- Advertisment -
HomeAgricultureRaagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ...

Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!

Last updated on December 7th, 2024 at 12:01 am

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿಯನ್ನು ಖರೀದಿ(Raagi kharidi kendra) ಮಾಡಲು ರಾಜ್ಯ ಸರಕಾರದಿಂದ ವಿವಿಧ ಜಿಲ್ಲೆಗಳಲ್ಲಿ ತಯಾರಿ ನಡೆಸಿದ್ದು, ಈ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ಈ ವರ್ಷ ರೈತರಿಂದ ನೇರವಾಗಿ ರಾಗಿಯನ್ನು ಖರೀದಿ(Raagi msp price)ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಅಧಿಕೃತ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Yashaswini yojana-ಯಶಸ್ವಿನಿ ಯೋಜನೆಯಡಿ 5 ಲಕ್ಷದ ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ! ರಾಜ್ಯ ಸರಕಾರದಿಂದ ಹೊಸ ಆದೇಶ ಪ್ರಕಟ!

ಬೆಂಬಲ ಬೆಲೆ ಯೋಜನೆಯಡಿ ರಾಗಿಯನ್ನು ಯಾರೆಲ್ಲ ಮಾರಾಟ ಮಾಡಬಹುದು? ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಅನುಸರಿಸಬೇಕಾಗ ಕ್ರಮಗಳೇನು? ಇದಕ್ಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

MSP Price detaisl-2024: ಯಾವೆಲ್ಲ ಜಿಲ್ಲೆಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ:

ಪ್ರಸ್ತುತ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿ ಮಾಡಲು ರೈತರ ನೋಂದಣಿ ಮಾಡಿಕೊಳ್ಳುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗಿದ್ದು ಶೀಘ್ರದಲ್ಲೇ ಇತರ ಜಿಲ್ಲೆಗಳಲ್ಲಿಯೂ ಸಹ ರಾಗಿ ಖರೀದಿಗೆ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Free cylinder scheme-ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ragi kharidi

Raagi Msp price-ಬೆಂಬಲ ಬೆಲೆ ಎಷ್ಟು ನಿಗದಿಪಡಿಸಲಾಗಿದೆ?

ಕೇಂದ್ರ ಸರಕಾರದಿಂದ ರೈತರಿಂದ ನೇರವಾಗಿ ರಾಗಿಯನ್ನು ಖರೀದಿ ಮಾಡಲು ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಗೆ ರೂ 4290/- ಅನ್ನು ನಿಗದಿಪಡಿಸಲಾಗಿದೆ.

ಒಂದು ಎಕರೆಗೆ ಎಷ್ಟು ಕ್ವಿಂಟಾಲ್ ಮಾರಾಟ ಮಾಡಬಹುದು?

ರೈತರಿಂದ ಖರೀದಿ ಮಾಡವ ಪ್ರತಿ ಕ್ವಿಂಟಾಲ್ ರಾಗಿಗೆ ರೂ. 4290 ಅನ್ನು ನಿಗದಿಪಡಿಸಲಾಗಿದ್ದು, ಪ್ರತಿ ಒಬ್ಬ ರೈತರಿಂದ ಒಂದು ಎಕರೆಗೆ ಕನಿಷ್ಠ 10 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್ಗಳನ್ನು ಮೀರದಂತೆ ಹಾಗೂ FAQ ಮಾನದಂಡಗಳಂತೆ ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: KMF Milk Incentive- ರಾಜ್ಯ ಸರಕಾರದಿಂದ ರೈತರಿಗೆ 649 ಕೋಟಿ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ವೆಬ್ಸೈಟ್ ಲಿಂಕ್!

ಬಯೋಮೆಟ್ರಿಕ್ ಅಳವಡಿಕೆ:

ಪ್ರಸಕ್ತ ವರ್ಷದಲ್ಲಿ ರೈತರಿಂದ ರಾಗಿ ಖರೀದಿ ಮಾಡುವ ಪ್ರಕ್ರಿಯೆಯಲ್ಲಿ ಎರಡು ಬಾರಿ ಬಯೋಮೆಟ್ರಿಕ್ ಬಳಕೆಯಾಗುತ್ತದೆ ಒಂದು ಬಾರಿ ನೊಂದಣಿ ವೇಳೆಯಲ್ಲಿ ಇನ್ನೊಂದು ಬಾರಿ ಖರೀದಿ ವೇಳೆಯಲ್ಲಿ ಹಾಗಾಗಿ ನೊಂದಾಯಿತ ರೈತರೇ ಖುದ್ದು ಖರೀದಿ ಕೇಂದ್ರಕ್ಕೆ ಬಂದು ರಾಗಿಯನ್ನು ಮಾರಾಟ ಮಾಡಬೇಕಾಗುತ್ತದೆ.

ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡುವ ವಿಧಾನ ಹೇಗೆ?

ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ರೈತರು ಮೊದಲು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಕೃಷಿ ಮಾರುಕಟ್ಟೆ/ರಾಗಿ ಖರೀದಿ ಕೇಂದ್ರವನ್ನು ಭೇಟಿ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು. ಇದಾದ ಬಳಿಕ ಜನವರಿ ತಿಂಗಳಲ್ಲಿ ನಿಗದಿಪಡಿಸಿದ ದಿನಾಂಕದಂದು ನಿಮ್ಮ ರಾಗಿಯನ್ನು ತೆಗೆದುಕೊಂಡು ಖರೀದಿ ಕೇಂದ್ರವನ್ನು ಭೇಟಿ ಮಾಡಿ ಮಾರಾಟ ಮಾಡಬೇಕು.

ಇದನ್ನೂ ಓದಿ: Land surveyors notification-750 ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಇನ್ನು 7 ದಿನ ಮಾತ್ರ ಅವಕಾಶ!

Documents-ಅಗತ್ಯ ದಾಖಲೆಗಳು:

ರೈತರ ಆಧಾರ್ ಕಾರ್ಡ ಪ್ರತಿ
ಬ್ಯಾಂಕ್ ಪಾಸ್ ಬುಕ್
ಪ್ರೂಟ್ಸ್ ಐಡಿ/FID
ಜಮೀನಿನ ಪಹಣಿ/RTC

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಮಾರುಕಟ್ಟೆ ಕಚೇರಿಯನ್ನು ಭೇಟಿ ಮಾಡಿ.

- Advertisment -
LATEST ARTICLES

Related Articles

- Advertisment -

Most Popular

- Advertisment -