ಕೇಂದ್ರ ಸರಕಾರದಿಂದ ಬೆಂಬಲ ಬೆಲೆಯಲ್ಲಿ ಪ್ರತಿ ವರ್ಷ ಕೃಷಿ ಉತ್ಪನ್ನಗಳನ್ನು ರೈತರಿಂದ ಖರೀದಿ ಮಾಡಿದಂತೆ ಈ ವರ್ಷವು ಸಹ ರೈತರಿಂದ ನೇರವಾಗಿ ವಿವಿಧ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಕೃಷಿ ಮಾರಾಟ ಇಲಾಖೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ 2024-25ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಮತ್ತು ಬಿಳಿಜೋಳವನ್ನು ಖರೀದಿ ಮಾಡಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಈ ಅಂಕಣದಲ್ಲಿ ಯಾವ ಯಾವ ಉತ್ಪನ್ನಕ್ಕೆ ಎಷ್ಟು ದರ ನಿಗದಿಪಡಿಸಲಾಗಿದೆ? ಪ್ರತಿ ಎಕರೆಗೆ ಎಷ್ಟು ಕ್ವಿಂಟಾಲ್ ಖರೀದಿ ಮಾಡಲಾಗುತ್ತದೆ? ರೈತರು ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವ ಕ್ರಮವನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: KMF Milk Subsidy-ಹಾಲಿನ ಪ್ರೋತ್ಸಾಹಧನ ಬಿಡುಗಡೆ! ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಚೆಕ್ ಮಾಡಿ?
ಉತ್ಪನ್ನವಾರು ನಿಗದಿಪಡಿಸಿದ ಬೆಂಬಲ ಬೆಲೆ:
ಉತ್ಪನ್ನದ ಹೆಸರು | ವಿಧ | ಬೆಂಬಲ ಬೆಲೆ |
ಭತ್ತ | ಸಾಮಾನ್ಯ | ₹2,300/- |
ಗ್ರೇಡ್ ಎ | ₹2,320/- | |
ಬಿಳಿಜೋಳ | ಹೈಬ್ರಿಡ್ | ₹3,371/- |
ಮಾಲ್ದಂಡಿ | ₹3,421/- | |
ರಾಗಿ | ₹4,290/- |
ಒಬ್ಬ ರೈತರಿಂದ ಎಷ್ಟು ಪ್ರಮಾಣದ ಉತ್ಪನ್ನವನ್ನು ಖರೀದಿ ಮಾಡಲಾಗುತ್ತದೆ?
ಉತ್ಪನ್ನದ ಹೆಸರು | ಪ್ರತಿ ಎಕರೆಗೆ ನಿಗದಿಪಡಿಸಿರುವ ಪ್ರಮಾಣ | ಪ್ರತಿ ರೈತರಿಂದ ಖರೀದಿಸುವ ಗರಿಷ್ಟ ಪ್ರಮಾಣ |
ಭತ್ತ | 25 ಕ್ವಿ | 50 ಕ್ವಿ |
ಬಿಳಿಜೋಳ | 10 ಕ್ವಿ | 150 ಕ್ವಿ |
ರಾಗಿ | 10 ಕ್ವಿ | 150 ಕ್ವಿ |
(ಕ್ವಿ ಅಂದರೆ ಕ್ವಿಂಟಾಲ್ ಎಂದು) |
ಇದನ್ನೂ ಓದಿ: Sheep farming loan Subsidy-ಕುರಿ ಸಾಕಾಣಿಕೆ ಆರಂಭಿಸಲು ಶೇ 50% ರಷ್ಟು ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಎಲ್ಲಿ ಅರ್ಜಿ ಸಲ್ಲಿಸಬೇಕು?
