- Advertisment -
HomeAgricultureVillage Map-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇಲ್ಲಿದೆ ಅಧಿಕೃತ ದಾರಿ ನಕ್ಷೆ!

Village Map-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇಲ್ಲಿದೆ ಅಧಿಕೃತ ದಾರಿ ನಕ್ಷೆ!

ಗ್ರಾಮೀಣ ಭಾಗದ ರೈತಾಪಿ ವರ್ಗದಲ್ಲಿ ಅತೀ ದೊಡ್ಡ ಸಮಸ್ಯೆಯಲ್ಲಿ ಒಂದಾದ ಜಮೀನಿಗೆ ಹೋಗುವ ದಾರಿ(kaludhari) ಕುರಿತು ಇಂದು ಈ ಲೇಖನದಲ್ಲಿ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ವಿವರಿಸಲಾಗಿದ್ದು ರೈತರು ತಮ್ಮ ಮೊಬೈಲ್ ನಲ್ಲೇ ತಮ್ಮ ಗ್ರಾಮದ ಕಂದಾಯ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಂಡು ಜಮೀನಿಗೆ ಹೋಗಲು ದಾರಿ ಎಲ್ಲಿ ಗುರುತಿಸಲಾಗಿದೆ ಎಂದು ತಿಳಿಯಬಹುದು.

ಅಕ್ಕ-ಪಕ್ಕದ ಜಮೀನಿನವರು ಹೊಂದಾಣಿಕೆ ಮಾಡಿಕೊಂಡು ಹೋದರೆ ಜಮೀನಿಗೆ ಹೋಗಲು ದಾರಿ(Bandidhari) ಸಮಸ್ಯೆ ಉದ್ಬವಿಸುವುದಿಲ್ಲ ಹೊಂದಾಣಿಕೆ ಅಗದೇ ಇದ್ದ ಪಕ್ಷದಲ್ಲೇ ಈ ಸಮಸ್ಯೆಗಳು ದೊಡ್ಡದಾಗಿ ರೂಪಗೊಳ್ಳುತ್ತವೆ ಕಾನೂನು ಹೋರಾಟದ ಮೂಲಕ ಪ್ರತಿಯೊಬ್ಬ ರೈತರು ತಮ್ಮ ಜಮೀನಿಗೆ ಹೋಗಲು ಮತ್ತು ಕೃಷಿ ಯಂತ್ರಗಳನ್ನು ಸಾಗಾಣಿಕೆ ಮಾಡಲು ದಾರಿಯನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Parihara Farmer list-ತಾಂತ್ರಿಕ ಸಮಸ್ಯೆಯಿಂದ ಬೆಳೆ ಪರಿಹಾರ ಜಮಾ ಅಗದ ರೈತರ ಪಟ್ಟಿ ಬಿಡುಗಡೆ!

ಈ ಲೇಖನದಲ್ಲಿ ರೈತರು ತಮ್ಮ ಮೊಬೈಲ್ ಮೂಲಕ ಕಂದಾಯ ಇಲಾಖೆಯ ಅಧಿಕೃತ Land Records ಜಾಲತಾಣವನ್ನು ಪ್ರವೇಶ ಮಾಡಿ ಕಂದಾಯ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿಗೆ ಹೋಗಲು ಅಧಿಕೃತವಾಗಿ ದಾರಿಯನ್ನು ಯಾವ ಭಾಗದಲ್ಲಿ ಗುರುತುಸಲಾಗಿದೆ ಎನ್ನುವ ಮಾಹಿತಿಯನ್ನು ಹೇಗೆ ತಿಳಿದುಕೊಳ್ಳುವುದು ಎಂದು ತಿಳಿಸಲಾಗಿದೆ.

Village Revenue Maps- ದಾರಿ ಗುರುತನ್ನು ತೋರಿಸುವ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:

ರೈತರು ಕಂದಾಯ ಇಲಾಖೆಯ ಅಧಿಕೃತ Land Records ವೆಬ್ಸೈಟ್ ಅನ್ನು ನೇರವಾಗಿ ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಬೆರಳೆ ತುದಿಯಲ್ಲೇ ಕೆಲವೇ ನಿಮಿಷಗಳಲ್ಲಿ ತಮ್ಮ ಮೊಬೈಲ್ ನಲ್ಲೇ ಕಂದಾಯ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿಗೆ ಹೋಗಲು ಕಾಲು ದಾರಿ ಮತ್ತು ಬಂಡಿ ದಾರಿಯನ್ನು ಯಾವ ಭಾಗದಲ್ಲಿ ಗುರುತಿಸಲಾಗಿದೆ ಎನ್ನುವ ಮಾಹಿತಿಯನ್ನು ಯಾವುದೇ ಸರಕಾರಿ ಕಚೇರಿ ಭೇಟಿ ಮಾಡದೇ ಚೆಕ್ ಮಾಡಿಕೊಳ್ಳಬಹುದು.

