- Advertisment -
HomeGovt SchemesE-Khata Download-ಮೊಬೈಲ್ ನಲ್ಲೇ ಆಸ್ತಿ ಮತ್ತು ಸೈಟ್ ನ ಇ-ಖಾತಾ ಡೌನ್ಲೋಡ್ ಮಾಡಲು ವೆಬ್ಸೈಟ್ ಲಿಂಕ್...

E-Khata Download-ಮೊಬೈಲ್ ನಲ್ಲೇ ಆಸ್ತಿ ಮತ್ತು ಸೈಟ್ ನ ಇ-ಖಾತಾ ಡೌನ್ಲೋಡ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಬಿಬಿಎಂಪಿಯಿಂದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಆಸ್ತಿ ಮತ್ತು ಸೈಟ್ ನ ಇ-ಖಾತಾ ಡೌನ್ಲೋಡ್ ಮಾಡಲು(E-Khata Download) ವೆಬ್ಸೈಟ್ ಲಿಂಕ್ ಬಿಡುಗಡೆಗೊಳಿಸಲಾಗಿದ್ದು ಇದರ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ(BBMP E-Khata) ಜಮೀನಿನ ಬಿಬಿಎಂಪಿಯಿಂದ ಎಲ್ಲಾ ಬಗ್ಗೆಯ ಆಸ್ತಿ ಮತ್ತು ಸೈಟ್ ನ ನೋಂದಣಿಯನ್ನು ಮಾಡಿಕೊಳ್ಳಲು ಇ-ಖಾತಾ ವಿನೂತನ ತಂತ್ರಾಂಶವನ್ನು ಬಿಡುಗಡೆ ಮಾಡಿದ್ದು ಇಲ್ಲಿ ಸಾರ್ವಜನಿಕರು ತಮ್ಮ ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಯಾವೆಲ್ಲ ಅಗತ್ಯ ದಾಖಲೆಗಳು ಒದಗಿಸಬೇಕು ಎನ್ನುವ ಮಾಹಿತಿಯನ್ನು ಸಹ ಇಲ್ಲಿ ತಿಳಿಸಲಾಗಿದೆ.

ಆಸ್ತಿ ಮತ್ತು ಸೈಟ್ ನ ನೋಂದಣಿಗೆ ಸಂಬಂಧಪಟ್ಟಂತೆ ನಕಲಿ ದಾಖಲೆಗಳ(E-Khata Application) ಹಾವಲಿಗೆ ಕಡಿವಾಣ ಹಾಕಲು ಇ-ಖಾತಾ ಡಿಜಿಟಲ್ ಮಾದರಿ ನೋಂದಣಿ ವ್ಯವಸ್ಥೆಯನ್ನು ಬಿಬಿಎಂಪಿಯಿಂದ ಜಾರಿಗೆ ತರಲಾಗಿದ್ದು ಅಕ್ರಮ ಆಸ್ತಿ ನೋಂದಣಿಗೆ ಈ ಕ್ರಮ ಕಡಿವಾಣ ಹಾಕಲು ಸಹಕಾರಿಯಾಗಿದೆ.

ಇದನ್ನೂ ಓದಿ: RTC Crop Details-ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಪಡೆಯಲು ಈ ವರ್ಷದ ಬೆಳೆ ಮಾಹಿತಿ ಬಿಡುಗಡೆ!

ಇ-ಖಾತಾ ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ದಾಖಲಾತಿಗಳೇನು? ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಲು ಸಹಾಯವಾಣಿ ಇತರೆ ಉಪಯುಕ್ತ ಮಾಹಿತಿ ಇಲ್ಲಿದೆ.

What Is E-Khata-ಇ-ಖಾತಾ ಎಂದರೇನು?

ಮನೆ ಜಾಗ, ಖಾಲಿ ಜಾಗ ಒಟ್ಟಾರೆಯಾಗಿ ಹೇಳುವುದಾದರೆ ಕೃಷಿಯೇತರ ಜಾಗವನ್ನು ಡಿಜಿಟಲ್ ಮಾದರಿಯಲ್ಲಿ ನೋಂದಣಿ ಮಾಡಿಕೊಂಡು ಆ ಆಸ್ತಿಗೆ ಸಂಬಂಧಪಟ್ಟಂತೆ ಡಿಜಿಟಲ್ ಕಾಗದ ಪತ್ರಗಳನ್ನು ವಿತರಣೆ ಮಾಡುವ ವ್ಯವಸ್ಥೆಯಾಗಿದೆ.

ಇದನ್ನೂ ಓದಿ: Annabhagya DBT Status-ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯಡಿ ಎಷ್ಟು ಹಣ ಜಮಾ ಆಗಿದೆ? ಎಂದು ಹೇಗೆ ತಿಳಿಯುವುದು?

Required Documents For E-Khata-ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಈ ದಾಖಲೆ ಒದಗಿಸುವುದು ಕಡ್ಡಾಯ:

ಇ-ಖಾತಾವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾರ್ವಜನಿಕರು ಈ ಕೆಳಗೆ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ(Aplicant aadhaar card)
2) ಆಸ್ತಿ ತೆರಿಗೆ ಐಡಿ ಸಂಖ್ಯೆ(Property Tax ID)
3) ಮಾರಾಟ ಮತ್ತು ನೋಂದಾಯಿತ ಪ್ರಮಾಣ ಪತ್ರದ ನಂಬರ್(Register Deed Number)
4) ಮನೆ ವಿದ್ಯುತ್ ಬಿಲ್(current bill)(ಖಾಲಿ ಜಾಗಕ್ಕೆ ಅನ್ವಯಿಸುವುದಿಲ್ಲ)
5) ಆಸ್ತಿಯ ಪೋಟೋ ಕಾಪಿ(Land Photo)

How to Apply For E-Khata-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಸಾರ್ವಜನಿಕರು ಮೇಲಿ ತಿಳಿಸಿರುವ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಬಿಬಿಎಂಪಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಪಡೆಯಲು ಇನ್ನು 2 ದಿನ ಮಾತ್ರ ಅವಕಾಶ! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ!

E-Khata Download method-ನಿಮ್ಮ ಮೊಬೈಲ್ ನಲ್ಲೇ ಇ-ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:

ಬಿಬಿಎಂಪಿಯ ಅಧಿಕೃತ ಇ-ಆಸ್ತಿ ವೆಬ್ಸೈಟ್ ಅನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ನೇರವಾಗಿ ಭೇಟಿ ಮಾಡಿ ನಿಮ್ಮ ಆಸ್ತಿಯ ಇ-ಖಾತಾವನ್ನು ನಿಮ್ಮ ಮೊಬೈಲ್ ಮೂಲಕವೇ ಪಡೆಯಬಹುದು.

Step-1: ಇಲ್ಲಿ ಕ್ಲಿಕ್ E-Khata Download ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

BBMP E-Khata details

ಇದನ್ನೂ ಓದಿ: Ration Card News-ರೇಶನ್ ಕಾರ್ಡ ಹೊಂದಿರುವವರು ಈ ಕೆಲಸ ಮಾಡಲು ಇನ್ನು 3 ದಿನ ಮಾತ್ರ ಬಾಕಿ!

Step-2: ಬಳಿಕ ಲಾಗಿನ್ ಕಾಲಂ ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು “ಒಟಿಪಿ ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಿ capatch answer ಅನ್ನು ಹಾಕಿ “Login” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

BBMP E-Khata online

ಇದನ್ನೂ ಓದಿ: Village Map-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇಲ್ಲಿದೆ ಅಧಿಕೃತ ದಾರಿ ನಕ್ಷೆ!

Step-3: ಇದಾದ ಬಳಿಕ ಅಧಿಕೃತ ಇ-ಖಾತ ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿ Get E-khata ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವಾರ್ಡ ಅನ್ನು ಹುಡುಕಿ ನಂತರ ನಿಮ್ಮ ಆಸ್ತಿಯ ಸಂಖ್ಯೆಯನ್ನು ಅಥವಾ ಮಾಲೀಕರ ಹೆಸರಿನ್ನು ಹುಡುಕಿ ನಿಮ್ಮ ಆಸ್ತಿಯ ಇ-ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಮೇಲಿನ ವಿಧಾನದಲ್ಲಿ ಗೊಂದಲವಿದಲ್ಲಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಮಾಹಿತಿಯನ್ನು ನೋಡಬಹುದು.
E-Khata Website-ಇ-ಖಾತಾ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ಜಾಲತಾಣ: CLICK HERE

E-Khata Helpline-ಸಹಾಯವಾಣಿ ಸಂಖ್ಯೆಗಳು:

BBMP E-Khata helpline numbers
- Advertisment -
LATEST ARTICLES

Related Articles

- Advertisment -

Most Popular

- Advertisment -