡ ಪ್ರತಿ
ಮೊಬೈಲ್ ನಂಬರ್
ಇದನ್ನೂ ಓದಿ: PM Usha Scholarship- ಹೆಚ್ಚು ಅಂಕ ಪಡೆದು ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ರೂ ₹20,000 ವಿದ್ಯಾರ್ಥಿ ವೇತನ!
Solar pumpset scheme benefits-ಈ ಯೋಜನೆಯಡಿ ಸೋಲಾರ್ ಅಳವಡಿಕೆಯ ಪ್ರಯೋಜನಗಳು:
ರಾಜ್ಯ ಮತ್ತು ಕೇಂದ್ರ ಸರಕಾರದಿಂದ ರೈತರಿಗೆ ಹಗಲಿನ ಸಮಯದಲ್ಲಿ ತಮ್ಮ ಬೆಳೆಗಳಿಗೆ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಸೋಲಾರ್ ಪಂಪ್ ಸೆಟ್ ಯೋಜನೆ ಇದಾಗಿದೆ.
ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್ ಬಿ ಯೋಜನೆಯನು ಜಾರಿಗೆ ತರಲಾಗಿದ್ದು, ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು, ಸೌರಶಕ್ತಿ ಬಳಕೆಯ ಉತ್ತೇಜನಕ್ಕೆ ಸರ್ಕಾರದಿಂದ ಶೇ.80 ರಷ್ಟು ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ.
ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ ಹೊಂದಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!
ಕುಸುಮ್ ಬಿ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್ಸೆಟ್ ಅಳವಡಿಸಲು ಒತ್ತು ನೀಡಿ ರಾಜ್ಯ ಸರ್ಕಾರವುಸಬ್ಸಿಡಿ ಮೊತ್ತವನ್ನು ಶೇ. 30 ರಿಂದ ಶೇ. 50ಕ್ಕೆ ಹೆಚ್ಚಿಸಿದೆ.ಕುಸುಮ್ ಬಿ ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್ಮರ್ಸಿಬಲ್/ಸರ್ಫೇಸ್ ಡಿಸಿ ಪಂಪ್ಗಳು, ಮೌಂಟಿಂಗ್ ಸ್ಟ್ರಕ್ಟರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ನೀಡಲಾಗುತ್ತದೆ.
ಸೌರ ಪಂಪ್ ಸೆಟ್ ಅಳವಡಿಕೆ ಯಿಂದಾಗಿ ಸುಮಾರು 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಪೂರೈಕೆಯನ್ನು ಪಡೆಯಬಹುದಾಗಿದೆ.
ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್ ಸೆಟ್ ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಒದಗಿಸುತ್ತಾರೆ.
Solar pumpset scheme helpline-ಕುಸುಮ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು:
ಕೇಂದ್ರದ ವೆಬ್ಸೈಟ್: Click here
ರಾಜ್ಯ ಸರಕಾರದ ವೆಬ್ಸೈಟ್: Click here
ಸಹಾಯವಾಣಿ: 0836-2222535