Step-1: ಇಲ್ಲಿ ಕ್ಲಿಕ್ Village Map Download ಮಾಡಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Land records

ಇದನ್ನೂ ಓದಿ: Svavalambi App- ಸಾರ್ವಜನಿಕರಿಗೆ ಭರ್ಜರಿ ಸಿಹಿ ಸುದ್ದಿ ತಮ್ಮ ಮೊಬೈನಲ್ಲೇ ಜಮೀನಿನ ಸರ್ವೆ ಮಾಡಿ ಪೋಡಿ ಮಾಡಿಕೊಳ್ಳಲು ಅವಕಾಶ! ಇಲ್ಲಿದೆ ವೆಬ್ಸೈಟ್ ಲಿಂಕ್!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕೆಳಗೆ ಕಾಣುವ “ಸರ್ವೇ[ಎಸ್ ಎಸ್ ಎಲ್ ಆರ್] ಸಂಬಂಧಿತ ಸೇವೆಗಳು” ವಿಭಾಗದಲ್ಲಿ “ಕಂದಾಯ ನಕ್ಷೆಗಳು” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Village Map download link

Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ “Revenue Maps Online” ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಕೊನೆಯಲ್ಲಿ Map Types ಕಾಲಂ ನಲ್ಲಿ “Cadastral Maps” ಎಂದು ಆಯ್ಕೆ ಮಾಡಿಕೊಂಡರೆ ನಿಮ್ಮ ಹೋಬಳಿಯಲ್ಲಿ ಎಷ್ಟು ಹಳ್ಳಿಗಳು ಇವೆಯೋ ಅವುಗಳ ಪಟ್ಟಿ ತೋರಿಸುತ್ತದೆ ಇಲ್ಲಿ ನಿಮ್ಮ ಹಳ್ಳಿಯ ಹೆಸರನ್ನು ಹಾಕಿ Search ಬಟನ್ ಮೇಲೆ ಕ್ಲಿಕ್ ಮಾಡಿ ಸಹ ನಕ್ಷೆಯನ್ನು ಪಡೆಯಬಹುದು ಅಥವಾ ಈ ಪಟ್ಟಿಯಲ್ಲಿ ನಿಮ್ಮ ಹಳ್ಳಿಯ ಹೆಸರನ್ನು ಹುಡುಕಿ ಕೊನೆಯ ಕಾಲಂ ನಲ್ಲಿ ಕಾಣುವ “Pdf File” ನ ಐಕಾನ್ ಮೇಲೆ ಕ್ಲಿಕ್ ಮಾಡಿ ಕಾಲು ದಾರಿ, ಬಂಡಿ ದಾರಿ ಗುರುತಿಸುವ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: School Holiday in Karnataka: ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ! ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ!

Step-4: ಡೌನ್ಲೋಡ್ ಅದ ನಕ್ಷೆಯನ್ನು ಒಪನ್ ಮಾಡಿದರೆ ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ ಚಿನ್ನೆಯಲ್ಲಿ ಬಂಡಿ ದಾರಿ ಮತ್ತು ಕಾಲು ದಾರಿಯನ್ನು ಗುರುತಿಸಲಾಗಿರುತ್ತದೆ. ಹಳದಿ ಸಣ್ಣ ಗೆರೆಗಳಿಂದ ಕಾಲು ದಾರಿಯನ್ನು ಗುರುತು ಮಾಡಿಲಾಗಿರುತ್ತದೆ ಇದೇ ಮಾದರಿಯಲ್ಲಿ ತೆಳು ಗುಲಾಬಿ ಬಣ್ಣದಿಂದ ಬಂಡಿದಾರಿಯನ್ನು ಗುರುತು ಮಾಡಲಾಗಿರುತ್ತದೆ ನಿಮ್ಮ ಜಮೀನಿನ ಸರ್ವೆ ನಂಬರ್ ಬರುವ ಜಾಗದಲ್ಲಿ ಈ ದಾರಿ ಸೂಚಕ ಗೆರೆಗಳನ್ನು ಈ ನಕ್ಷೆಯಲ್ಲಿ ಹಾಕಲಾಗಿರುತ್ತದೆ ಈ ಜಾಗದಿಂದ ನಿಮ್ಮ ಜಮೀನಿಗೆ ದಾರಿ ನೀಡಲಾಗಿರುತ್ತದೆ.

Village Map download

Dishaank App Link-ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ತಿಳಿಯಲು ಮೊಬೈಲ್ ಅಪ್ಲಿಕೇಶನ್:

ಕಂದಾಯ ಇಲಾಖೆಯ ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ಡೌನ್ಲೋಡ್ ಮಾಡಿಕೊಂಡು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಜಮೀನಿನ ಸರ್ವೆ ನಂಬರ್ ಯಾವ ಭಾಗದಲ್ಲಿ ಬರುತ್ತದೆ ಎಂದು ಸ್ವಂತ ನೀವೇ ಚೆಕ್ ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ ಈ Dishaank app download ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ Dishaank ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: State Government Total Vacancy- ರಾಜ್ಯ ಸರಕಾರದಲ್ಲಿ ಇಲಾಖಾವಾರು ಖಾಲಿಯಿರುವ ಹುದ್ದೆಗಳ ವಿವರ ಬಿಡುಗಡೆ! ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ!

revenue map

Step-2: ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಮೊಬೈಲ್ ನಂಬರ್ ಅನ್ನು ಹಾಕಿ ಅಗತ್ಯ ವಿವರವನ್ನು ಹಾಕಿ ಲಾಗಿನ್ ಅಗಬೇಕು ಲಾಗಿನ್ ಅದ ಬಳಿಕ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಹಾಕಿ Search ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಸರ್ವೆ ನಂಬರ್ ನಿಮ್ಮ ಹಳ್ಳಿಯಲ್ಲಿ ಯಾವ ಭಾಗದಲ್ಲಿ ಬರುತ್ತದೆ ಎಂದು ಚೆಕ್ ಮಾಡಿಕೊಳ್ಳಬಹುದು.

ಅಥವಾ ನೇರವಾಗಿ ನಿಮ್ಮ ಮೊಬೈಲ್ GPS ಅನ್ನು ಆನ್ ಮಾಡಿಕೊಂಡು ನಿಮ್ಮ ಜಮೀನನ್ನು ಭೇಟಿ ಮಾಡಿ ಸರ್ವೆ ನಂಬರ್ ಖಚಿತಪಡಿಸಿಕೊಳ್ಳಬಹುದು.

- Advertisment -
LATEST ARTICLES

Related Articles

- Advertisment -

Most Popular

- Advertisment -