- Advertisment -
HomeAgriculturePM-Kisan-ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ ಕುರಿತು ಮಹತ್ವದ ಮಾಹಿತಿ ಪ್ರಕಟ!

PM-Kisan-ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ ಕುರಿತು ಮಹತ್ವದ ಮಾಹಿತಿ ಪ್ರಕಟ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-kisan) ಯೋಜನೆಯಡಿ 19ನೇ ಕಂತಿನ ಹಣ ಬಿಡುಗಡೆ ಯಾವಾಗ? ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನ ಅರ್ಥಿಕ ನೆರವು ಪಡೆಯಲು ಯಾವ ಕ್ರಮ ತಪ್ಪದೇ ಪಾಲಿಸಬೇಕು ಎನ್ನುವ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ರೈತರು ಕೃಷಿಗೆ ಸಂಬಂಧಿಸಿದ ಬಿತ್ತನೆ ಬೀಜ, ಗೊಬ್ಬರ ಖರೀದಿ ಚಟುವಟಿಗಳಿಗೆ ಅರ್ಥಿಕವಾಗಿ ಬೆಂಬಲವನ್ನು ನೀಡಲು ಕೇಂದ್ರ ಸರಕಾರದಿಂದ ಪಿಎಂ ಕಿಸಾನ್(Kisan samman) ಯೋಜನೆಯನ್ನು 2019ರಿಂದ ಅನುಷ್ಥಾನ ಮಾಡಿಕೊಂಡು ಬರುತ್ತಿದ್ದು ಇಲ್ಲಿಯವರೆಗೆ ಈ ಯೋಜನೆಯಡಿ 18 ಕಂತುಗಳ ಹಣವನ್ನು ರೈತರಿಗೆ ಒದಗಿಸಲಾಗಿದ್ದು ಪ್ರಸ್ತುತ 19ನೇ ಕಂತಿನ ಹಣ ನೀರಿಕ್ಷೆಯಲ್ಲಿ ರೈತಾಪಿ ವರ್ಗ ಇರುತ್ತದೆ.

ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಯಾವಾಗ(pm kisan 19th installment) ಜಮಾ ಅಗಲಿದೆ? ಪಿ ಎಂ ಕಿಸಾನ್ ಯೋಜನೆಯ ಹಣ ಯಾವ ದಿನ(pm kisan 19th installment date) ಜಮಾ ಅಗುತ್ತದೆ ಎಂದು ಹೇಗೆ ತಿಳಿಯುವುದು? 19ನೇ ಕಂತಿನ ಹಣ ಪಡೆಯಲು ಯಾವೆಲ್ಲ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳಬೇಕು? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Today Gold Rate-ದೇಶದ ವಿವಿಧ ನಗರ ಮತ್ತು ಪ್ರಮುಖ ವಿದೇಶಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ!

PM-kisan 19th installment-ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಯಾವಾಗ ಜಮಾ ಅಗಲಿದೆ?

ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ 2,000 ಅರ್ಥಿಕ ನೆರವನ್ನು(PM-kisan amount) ನೇರ ನಗದು ವರ್ಗಾವಣೆ ಮೂಲಕ ಒಂದು ವರ್ಷಕ್ಕೆ 6,000 ರೂ. ಹಣವನ್ನು ಹಾಕಲಾಗುತ್ತದೆ ಇದರಂತೆ ಪ್ರತಿ ವರ್ಷ ಮೊದಲ ಕಂತನ್ನು ಏಪ್ರಿಲ್-ಜುಲೈನಲ್ಲಿ ಎರಡನೇ ಕಂತನ್ನು ಆಗಸ್ಟ್-ನವೆಂಬರ್ ಮಧ್ಯದಲ್ಲಿ ಹಾಗೂ

ಮೂರನೇ ಕಂತನ್ನು ಡಿಸೆಂಬರ್-ಮಾರ್ಚ್ ತಿಂಗಳ ನಡುವೆ ಹಾಕಲಾಗುತ್ತದೆ ಇದರನ್ವಯ ಕೇಂದ್ರ ಸರಕಾರದಿಂದ 19ನೇ ಕಂತಿನ ಹಣವನ್ನು ಅರ್ಹ ರೈತರ ಖಾತೆಗೆ ಪೆಬ್ರವರಿ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ ತಿಂಗಳ ಮೊದಲ ಎರಡು ವಾರದ ಒಳಗಾಗಿ ಜಮಾ ಮಾಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: E-Khata Download-ಮೊಬೈಲ್ ನಲ್ಲೇ ಆಸ್ತಿ ಮತ್ತು ಸೈಟ್ ನ ಇ-ಖಾತಾ ಡೌನ್ಲೋಡ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

PM-kisan

ಇದನ್ನೂ ಓದಿ: Village Map-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇಲ್ಲಿದೆ ಅಧಿಕೃತ ದಾರಿ ನಕ್ಷೆ!

PM-kisan 19th installment date-ಪಿ ಎಂ ಕಿಸಾನ್ ಯೋಜನೆಯ ಹಣ ಯಾವ ದಿನ ಜಮಾ ಅಗುತ್ತದೆ ಎಂದು ಹೇಗೆ ತಿಳಿಯುವುದು?

ಈ ಯೋಜನೆಯಡಿ ಈಗಾಗಲೇ ಅರ್ಜಿ ಸಲ್ಲಿಸಿ ನಾಲು ತಿಂಗಳಿಗೊಮ್ಮೆ ಅರ್ಥಿಕ ನೆರವು ಪಡೆಯುತ್ತಿರುವ ಫಲಾನುಭವಿಗಳು ಕಿಸಾನ್ ಸಮ್ಮಾನ್ ಯೋಜನೆಯಡಿ ಯಾವ ದಿನ ಹಣ ಜಮಾ ಅಗುತ್ತದೆ ಎನ್ನುವ ಅಧಿಕೃತ ಮಾಹಿತಿಯನ್ನು ಎರಡು ವಿಧಾನ ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.

ಒಂದು ಕೇಂದ್ರ ಸರಕಾರದ ಅಧಿಕೃತ ಈ https://pmkisan.gov.in/ ಜಾಲತಾಣವನ್ನು ಪ್ರವೇಶ ಮಾಡಿ ಚೆಕ್ ಮಾಡಿಕೊಳ್ಳಬಹುದು ಈ ವೆಬ್ಸೈಟ್ ನ ಮುಖಪುಟದಲ್ಲಿ ಕೇಂದ್ರ ಕೃಷಿ ಮಂತ್ರಾಲಯದಿಂದ ಹಣ ಬಿಡುಗಡೆ ಮಾಡುವುದಕ್ಕಿಂತ ಎರಡು ರಿಂದ ಮೂರು ವಾರ ಮೊದಲು ಇಲ್ಲಿ ದಿನಾಂಕವನ್ನು ಪ್ರಕಟಿಸಲಾಗಿರುತ್ತದೆ.

ಇನ್ನೊಂದು ವಿಧಾನ pmkisan twitter account ಇಲ್ಲಿ ಕ್ಲಿಕ್ ಮಾಡಿ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ಟ್ವಿಟರ್/ಎಕ್ಸ್ ಖಾತೆಯನ್ನು ನೇರವಾಗಿ ಭೇಟಿ ಮಾಡಿ ಮುಂಚಿತವಾಗಿ ಈ ಯೋಜನೆಯಡಿ ಹಣ ಬಿಡುಗಡೆ ಮಾಡುವ ದಿನಾಂಕದ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: RTC Crop Details-ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಪಡೆಯಲು ಈ ವರ್ಷದ ಬೆಳೆ ಮಾಹಿತಿ ಬಿಡುಗಡೆ!

PM-kisan Yojana-19ನೇ ಕಂತಿನ ಹಣ ಪಡೆಯಲು ಈ ದಾಖಲೆಗಳು ಸರಿಯಾಗಿರುವುದು ಕಡ್ಡಾಯ!

1) ಅರ್ಜಿದಾರ ಫಲಾನುಭವಿ ರೈತರ ಇ-ಕೆವೈಸಿ ಅಗಿರಬೇಕು.

2) ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್/ಆಧಾರ್ ಕಾರ್ಡ ಲಿಂಕ್ ಅಗಿರಬೇಕು.

3) ಅರ್ಜಿದಾರರ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ತಾಳೆಯಾಗಬೇಕು.

1) ಅರ್ಜಿದಾರ ಫಲಾನುಭವಿ ರೈತರ ಇ-ಕೆವೈಸಿ(PM-kisan e-KYC) ಅಗಿರಬೇಕು.

ಕೇಂದ್ರ ಕೃಷಿ ಮಂತ್ರಾಲಯದ ಅಧಿಕೃತ ಹೊಸ ಮಾರ್ಗಸೂಚಿಯನ್ವಯ ಪಿ ಎಂ ಕಿಸಾನ್ ಯೋಜನೆಯಡಿ ಅರ್ಜಿ ಸಲ್ಲಿಸಿ ಹಣವನ್ನು ಪಡೆಯುತ್ತಿರುವ ಫಲಾನುಭವಿಗಳು ತಪ್ಪದೇ ಕಡ್ಡಾಯವಾಗಿ ತಮ್ಮ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಆಧಾರ್ ಕಾರ್ಡ ನಂಬರ್ ಮತ್ತು ಮೊಬೈಲ್ ಒಟಿಪಿ ಅಥವಾ ಬೆರಳಚ್ಚನು ನೀಡಿ ಇ-ಕೆವೈಸಿಯನ್ನು ಮಾಡಿಕೊಳ್ಳಬೇಕು.