ರೈತರು ತಮ್ಮ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ತಮ್ಮ ಹತ್ತಿರದ ಖರೀದಿ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ನಿಮ್ಮ ಜಮೀನಿನ ಪ್ರೂಟ್ಸ್ ಐಡಿ(FID) ಮತ್ತು ಅಧಾರ್ ಕಾರ್ಡ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ ಸಲ್ಲಿಸಿ ಮೊದಲು ನೋಂದಣಿಯನ್ನು ಮಾಡಿಕೊಂಡು ನಂತರ ಕೇಂದ್ರದಿಂದ ನಿಗದಿಪಡಿಸಿರುವ ದಿನಾಂಕದಂದು ಉತ್ಪನ್ನವನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು.
MSP Guidelines-ಭತ್ತ, ರಾಗಿ ಮತ್ತು ಬಿಳಿಜೋಳದ ಖರೀದಿಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಗಳು:
(1) ರೈತರಿಗೆ ಕೃಷಿ ಇಲಾಖೆಯಿಂದ ನೀಡಿರುವ ಪ್ರೊಟ್ಸ್ ಐ.ಡಿ. ಯೊಂದಿಗೆ ಖುದ್ದಾಗಿ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ನೀಡಿ ನೋಂದಣಿ ಮಾಡಿಸುವುದು ಕಡ್ಡಾಯ.
(2) ಆಧಾರ್ ಜೋಡಣೆಯಾದ ಮತ್ತು NPCI ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ರೈತರು ಖಾತ್ರಿ ಪಡಿಸಿಕೊಳ್ಳುವುದು,
(3) ರೈತರು ಖರೀದಿ ಕೇಂದ್ರಕ್ಕೆ ತರುವ ಭತ್ತ, ರಾಗಿ ಮತ್ತು ಬಿಳಿಜೋಳದ ಎಫ್.ಎ.ಕ್ಯೂ. ಗುಣಮಟ್ಟವನ್ನು ಗ್ರೇಡರ್ ಪರಿಶೀಲಿಸಿ. ದೃಢಿಕರಿಸಿದ ನಂತರವೇ ಖರೀದಿಸಲಾಗುವುದು.
ಇದನ್ನೂ ಓದಿ: Best Insurance Plan-2024: ಸಾರ್ವಜನಿಕರಿಗೆ ಭರ್ಜರಿ ಆಫರ್! ಕೇವಲ ₹599ರೂಗೆ ₹5 ಲಕ್ಷ ವಿಮೆ ಪಡೆಯಲು ಅರ್ಜಿ!
(4) ರೈತರಿಂದ ಖರೀದಿಸಲಾಗುವ ಭತ್ತ, ರಾಗಿ ಮತ್ತು ಬಿಳಿಜೋಳ ಸರಕಿನ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ಜಮೆಗೊಳಿಸಲಾಗುವುದು.
(5) ಮಧ್ಯವರ್ತಿಗಳು ಹಾಗೂ ವ್ಯಾಪಾರಸ್ಥರು ಖರೀದಿ ಕೇಂದ್ರಗಳಿಗೆ ಭತ್ತ, ರಾಗಿ ಮತ್ತು ಬಿಳಿಜೋಳವನ್ನು ತಂದಲ್ಲಿ ಅಂತವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.
(6) ಹೆಚ್ಚಿನ ಮಾಹಿತಿಗಾಗಿ ಉಚಿತ ದೂರವಾಣಿ ಸಂಖ್ಯೆ: 1800 425 1552 ಯನ್ನು ಕಛೇರಿಯ ಸಮಯದಲ್ಲಿ ಸಂಪರ್ಕಿಸಿರಿ.
ವಿಶೇಷ ಸೂಚನೆ: ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುವ ಮುನ್ನ ಚೆನ್ನಾಗಿ ಒಣಗಿಸಿ ಹಾಗೂ ಸ್ವಚ್ಛಗೊಳಿಸಿ FAQ ಮಾನದಂಡಗಳಂತೆ ತರುವಂತೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Snake bite-ಹಾವು ಕಚ್ಚಿದಾಗ ಯಾವ ಕ್ರಮ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ!