ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM kisan) ನಕಲಿ ದಾಖಲೆಗಳನ್ನು ಸಲ್ಲಿಸಿ ಮತ್ತು ಮಾರ್ಗಸೂಚಿ ಪ್ರಕಾರ ಅನರ್ಹರಿರುವ ಅರ್ಜಿದಾರರಿಂದ ಈ ಯೋಜನೆಯಡಿ ಸಂದಾಯ ಮಾಡಿರುವ ಹಣವನ್ನು ಮರಳಿ ಪಡೆಯಲಾಗಿದೆ.
ಕೇಂದ್ರ ಸರಕಾರದಿಂದ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ ಇಲ್ಲಿಯವರೆಗೆ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್ ಪಡೆಯಲಾಗಿದ್ದು, ಮಾರ್ಗಸೂಚಿ(pmkisan guidelines) ಪ್ರಕಾರ ಹಣ ಪಡೆಯಲು ಅನರ್ಹರಿರುವ ಫಲಾನುಭವಿಗಳಿಂದ ಅರ್ಥಿಕ ನೆರವನ್ನು ಹಿಂಪಡೆಯಲಾಗಿದೆ.
ಇದನ್ನೂ ಓದಿ: Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ!
ಕೇಂದ್ರ ಸರಕಾರದಿಂದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(kisan samman nidhi yojana) ಅರ್ಹ ಫಲಾನುಭವಿಗಳನ್ನು ಗುರುತಿಸುವ ಹೊಣೆಯನ್ನು ರಾಜ್ಯ ಸರಕಾರಗಳಿಗೆ ನೀಡಲಾಗಿತ್ತು ಕೆಲವು ರಾಜ್ಯಗಳಲ್ಲಿ ಈ ಯೋಜನೆಯ ಆರಂಭವಾದ ಸಮಯದಲ್ಲಿ ಅರ್ಜಿದಾರರು ಆಧಾರ್ ಲಿಂಕ್ ಮಾಡುವುದನ್ನು ಸಡಿಲಗೊಳಿಸಿರುವ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿ ಅನೇಕ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದರು.
ಈಗ ಕೇಂದ್ರ ಸರಕಾರವು ಪಿಎಂ ಕಿಸಾನ್ ಯೋಜನೆಯಡಿ ಅರ್ಥಿಕ ನೆರವನ್ನು ಪಡೆಯಲು ಇ-ಕೆವೈಸಿಯನ್ನು ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಿರುವ ಕಾರಣ ಜಮೀನಿನ ದಾಖಲೆಗಳು ಜಮೀನು ದಾಖಲೆಗಳು, ಪಬ್ಲಿಕ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಸಿಸ್ಟಂ(PFMS), ಇನ್ಕಮ್ ಟ್ಯಾಕ್ಸ್(Income tax) ದತ್ತಾಂಶ ಇತ್ಯಾದಿಯನ್ನೂ ಜೋಡಿಸಿದರ ಪರಿಣಾಮದಿಂದ ಅನರ್ಹ ಅರ್ಜಿದಾರರನ್ನು ಗುರುತಿಸಲು ಸಾಧ್ಯವಾಗಿರುತ್ತದೆ.
ಇದನ್ನೂ ಓದಿ: Free cylinder Scheme- ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅವಕಾಶ! ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ!
PM-Kisan ineligible criteria- ಸರಕಾರದಿಂದ ಅನರ್ಹ ಫಲಾನುಭವಿಗಳು ಗುರುತಿಸಲು ನಿಗದಿಪಡಿಸಿ ಮಾನದಂಡಗಳು:
1) ಪಿಎಂ ಕಿಸಾನ್ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಅರ್ಜಿ ಸಲ್ಲಿಸಿದವರಲ್ಲಿ ಕಳೆದ ಅರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರಿಂದ ಹಣ ಹಿಂಪಡೆಯಲಾಗಿದೆ.
2) ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಯಲ್ಲಿ ನೌಕರಿಯನ್ನು ಮಾಡುತ್ತಿರುವವರು ಅನರ್ಹರು.
3) ಕೃಷಿ ಜಮೀನನ್ನು ಹೊಂದಿರದೇ ಕೃಷಿಯೇತರ ಜಮೀನಿನ ಮೇಲೆ ಅರ್ಜಿ ಸಲ್ಲಿಸಿದರುವ ಅನರ್ಹರು.
4) GST ಅನ್ನು ಪಾವತಿ ಮಾಡುತ್ತಿರುವವರು ಹಾಗೂ ಸ್ವಂತ ಉದ್ದಿಮೆಯನ್ನು ಹೊಂದಿರುವವರು ಅನರ್ಹರು.
ಇದನ್ನೂ ಓದಿ: Student Scholarship- ಈ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ರೂ 25,000 ಸಾವಿರ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ!
PM-Kisan total installment-ಇಲ್ಲಿಯವರೆಗೆ 18 ಕಂತು ಹಣ ಜಮಾ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರಕಾರದಿಂದ 2019ರ ಫೆಬ್ರುವರಿ 24ರಂದು ಜಾರಿಗೆ ತರಲಾಗಿದ್ದು ಇಲ್ಲಿಯವರೆಗೆ ಈ ಯೋಜನೆಯಡಿ ಒಂದು ವರ್ಷಕ್ಕೆ ತಲಾ 2,000 ದಂತೆ ಒಟ್ಟು ರೂ 6,000 ಸಾವಿರ ಅರ್ಥಿಕ ನೆರವನ್ನು ವರ್ಗಾವಣೆ ಮಾಡಲಾಗಿದೆ.
PM-kisan village wise farmer list-ನಿಮ್ಮ ಮೊಬೈಲ್ ನಲ್ಲೇ ಪಿಎಂ ಕಿಸಾನ್ ಹಣ ಪಡೆಯಲು ಅರ್ಹರಿರುವ ನಿಮ್ಮ ಹಳ್ಳಿಯ ರೈತರ ಪಟ್ಟಿಯನ್ನು ನೋಡಬಹುದು:
ಪಿ ಎಂ ಕಿಸಾನ್ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ರೈತರು ನಿಮ್ಮ ಮೊಬೈಲ್ ನಲ್ಲೇ ಕೇಂದ್ರದ PMKISAN ಯೋಜನೆಯ ವೆಬ್ಸೈಟ್ ಅನ್ನು ನೇರವಾಗಿ ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ಹಂತವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಅರ್ಹ ರೈತರ ಪಟ್ಟಿಯನ್ನು ನೋಡಬಹುದು.
Step-1: ಪ್ರಥಮದಲ್ಲಿ PM-kisan village wise farmer list ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಪಿಎಂ ಕಿಸಾನ್ ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಿ.
ಇದನ್ನೂ ಓದಿ: Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!
Step-2: ಇದಾದ ಬಳಿಕ ಇಲ್ಲಿ ರಾಜ್ಯ ಮತ್ತು ನಿಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ತೆರೆದುಕೊಳ್ಳುತ್ತದೆ.