ಗಮನಿಸಿ: ಈಗಾಗಲೇ ಇ-ಕೆವೈಸಿಯನ್ನು ಮಾಡಿಕೊಂಡಿರುವವರು ಮತ್ತೊಮ್ಮೆ ಮಾಡುವ ಅವಶ್ಯಕತೆ ಇರುವುದಿಲ್ಲ.

ಇದನ್ನೂ ಓದಿ: Annabhagya DBT Status-ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯಡಿ ಎಷ್ಟು ಹಣ ಜಮಾ ಆಗಿದೆ? ಎಂದು ಹೇಗೆ ತಿಳಿಯುವುದು?

ನಿಮ್ಮ ಮೊಬೈಲ್ ನಲ್ಲೇ ಇ-ಕೆವೈಸಿ ಅಗಿದಿಯೋ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು:

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೇಂದ್ರದ ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಮುಖಪುಟದಲ್ಲೇ ಬಲಬದಿಯಲ್ಲಿ ಕಾಣುವ “e-KYC” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಂಕಿಯ ಅಧಾರ್ ಕಾರ್ಡ ನಂಬರ್ ಹಾಕಿ Search ಮೇಲೆ ಒತ್ತಿದರೆ Already e-KYC Done ಎಂದು ತೋರಿಸಿದರೆ ನಿಮ್ಮ ಇ-ಕೆವೈಸಿ ಅಗಿದೆ ಎಂದು ಅರ್ಥ ಈ ರೀತಿ ತೋರಿಸದೇ ಇದ್ದಲ್ಲಿ ಕೂಡಲೇ ಕೃಷಿ ಇಲಾಖೆ ಕಚೇರಿಯನ್ನು ಭೇಟಿ ಮಾಡಿ ನಿಮ್ಮ ಅರ್ಜಿಯ ಇ-ಕೆವೈಸಿ ಮಾಡಿಕೊಳ್ಳಬೇಕು.

ಇದನ್ನೂ ಓದಿ: Ration Card News-ರೇಶನ್ ಕಾರ್ಡ ಹೊಂದಿರುವವರು ಈ ಕೆಲಸ ಮಾಡಲು ಇನ್ನು 3 ದಿನ ಮಾತ್ರ ಬಾಕಿ!

pm kisan 19th installment date

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಪಡೆಯಲು ಇನ್ನು 2 ದಿನ ಮಾತ್ರ ಅವಕಾಶ! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ!

2) ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್/ಆಧಾರ್ ಕಾರ್ಡ ಲಿಂಕ್ ಅಗಿರಬೇಕು.

ಕೇಂದ್ರ ಮತ್ತು ರಾಜ್ಯ ಸರಕಾರದ ಯಾವುದೇ ಯೋಜನೆಯಡಿಯಲ್ಲಿ ಅರ್ಥಿಕ ನೆರವನ್ನು ಪಡೆಯಲು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್(Bank accounrt adhar link) ಅರುವುದ ಕಡ್ಡಾಯವಾಗಿದೆ ಇದರಂತೆ ಪಿ ಎಂ ಕಿಸಾನ್ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ತಮ್ಮ ತಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು.

3) ಅರ್ಜಿದಾರರ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ತಾಳೆಯಾಗಬೇಕು.

ಕಿಸಾನ್ ಸಮ್ಮಾಮ್ ನಿಧಿ ಯೋಜನೆಯಡಿ ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಜಮೀನಿನ ದಾಖಲೆಯಲ್ಲಿ ಮಾಲೀಕರ ಹೆಸರಿನಲ್ಲಿ ಯಾವುದೇ ಬಗ್ಗೆಯ ಬದಲಾವಣೆಯನ್ನು ಮಾಡಿದ್ದಲ್ಲಿ ತಪ್ಪದೇ ಈ ಮಾಹಿತಿಯನ್ನು ಪಿ ಎಂ ಕಿಸಾನ್ ತಂತ್ರಾಂಶದಲ್ಲಿ ನವೀಕರಣ ಮಾಡಿಕೊಳ್ಳಬೇಕು ಇಲ್ಲದೇ ಹೋದಲ್ಲಿ ನಿಮ್ಮ ಈ ಯೋಜನೆಯಡಿ ಹಣ ಸಂದಾಯ ಸ್ಥಗಿತವಾಗುತ್ತದೆ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅರ್ಜಿ ಸರಿಪಡಿಸಿಕೊಳ್ಳಬಹುದು.

- Advertisment -
LATEST ARTICLES

Related Articles

- Advertisment -

Most Popular

- Advertisment -