ರೈಲ್ವೆ ವಿಕಾಸ ನಿಗಮ ಲಿಮಿಟೆಡ್ ನಲ್ಲಿ ಭಾರತದಾದ್ಯಂತ ಖಾಲಿ ಇರುವ ವ್ಯವಸ್ಥಾಪಕ ಹುದ್ದೆಗಳನ್ನು ಸೇರಿ ವಿವಿಧ ಹುದ್ದೆಗಳಿಗೆ ನೇಮಕಾತಿ(RVNL Recruitment Notification ) ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆ ಮಾಡಿದೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 09, 2024 ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಸಂಪೂರ್ಣ ಅರ್ಹತೆಗಳ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಇದನ್ನೂ ಓದಿ: Vidyarthi vethana-2024-25ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ!
RVNL Recruitment Details-ಭಾರತದಾದ್ಯಂತ – ರೈಲು ವಿಕಾಸ ನಿಗಮದಲ್ಲಿ ಭಾರತದಾದ್ಯಂತ ಒಟ್ಟು 44 ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಹುದ್ದೆಗಳ ವಿವರವು ಕೇಳಗಿನಂತಿದೆ:
• ಕಾರ್ಯನಿರ್ವಾಹಕ ಹಣಕಾಸು ವಿಭಾಗ – 20
• ಸಹಾಯಕ ವ್ಯವಸ್ಥಾಪಕ – 02
• ಹಿರಿಯ ವ್ಯವಸ್ಥಾಪಕ – 06
• ಹಿರಿಯ ಕಾರ್ಯನಿರ್ವಾಹಕ – 10
RVNL Recruitment Eligibility-ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಹತೆಗಳು :
RVNL Recruitment Notification 2024 ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ B. Com, MBA, CA ಅಥವಾ CA ಪದವಿ ಮುಗಿಸಿರುವವರು ಅರ್ಜಿ ಸಲ್ಲಿಸಬಹುದು.
Age limit-ವಯೋಮಿತಿ ಅರ್ಹತೆಗಳು:
ಅರ್ಜಿ ಸಲ್ಲಿಸುವವರು ಗರಿಷ್ಠ 45 ವರ್ಷದ ಒಳಗಿರಬೇಕು.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ವೇತನ – ರೈಲು ವಿಕಾಸ ನಿಗಮ ಲಿಮಿಟೆಡ್ ನ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಮಾಸಿಕ ವೇತನವು ₹30,000 ದಿಂದ ₹1,20,000 ವರೆಗೆ ಇರಲಿದೆ.
ಇದನ್ನೂ ಓದಿ: Free job training- PSI ಹಾಗೂ ಪ್ಯಾರಾ ಮಿಲಿಟರಿ ಪೂರ್ವ ನೇಮಕಾತಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ!
How to Apply-ಅರ್ಜಿ ಹೇಗೆ ಸಲ್ಲಿಸಬೇಕು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತವರು ಮೊದಲು ರೈಲು ವಿಕಾಸ ನಿಗಮ ಲಿಮಿಟೆಡ್ ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಹುದ್ದೆಗಳಿಗೆ ಅನುಗುಣವಾದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು, ಸರಿಯಾಗಿ ಭರ್ತಿ ಮಾಡಿ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.
ವಿಳಾಸ : Dispatch Section, Ground Floor, August Kranti Bhawan, Bhikaji Cama Place, R.K. Puram, New Delhi-110066
ಈ ಮೇಲಿನ ವಿಳಾಸಕ್ಕೆ ಸೆಪ್ಟೆಂಬರ್ 9, 2024ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
Application link-ಅರ್ಜಿ ನಮೂನೆ ದೊರೆಯುವ ವಿಳಾಸ : Click here
ಇದನ್ನೂ ಓದಿ: Ration card e-KYC-ಇನ್ನು ಮುಂದೆ ಪ್ರತಿ ತಿಂಗಳು ರೇಷನ್ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!